ಕೈಯಲ್ಲಿದ್ದ ಡ್ರಿಪ್ಸ್‌ ಕಿತ್ತು ರಕ್ತ ಬರ್ತಿದ್ದರೂ ಶೂಟಿಂಗ್ ಮಾಡಿದ ಗೀತಾ ;3 ತಿಂಗಳು ಡಿಪ್ರೆಶನ್‌ಗೆ ಜಾರಿದ್ದು ನಿಜವೇ?

By Vaishnavi Chandrashekar  |  First Published Apr 29, 2024, 2:51 PM IST

ರೀಲ್ಸ್ ಮಾಡುವಷ್ಟು ಸುಲಭವಲ್ಲ ಆಕ್ಟಿಂಗ್. ಮೂರು ತಿಂಗಳು ಡಿಪ್ರೆಶನ್‌ಗೆ ಜಾರಿದ ಕಥೆ ಬಿಚ್ಚಿಟ್ಟ ಭವ್ಯಾ ಗೌಡ....


ಸುಮಾರು ಮೂರ್ನಾಲ್ಕು ವರ್ಷಗಳಿಂದ ಗೀತಾ ಸೀರಿಯಲ್ ಮೂಲಕ ಕನ್ನಡ ಕಿರುತೆರೆ ವೀಕ್ಷಕರನ್ನು ಮನೋರಂಜಿಸುತ್ತಿರುವ ಭವ್ಯಾ ಗೌಡ ಯಾರಿಗೂ ಗೊತ್ತಿರದ ಸತ್ಯವನ್ನು ಹಂಚಿಕೊಂಡಿದ್ದಾರೆ. ಮೂರು ತಿಂಗಳು ಡಿಪ್ರೆಶನ್‌ಗೆ ಜಾರಿದಾಗ ಸಹಾಯ ಮಾಡಿದ್ದು ಯಾರು ಗೊತ್ತಾ? 

ರೀಲ್ಸ್ ಮಾಡುವುದಕ್ಕೂ ಟಿವಿಯಲ್ಲಿ ಆಕ್ಟ್‌ ಮಾಡುವುದಕ್ಕೂ ತುಂಬಾ ವ್ಯತ್ಯಾಸವಿದೆ. ಮನೆಯಲ್ಲಿ ಕುಳಿತುಕೊಂಡು ಮತ್ತೊಬ್ಬರ ಧ್ವನಿಗೆ ಲಿಪ್‌ ಸಿಂಕ್ ಮಾಡುವುದು ಸುಲಭ ಆದರೆ ಕ್ಯಾಮೆರಾ ಎದುರು ನಗಬೇಕು ಅಳಬೇಕು ವಾಯ್ಸ್‌ ಓವರ್‌ ಕೊಡಬೇಕು,  ಆಂಗಲ್ ನೋಡಿಕೊಳ್ಳಬೇಕು ಪ್ರತಿಯೊಂದು ಪದಕ್ಕೂ ಎಕ್ಸ್‌ಪ್ರೆಶನ್‌ ನೀಡಬೇಕು. ಒಂದೊಂದು ಸಲ 48 ಗಂಟೆಗಳ ಕಾಲ ಶೂಟಿಂಗ್ ಮಾಡಿದ್ದೀವಿ ಆದರೆ ಜನರಿಗೆ ಇದೆಲ್ಲಾ ತಿಳಿಯುವುದಿಲ್ಲ. ಆಕ್ಟಿಂಗ್ ಮಾಡ್ತಿದ್ದಾರೆ ಟಿವಿಯಲ್ಲಿ ಬರ್ತಿದ್ದಾರೆ ಅಂದ್ರೆ ತುಂಬಾ ದುಡಿಯುತ್ತಿದ್ದಾರೆ ಹಣ ಮಾಡುತ್ತಿದ್ದಾರೆ ಅಂತ ಮಾತನಾಡಲು ಶುರು ಮಾಡುತ್ತಾರೆ. ನಿಮ್ಮ ಮಗಳು ತಿಂಗಳಿಗೆ 10 ಲಕ್ಷ ಹಣ ತರ್ತಾಳೆ ಅಂತ ನಮ್ಮ ಸಂಬಂಧಿಕರು ಹೇಳ್ತಾರೆ ಎಂದು ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಗೀತಾ ಮಾತನಾಡಿದ್ದಾರೆ. 

