ಸಿಂಧು ಭೈರವಿ ಸೀರಿಯಲ್ ಶೂಟಿಂಗ್ ಸಮಯದಲ್ಲಿ ಬಾವಿಗೆ ಹಾರುವ ಸನ್ನಿವೇಶವನ್ನು ಈಜು ಬಾರದ ನಟಿ ಮಾಡಿದಾಗ ಏನಾಯ್ತು? ವಿಡಿಯೋ ವೈರಲ್
ತೆರೆಯ ಮೇಲೆ ಒಂದು ದೃಶ್ಯವನ್ನು ತೋರಿಸುವಾಗ ಅದರ ಹಿಂದೆ ನಟ-ನಟಿಯರು ಎಷ್ಟೆಲ್ಲಾ ಸರ್ಕಸ್ ಮಾಡಿರುತ್ತಾರೆ. ಎಷ್ಟೋ ಸಂದರ್ಭದಲ್ಲಿ ಜೀವಕ್ಕೆ ಅಪಾಯ ತಂದುಕೊಂಡಿರುವ ಉದಾಹರಣೆಗಳೂ ಸಾಕಷ್ಟು ಇವೆ. ಅದರಲ್ಲಿಯೂ ಆ್ಯಕ್ಷನ್ ದೃಶ್ಯಗಳನ್ನು ಮಾಡುವಾಗ ನಟ-ನಟಿಯರಿಗೆ ಗಂಭೀರ ಸ್ವರೂಪದ ಗಾಯಗಳಾಗುವ ಸುದ್ದಿಗಳೂ ಆಗ್ಗಾಗ್ಗೆ ಬರುತ್ತಲೇ ಇರುತ್ತವೆ. ಆದರೆ ಒಂದು ಚಿತ್ರ ಯಶಸ್ಸು ಆಗಬೇಕಾದರೆ ನಟರು ಇವೆಲ್ಲಾ ಮಾಡುವುದು ಅನಿವಾರ್ಯವೇ. ಇಷ್ಟು ಮಾಡಿದ ಮೇಲೂ ಚಿತ್ರ ಯಶಸ್ವಿ ಆಗಿಯೇ ಆಗುತ್ತದೆ ಎಂದೂ ಹೇಳುವುದು ಕಷ್ಟ. ಇದು ಸಿನಿಮಾದ ಮಾತಾದರೆ, ಇಂದು ಸೀರಿಯಲ್ಗಳೂ ಯಾವ ಸಿನಿಮಾಕ್ಕೂ ಕಮ್ಮಿ ಏನಿಲ್ಲ. ಸಿನಿಮಾಗಳ ಮಾದರಿಯಲ್ಲಿಯೇ ದೃಶ್ಯಗಳ ಶೂಟಿಂಗ್ ನಡೆಯುತ್ತದೆ.
ಒಂದು ಸಿನಿಮಾ ಅಥವಾ ಸೀರಿಯಲ್ ಎಷ್ಟರಮಟ್ಟಿಗೆ ಸಕ್ಸಸ್ ಆಗುತ್ತದೆಯೆಂದು ಹೇಳುವುದು ಕಷ್ಟ. ಹಾಗೆಂದು ಯಾವುದೇ ನಿರ್ದೇಶಕರು ತಮ್ಮ ಸರ್ವ ಪ್ರಯತ್ನವನ್ನೂ ಮಾಡಲೇಬೇಕು. ಅದಕ್ಕಾಗಿಯೇ ವೀಕ್ಷಕರಿಗೆ ಇಷ್ಟವಾಗುವಂಥ ಹೊಸ ಹೊಸ ರೋಚಕತನವನ್ನು ತೋರಿಸಲಾಗುತ್ತದೆ. ವೀಕ್ಷಕರಿಗೆ ರೋಚಕತೆ ಮುಂದಿಡಲು ಇಂಥ ಕೆಲವು ಕಠಿಣ ದೃಶ್ಯಗಳಿಗೆ ನಟ-ನಟಿಯರು ಒಗ್ಗಿಕೊಳ್ಳಲೇಬೇಕು. ಅವರಿಗೆ ಈ ರೀತಿಯ ಶೂಟಿಂಗ್ ಮಾಡುವಾಗ ಎಲ್ಲ ರೀತಿಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆಯಾದರೂ ಇಂಥ ಆ್ಯಕ್ಷನ್ ಶೂಟಿಂಗ್ ಮಾಡುವುದು ಸುಲಭದ ಮಾತಲ್ಲ ಎನ್ನುವುದೂ ಅಷ್ಟೇ ದಿಟ. ಕೆಲವೊಂದು ಸೀನ್ಗಳನ್ನು ಬಹಳ ಶ್ರಮ ಪಟ್ಟು ತೆಗೆದರೆ, ಮತ್ತೆ ಕೆಲವನ್ನು ಇರುವಲ್ಲಿಯೇ ಸನ್ನಿವೇಶ ಕ್ರಿಯೇಟ್ ಮಾಡಿ ಶೂಟ್ ಮಾಡಲಾಗುತ್ತದೆ.
