ಭಾಗ್ಯಲಕ್ಷ್ಮಿ ಸೀರಿಯಲ್ ಪೂಜಾ ಇದೀಗ ಅಭಿಮಾನಿಗಳಿಗೆ ಖುಷಿಯ ಸುದ್ದಿ ನೀಡಿದ್ದಾಳೆ. ಅಭಿಮಾನಿಗಳು ಕಾಯ್ತಿರೋ ಕ್ಷಣ ಬಂದೇ ಬಿಟ್ಟಿದೆ. ಏನದು?
ಹಲವು ಹೆಣ್ಣುಮಕ್ಕಳಿಗೆ ಮಾದರಿ ಎಂದೇ ಬಿಂಬಿತವಾಗಿರೋ ಭಾಗ್ಯಲಕ್ಷ್ಮಿ ಸೀರಿಯಲ್ ಭಾಗ್ಯ ಈಗ ಡೋಲಾಯಮಯ ಸ್ಥಿತಿಯಲ್ಲಿಯೂ ಮತ್ತೆ ಚಿಗುರಿದ್ದಾಳೆ. ಎಷ್ಟೆಲ್ಲಾ ಸಾಧನೆ ಮಾಡಿದರೂ ಜೋಕರ್ ಆಗಿ ಕೆಲಸ ಮಾಡುವ ಸ್ಥಿತಿಗೆ ಬಂದು ತಲುಪಿದ್ದರೂ, ಆ ಕೆಲಸವನ್ನೂ ಶ್ರದ್ಧೆಯಿಂದ ಮಾಡಿದವಳು ಭಾಗ್ಯ. ಆದರೆ, ಆಕೆಯನ್ನು ಎಲ್ಲಿಯೂ ನೆಮ್ಮದಿಯಿಂದ ಇರಲು ಬಿಡಬಾರದು ಎಂದು ತಾಂಡವ್ ಶತ ಪ್ರಯತ್ನ ಮಾಡುತ್ತಿದ್ದಾನೆ. ಭಾಗ್ಯಳ ಇರೋ ಬರೋ ಕೆಲಸವನ್ನೆಲ್ಲಾ ಕಸಿದುಕೊಳ್ತಿದ್ದಾನೆ. ಆದರೆ ಇವೆಲ್ಲವನ್ನೂ ಮೀರಿ ಭಾಗ್ಯ ಅಡುಗೆ ಮಾಡಿ ಅದನ್ನು ನೀಡುವ ಕಾರ್ಯದಲ್ಲಿ ತೊಡಗಿದ್ದಾಳೆ. ಈ ಕಾರ್ಯಕ್ಕೂ ಕಲ್ಲು ಹಾಕಲು ಬಂದ ಕನ್ನಿಕಾ ಸೋತಿದ್ದಾಳೆ. ಅದೇ ಇನ್ನೊಂದೆಡೆ, ಮಗಳು ತನ್ವಿಯನ್ನು ತನ್ನೆಡೆ ಸೆಳೆದುಕೊಂಡು ಭಾಗ್ಯಳಿಗೆ ಒಂದು ಗತಿ ಕಾಣಿಸುವ ತವಕದಲ್ಲಿರುವ ಶ್ರೇಷ್ಠಾ, ತನ್ವಿಯನ್ನು ಗುಟ್ಟಾಗಿ ಸ್ನೇಹಿತರ ಜೊತೆ ಟ್ರಿಪ್ಗೆ ಕಳುಹಿಸಿ ಸಿಕ್ಕಿಬಿದ್ದಿದ್ದಾಳೆ.
ಇದರ ನಡುವೆಯೇ ಪೂಜಾಳ ಬಗ್ಗೆ ಇಲ್ಲಿಯವರೆಗೆ ಅಭಿಮಾನಿಗಳಿಗೆ ಇದ್ದ ಕೋಪ ತಣ್ಣಗಾಗಿದೆ. ಅದೇನೆಂದರೆ, ಇಷ್ಟು ದಿನ ಬರೀ ಭಾಗ್ಯ ಒಬ್ಬಳೇ ದುಡಿಯುವಂತೆ ತೋರಿಸಲಾಗುತ್ತಿದೆ, ಅಷ್ಟು ಕಲಿತಿರುವ ಪೂಜಾ ಸುಮ್ಮನೇ ತಿಂದುಂಡು ಮಜಾ ಮಾಡ್ತಿದ್ದಾಳಾ ಎಂದು ನೆಟ್ಟಿಗರು ಕೋಪ ತಾಳಿದ್ದರು. ಮನೆಕೆಲಸದಲ್ಲಿ ಎಕ್ಸ್ಪರ್ಟ್ ಆಗಿರೋ ಸುಂದ್ರಿ ಕೂಡ ಕೆಲಸ ಮಾಡದೇ ಸುಮ್ಮನೇ ಇದ್ದಾಳೆ. ಅತ್ತ ಗಂಡನನ್ನು ಒಂಟಿಯಾಗಿ ಬಿಟ್ಟು ಭಾಗ್ಯ ಅಮ್ಮಾ ಸುನಂದಾ ಮಗಳ ಮನೆಯಲ್ಲಿಯೇ ಝಂಡಾ ಊರಿದ್ದಾಳೆ. ಇವೆಲ್ಲವೂ ಸದ್ಯ ಸೀರಿಯಲ್ ಪ್ರೇಮಿಗಳನ್ನು ಕೆರಳುಸುತ್ತಿದೆ. ಆದರೆ ಇವೆಲ್ಲವುಗಳಿಗಿಂತಲೂ ಮುಖ್ಯವಾಗಿ ಪೂಜಾಳ ಮೇಲೆ ಸೀರಿಯಲ್ ಪ್ರಿಯರ ಕಣ್ಣು ನೆಟ್ಟಿತ್ತು.
