ಟ್ರಾನ್ಸಫರೆಂಟ್ ಬಟ್ಟೆ ಹಾಕಿರೋ ಉರ್ಫಿ ಜಾವೇದ್ ಈ ಬಾರಿ ತಂಗಿ ಜೊತೆ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ ಎನ್ನಲಾಗ್ತಿದೆ. ಇದು ನಿಜಾನಾ?
ಬಟ್ಟೆ ವಿಷಯದಲ್ಲಿ ಉರ್ಫಿ ಜಾವೇದ್ ಮಾಡಿದಷ್ಟು ಪ್ರಯೋಗವನ್ನು ಯಾರೂ ಮಾಡಿರಲಿಕ್ಕಿಲ್ಲ. ಉರ್ಫಿ ಜಾವೇದ್‌ಗೆ ಬಟ್ಟೆ ಅಂದ್ರೆ ಅಲರ್ಜಿ. ಹೀಗಾಗಿ ಅವರು ಏನು ಸಿಗತ್ತೋ ಅದನ್ನೇ ಬಟ್ಟೆ ಅಂತ ಅಂದುಕೊಂಡು ಧರಿಸುತ್ತಾರೆ. ಈಗ ಅವರು ಬಂಗಾರದ ಬಣ್ಣದ ಪಾರದರ್ಶಕ ಬಟ್ಟೆ ಹಾಕಿ ಮೈಮಾಟ ಮೆರೆದಿದ್ದಾರೆ. ಈ ಫೋಟೋಗಳನ್ನು ನೋಡಿ ಕೆಲವರು ನಿಂದಿಸಿದರೆ, ಇನ್ನೂ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಉರ್ಫಿ ಜಾವೇದ್ ಹೊಸ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ತಿದ್ದಾರೆ.
ಓಡಾಡೋಕೂ ಆಗದ ಡ್ರೆಸ್‌ನಲ್ಲಿ ಉರ್ಫಿ ಜಾವೇದ್!
ಉರ್ಫಿ ಜಾವೇದ್ ಅವರು ಈ ಡ್ರೆಸ್ ಧರಿಸಿದ ವಿಡಿಯೋವನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಡ್ರೆಸ್‌ನಲ್ಲಿ ಅವರಿಗೆ ಓಡಾಡೋಕೆ ಕೂಡ ಆಗೋದಿಲ್ಲ. ಆದರೂ ಫ್ಯಾಷನ್ ಮಾಡ್ತಾರೆ.
ಸದ್ದಿಲ್ಲದೇ ನಡೆಯಿತು ಉರ್ಫಿ ಎಂಗೇಜ್‌ಮೆಂಟ್? ಯಾರೀ ಹಿಂದೂ ಯುವಕ? ಸತ್ಯ ತಿಳಿದು ಅಭಿಮಾನಿಗಳು ಶಾಕ್!
ಸಿನಿಮಾಗಳಲ್ಲಿ ನಟನೆ!
'7 ಡೇಸ್ ಲೈವ್' ಎನ್ನುವ ರಿಯಾಲಿಟಿ ಶೋನಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಫೆಬ್ರವರಿ 22ರಿಂದ ಈ ಶೋ ಪ್ರಸಾರ ಆಗಲಿದೆ. ಈ ಸೀರೀಸ್‌ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದವರು ಸ್ಪರ್ಧಿಗಳಾಗಿ ಕಾಣಿಸಿಕೊಳ್ತಾರೆ. ಬೇರೆ ಬೇರೆ ಟಾಸ್ಕ್ ಇರುತ್ತದೆ, ಅದನ್ನು ಕಂಪ್ಲೀಟ್ ಮಾಡಬೇಕು. ಈ ರಿಯಾಲಿಟಿ ಶೋನಲ್ಲಿ ಅನುಭವ್ ಬಸ್ಸಿ ನಿರೂಪಕರು. ʼಸ್ಟ್ಯಾಂಡಪ್ ಕಾಮಿಡಿಯನ್ʼ, 'ತೂ ಜೂಟಿ ಮೈ ಮಕ್ಕರ್' ಸಿನಿಮಾದಲ್ಲಿ ಇವರು ನಟಿಸಿದ್ದರು.
ಮುಸ್ಲಿಂ ವ್ಯಕ್ತಿಯನ್ನು ಮಾತ್ರ ಮದ್ವೆಯಾಗಲ್ಲ ಎಂದ ಉರ್ಫಿ ಜಾವೇದ್ ಕೊಟ್ಟ ಕಾರಣ ಮಾತ್ರ ಶಾಕಿಂಗ್!
ಅಕ್ಕ-ತಂಗಿ ಒಂದೇ ಶೋನಲ್ಲಿ!
ಈ ರಿಯಾಲಿಟಿ ಶೋನಲ್ಲಿ ಯಾವುದೇ ಕಟ್, ಎಡಿಟ್ ಇರೋದಿಲ್ವಂತೆ. ಎಲ್ಲವೂ ಲೈವ್ ಆಗಿರುತ್ತದೆ ಎಂದು ಹೇಳಲಾಗಿದೆ. ಉರ್ಫಿ ಜಾವೇದ್ ಬಳಿಕ ಅವರ ತಂಗಿ ಡಾಲಿ ಜಾವೇದ್ ಕೂಡ ರಿಯಾಲಿಟಿ ಶೋಗಳಲ್ಲಿ ಅದೃಷ್ಟ ಪರೀಕ್ಷೆ ಮಾಡೋಕೆ ರೆಡಿಯಾಗಿದ್ದಾರೆ. ಡಾಲಿ '7 ಡೇಸ್ ಲೈವ್' ರಿಯಾಲಿಟಿ ಶೋಗೆ ಸಹಿ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಈ ಅಕ್ಕ-ತಂಗಿ ಅಧಿಕೃತ ಮಾಹಿತಿ ನೀಡಬೇಕಿದೆ. ಇನ್ನು ಉರ್ಫಿ ಜಾವೇದ್ ತಂಗಿಯೇ ಸಿಕ್ಕಾಪಟ್ಟೆ ಚೆನ್ನಾಗಿದ್ದಾರೆ ಎನ್ನಲಾಗ್ತಿದೆ.
ಬಿಗ್ ಬಾಸ್ ಶೋನಲ್ಲಿ ಭಾಗವಹಿಸ್ತಾರಾ?
ಉರ್ಫಿ ಅವರ ಡಿಜಿಟಲ್ ಸೀರೀಸ್ 'ಫಾಲೋ ಕರ್ ಲೋ ಯಾರ್'ನಲ್ಲಿಯೂ ಡಾಲಿ ಭಾಗವಹಿಸಿದ್ದರು. ಉರ್ಫಿಯೇ ಈ ಸೀರೀಸ್‌ನಲ್ಲಿ ತಂಗಿಯ ಪರಿಚಯ ಮಾಡಿಕೊಟ್ಟಿದ್ದರು. ಈ ಶೋನಲ್ಲಿ ಸಹೋದರಿಯರ ಬಾಂಧವ್ಯವೇ ಎದ್ದು ಕಾಣುತ್ತಿತ್ತು. ಸಲ್ಮಾನ್ ಖಾನ್ ನಿರೂಪಣೆಯ ʼಬಿಗ್ ಬಾಸ್ʼ ಶೋನಲ್ಲಿ ಡಾಲಿ ಭಾಗವಹಿಸ್ತಾರೆ ಎನ್ನಲಾಗಿದ್ದರೂ ಕೂಡ ಅದು ಸತ್ಯವಾಗಲಿಲ್ಲ.