ಬಿಗ್‌ಬಾಸ್‌ ಕನ್ನಡ ಸೀಸನ್ 11: ಹೈದರಾಬಾದ್‌ ಪ್ರೋಮೋ ಶೂಟಿಂಗ್ ಸೆಟ್‌ನಿಂದ ಎರಡು ಫೋಟೋ ಲೀಕ್!

By Gowthami K  |  First Published Aug 19, 2024, 10:33 AM IST

ಬಿಗ್‌ಬಾಸ್‌ ಕನ್ನಡ ಸೀಸನ್ 11 ರ ಪ್ರೋಮೋ ಶೂಟಿಂಗ್ ಸೆಟ್‌ನಿಂದ ಎರಡು ಫೋಟೋಗಳು ಸೋರಿಕೆಯಾಗಿವೆ. ಈ ಫೋಟೋಗಳಲ್ಲಿ ಕಿಚ್ಚ ಸುದೀಪ್ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವುದು ಕಂಡುಬಂದಿದ್ದು, ಅವರೇ ಈ ಬಾರಿಯೂ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂಬುದು ಖಚಿತವಾಗಿದೆ.


ಬೆಂಗಳೂರು (ಆ.19): ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ಬಿಗ್‌ಬಾಸ್‌ ಸೀಸನ್ 11 ಗೆ ದಿನಗಣನೆ ಆರಂಭವಾಗಿದೆ. ಸೆಪ್ಟೆಂಬರ್ ಕೊನೆಯ ವಾರ ಅಥವಾ ಅಕ್ಟೋಬರ್‌ ಮೊದಲ ವಾರದಲ್ಲಿ ಬಿಗ್‌ಬಾಸ್‌ ಕನ್ನಡದ 11 ನೇ ಸೀಸನ್‌ ಪ್ರಸಾರವಾಗಲಿದೆ ಎಂದು ಸುದ್ದಿಯಾಗಿದೆ. ಅದಕ್ಕೂ ಮುನ್ನ ಪ್ರೋಮೋ ರಿಲೀಸ್ ಆಗಲಿದೆ. ಆದರೆ ಈಗ ಶೂಟಿಂಗ್ ಸೆಟ್‌ ನಿಂದ 2 ಫೋಟೋ ಲೀಕ್ ಆಗಿದೆ.

ಈ ಬಾರಿ ಹೆಚ್ಚು ಚರ್ಚೆಯಾದ ವಿಷಯ ನಿರೂಪಕರು ಯಾರು? ಎಂಬುದು. ಅದಕ್ಕೆ ಪೂರಕವಾಗಿ ಈಗ ಪ್ರೋಮೋ ಶೂಟಿಂಗ್ ಸೆಟ್ಟಿಂದ ಫೋಟೋ ಲೀಕ್ ಆಗಿದೆ. ಈಗಾಗಲೇ ಹೈದರಾಬಾದ್‌ನಲ್ಲಿ ಪ್ರೋಮೋ ಶೂಟಿಂಗ್ ನಡೆದಿದ್ದು, ಇದರ ಎರಡು ಫೋಟೋ ಈಗ ಲೀಕ್ ಆಗಿದೆ. ಜೊತೆಗೆ ನಿರೂಪಕ ಯಾರು ಎಂಬುದಕ್ಕೂ ಸ್ಪಷ್ಟ ಉತ್ತರ ಸಿಕ್ಕಿದೆ.

Tap to resize

Latest Videos

ಕಾಪಿ ರೈಟ್ ಉಲ್ಲಂಘಟನೆ: ರಕ್ಷಿತ್ ಶೆಟ್ಟಿ 20 ಲಕ್ಷ ಠೇವಣಿ ಇಡುವಂತೆ ದೆಹಲಿ ಹೈಕೋರ್ಟ್ ಆದೇಶ!

ಹೈದರಾಬಾದ್‌ನಲ್ಲಿ ಪ್ರೋಮೋ ಶೂಟಿಂಗ್ ನಡೆದಾಗಿನ ಎರಡು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಬಾರಿ ಕೂಡ ಕಿಚ್ಚ ಸುದೀಪ್‌ ಬಿಗ್‌ಬಾಸ್‌ ನಿರೂಪಣೆ ಮಾಡಲಿರುವುದು ಸ್ಪಷ್ಟವಾಗಿದೆ. ಒಂದು ಫೋಟೋದಲ್ಲಿ ಕ್ಯಾಮಾರಾ ವರ್ಕ್ ಫೋಟೋ ಇದೆ. ಕಿಚ್ಚ ಚಾಕೆಟ್‌ ಹಾಕಿ ಚಯರ್‌ ಮೇಲೆ ಕುಳಿತಿರುವುದು ಕ್ಯಾಮರಾದಲ್ಲಿ ಕಾಣಿಸುತ್ತಿದೆ. ಮತ್ತೊಂದು ಫೋಟೋದಲ್ಲಿ ಕಿಚ್ಚ ಚಾಕೆಟ್‌ ಹಾಕಿಕೊಂಡು ನಡೆದಾಡುತ್ತಿರುವ ಫೋಟೋ ಇದೆ.

ಸದ್ಯ ಕಲರ್ಸ್ ಕನ್ನಡದಲ್ಲಿ ಅನುಬಂಧ ಅವಾರ್ಡ್ ತಯಾರಿ ನಡೆಯುತ್ತಿದೆ. ನೆಚ್ಚಿನ ನಟ,ನಟಿ, ಜನಮೆಚ್ಚಿದ ಜೋಡಿ ಹೀಗೆ ಹಲವು ವಿಭಾಗದ ವೋಟಿಂಗ್ ಸೆಶನ್ ನಡೆಯುತ್ತಿದೆ. ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಶೂಟಿಂಗ್‌ ನಡೆದು ಬಳಿಕ ಸೆಪ್ಟೆಂಬರ್‌ ನಲ್ಲಿ ಅನುಬಂಧ ಅವಾರ್ಡ್ ಪ್ರಸಾರವಾಗಲಿದೆ.

ಭಾರತದ ಬಿಗ್‌ಬಾಸ್ ಶೋಗಳನ್ನು ನುಂಗಿ ಹಾಕಿದ್ದ ಕನ್ನಡದ 10ರ ಸೀಸನ್‌ ನ ಬಳೆ! ಬಿಬಿಕೆ 11ರಲ್ಲಿ ಏನಾಗಲಿದೆಯೋ?

ಈ ಹಿನ್ನೆಲೆ ವೀಕೆಂಡ್ ಕಾರ್ಯಕ್ರಮಗಳಾದ ಗಿಚ್ಚಿಗಿಲಿ ಗಿಲಿ ಸೀಸನ್ 3 ಮತ್ತು ರಾಜಾ ರಾಣಿ ಕೂಡ ಬಿಗ್‌ಬಾಸ್‌ ನಡೆಸಲು ದಿನ ಹತ್ತಿರ ಬಂದಂತೆ ಮುಗಿಯಲಿದೆ.ಇನ್ನು ಧಾರವಾಹಿಗಳಾದ ಕರಿಮಣಿ, ಅಂತರಪಟ ಮತ್ತು ಕೆಂಡಸಂಪಿಗೆಯನ್ನು ಕೂಡ ಮುಗಿಸಲು ತಯಾರಿ ನಡೆದಿದೆ ಎಂದು ಗಾಸಿಪ್ ಇದೆ. ಕಡಿಮೆ ಟಿಆರ್‌ಪಿ ಬರುತ್ತಿರುವ ಧಾರವಾಹಿಯನ್ನು ಮುಗಿಸಲಾಗುತ್ತಿದೆ ಎನ್ನಲಾಗುತ್ತಿದೆ.

ಕಳೆದ ಬಿಗ್‌ಬಾಸ್‌ ಸೀಸನ್‌ 10 ಅತ್ಯಂತ ಹೆಚ್ಚು ಟಿಆರ್‌ಪಿ ತಂದುಕೊಟ್ಟು ಕಲರ್ಸ್ ಕನ್ನಡ ಮತ್ತು ಬಿಗ್‌ಬಾಸ್‌ ನಡೆಸುವ ಪ್ರೊಡಕ್ಷನ್ ಹೌಸ್‌ಗೆ ಭಾರೀ ಲಾಭ ತಂದುಕೊಟ್ಟಿತ್ತು. ಅದಲ್ಲದೆ ಅತೀ ಹೆಚ್ಚು ಕಾಂಟ್ರವರ್ಸಿ ಆಗಿತ್ತು ಕೂಡ. ಇದೇ ಹುಮ್ಮಸ್ಸಿನಲ್ಲಿರುವ ಬಿಗ್‌ಬಾಸ್‌ ಟೀಂ ಈಗ ಸೀಸನ್‌ 11ಕ್ಕೆ ತೆರೆಮರೆಯಲ್ಲಿ ತಯಾರಿ ನಡೆಸುತ್ತಿದೆ. ಈಗಿರುವ ಮನೆಗೆ ಹೊಸ ಟಚ್‌ ಕೊಡಲು ಭರ್ಜರಿ ತಯಾರಿ ನಡೆಯುತ್ತಿದೆಯಂತೆ. ಇಂಟೀರಿಯರ್ ಡಿಸೈನ್‌ ವರ್ಕ್‌ಗೆ ರೂಪುರೇಷೆಗಳು ಹಾಕಲಾಗಿದೆ.

