ವೇಶ್ಯಾವಾಟಿಕೆಯಲ್ಲಿ ತೊಡಗಿದ್ರ ಬಿಗ್ಬಾಸ್‌ ಸ್ಪರ್ಧಿ... ಏನಿದು ಸಹಸ್ಪರ್ಧಿಯ ಆರೋಪ

By Suvarna News  |  First Published Jan 7, 2024, 1:08 PM IST

ಬಿಗ್‌ಬಾಸ್ ಒಟಿಟಿಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಹಾಗೂ ಖಂಜಾದಿ ಬಾಯ್‌ಫ್ರೆಂಡ್ ಎಂದೇ ಬಿಂಬಿತವಾಗಿದ್ದ ಜಾಡ ಹದೀದ್ ಖಾಂಜಾದಿ ವಿರುದ್ಧ  ಗಂಭೀರ ಆರೋಪ ಮಾಡಿದ್ದಾರೆ. 


ಹಿಂದಿ ಬಿಗ್ಬಾಸ್ 17ನೇ ಸೀಸನ್‌ ದಿನವೂ ಒಂದಿಲ್ಲೊಂದು ವಿವಾದಗಳಿಗೆ ಕಾರಣವಾಗುತ್ತಿದೆ. ಈ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಎಲಿಮಿನೇಟ್ ಆಗಿದ್ದ ಖಂಜಾದಿ ಎಂದೇ ಖ್ಯಾತಿ ಗಳಿಸಿದ ಫಿರೋಜಾ ಖಾನ್ ವಿರುದ್ಧ ಹಿಂದಿ ಬಿಗ್‌ಬಾಸ್ ಒಟಿಟಿಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಹಾಗೂ ಖಂಜಾದಿ ಬಾಯ್‌ಫ್ರೆಂಡ್ ಎಂದೇ ಬಿಂಬಿತವಾಗಿದ್ದ ಜಾಡ ಹದೀದ್ ಗಂಭೀರ ಆರೋಪ ಮಾಡಿದ್ದಾರೆ.  ಬಿಗ್ ಬಾಸ್‌ ಮನೆಯಿಂದ ಹೊರಗೆ ಬಂದ ನಂತರವೂ ಸಾಮಾಜಿಕ ಜಾಲತಾಣದಲ್ಲಿ ಸ್ಪರ್ಧಿಗಳು ಕಿತ್ತಾಟ ಮುಂದುವರೆಸಿದ್ದು, ಇದು ಈಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ.  ಹಿಂದಿ ಬಿಗ್‌ಬಾಸ್ ಸೀಸನ್‌ ಒಟಿಟಿಯಲ್ಲಿ ಫೇಮಸ್ ಆಗಿದ್ದ ಜಾಡ್ ಹದೀದ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ  ಉದ್ದವಾದ ನೋಟ್ ಒಂದನ್ನು ಬರೆದುಕೊಂಡಿದ್ದು,  ಅದರಲ್ಲಿ ತಮ್ಮ ಮಾಜಿ ಗರ್ಲ್‌ಫ್ರೆಂಡ್ ಎಂದೇ ಸುದ್ದಿಯಲ್ಲಿದ್ದ ಹಾಗೂ ಬಿಗ್‌ಬಾಸ್ 17ರ ಸ್ಪರ್ಧಿ ಖಾಂಜಾದಿ  ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 

ಇನ್ಸ್ಟಾಗ್ರಾಮ್‌ನಲ್ಲಿ ಬರೆದ ಇಷ್ಟುದ್ದದ ಪೋಸ್ಟ್‌ನಲ್ಲಿ ಜಾಡ್ ಹದೀದ್, ಖಾಂಜಾದಿ ವಿರುದ್ಧ ಸಿಟ್ಟಿಗೆದ್ದಿದ್ದು ತನ್ನ ಹೆಸರನ್ನು ಎಲ್ಲಿಯೂ ಬಳಸದಂತೆ ಸೂಚಿಸಿದ್ದಾರೆ. ಇದು ಮುಂದುವರೆದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೇ ಖಾಂಜಾದಿಗೆ ಇನ್ಸ್ಟಾಗ್ರಾಮ್‌ನಲ್ಲಿ ಕೇವಲ 2 ಸಾವಿರ ಜನ ಫಾಲೋವರ್ಸ್‌ಗಳಿದ್ದಾಗ ತಾನು ಆಕೆಯ ಒಳಿತಿಗಾಗಿ ಸಹಾಯ ಮಾಡಿದೆ ಆದರೆ ಫಾಲೋವರ್ಸ್ ಹೆಚ್ಚಾಗುತ್ತಿದ್ದಂತೆ ಆಕೆಯ ಗುಣನಡತೆಯಲ್ಲಿ ಬಹಳಷ್ಟು ಬದಲಾವಣೆಯಾಯ್ತು ಎಂದು ದೂರಿದ್ದಾರೆ ಜಾಡ್.  

