ಬಿಗ್ಬಾಸ್ ಕಾಂಟ್ರವರ್ಸಿ ಜೋಡಿ ಎಂದೇ ಫೇಮಸ್ ಆಗಿರೋ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಅವರ ರೊಮ್ಯಾನ್ಸ್ ಕಂಡು ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ.
ಬಿಗ್ಬಾಸ್ ಅಂದ್ರೆನೇ ಅಲ್ಲಿ ಕಿತ್ತಾಟ, ಕಾದಾಟ, ಅಶ್ಲೀಲತೆ, ಹುಚ್ಚಾಟ, ಕಾಂಟ್ರವರ್ಸಿಯ ಮನೆ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಇದೇ ಕಾರಣಕ್ಕೆ ಕಾಂಟ್ರವರ್ಸಿಯಾಗಿರುವವರನ್ನೇ ಬಿಗ್ಬಾಸ್ ಮನೆಗೆ ಕಳುಹಿಸುವುದು. ಕಾಂಟ್ರವರ್ಸಿ ಇಲ್ಲದವರು ಒಂದೆರಡು ವಾರದಲ್ಲಿಯೇ ಮನೆಯಿಂದ ಹೊರಕ್ಕೆ ಬರುತ್ತಾರೆ. ಹೆಚ್ಚು ಹುಚ್ಚಾಟ ಇದ್ದರೇನೇ ಜನರು ಅದನ್ನು ಖುಷಿಯಿಂದ ನೋಡುವುದು, ಟಿಆರ್ಪಿ ರೇಟು ಹೆಚ್ಚುವುದು ಎನ್ನುವುದು ಇದಾಗಲೇ ಸಾಬೀತಾಗುತ್ತಿದೆ. ಇದು ಎಲ್ಲಾ ಭಾಷೆಯ ಬಿಗ್ಬಾಸ್ಗೂ ಅನ್ವಯವಾಗಿದ್ದು, ಅದರಲ್ಲಿಯೂ ನಟ ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಿಗ್ಬಾಸ್ ಸಕತ್ ಸುದ್ದಿ ಮಾಡುತ್ತಿದೆ. ಇದಕ್ಕೆ ಕಾರಣ, ಇದರ ಸ್ಪರ್ಧಿ ಟಿವಿ ತಾರೆ ಮತ್ತು ನಟಿ ಅಂಕಿತಾ ಲೋಖಂಡೆ ಮತ್ತು ಅವರ ಪತಿ ವಿಕ್ಕಿ ಜೈನ್ ಅವರ ಕಾಂಟ್ರವರ್ಸಿಯಿಂದಾಗಿ.
ನಟ ಸುಶಾಂತ್ ಸಿಂಗ್ ಅವರ ಪ್ರೇಯಸಿಯಾಗಿದ್ದ ಅಂಕಿತಾ ಆಗ ಸಕತ್ ಸುದ್ದಿ ಮಾಡಿದವರು. ಬಳಿಕ ಈಗ ವಿಕ್ಕಿ ಜೈನ್ ಅವರನ್ನು ಮದುವೆಯಾಗಿದ್ದು, ಈ ಜೋಡಿ ಬಿಗ್ಬಾಸ್ 17ನ ಒಳಗೆ ಹೋಗಿದ್ದು, ಪ್ರತಿದಿನವೂ ಹಲ್ಚಲ್ ಸೃಷ್ಟಿಸುತ್ತಲೇ ಇದೆ. ಈ ಸಲದ ಬಿಗ್ ಬಾಸ್ ಉಳಿದ ಸೀಸನ್ಗಿಂತ ವಿಭಿನ್ನವಾಗಿದ್ದು, ಇತರ ಸ್ಪರ್ಧಿಗಳ ಜೊತೆಗೆ ಗಂಡ ಹೆಂಡತಿ ಕೂಡ ಸ್ಪರ್ಧಿಗಳಾಗಿ ಮನೆಗೆ ಕಾಲಿರಿಸಿದ್ದಾರೆ. ಅದರಲ್ಲಿ ಈ ಬಾರಿ ಹೆಚ್ಚು ಸುದ್ದಿಯಾಗುತ್ತಿರುವುದು ಈ ಜೋಡಿ. ಇದಕ್ಕೆ ಕಾರಣ ಇವರಿಬ್ಬರ ಕಚ್ಚಾಟ. ಕಾರ್ಯಕ್ರಮದ ಮೊದಲು ಅವರು ಇನ್ಸ್ಟಾಗ್ರಾಮ್ ಪರ್ಫೆಕ್ಟ್ ಜೋಡಿಯಾಗಿದ್ದರೂ, ಅವರು ಬಿಗ್ ಬಾಸ್ 17 ನಲ್ಲಿ ಜಗಳವಾಡಿ ಎಲ್ಲರ ಅಸಮಾಧಾನಕ್ಕೆ ಕಾರಣರಾಗಿದ್ದರು. ವಿಕ್ಕಿ ಸಾಮಾನ್ಯವಾಗಿ ಅಂಕಿತಾ ಅವರನ್ನು ಇತರ ಸ್ಪರ್ಧಿಗಳ ಮುಂದೆ ಕೀಳಾಗಿ ಕಾಣುತ್ತಿರುವುದನ್ನು ವಿಡಿಯೋ ವೈರಲ್ ಆಗಿತ್ತು.
ಪುಷ್ಪಾ ಶೂಟಿಂಗ್ ಬಿಟ್ಟು ಮುಂಬೈಗೆ ಹಾರಿದ ರಶ್ಮಿಕಾ: ಪತ್ನಿ ಆಲಿಯಾ ಎದುರೇ ಕಿಸ್ ಕೊಟ್ಟ ರಣಬೀರ್- ವಿಡಿಯೋ ವೈರಲ್
ಇವೆಲ್ಲಾ ಡ್ರಾಮಾಗಳ ನಡುವೆಯೇ ಅಂಕಿತಾ ತಾವು ಗರ್ಭಿಣಿ ಇರಬಹುದು ಎಂದು ಸುದ್ದಿ ಮಾಡಿದ್ದರು. ತಮಗೆ ಹುಳಿ ತಿನಬೇಕೆಂದು ಅನಿಸುತ್ತಿದೆ, ತಮಗೆ ಪಿರಿಯಡ್ಸ್ ಮಿಸ್ ಆಗಿದೆ ಎಂದು ಹೇಳಿದ್ದು, ಬಹುಶಃ ಆಕೆ ಗರ್ಭಿಣಿ ಎಂದು ಈ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿತ್ತು. ಆದರೆ ವೈದ್ಯಕೀಯ ವರದಿಗೆ ಮೂತ್ರವನ್ನು ಕಳುಹಿಸಿರುವುದಾಗಿ ಹೇಳಿ ಹಲವು ದಿನಗಳು ಕಳೆದರೂ ಮೆಡಿಕಲ್ ರಿಪೋರ್ಟ್ ಬಗ್ಗೆ ಸುದ್ದಿ ಬರದ ಕಾರಣ, ಇವೆಲ್ಲಾ ಡ್ರಾಮಾ ಎಂಬ ಚರ್ಚೆ ಶುರುವಾಗಿತ್ತು. ನಂತರ ಕೊನೆಗೂ ವೈದ್ಯಕೀಯ ಪರೀಕ್ಷೆಯ ವರದಿ ಬಂದಿದೆ ಎಂದು ಹೇಳಲಾಗಿತ್ತು. ಅಂಕಿತಾ ಗರ್ಭಿಣಿ ಅಲ್ಲ ಎಂದು ವರದಿ ಹೇಳಿದೆ ಎಂದು ತಿಳಿಸಲಾಗಿತ್ತು. ನಂತರ ಇವರಿಬ್ಬರ ಕಚ್ಚಾಟ ಎಷ್ಟರ ಮಟ್ಟಿಗೆ ಮುಂದುವರೆದಿತ್ತು ಎಂದರೆ ಅಂಕಿತಾ ಪತಿಯ ಮೇಲೆ ಚಪ್ಪಲಿ ಎಸೆದಿದ್ದಾರೆ. ಇದಾದ ಬಳಿಕ ಇವರಿಬ್ಬರೂ ಬಿಗ್ಬಾಸ್ನಲ್ಲಿಯೇ ಡಿವೋರ್ಸ್ ಅನೌನ್ಸ್ ಕೂಡ ಮಾಡಿದ್ದರು. ಇದೆಲ್ಲವೂ ಸ್ಕ್ರಿಪ್ಟೆಡ್ ಎನ್ನುವುದು ಬಿಗ್ಬಾಸ್ ಪ್ರೇಮಿಗಳ ಅನಿಸಿಕೆಯಾಗಿದ್ದು, ಬಿಗ್ಬಾಸ್ನ ಪ್ರಚಾರದ ಗಿಮಿಕ್ ಎಂದೂ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ದಾಂಪತ್ಯದಂಥ ಪವಿತ್ರ ಬಂಧನವನ್ನೂ ಈ ರೀತಿ ಒಂದು ರಿಯಾಲಿಟಿ ಷೋ ಹಾಗೂ ದಂಪತಿ ಪ್ರಚಾರಕ್ಕಾಗಿ ಕೀಳುಮಟ್ಟಕ್ಕೆಬಳಸಿಕೊಳ್ಳುತ್ತಿದ್ದಾರೆ ಎಂದು ಹಲವರು ಟೀಕಿಸಿದ್ದೂ ಆಯ್ತು.
ಅದೇನೇ ಇದ್ದರೂ ಬಿಗ್ಬಾಸ್ನಲ್ಲಿ ಇವರಿಬ್ಬರ ಕಿತ್ತಾಟ ಮುಂದುವರೆದಿದೆ. ಅದರ ನಡುವೆಯೇ ಇವರಿಬ್ಬರ ರೀಲ್ಸ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗಿದೆ. ಅದರಲ್ಲಿ ಅಂಕಿತಾ ಅವರಿಗೆ ಪತಿಯ ಮೇಲೆ ಪ್ರೀತಿ ಉಕ್ಕಿ ಹರಿದಿದ್ದು, ಅವರನ್ನು ಅಪ್ಪಿಕೊಂಡು ಮುದ್ದಾಡುತ್ತಿದ್ದಾರೆ. ಇದನ್ನು ನೋಡಿ ಹಲವು ನೆಟ್ಟಿಗರು ಥೂ ನಿನ್ ಜನ್ಮಕ್ಕೆ ಎಂದು ಉಗಿಯುತ್ತಿದ್ದಾರೆ. ಕೀಳು ಮಟ್ಟದ ಪ್ರಚಾರಕ್ಕಾಗಿ ಪತಿಯನ್ನೇ ಬಳಸಿಕೊಳ್ಳುವ ನೀನು ಈಗ ಪತಿಯ ಮೇಲೆ ಇಷ್ಟು ಪ್ರೀತಿಯನ್ನು ಹರಿಸುವುದರಲ್ಲಿ ಅರ್ಥವೇನಿದೆ? ಇದು ಕೂಡ ನಿನ್ನ ಪ್ರಚಾರದ ಗಿಮಿಕ್ಕೇ ಎನ್ನುತ್ತಿದ್ದಾರೆ. ಸುಶಾಂತ್ ಸಿಂಗ್ಗೆ ಮೋಸ ಮಾಡಿದ್ದು ಸಾಕಾಗಿಲ್ವಾ ಎಂದೂ ಇನ್ನು ಕೆಲವರು ನಟಿಯನ್ನು ಟೀಕಿಸುತ್ತಿದ್ದಾರೆ. ಒಟ್ಟಿನಲ್ಲಿ, ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಸದ್ದು ಮಾಡುತ್ತಿದ್ದಾರೆ.
ಅಭಿಷೇಕ್ ಕಬಡ್ಡಿ ಪಂದ್ಯದಲ್ಲಿ ಬಚ್ಚನ್ ಕುಟುಂಬ: ನಿಜ ಹೇಳ್ರೋ... ತಲೆ ಕೆರೆದುಕೊಳ್ತಿರೋ ಅಭಿಮಾನಿಗಳು!