ಅಮ್ಮನ ಜೊತೆ ನಿವೇದಿತಾ ರೀಲ್ಸ್​: ಮಗಳಿಗೆ ನೀವಾದ್ರೂ ಬುದ್ಧಿ ಹೇಳ್ಬಾರ್ದಾ ಕೇಳ್ತಿದ್ದಾರೆ ನೆಟ್ಟಿಗರು

By Suvarna News  |  First Published Apr 29, 2024, 3:29 PM IST

ಅಮ್ಮ ಹೇಮಾ ಜೊತೆ ನಿವೇದಿತಾ ಗೌಡ ಸಕತ್​ ರೀಲ್ಸ್​ ಮಾಡಿದ್ದಾರೆ. ಮಗಳಿಗೆ  ನೀವಾದ್ರೂ ಬುದ್ಧಿ ಹೇಳ್ಬಾರ್ದಾ ಎಂದು ಅಮ್ಮನನ್ನು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. 
 


ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಅವರಂತೂ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಫೇಮಸ್​. ಅದೇ ಇನ್ನೊಂದೆಡೆ ಸೌಂದರ್ಯದಲ್ಲಿ ಮಗಳಿಗೇ ಸ್ಪರ್ಧೆ ಒಡ್ಡುತ್ತಾ ಇರೋರು ನಿವೇದಿತಾ ಅಮ್ಮ ಹೇಮಾ ರಮೇಶ್​. ಬಿಗ್​ಬಾಸ್​ 5ರ ಸಮಯದಲ್ಲಿ ನಿವೇದಿತಾ ಗೌಡ ಜೊತೆ ಹೇಮಾ ಅವರೂ  ಎಲ್ಲರ ಗಮನ ಸೆಳೆದಿದ್ದರು.  ಇವರು ನೋಡಲು ಕೂಡ ಸುಮಾರಾಗಿ ಒಂದೇ ರೀತಿಯಿದ್ದು  ಅಕ್ಕ ತಂಗಿಯಂತೆ ಕಾಣಿಸುತ್ತಿದ್ದರು. ಮಗಳು ನಿವೇದಿತಾರಂತೆ ತಾಯಿ ಹೇಮಾ  ಕೂಡ  ಸಕತ್​ ಡ್ರೆಸ್ಸಿಂಗ್ ಸೆನ್ಸ್​ ಹೊಂದಿದ್ದಾರೆ. ಅವರೂ ಮೇಕ್​ ಓವರ್​ ಮಾಡಿಕೊಂಡು ಬಿಟ್ಟರಂತೂ ನಿವೇದಿತಾ ಅಮ್ಮ ಎನ್ನಲು ಸಾಧ್ಯವೇ ಇಲ್ಲ. ಅದೇ ರೀತಿ ಮೇಕಪ್​ ಮಾಡಿಕೊಂಡು ಅವರು  ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಮೂಡಿಸುವುದೂ ಇದೆ.  ನಿವೇದಿತಾ ಅವರ ಮೈ ಕಟ್ಟುನ್ನೇ ತಾಯಿಯೂ ಹೊಂದಿರುವುದರಿಂದ ಮಗಳಿಗೆ ಕಾಪಿಟೇಷನ್​ ನೀಡುತ್ತಿದ್ದಾರೆ ಎಂದೇ ಎಲ್ಲರೂ ಅಂದುಕೊಳ್ಳುತ್ತಾರೆ. 

ಇನ್ನು ನಿವೇದಿತಾ ಬಗ್ಗಂತೂ ಹೇಳುವುದೇ ಬೇಡ. ಬಾರ್ಬಿ ಡಾಲ್​ ಎಂದೇ ಫೇಮಸ್​ ಆದವರು ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಇದ್ದಾರೆ.  ಸದಾ ರೀಲ್ಸ್​ ಮಾಡುತ್ತಲೇ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಅಪಾರ ಅಭಿಮಾನಿ ಬಳಗ ಹೊಂದಿರುವ  ನಿವೇದಿತಾ ಗೌಡ (Niveditha Gowda)  ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ (Chandan Shetty) ಅವರನ್ನು ಮದುವೆಯಾಗಿ ಲೈಫ್​ ಎಂಜಾಯ್​ ಮಾಡ್ತಿದ್ದಾರೆ. ಮದುವೆಯಾದ ಮೇಲೂ ರೀಲ್ಸ್​ ಮಾಡುತ್ತಲೇ ಚಿಕ್ಕ ಮಕ್ಕಳ ರೀತಿಯಲ್ಲಿ ಕುಣಿದಾಡುತ್ತಿರುತ್ತಾರೆ.  ಬೆಡಗಿ ದಿನನಿತ್ಯವೂ ಒಂದಿಲ್ಲೊಂದು ಪೋಸ್ಟ್​ ಮಾಡುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಈಕೆ ಇನ್​ಸ್ಟಾಗ್ರಾಮ್​ನಲ್ಲಿ ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ.  ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

Tap to resize

Latest Videos

ಅಬ್ಬಾ ನೋವಾಗ್ತಿದೆ ಎಂದ ನಿವೇದಿತಾ: ಅಳ್ಬೇಡ ಕಣೆ... ನಮ್​ ಹಾರ್ಟೇ ಕಿತ್ತು ಬರ್ತಿದೆ ಎಂದ ಫ್ಯಾನ್ಸ್​!