ಕುಟುಂಬದಿಂದ ದೂರನೇ ಇರ್ಬೇಕಾ? ಗುರೂಜಿ ಭವಿಷ್ಯಕ್ಕೆ ಕಣ್ಣೀರಾದ ಡ್ರೋನ್ ಪ್ರತಾಪ್

Tap to resize

Latest Videos

ತಮ್ಮ ಇಷ್ಟುದ್ದ ನೋಟ್‌ನಲ್ಲಿ, ಸುಳ್ಳು, ಮಾದಕವ್ಯಸನ, ವೇಶ್ಯಾವಾಟಿಕೆ, ಮದ್ಯಪಾನವನ್ನು ತ್ಯಜಿಸುವ ಸಮಯ ಬಂದಿದೆ. ನೀವು 2 ಸಾವಿರ ಫಾಲೋವರ್ಸ್‌ಗಳನ್ನು ಮತ್ತು ನಿಮ್ಮೊಂದಿಗೆ ಯಾರು ಇಲ್ಲದಿದ್ದಾಗ ನೀವು ಏನು ಹೇಳಿದ್ದೀರಿ ಎಂಬುದನ್ನು ಈಗೊಮ್ಮೆ ಅರ್ಥಮಾಡಿಕೊಳ್ಳಿ. ನೀವು ತುಂಬಾ ಕೊಳಕು ಹಾಗೂ ಅಶ್ಲೀಲವಾದ ಎರಡು ಮುಖದ ವ್ಯಕ್ತಿತ್ವ ಹೊಂದಿದ್ದೀರಿ ನಿಮ್ಮನ್ನು ಈ ಹಂತಕ್ಕೆ ಯಾರು ತಂದರು ಹಾಗೂ ನೀವು ಎಲ್ಲಿಂದ ಬಂದಿದ್ದೀರಿ ಎಂಬುದನ್ನು ಮರೆಯಬೇಡಿ. ನಿಮ್ಮ ಈ ರೀತಿ ಪ್ರದರ್ಶನಕ್ಕೆ ನೀವು ಯಾರಿಂದ ಪ್ರಶಂಸೆ ಪಡೆಯಲು ಬಯಸುವಿರಿ? ಎಂದು ಬರೆದುಕೊಂಡಿರುವ ಜಾಡ್, ಈಗಲೂ ನಿಮಗೆ ಸಂಬಳದ ಕೆಲಸ ಸಿಗುತ್ತಿಲ್ಲ ಏಕೆಂದರೆ ನಿಮ್ಮ ಈ ಅಸಹ್ಯ ವ್ಯಕ್ತಿತ್ವವನ್ನು ಬದಲಾಯಿಸಲು ಸಾಧ್ಯವಿಲ್ಲ.  ನಿಮ್ಮ ಹೊಸ ಫಾಲೋವರ್ಸ್‌ಗಳ ಜೊತೆ ನೀವು ಪ್ರಾಮಾಣಿಕವಾಗಿರಿ ಹಾಗೂ ಅವರು ನಿಮ್ಮ ಜೊತೆ ಎಷ್ಟು ಕಾಲ ಸುತ್ತಾಡುತ್ತಾರೆ ನೋಡಿ ಎಂದು ಬರೆದುಕೊಂಡಿದ್ದಾರೆ. 