ಅಯ್ಯಯ್ಯೋ... ಡಾನ್ಸ್ ಮಾಡ್ತಾ ಮಾಡ್ತಾ ಭಾಗ್ಯಳ ಅಮ್ಮಂಗೆ ಇದೇನಾಗೋಯ್ತು? ವಿಡಿಯೋಗೆ ಫ್ಯಾನ್ಸ್ ಶಾಕ್!
ಅವರಿಗೆಲ್ಲಾ ಈಗ ಕೊನೆಗೂ ಗುಡ್ನ್ಯೂಸ್ ಸಿಕ್ಕಿದೆ. ಪೂಜಾ ಕೆಲಸ ಮಾಡುವ ಪಣ ತೊಟ್ಟಿದ್ದಾಳೆ. ಇಂಟರ್ವ್ಯೂಗೆ ಹಾಜರಾಗಲು ಹೊರಟಿದ್ದಾಳೆ. ಮನೆಯಲ್ಲಿ ಎಲ್ಲರ ಆಶೀರ್ವಾದ ಪಡೆದುಕೊಂಡಿದ್ದಾಳೆ. ಅಬ್ಬಾ ಅಂತೂ ನಿರ್ದೇಶಕರಿಗೆ ಕೊನೆಗೂ ಬುದ್ಧಿ ಬಂತಲ್ಲಾ ಎಂದು ಹಲವರು ಈ ಪ್ರೊಮೋಗೆ ಕಮೆಂಟ್ ಮಾಡುತ್ತಿದ್ದರೆ, ಮತ್ತೆ ಕೆಲವರು ಪೂಜಾ ಕೊನೆಗೂ ಎಚ್ಚೆತ್ತುಕೊಂಡಳಲ್ಲ ಎಂದು ಖುಷಿ ಪಡುತ್ತಿದ್ದಾರೆ. ಒಟ್ಟಿನಲ್ಲಿ ಭಾಗ್ಯಲಕ್ಷ್ಮಿ ಸೀರಿಯಲ್ಗೆ ಮತ್ತಷ್ಟು ಬಲ ಬಂದಿದೆ.
ಇದಾಗಲೇ, ಭಾಗ್ಯಲಕ್ಷ್ಮಿ ಸೀರಿಯಲ್ ಜೊತೆಗೆ, ಭಾಗ್ಯಳ ತಂಗಿ ಲಕ್ಷ್ಮಿ ಇರುವ ಸೀರಿಯಲ್ ಲಕ್ಷ್ಮೀ ಬಾರಮ್ಮ ಮುಕ್ತಾಯ ಹಂತದಲ್ಲಿದೆ. ಇನ್ನು ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಭಾಗ್ಯಳ ಗೋಳು ನೋಡಲಾಗದೇ ಇದನ್ನೂ ಮುಗಿಸಿ ಎನ್ನುತ್ತಿದ್ದವರೇ ಹೆಚ್ಚು. ಅದರಲ್ಲಿಯೂ ಭಾಗ್ಯಳ ಅಮ್ಮ ಸುನಂದಾಳ ಅತಿಯಾದ ನೆಗೆಟಿವ್ ಮಾತುಗಳು ಜನರಿಗೆ ಬೇಸರ ತರಿಸಿದೆ. ಆದರೆ ಇದು ಬಹುತೇಕ ಮನೆಯ ಗೋಳು ಎನ್ನುವುದಕ್ಕೆ ಸುನಂದಾ ಸಾಕ್ಷಿಯಾಗಿದ್ದಾಳೆ ಅಷ್ಟೇ. ಅದೇನೇ ಇರಲಿ. ಸದ್ಯ ಭಾಗ್ಯಳ ಪಾಲಿಗೆ ಅಡುಗೆ ಒಲಿದಿದೆ. ಮುಂದೇನು ಎನ್ನುವ ಕುತೂಹಲದಲ್ಲಿದ್ದಾರೆ ಸೀರಿಯಲ್ ಪ್ರೇಮಿಗಳು.
ಭಾಗ್ಯಳ ಬಾಳಲ್ಲಿ ಬೆಳಕಾಗಿ ಬಂದ ಕೆಜಿಎಫ್ ರಾಕಿಭಾಯ್! ಲೈಫೇ ಚೇಂಜೋಗೋಯ್ತು... ಇದೇನಿದು ಬಿಗ್ ಟ್ವಿಸ್ಟ್?