Tap to resize

Latest Videos

undefined

ವಿಡಿಯೋ ನೋಡಿ ಏನ್ ಗುರು ಸಖತ್ ಆಗಿ ವಿಡಿಯೋ ಮಾಡ್ತಾರೆ ಒಳ್ಳೆ ಬಟ್ಟೆಗಳನ್ನು ಹಾಕ್ತಾರೆ ಅಂತ ಕಾಮೆಂಟ್ ಮಾಡ್ತಾರೆ ನಿಜ ಹೇಳಬೇಕು ಅಂದ್ರೆ ಕೊಲಾಬೋರೇಷನ್‌ನಲ್ಲಿ ಇರುವಷ್ಟು ತಲೆ ನೋವು ಮತ್ತೊಬ್ಬರಿಲ್ಲ. ಟ್ಯಾಗ್ ಮಾಡಿಲ್ಲ, ಫೋಟೋ ಹಾಕಿಲ್ಲ ಅಂದ್ರೆ ಕೇಳ್ತಾರೆ ಅದರಲ್ಲೂ ನಾವು ಮೇಕಪ್ ಆರ್ಟಿಸ್ಟ್‌ಗಳನ್ನು ಹುಡುಕಬೇಕು. ತುಂಬಾ ಕಷ್ಟ ಆಗುತ್ತಿದ್ದರೂ ಶೂಟಿಂಗ್ ಮಾಡಬೇಕು..ನಿರ್ಮಾಪಕರ ಜೊತೆ ಸುಮ್ಮನಿದ್ದು ತಂಡದ ಮೇಲೆ ಅಗ್ತಿಲ್ಲ ಅಂತ ಹೇಳುವುದು ಎಂದು ಭವ್ಯಾ ಗೌಡ ಹೇಳಿದ್ದಾರೆ. 

ತುಮಕೂರಿನಲ್ಲಿ ಶೂಟಿಂಗ್ ಮಾಡುವಾಗ ಫುಡ್ ಪಾಯಿಸನ್ ಆಗಿತ್ತು..ಅಲ್ಲೇ ಆಸ್ಪತ್ರೆಯಲ್ಲಿ ಡಾಕ್ಟರ್‌ಗೆ ತೋರಿಸಿ ಡ್ರಿಪ್ಸ್ ಹಾಕಿಸಿಕೊಂಡು ರೂಮಿಗೆ ಬಂದಾಗ ನಾಲ್ಕು ಗಂಟೆ ಆಗಿತ್ತು. ಕರೆಕ್ಟ್‌ 5.30ಗೆ ಬಂದು ರೆಡಿಯಾಗಬೇಕು ಶೂಟಿಂಗ್ ಮಾಡಬೇಕು ಅಂದು ಬಿಟ್ಟರು..ಸರ್ ಹುಷಾರಿಲ್ಲ ಅಂತ ಕೈಗೆ ಹಾಕಿರುವ ಡ್ರಿಪ್ಸ್‌ ತೋರಿಸಿದಾಗ ನಮಗೆ ಅದೆಲ್ಲಾ ಗೊತ್ತಿಲ್ಲ ರೆಡಿಯಾಗಬೇಕು ಅಂದುಬಿಟ್ಟರು. ಫೈಟಿಂಗ್ ಸೀನ್ ಮಾಡುತ್ತಿರುವಾಗ ಏನೋ ಆಗಿ ಕೈಯಲ್ಲಿರುವ ಡ್ರಿಪ್ಸ್‌ ಕಿತ್ತು ಬಿತ್ತು ರಕ್ತ ಬಂದು...ಆದರೂ ಕೆಲಸ ಮಾಡಿದ್ದೀನಿ ಎಂದಿದ್ದಾರೆ ಭವ್ಯಾ. 

ಜರ್ನಿ ಆರಂಭದಲ್ಲಿ ಮೂರು ತಿಂಗಳು ಡಿಪ್ರೆಶನ್‌ಗೆ ಜಾರಿದೆ. ಮನೆಯಲ್ಲಿ ಯಾರೊಟ್ಟಿಗೂ ಹೇಳಿಕೊಳ್ಳಲು ಆಗಲಿಲ್ಲ ...ಸಣ್ಣ ತಪ್ಪಿನಿಂದ ಏನೋ ಟ್ರೋಲ್ ಮಾಡುವುದು ಕಾಮೆಂಟ್ ಮಾಡುವುದು ಶುರು ಮಾಡಿದರು.  ಆಗ ನಿರ್ದೇಶಕರ ಬಳಿ ಆಗುವುದಿಲ್ಲ ಮಾಡಲ್ಲ ಎಂದು ಹೇಳಿದೆ ಅದಿಕ್ಕೆ ಅವರು ಈಗ ನೀನು ನನ್ನ ಜೊತೆ ಮಾತನಾಡುತ್ತಿದ್ದರೂ ಅದನ್ನು ಒಂದು ರೀತಿ ಕೆಟ್ಟದಾಗಿ ಟ್ರೋಲ್ ಮಾಡುತ್ತಾರೆ ಅದಕ್ಕೆ ತಲೆ ಕೆಡಿಸಿಕೊಂಡು ಕೂತರೆ ಜೀವನದಲ್ಲಿ ಬೆಳೆಯುವುದಕ್ಕೆ ಆಗಲ್ಲ ಅಂದುಬಿಟ್ಟರು. ಅವರ ಪಾಸಿಟಿವ್ ಮಾತುಗಳನ್ನು ಕೇಳಿ ಅವತ್ತಿಂದ ಇಲ್ಲಿವರೆಗೂ ಹಿಂದೆ ತಿರುಗಿ ನೋಡಿಲ್ಲ.... 

click me!