ಅಲ್ಲದೇ ಖಾಂಜಾದಿ ಆಕೆಗೆ ಸಿಕ್ಕಿರುವ ವೇದಿಕೆಯನ್ನು ಗೌರವಿಸುತ್ತಿಲ್ಲ,  ಕಾರ್ಯಕ್ರಮದ ಆಯೋಜಕರನ್ನು ಗೌರವಿಸುತ್ತಿಲ್ಲ, ಅಲ್ಲದೇ  ಅವರು ನಿಜವಾದ ಖಾನ್ ಅಲ್ಲ ಎಂದು ಹೇಳುವ ಮೂಲಕ  ಸಲ್ಮಾನ್ ಖಾನ್‌ಗೂ ಅವಮಾನಿಸುವಷ್ಟು ದುರಂಕಾರವನ್ನು ಹೊಂದಿದ್ದಾಳೆ ಎಂದೆಲ್ಲಾ ಆರೋಪ ಮಾಡಿದ್ದಾರೆ ಜಾಡ್. ಆಕೆಯ ವರ್ತನೆಯಿಂದ ಆಕೆಗೆ ಯಾರು ಕೆಲಸ ಕೊಡದಿದ್ದರೂ ಆಕೆಗೆ ಮಾತ್ರ ಹೂಗಳು, ಮಾಧ್ಯಮಗಳು ರೆಡ್‌ಕಾರ್ಪೆಟ್ ಹಾಗೂ ಆಕೆಯನ್ನು ಹೋಗುವಲೆಲ್ಲಾ ಕರೆದೊಯ್ಯಲು ಮರ್ಸಿಡಿಸ್ ಕಾರು ಬೇಕು. ಇದೆಲ್ಲ ವೈಫಲ್ಯಗಳ ಕಾರಣದಿಂದ ಈಗ ಆಕೆ ನನ್ನ ಹೆಸರನ್ನು ತೆಗೆಯುತ್ತಿದ್ದಾಳೆ ಎಂದು ಗಂಭೀರ ಆರೋಪ ಮಾಡಿದ್ದಾರೆ ಜಾಡ್.

ಈ ವಾರ ಬಿಗ್‌ಬಾಸ್‌ನಲ್ಲಿ ಡ್ರೋನ್ ಪ್ರತಾಪ್‌ನದ್ದೇ ಹಾರಾಟ, ಹರಿದುಬಂತು ಜನಪ್ರೀತಿ!

ಬಿಗ್ಬಾಸ್‌ ಒಟಿಟಿ ಮನೆಯಲ್ಲಿ ಜಾಡ್ ಹದಿದ್, ಖಾಂಜಾದಿ ಜೊತೆ ಜೊತೆಗೆ ಕಾಣಿಸಿಕೊಂಡಿದ್ದರು. ಅಲ್ಲದೇ ಇವರಿಬ್ಬರು ಸಂಗಾತಿಗಳಂತೆ ಪೋಸ್ ಕೊಟ್ಟಿದ್ದರು.  ಅಲ್ಲದೇ ಖಾಂಜಾದಿ ಈ ಶೋದಲ್ಲಿ ಮುತ್ತಿಕ್ಕಿದ ಜಾಡ್ ಹದಿದ್ ಸ್ನೇಹಿತ ಆಕಾಂಕ್ಷ್ ಪುರಿಗೂ ಎಚ್ಚರಿಕೆ ನೀಡಿದ್ದಳು. ಆದರೆ  ಬಿಗ್ಬಾಸ್ ಮನೆಗೆ ಹೋದ ಮೇಲೆ ಮಾತ್ರ ಖಾಂಜಾದಿ ಈ ಜಾಡ್ ಜೊತೆಗಿನ ಸಂಬಂಧವನ್ನು ನಿರಾಕರಿಸಿದ್ದರು. 

ಆಂಗ್ಲ ಭಾಷೆಯ ಮನೋರಂಜನಾ ವೆಬ್‌ಸೈಟ್‌ ಪಿಂಕ್‌ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆಕೆ ಕೆಲವೊಮ್ಮೆ ನೀವು ಕೆಲವು ಕೆಲಸಗಳನ್ನು ಅನಿವಾರ್ಯವಾಗಿ ಮಾಡಲೇಬೇಕಾಗುತ್ತದೆ ಎಂದು ಹೇಳಿಕೊಂಡಿದ್ದಳು.  ಇತ್ತ ಖಾಂಜಾದಿ ವಿರುದ್ಧ ಕೆಲವು ಆರೋಪಗಳು ಗಂಭೀರವಾಗಿದ್ದು, ಇದಕ್ಕೆ ಖಾಂಜಾದಿ ಯಾವ ರೀತಿ ಪ್ರತಿಕ್ರಿಯಿಸಬಹುದು ಎಂದು ಕಾದು ನೋಡಬೇಕಿದೆ.

click me!