
ಎಲ್ಲೆಲ್ಲೂ ಗಿಲ್ಲಿ ಹವಾ. ಗಿಲ್ಲಿ ಗಿಲ್ಲಿ ಅನ್ನೋ ಸೌಂಡ್ ಅಂಡ್ ಟಾಕ್ ಜಾತ್ರೆ ಮಹೋತ್ಸವೇ ಆಗ್ಲಿ. ಮದುವೆ ಮನೆಯೇ ಆಗ್ಲಿ, ಗಿಲ್ಲಿ ಬಗ್ಗೆ ಮಾತನಾಡದವರೇ ಇಲ್ಲ. ಅದಕ್ಕೆಲ್ಲಾ ಕಾರಣ ಗಿಲ್ಲಿಯ ಬಿಗ್ ಬಾಸ್ ಆಟ. ಆದ್ರೆ ವ್ಯಕ್ತಿತ್ವದ ಆಟ ಹೊರ ಪ್ರಪಂಚದಲ್ಲಿ ನಡೆಯೋದಿಲ್ಲ ಅನ್ನೋದು ಗಿಲ್ಲಿಗೆ ಗೊತ್ತೋ ಗೊತ್ತಿಲ್ಲವೇ. ಯಾಕಂದ್ರೆ ಗಿಲ್ಲಿ ಮೇಲೆ ಈಗ ದೊಡ್ಡ ಆರೋಪ ಒಂದು ಕೇಳಿ ಬಂದಿದೆ. ಹಾಗಾದ್ರೆ ಏನದು? ನೋಡೋಣ ಬನ್ನಿ.
ಯೆಸ್, ಬಿಗ್ ಬಾಸ್ ಶೋ ಮುಗಿದೆ. ಈಗ ಏನಿದ್ರು ಬಿಗ್ ಬಾಸ್ ಗೆದ್ದ ಗಿಲ್ಲಯದ್ದೇ ಹವಾ ನಡೀತಿದೆ. ವ್ಯಕ್ತಿತ್ವದ ಆಟ ಆಡಿ ಗೆದ್ದು ಬಂದ ನಲ್ಲಿ ಮೂಳೆ ಸ್ಟಾರ್, ಖಾಸಗಿ ಕಾರ್ಯಕ್ರಮಗಳ ಬೇಟಿ ಜೊತೆಗೆ ಒಂದಷ್ಟು ದುಡ್ಡು ದುಡಿದು ಬಿಡೋಣ ಅಂತ ಎಲ್ಲಾ ಕಾರ್ಯಕ್ರಮಗಳಿಗೆ ಗೆಸ್ಟ್ ಆಗಿ ಹೋಗುತ್ತಿದ್ದಾನೆ ಗಿಲ್ಲಿ. ಯಾಕಂದ್ರೆ ಗಿಲ್ಲಿಗೆ ಈಗ ಎಲ್ಲೆಲ್ಲೂ ಬೇಡಿಕೆ ಇದೆ.
ಬಿಗ್ ಬಾಸ್ ಗೆಲುವು ಗಿಲ್ಲಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ನೀಡಿದೆ, ಅದರ ಜೊತೆಗೆ ಹಲವು ಹೊಸ ಅವಕಾಶಗಳನ್ನು ಸಹ ತಂದುಕೊಡುತ್ತಿದೆ. ಆದ್ರೆ ಇದನ್ನೆಲ್ಲಾ ಬ್ಯಾಲೆನ್ಸ್ ಮಾಡೋದ್ರಲ್ಲೇ ಮಗ್ನವಾಗಿರೋ ಗಿಲ್ಲಿ ತನ್ನ ನಂಬಿ ಬಂಡವಾಳ ಹೂಡಿದ್ದ ನಿರ್ಮಾಪಕರನ್ನೇ ಮರೆತಿದ್ದಾನಂತೆ. ಯಾಕಂದ್ರೆ ಗಿಲ್ಲಿ ನಟನ ವಿರುದ್ಧ ನಿರ್ಮಾಪಕ ತೇಜಸ್ವಿ ಎಸ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ..
ಗಿಲ್ಲಿ ನಟ ಬಿಗ್ ಬಾಸ್ ಹೋಗುವ ಮುಂಚೆ ‘ಸರ್ಕಾರಿ ಶಾಲೆ ಎಚ್8’ ಅನ್ನೋ ಸಿನಿಮಾನಲ್ಲಿ ನಟಿಸಿದ್ದ. ಇದೀಗ ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾ ಪ್ರಚಾರಕ್ಕೆ ಗಿಲ್ಲಿಯೇ ಬರುತ್ತಿಲ್ಲ ಅಂತ ಆರೋಪ ಮಾಡಿದ್ದಾರೆ. ಗಿಲ್ಲಿ ಸಂಭಾವನೆ ಪಡೆದು ಸಿನಿಮಾನಲ್ಲಿ ನಟಿಸಿದ್ದಾರೆ. ಆದ್ರೆ ಸಿನಿಮಾ ಪ್ರಚಾರ ಮಾಡಿ ಚಿತ್ರವನ್ನ ಗೆಲ್ಲಿಸಲು ಗಿಲ್ಲಿಯೇ ಬರುತ್ತಿಲ್ಲ ಎಂದು ನಿರ್ಮಾಪಕರು ಆರೋಪಿಸಿದ್ದಾರೆ.
ನಲ್ಲಿ ಮೂಳೆ ಸ್ಟಾರ್ ಗಿಲ್ಲಿ ನಟ ಕನ್ನಡ ಚಿತ್ರರಂಗದ ಸ್ಟಾರ್‌ಗಳ ಬೇಟಿಯಲ್ಲೇ ಬ್ಯುಸಿ ಆಗಿದ್ದಾರೆ. ಸುದೀಪ್ ಶಿವಣ್ಣ, ದುನಿಯಾ ವಿಜಯ್ ಹೀಗೆ ಹೀರೋಗಳ ಮನೆ ಮನೆ ಬೇಟಿ ಮಾಡಿರೋ ಗಿಲ್ಲಿ ತನ್ನ ಮೇಲೆ ಬಂಡವಾಳ ಹೂಡಿ ಸಿನಿಮಾ ಮಾಡಿರೋ ನಿರ್ಮಾಪಕರನ್ನೇ ಮರೆತಂತಿದೆ. ಒಟ್ಟಿನಲ್ಲಿ ಗೆಲ್ಲಿ ಈಗ ಸ್ಯಾಂಡಲ್ವುಡ್ನ ಹಾಟ್ ಟಾಪಿಕ್ ಅಂತು ನಿಜ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.