ಬಿಗ್‌ಬಾಸ್ ನಿರೂಪಣೆಗೆ ಸುದೀಪ್ ಅವರು ಗುಡ್ಬೈ ಹೇಳಿ ಘೋಷಣೆ ಮಾಡಿದ್ದು ಏಕೆ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಳ್ತಿರೋ ಮಧ್ಯೆಯೇ ಮಾಜಿ ಸ್ಪರ್ಧಿ ರೂಪೇಶ್ ಈ ಹೇಳಿಕೆ ನೀಡಿದ್ದಾರೆ...!
ನಿನ್ನೆ (ಭಾನುವಾರ) ರಾತ್ರಿ ಏಕಾಏಕಿಯಾಗಿ ಬಿಗ್ಬಾಸ್ಗೆ ಸುದೀಪ್ ಅವರು ಗುಡ್ಬೈ ಹೇಳುವ ಮೂಲಕ ಅಸಂಖ್ಯ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. 10 ಸೀಸನ್ ಪೂರೈಸಿ 11ನೇ ಸೀಸನ್ ಶುರುವಾಗಿ ಕೆಲವೇ ದಿನಗಳಲ್ಲಿ ಸುದೀಪ್ ಅವರು ಈ ದಿಢೀರ್ ನಿರ್ಧಾರ ತೆಗೆದುಕೊಂಡಿದ್ದು ಏಕೆ ಎನ್ನುವ ಬಗ್ಗೆ ಅಭಿಮಾನಿಗಳು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಬಿಗ್ಬಾಸ್ನ ಸೀಸನ್ 11 ಇನ್ನೂ ಹಲವು ದಿನಗಳು ಇರುವ ಮೊದಲೇ ಈ ರೀತಿ ಘೋಷಿಸಿದ್ದಕ್ಕೆ ಇದು ಪಬ್ಲಿಸಿಟಿಯ ಸ್ಟಂಟ್ ಎಂದೂ ಸೋಷಿಯಲ್ ಮೀಡಿಯಾದಲ್ಲಿ ಕೆಲವು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಇದು ತಮಾಷೆಯ ಸುದ್ದಿ ಎನ್ನುತ್ತಿದ್ದಾರೆ. ಆದರೆ ಇಂಥ ವಿಷಯದಲ್ಲಿ ಸುದೀಪ್ ಅವರು ತಮಾಷೆ ಮಾಡುವುದಿಲ್ಲ, ಇದು ನಿಜವಾದ ಸುದ್ದಿಯೇ ಎಂಬುದು ಅಪಾರ ಅಭಿಮಾನಿಗಳ ಅನಿಸಿಕೆ.
ಹೀಗೆ ಬಿಗ್ಬಾಸ್ಗೆ ಗುಡ್ಬೈ ಹೇಳುವ ಹೇಳಿಕೆ ನೀಡಿ ಸುದೀಪ್ ಅವರು ರಾತ್ರೋರಾತ್ರಿ ಶಾಕ್ ನೀಡಿರುವ ನಡುವೆಯೇ, ಬಿಗ್‌ಬಾಸ್ 9ರ ಸ್ಪರ್ಧಿಯಾಗಿದ್ದ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಮಾಡಿರುವ ಟ್ವೀಟ್ ಇದೀಗ ಹಲ್ಚಲ್ ಸೃಷ್ಟಿಸುತ್ತಿದೆ. ಅಷ್ಟಕ್ಕೂ ರೂಪೇಶ್ ರಾಜಣ್ಣ ಅವರು ತಮ್ಮ ಟ್ವೀಟ್ನಲ್ಲಿ ಕುತೂಹಲ, ವಿಚಿತ್ರ ಹಾಗೂ ನಿಗೂಢ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ. ಅವರು ಬರೆದದ್ದು ಏನೆಂದರೆ, ಬಿಗ್ ಬಾಸ್ ಎಂಬ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳ ನಿಮ್ಮ ಕಿತ್ತೋದ್ ಆಟಕ್ಕೆ @KicchaSudeep ಬಿಗ್ ಬಾಸ್ ನಿರೂಪಕರಾಗಿ ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನ ಸಹಿಸೋಲ್ಲ. ಎ ಮುಂಬೈ ಮರಾಠಿ ಹಾಗೂ ತಮಿಳ್ ನಿರ್ದೇಶಕ ಮೊದಲು ಬಿಗ್ ಬಾಸ್ ಬಿಡಿ. ಇಲ್ಲ ಬಿಗ್ ಬಾಸ್ ನಿಲ್ಲಬೇಕು. ಅಸಲಿ ವಿಷಯ ನಾಳೆ ಮಾತಾಡ್ತೀನಿ ಎಂದು ಬರೆದು ಚಕ್ರವರ್ತಿ ಚಂದ್ರಚೂಡ್ ಅವರನ್ನು ಟ್ಯಾಗ್ ಮಾಡಿದ್ದಾರೆ ರೂಪೇಶ್ ರಾಜಣ್ಣ.
