ಭಾರತದಿಂದ ಹೊರ ಹೋಗಬೇಕು ಪ್ಲೀಸ್ ಬೇಗ ಬಾ ಅಪ್ಪ; ಮಗನ ಪತ್ರ ಓದಿ ಕಿರಿಕ್ ಕೀರ್ತಿ ಕಣ್ಣೀರು

By Vaishnavi Chandrashekar  |  First Published Oct 14, 2024, 10:21 AM IST

ತಂದೆಯ ಜೊತೆ ವೇದಿಕೆ ಮೇಲೆ ದಸರ ಹಬ್ಬ ಆಚರಿಸಿದ ಅವಿಷ್ಕಾರ್. ಪತ್ರ ನೋಡಿ ಭಾವುಕರಾದ ಕಿರಿಕ್ ಕೀರ್ತಿ. 


ಬಿಗ್ ಬಾಸ್ ಸ್ಪರ್ಧಿ, ಸೋಷಿಯಲ್ ಮೀಡಿಯಾ ಸ್ಟಾರ್, ಆಂಕರ್...ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಬಂದಿರುವ ಕಿರಿಕ್ ಕೀರ್ತಿ ಈ ವರ್ಷ ದಸರ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಸುವರ್ಣ ದಸರ ದರ್ಬಾರ್‌ ಕಾರ್ಯಕ್ರಮದಲ್ಲಿ ಕಿರಿಕ್ ಕೀರ್ತಿ ತಮ್ಮ ತಾಯಿ ಮತ್ತು ಮಗನ ಜೊತೆ ಕಾಣಿಸಿಕೊಂಡಿದ್ದಾರೆ. ವೇದಿಕೆ ಮೇಲೆ ಕಿರಿಕ್ ಕೀರ್ತಿ ಆಗಮಿಸುತ್ತಿದ್ದಂತೆ ನಿರೂಪಕಿ ಶಾಲಿನಿ ಸತ್ಯನಾರಾಯಣ್ ಒಂದು ಧ್ವನಿ ಕೇಳಿಸಿದ್ದಾರೆ...ಅದುವೇ ಪುತ್ರ ಅವಿಷ್ಕಾರ್ ಮಾತನಾಡಿರುವುದು. 

'ಅಪ್ಪ.... ನೀನು ನನಗೆ ಬೇಸ್ಟ್‌ ಅಪ್ಪ, ನಿಮ್ಮ ಜೊತೆ ನಾನು ಸದಾ ಖುಷಿಯಾಗಿ ಇರುತ್ತೀನಿ. ಒಂದೊಂದು ಸಲ ನನಗೆ ಬೈತೀರಾ...ಒಂದೊಂದು ಸಲ ನನ್ನ ಖುಷಿಯನ್ನು ನೋಡುತ್ತೀರಾ. ನೀವು ಬೈದಾಗ ನನಗೆ ಗೊತ್ತಾಗುತ್ತದೆ ನಾನು ಏನು ಮಾಡುತ್ತಿದ್ದೀನಿ ಅಂತ. ನೀವು ಎಷ್ಟು ಬೆಸ್ಟ್‌ ಅಪ್ಪ ಅಂದ್ರೆ ಎಲ್ಲ ಅಪ್ಪಂದಿರಿಗೆ ಹೊಟ್ಟೆ ಕಿಚ್ಚು ಆಗುತ್ತೆ. ನೀವು ಚೆನ್ನಾಗಿದ್ದರೆ ನಾನು ಚೆನ್ನಾಗಿರುತ್ತೀನಿ' ಎಂದು ಅವಿಷ್ಕಾರ್ ಮಾತನಾಡಿರುವ ಧ್ವನಿ ಕೇಳಿಸಿದ್ದಾರೆ. ಈ ಮಾತುಗಳನ್ನು ಕೇಳುತ್ತಿದ್ದಂತೆ ಕೀರ್ತಿ ಮತ್ತು ತಾಯಿ ಭಾವುಕರಾಗಿದ್ದಾರೆ. ತಕ್ಷಣವೇ ಅವಿಷ್ಕಾರ್ ವೇದಿಕೆಯ ಮೇಲೆ ಆಗಮಿಸುತ್ತಾನೆ. ಕೈಯಲ್ಲಿ ತಂದೆಗೆಂದು ಗಿಫ್ಟ್‌ ಕಾರ್ಡ್ ಬರೆದಿದ್ದನ್ನು. ವೇದಿಕೆಯ ಮೇಲೆ ಪತ್ರದಲ್ಲಿ ಏನು ಬರೆದಿದ್ದೀನಿ ಎಂದು ಅವಿಷ್ಕಾರ್ ಓಡಿದ್ದಾನೆ.

