ವೈರಲ್ ಆಯ್ತು ಧನುಶ್ರೀ ರೀಲ್ ವಿಡಿಯೋ. ಜೊತೆಗಿರುವುದು ಬಾಯ್‌ಫ್ರೆಂಡ್ ಅಂತಿದ್ದಾರೆ ನೆಟ್ಟಿಗರು.
ಬಿಗ್ ಬಾಸ್ ಸ್ಪರ್ಧಿ, ಸೋಷಿಯಲ್ ಮೀಡಿಯಾ ಸ್ಟಾರ್, ಡಿಜಿಟಲ್ ಕ್ರಿಯೇಟರ್ ಹಾಗೂ ಉದ್ಯಮಿ ಆಗಿರುವ ಧನುಶ್ರೀ ಈಗೊಂದು ವಿಚಾರಕ್ಕೆ ಸುದ್ದಿಯಲ್ಲಿ ಇದ್ದಾರೆ.ಇಷ್ಟು ದಿನ ಫ್ಯಾಷನ್, ಮೇಕಪ್, ಟ್ರೋಲ್ ಹಾಗೂ ಬ್ರೇಕಪ್ ಅಂತ ಹರಿದಾಡುತ್ತಿತ್ತು ಆದರೆ ಈಗ ಬಾಯ್‌ಫ್ರೆಂಡ್ ಸಿಕ್ಕಿದಾನೆ, ಮದುವೆ ಫಿಕ್ಸ್ ಆಗಿದೆ ಹಾಗೆ ಹೀಗೆ ಎಂದು ಫೋಟೋ ಮತ್ತು ವಿಡಿಯೋ ವೈರಲ್ ಆಗುತ್ತಿದೆ. ಇದೆಲ್ಲಾ ನಿಜನಾ? ಏನಿದು ರೀಲ್ಸ್ ...ಕ್ಲಾರಿಟಿ ಇಲ್ಲಿದೆ ನೋಡಿ....
ನೀಲಿ ಬಣ್ಣದ ಕ್ರೇಮ್ ಮೈಸೂರ್ ಸ್ಕಿಲ್ ಸೀರೆ ಧರಿಸಿ ಅದಕ್ಕೆ ಕೈ ತುಂಬಾ ಬಳೆ ಹಾಗೂ ಹೂ ಮುಡಿದು ಧನುಶ್ರೀ ನಡೆದುಕೊಂಡು ಬರುತ್ತಾರೆ. ಆಗ ಯುವಕನೊಬ್ಬ ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಚಿತ್ರದ ಡೈಲಾಗ್ ಹೊಡೆದು ಪ್ರಪೋಸ್ ಮಾಡುತ್ತಾನೆ. ಅವನ ಡೈಲಾಗ್ ಹಾಗೂ ಲುಕ್‌ಗೆ ಧನುಶ್ರೀ ಫಿದಾ ಆಗಿ ಭಾಗಿನ ಸ್ವೀಕರಿಸುತ್ತಾರೆ. ಸೇಮ್ ಟು ಸೇಮ್ ಚಿತ್ರದ ಸೀನ್ ರೀ-ಕ್ರಿಯೇಟ್ ಮಾಡಿದ್ದಾರೆ. ಇದನ್ನು ನೋಡಿ ವಿಡಿಯೋ ಮೂಲಕ ಬಾಯ್‌ಫ್ರೆಂಡ್ ಮುಖ ರಿವೀಲ್ ಮಾಡಿದ್ದಾರೆ, ಇವನೇ ಲವರ್ ಎಂದು ಗಾಸಿಬ್ ಹಬ್ಬಿದೆ. ಆದರೆ ವಿಡಿಯೋದಲ್ಲಿ ಇರುವ ಹುಡುಗ ಹೆಸರು ಭರತ್. ಇಷ್ಟು ದಿನ ಧನುಶ್ರೀ ಒಂಟಿಯಾಗಿ ವಿಡಿಯೋ ಮಾಡುತ್ತಿದ್ದರು, ಕೆಲಸ ಮತ್ತು ಕಂಟೆಂಟ್ ಕ್ರಿಯೇಟ್ ಮಾಡಲು ಸಮಯ ಸಿಗುತ್ತಿರಲಿಲ್ಲ. ಸಹಾಯಕ್ಕೆ ಬೇಕು ಎಂದು ಅಸಿಸ್ಟೆಂಟ್ ರೀತಿಯಲ್ಲಿ ಭರತ್ ಕೆಲಸ ಮಾಡುತ್ತಿದ್ದಾರೆ. ಧನುಶ್ರೀ ಎಲ್ಲೇ ಹೋದರೂ ವಿಡಿಯೋ ಮಾಡ್ಕೊಂಡು ಸಹಾಯ ಮಾಡ್ಕೊಂಡು ಹಿಂದೆ ಓಡಾಡುತ್ತಿರುತ್ತಾರಂತೆ. ಹೀಗಂತ ಅವರ ಫ್ಲಾನ್ ಕಾಮೆಂಟ್‌ನಲ್ಲಿ ಕ್ಲಾರಿಟಿ ಕೊಟ್ಟಿದ್ದಾರೆ.