ಸೀತಾರಾಮ ಶೂಟಿಂಗ್ ವೇಳೆ ಸೆಟ್ನಲ್ಲಿಯೇ ರೊಚ್ಚಿಗೆದ್ದ ಪ್ರಿಯಾ: ನಟಿಯರ ಗಲಾಟೆ ವಿಡಿಯೋ ವೈರಲ್
ಇದೀಗ, ತಮಿಳು ಸೀರಿಯಲ್ ಸಿಂಧುಭೈರವಿಯ ಶೂಟಿಂಗ್ ದೃಶ್ಯ ವೈರಲ್ ಆಗಿದೆ. ಇದರಲ್ಲಿ ನಟಿ, ಸುಮಲತಾ ಮಾಧನ್ ಅವರು ಬಾವಿಗೆ ಹಾರುವ ದೃಶ್ಯವಿದೆ. ಅವರಿಗೆ ಈಜು ಬರದಿದ್ದರೂ ಈ ದೃಶ್ಯ ಮಾಡುವ ಸಾಹಸ ಮಾಡಿದ್ದಾರೆ. ಬಾವಿಯ ಒಳಗೆ ಕ್ಯಾಮೆರಾಮನ್ ಇಳಿದಿದ್ದಾರೆ. ಅಲ್ಲಿಯೇ ಶೂಟಿಂಗ್ ಮಾಡಲಾಗಿದೆ. ಆದರೆ ಸುಮಲತಾ ಅವರು ಧುಮುಕಿರುವ ದೃಶ್ಯ ಮೈ ಝುಂ ಎನ್ನಿಸುತ್ತದೆ. ದಾರವನ್ನು ಕಟ್ಟಿಗೆ ಬಾವಿಗೆ ಇಳಿದರೂ, ಇದನ್ನು ಮಾಡಲು ಸಾಮಾನ್ಯ ಜನರಿಗೆ ಸಾಧ್ಯವಿಲ್ಲ. ಶೂಟಿಂಗ್ ವೇಳೆ ಸಾಕಷ್ಟು ಮುಂಜಾಗರೂಕತಾ ಕ್ರಮ ತೆಗೆದುಕೊಂಡರೂ ಧೈರ್ಯ ಮಾಡಬೇಕಾಗುತ್ತದೆ. ಆ ಧೈರ್ಯವನ್ನು ನಟಿ ಮಾಡಿದ್ದಾರೆ. ಅದರ ವಿಡಿಯೋ ವೈರಲ್ ಆಗಿದೆ.
ಈ ಕುರಿತು ನಟಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಾವು ಚಿತ್ರೀಕರಿಸಿದ ಅತ್ಯಂತ ಕಠಿಣ ದೃಶ್ಯಗಳಲ್ಲಿ ಇದು ಒಂದು. ಸಿಂಧುಭೈರವಿ ಸಂಚಿಕೆ -55 ಅನ್ನು ಮುಗಿಸಲು ನಮಗೆ ಸುಮಾರು 4 ಗಂಟೆಗಳು ಬೇಕಾಯಿತು. ಅಂದುಕೊಂಡದ್ದಕ್ಕಿಂತ ಸಿಕ್ಕಾಪಟ್ಟೆ ಕಷ್ಟವಾಗಿತ್ತು ಎಂದಿದ್ದಾರೆ. ಇದೇ ವೇಳೆ ಈಜು ಬರದಿದ್ದರೂ ಈ ಸಾಹಸ ದೃಶ್ಯ ಮಾಡಿದ ಸುಮಲತಾ ಅವರಿಗೆ ಅಭಿನಂದನೆ ಸಲ್ಲಿಸಲಾಗಿದೆ. ಈ ಶೂಟಿಂಗ್ನಲ್ಲಿ ಯಾವುದೂ ನಮಗೆ ಸುಲಭವಾಗುತ್ತಿರಲಿಲ್ಲ. ಕಠಿಣ ಪರಿಶ್ರಮಕ್ಕಾಗಿ ತಂಡಕ್ಕೆ ಧನ್ಯವಾದಗಳು ಮತ್ತು ನಿನ್ನೆಯಿಂದ ಪ್ರೇಕ್ಷಕರಿಂದ ನಾನು ಪಡೆಯುತ್ತಿರುವ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು ಎಂದಿದ್ದಾರೆ.
ಕೊನೆಗೂ ಗುಡ್ನ್ಯೂಸ್ ಕೊಟ್ಟ ಭಾಗ್ಯಲಕ್ಷ್ಮಿ ಪೂಜಾ: ಫ್ಯಾನ್ಸ್ ಫುಲ್ ಖುಷ್- ಶ್ಲಾಘನೆಗಳ ಮಹಾಪೂರ