Tap to resize

Latest Videos

ಎರಡು ಕಣ್ಣು ಸಾಲದು ಈ ಬೊಂಬೆ ನೋಡಲು; ರೇಶ್ಮೆ ಸೀರೆಯಲ್ಲಿ ಮಿಂಚಿದ ರಚಿತಾ ರಾಮ್!

'ಹಾಯ್ ಅಪ್ಪ..ನೀನೇ ಬೆಸ್ಟ್‌. ನೀನು ನನಗೆ ಪ್ರತಿಯೊಂದನ್ನು ಪರ್ಫೆಕ್ಟ್ ರೀತಿಯಲ್ಲಿ ಹೇಳಿಕೊಡಿತ್ತೀರಾ..ಕೆಲವೊಮ್ಮೆ ನೀವು ತುಂಬಾ ಬ್ಯುಸಿಯಾಗಿರುತ್ತೀರಾ ಕೆಲವೊಮ್ಮೆ ನೀವು ಫ್ರೀ ಆಗಿರುತ್ತೀರಿ. ನಿಮ್ಮ ಕೆಲಸ ಎಷ್ಟು ಕಷ್ಟ ಇದೆ ಎಂದು ನನಗೆ ಅರ್ಥವಾಗುತ್ತಿದೆ. ನನಗೆ ಒಂದು ಆಸೆ ಇದೆ...ಭಾರತದಿಂದ ಹೊರಗಡೆ ಒಮ್ಮೆ ಪ್ರಯಾಣ ಮಾಡಬೇಕು. ದಯವಿಟ್ಟು ಮನೆಗೆ ಸ್ವಲ್ಪ ಬೇಗ ಬಾ' ಎಂದು ಅವಿಷ್ಕಾರ್ ಹೇಳಿದ್ದಾರೆ. ಅವಿಷ್ಕಾರ್ ಮತ್ತು ಕಿರಿಕ್ ಕೀರ್ತಿ ಬಾಂಡಿಂಗ್ ನೋಡಿ ಪ್ರತಿಯೊಬ್ಬರು ಭಾವುಕರಾಗಿದ್ದಾರೆ.

undefined

ಧ್ರುವ ಸರ್ಜಾ ಸಿನಿಮಾ ರಿಲೀಸ್‌ಗೆ ಸಮಸ್ಯೆ ಆಗಬಾರದು ಎಂದು 2 ಸಲವೂ ಸಹಾಯ ಮಾಡಿದ ಅಪ್ಪು, ಶಿವಣ್ಣ; ಕೊನೆಗೂ ಸತ್ಯ ಬಯಲು

'ಯಾಕ್ರೋ ನಿಮ್ಮ ಗಂಡ ಹೆಂಡತಿ ಜಗಳದಿಂದ ಆ ಮಗುವನ್ನು ಅನಾಥನಾಗಿ ಮಾಡುತ್ತಿದ್ದೀರಾ..ತುಂಬಾ ಕಷ್ಟ ಬುದಕೋದು ಯಾಕೆ ಹೇಳಿದೆ ಅಂದರೆ ನಾನು ಹೀಗೆ ಬೆಳೆದಿದ್ದು ಇವಾಗಲೂ ನಮ್ಮ ತಂದೆ ನೆನಪು ಆಗ್ತಾರೆ' ಎಂದು ನೆಟ್ಟಿಗ ಶಶಿ ಸೂರ್ಯ ಕಾಮೆಂಟ್ ಮಾಡಿದ್ದಾರೆ. 

 

click me!