ಪ್ರತೀ ಬಾರಿಯೂ ಅಕ್ಟೋಬರ್‌ ನಲ್ಲೇ ಬಿಗ್‌ಬಾಸ್‌ ಆರಂಭವಾಗುತ್ತಿತ್ತು. ಅದರಂತೆ ಈ ಬಾರಿ ಕೂಡ ಅಕ್ಟೋಬರ್‌ ನಲ್ಲೇ ಆರಂಭವಾಗುವುದು ಬಹುತೇಕ ಖುಚಿತ, ಇದರ ನಡುವೆ ಸ್ಪರ್ಧಿಗಳ ಬಗ್ಗೆ ಕೂಡ ಕುತೂಹಲ ಹೆಚ್ಚಿದ್ದು, ಕಳೆದ ಸೀಸನ್‌ನಲ್ಲಿ  ನಟ 'ಲವ್ ಗುರು' ತರುಣ್ ಚಂದ್ರ, ಕಾಮಿಡಿ ನಟ ಚಂದ್ರಪ್ರಭ, ಸಿಂಗರ್ ಆಶಾ ಭಟ್‌, ಹುಚ್ಚ ಸಿನೆಮಾದ ನಟಿ ರೇಖಾ, ರೀಲ್ಸ್ ನಲ್ಲಿ ಫೇಮಸ್‌ ಆಗಿರುವ ಭೂಮಿಕಾ ಬಸವರಾಜ್ ಹೆಸರು ಕೇಳಿಬಂದಿತ್ತು. ಆದರೆ ಅವರ್ಯಾರು ಸೀಸನ್‌ 10ಕ್ಕೆ ಬರಲಿಲ್ಲ.  ಈ ಬಾರಿಯಾದರೂ ಬರುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

ಜೊತೆಗೆ ಎಸ್ ನಾರಾಯಣ ಅವರ ಪುತ್ರ ಪಂಕಜ್ ನಾರಾಯಣ್, ಅಂತರಪಟ ಸೀರಿಯಲ್ ಹಿರೋಯಿನ್ ತನ್ವಿಯಾ ಬಾಲರಾಜ್ , ಕೆಂಡಸಂಪಿಗೆ ಸೀರಿಯಲ್‌ ನಿಂದ ನಟ ಆಕಾಶ್, ಶನಿ ಸೀರಿಯಲ್ ನಲ್ಲಿ ಫೇಮಸ್ ಆಗಿದ್ದ ನಟ ಸುನೀಲ್ ಬರಬಹುದು ಎಂದು ಜನ ಊಹಿಸಿದ್ದಾರೆ.

ಇದರ ಜೊತೆಗೆ ತುಕಾಲಿ ಸಂತು ಪತ್ನಿ ಮಾನಸ, ಗಿಚ್ಚಿಗಿಲಿಗಿಲಿಯ  ಪೇಮಸ್‌ ನಟ ರಾಗಿಣಿ ಅಲಿಯಾಸ್ ರಾಘವೇಂದ್ರ. ರೀಲ್ಸ್ ರೇಷ್ಮಾ, ಬೃಂದಾವನ ಸೀರಿಯಲ್‌ ನಲ್ಲಿ ನಟಿಸಿದ್ದ ವರುಣ್ ಆರಾಧ್ಯ ಸೇರಿದಂತೆ ಹಲವರಿಗೆ ಕರೆ ಹೋಗಿದೆ ಎನ್ನಲಾಗಿದೆ. 

ಕಳೆದ ಬಿಗ್‌ಬಾಸ್‌ ಸೀಸನ್‌ 10 ಅತ್ಯಂತ ಹೆಚ್ಚು ಟಿಆರ್‌ಪಿ ತಂದುಕೊಟ್ಟು ಕಲರ್ಸ್ ಕನ್ನಡ ಮತ್ತು ಬಿಗ್‌ಬಾಸ್‌ ನಡೆಸುವ ಪ್ರೊಡಕ್ಷನ್ ಹೌಸ್‌ಗೆ ಭರ್ಜರಿ ಲಾಭ ತಂದಿತ್ತು. ಕಾರ್ತಿಕ್ ಮಹೇಶ್ ವಿನ್ನರ್ ಮತ್ತು ಡ್ರೋಣ್ ಪ್ರತಾಪ್ ರನ್ನರ್ ಅಪ್‌  ,ನಟಿ ಸಂಗೀತಾ ಶೃಂಗೇರಿ ಮೂರನೇ ಸ್ಥಾನ ಪಡೆದಿದ್ದರು.  10 ನೇ ಸೀಸನ್‌ ನಲ್ಲಿ ಹೆಚ್ಚು ಸೌಂಡ್‌ ಮಾಡಿದ್ದು ಸಂಗೀತಾ ಶೃಂಗೇರಿ.

click me!