ಸಂಬಳ ಅಂತ 750 ರೂ. ಕೊಡುತ್ತಿದ್ದರು, ಖರ್ಚು ಮಾಡೋಕೆ ಲವ್ ಮಾಡ್ಬೇಕಾ?; ರಚಿತಾ ರಾಮ್ ಮಾತಿಗೆ ಫ್ಯಾನ್ಸ್ ಶಾಕ್
ಸುಮಾರು 6-7 ವರ್ಷಗಳಿಂದ ಧನುಶ್ರೀ ರೀಲ್ಸ್ ಕ್ರಿಯೇಟ್ ಮಾಡುತ್ತಿದ್ದರು. ಒಂದು ಸಮಯದಲ್ಲಿ ಫೇಮಸ್ ಯೂಟ್ಯೂಬರ್ ಸ್ಯಾಮ್ ಸಮೀರ್ ಪರಿಚಯವಾಗುತ್ತದೆ. ಇಬ್ಬರು ಸ್ನೇಹಿತರು ಅಂತ ಪಬ್ಲಿಕ್‌ನಲ್ಲಿ ಹೇಳಿಕೊಂಡು ಓಡಾಡುತ್ತಿದ್ದರು ಆದರೆ ಲವರ್ಸ್ ಅನ್ನೋ ಸತ್ಯ ಎಲ್ಲರಿಗೂ ಗೊತ್ತಿತ್ತು. ಅದು ಏನ್ ಆಯ್ತೋ ಏನೋ ಇಬ್ರು ಬ್ರೇಕಪ್ ಮಾಡಿಕೊಂಡರು. ಅಲ್ಲಿಂದ ನೋಡಿ ಇಬ್ಬರ ಚಾನೆಲ್‌ನಲ್ಲಿ ವ್ಯೂಸ್ ಹೆಚ್ಚಾಯ್ತು. ಅದಾದ ಮೇಲೆ ತನ್ನದೇ ಆಫೀಸ್ ಮಾಡಿಕೊಂಡು ಹುಡುಗರನ್ನು ಸಹಾಯಕ್ಕೆ ಇಟ್ಕೊಂಡು ಸ್ಯಾಮ್ ತಮ್ಮ ಕೆಲಸ ಮುಂದುವರೆಸಿದರು. ಈಗ ಧನುಶ್ರೀ ಕೂಡ ಅದೇ ಮಾಡುತ್ತಿದ್ದಾರೆ. ಇಷ್ಟು ದಿನ ಬಾಯ್‌ಫ್ರೆಂಡ್ ಗರ್ಲ್‌ಫ್ರೆಂಡ್ ವಿಡಿಯೋಗಳನ್ನು ನೋಡುತ್ತಿದ್ದ ಜನರಿಗೆ ಅವರ ಫ್ಯಾಮಿಲಿ ಕಂಟೆಂಟ್ ನೋಡಿ ಖುಷಿಯಾಗಿದೆ. ಅದಿಕ್ಕೆ ಅಲ್ವಾ ಇಬ್ರೂ ಅಷ್ಟೋಂದು ದುಡ್ಡು ಮಾಡುತ್ತಿರುವುದು.
ಅಕ್ಕಾ...ಏನ್ ನಿನ್ನ ಸ್ಟೈಲು, ಸ್ಮೈಲು...; ಚೈತ್ರಾ ಕುಂದಾಪುರ ಅವತಾರ ನೋಡಿ