ಇದೀಗ ಭಾರಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇದರ ಹಿಂದೆ ಇರುವ ಸತ್ಯವೇನು? ಯಾಕೆ ಇವರು ಹೀಗೆ ಬರೆದಿದ್ದಾರೆ? ಸುದೀಪ್ ಅವರಿಗೆ ಅವಮಾನ ಆಗಿದ್ದು ಹೇಗೆ? ಏಕೆ ಎಂಬಿತ್ಯಾದಿ ಪ್ರಶ್ನೆ ಈಗ ಕನ್ನಡಿಗರನ್ನು ಅದರಲ್ಲಿಯೂ ಹೆಚ್ಚಾಗಿ ಬಿಗ್‌ಬಾಸ್ ಹಾಗೂ ಸುದೀಪ್ ಅಭಿಮಾನಿಗಳನ್ನು ಕಾಡುತ್ತಿದೆ. ಅಷ್ಟಕ್ಕೂ ಸುದೀಪ್ ಅವರು, ನಿನ್ನೆ ರಾತ್ರಿ ಟ್ವೀಟ್ ಮೂಲಕ, ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದ ನಿರೂಪಕನ ಸ್ಥಾನಕ್ಕೆ ಗುಡ್ ಬೈ ಘೋಷಿಸಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 11 ನನ್ನ ಕೊನೆಯ ನಿರೂಪಣೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. 10 ವರ್ಷ ಪೂರೈಸಿ 11 ನೇ ವರ್ಷಕ್ಕೆ ಕಾಲಿಟ್ಟಿರುವ ಬಿಗ್‌ಬಾಸ್ ಕಾರ್ಯಕ್ರಮವನ್ನು ಇಷ್ಟು ವರ್ಷ ನಡೆಸಿ ಕೊಟ್ಟ ಸುದೀಪ್ ಈಗ ಏಕಾ ಏಕಿ ಅಧಿಕೃತವಾಗಿ ಘೋಷಣೆ ಮಾಡಿ ತನ್ನ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
undefined
ಬಿಗ್ಬಾಸ್ಗೆ ಭರ್ಜರಿ ಟಿವಿಆರ್: ಸುದೀಪ್ ಮತ್ತು ತಂಡದಿಂದ ಹೀಗೊಂದು ಪಾರ್ಟಿ- ವಿಡಿಯೋ ವೈರಲ್
#BBK11 ಗೆ ತೋರಿದ ಉತ್ತಮ ಪ್ರತಿಕ್ರಿಯೆಗಾಗಿ ಎಲ್ಲರಿಗೂ ಧನ್ಯವಾದಗಳು. ನೀವೆಲ್ಲರೂ ನನಗೆ ಮತ್ತು ಕಾರ್ಯಕ್ರಮಕ್ಕೆ ತೋರಿದ ಪ್ರೀತಿಯ ಬಗ್ಗೆ ಟಿವಿಆರ್ (ಸಂಖ್ಯೆ)ಯಲ್ಲಿ ಕಾಣುತ್ತಿದೆ. ಈ 10 ಪ್ಲಸ್ 1 ವರ್ಷ ನಿಮ್ಮೊಂದಿಗೆ ಪಯಣ ಮಾಡಿದ್ದು ಉತ್ತಮವಾಗಿತ್ತು. ನಾನು ಈಗ ಏನು ಬೇರೆ ಕಡೆಗೆ ನನ್ನ ನಡೆಯನ್ನು ಮುಂದುವರಿಸಲು ಇದು ಸಮಯವಾಗಿದೆ. ಇದು BBK ಗೆ ಹೋಸ್ಟ್ ಆಗಿ ನನ್ನ ಕೊನೆಯ ಸೀಸನ್ ಆಗಿರುತ್ತದೆ ಮತ್ತು ನನ್ನ ನಿರ್ಧಾರವನ್ನು ನನ್ನ ಕಲರ್ಸ್ ಮತ್ತು ಇಷ್ಟು ವರ್ಷಗಳಿಂದ ಬಿಗ್‌ಬಾಸ್ ಅನ್ನು ಅನುಸರಿಸಿದ ಎಲ್ಲರೂ ಗೌರವಿಸುತ್ತಾರೆ ಎಂದು ನಾನು ನಂಬುತ್ತೇನೆ. ಈ ಸೀಸನ್ ಅನ್ನು ಅತ್ಯುತ್ತಮವಾಗಿ ಮಾಡೋಣ, ಮತ್ತು ನಾನು ಕೂಡ ಅತ್ಯುತ್ತಮವಾಗಿ ನಿಮ್ಮೆಲ್ಲರನ್ನು ರಂಜಿಸುತ್ತೇನೆ. ಲವ್ ಮತ್ತು ಹಗ್ ಇದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಬಿಗ್‌ಬಾಸ್ ನಿರೂಪಣೆಗೆ ಸುದೀಪ್ ವಿದಾಯ, ಕಿಚ್ಚನ ಅಧಿಕೃತ ಘೋಷಣೆ!
ಬಿಗ್ ಬಾಸ್ ಎಂಬ ಕಾರ್ಯಕ್ರಮ ನಡೆಸುವ
ಕೆಲವು ಕನ್ನಡ ದ್ರೋಹಿಗಳ
ನಿಮ್ಮ ಕಿತ್ತೋದ್ ಆಟಕ್ಕೆ ಬಿಗ್ ಬಾಸ್ ನಿರೂಪಕರಾಗಿ ನಿಲ್ಲಿಸಬೇಕಾಗಿದೆ.
ಅವರಿಗೆ ಮಾಡಿದ ಅವಮಾನ ಸಹಿಸೋಲ್ಲ
ಎ ಮುಂಬೈ ಮರಾಠಿ ಹಾಗೂ ತಮಿಳ್ ನಿರ್ದೇಶಕ ಮೊದಲು ಬಿಗ್ ಬಾಸ್ ಬಿಡಿ ಇಲ್ಲ ಬಿಗ್ ಬಾಸ್ ನಿಲ್ಲಬೇಕು
ಅಸಲಿ ವಿಷಯ ನಾಳೆ ಮಾತಾಡ್ತೀನಿ.