ಇದೀಗ ನಿವೇದಿತಾ ಅವರು ಅಮ್ಮನ ಜೊತೆ ರೀಲ್ಸ್​ ಮಾಡಿದ್ದಾರೆ. ಇದಕ್ಕೆ ಥರಹೇವಾರಿ ಕಮೆಂಟ್ಸ್​ ಬಂದಿವೆ. ಹಲವರು ನಿವೇದಿತಾ ಕಾಲೆಳೆದಿದ್ದು, ಓರ್ವ ವಿವಾಹಿತೆಗೆ ಇರಬೇಕಾದ ಕನಿಷ್ಠ ಗುಣವೂ ನಿನ್ನಲ್ಲಿ ಇಲ್ಲ... ಅಮ್ಮನನ್ನಾದ್ರೂನೋಡಿ ಕಲಿಯಬಾರದಾ ಕೇಳುತ್ತಿದ್ದರೆ, ಅಮ್ಮನಿಗೆ ನಿಮ್ಮ ಮಗಳಿಗೆ ಸ್ವಲ್ಪನಾದ್ರೂ ಬುದ್ಧಿ ಹೇಳಬಾರದಾ? ಮಂಗಳಸೂತ್ರ, ಕುಂಕುಮ ಏನೂ ಇಲ್ಲದೇ ಥೇಟ್​.... ಹಾಗೆ ಕಾಣಿಸುತ್ತಿದ್ದಾಳೆ. ನಿಮ್ಮ ಅಳಿಯ ಚಂದನ್​ ಶೆಟ್ಟಿಗಂತೂ ಬುದ್ಧಿ ಇಲ್ಲ, ಅಮ್ಮನಾಗಿ ನೀವಾದ್ರೂ ಹೇಳಬಾರ್ದಾ ಕೇಳುತ್ತಿದ್ದಾರೆ. 

ಇನ್ನು,   ಹೇಮಾ ಅವರ ಪತಿ ಅಂದರೆ ನಿವೇದಿತಾ ಅವರ ತಂದೆ ಉದ್ಯಮಿಯಾಗಿದ್ದು ಇವರ ಹೆಸರು ಲಕ್ಷ್ಮಣ್​. ನಿವೇದಿತಾ ಬಾರ್ಬಿ ಡಾಲ್​ನಂತೆ ಕಂಗೊಳಿಸಿದರೆ ಅವರ ಅಮ್ಮ ಕೂಡ ತುಂಬಾ ಸುಂದರವಾಗಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಅಮ್ಮನ ಸೌಂದರ್ಯವೇ ಮಗಳಿಗೂ ಬಂದಿದೆ ಎಂದು ಹಲವರು ಹಾಡಿ ಹೊಗಳುತ್ತಿದ್ದಾರೆ.  ಅಂದಹಾಗೆ ನಿವೇದಿತಾ ಅವರು, ನಿವೇದಿತಾ ಗೌಡ ಹೆಚ್ಚಾಗಿ ತಮ್ಮ ತಾಯಿಯ ಜೊತೆಗೆ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಾರೆ.  ತಾಯಿಯ ಜೊತೆ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ. ಇನ್ನು ನಿವೇದಿತಾ ಅವರ ಬಗ್ಗೆ ಹೇಳುವುದಾದರೆ, ಚಂದನ್ ಮತ್ತು ನಿವೇದಿತಾ ಮದುವೆಯಾದದ್ದು  2020ರಲ್ಲಿ 26ರಂದು.  ಮೈಸೂರಿನಲ್ಲಿ ಈ ಜೋಡಿ ವಿವಾಹ ಅದ್ದೂರಿಯಾಗಿ ನೆರವೇರಿದೆ. ಸಾಕಷ್ಟು ಸಿನಿಮಾ ತಾರೆಯರು ಕೂಡ ಇವರ ಮದುವೆ ಸಾಕ್ಷಿ ಆಗಿದ್ದರು.  

ನಿವೇದಿತಾ ಹಾಟ್​ ರೀಲ್ಸ್​ ನೋಡಿ ತೋರಿಸೋದು ಜಾಸ್ತಿಯಾಗ್ತಿದೆ, ಕತ್ತರಿ ಹಾಕಿಸಿಕೊಂಡ್ಯಾ ಅನ್ನೋದಾ ಫ್ಯಾನ್ಸ್​!
 

click me!