ಮೂಟೆ ಬಿದ್ದಾಗ, ಕಾರ್ ಆಕ್ಸಿಡೆಂಟ್ ಆದಾಗ ನನ್ನನ್ನು ಕಾಪಾಡಿದ್ದು ಬನಶಂಕರಿ: ಪ್ರಶಾಂತ್ ಸಂಬರಗಿ

By Suvarna NewsFirst Published Aug 6, 2021, 5:00 PM IST
Highlights

ಬಾಲ್ಯದಿಂದ ನಾಸ್ತಿಕನಾಗಿದ್ದ ಪ್ರಶಾಂತ್ ಸಂಬರಗಿ ಈ ಎರಡು ದೇವರನ್ನು ತುಂಬಾ ನಂಬುತ್ತಾರಂ!

ಬಿಗ್ ಬಾಸ್ ಸೀಸನ್‌ 8 ಫಿನಾಲೆ ದಿನ ತಲುಪುವುದಕ್ಕೆ ಎರಡು ದಿನ ಮಾತ್ರ ಉಳಿದಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ 'ಕನ್ಯಾಕುಮಾರಿ' ಶುರುವಾಗಲಿದ್ದು, ಮನೆಯಲ್ಲಿರುವ ಸದಸ್ಯರು ದೇವರನ್ನು ಎಷ್ಟು ನಂಬುತ್ತಾರೆ ಎಂದು ಈ ಮೂಲಕ ಪ್ರಶ್ನೆ ಮಾಡಲಾಗಿತ್ತು.  ಈ ವೇಳೆ ಪ್ರಶಾಂತ್ ಸಂಬರಗಿ ದೇವರನ್ನು ನಂಬಿದ್ದು ಹೇಗೆ ಎಂದು ಹೇಳಿದ್ದಾರೆ.

ಪ್ರಶಾಂತ್ ಸಂಬರಗಿಗೆ ಕಳಪೆ ಸ್ಪರ್ಧಿ ಎಂಬ ಹಣೆ ಪಟ್ಟಿ ಕೊಟ್ಟಿದ್ದೆಷ್ಟು ಸರಿ?

'ನಾನು 10ನೇ ಕ್ಲಾಸ್‌ವರೆಗೂ ನಾಸ್ತಿಕನಾಗಿದ್ದೆ. ಚಿಕ್ಕ ವಯಸ್ಸಿನಲ್ಲಿ ನನಗೆ ಆದ ಕೆಲವೊಂದು ದುರ್ಘಟನೆಗಳು ನನ್ನನ್ನು ಬದಲಾಯಿಸಿತ್ತು. ನನ್ನ ಮೇಲೆ ಮೂಟೆ ಬಿದ್ದಿರೋದು, ಕಾರ್ ಆ್ಯಕ್ಸಿಡೆಂಟ್, ಇಂಜುರಿ ಆದಾಗ ನನ್ನ ತಾಯಿ ದೇವಿ ಎಲ್ಲಮ್ಮನ ಮೊರೆ ಹೋದಳು. ನನ್ನ ತಾಯಿ ಸದಾ ಹೇಳುತ್ತಿದ್ದರು ದೇವಿ ಎಂಬ ಶಕ್ತಿ ಕಾಪಾಡುತ್ತಾಳೆ ಎಂದು. ನಿಧಾನವಾಗಿ ನನ್ನ ತಾಯಿ ದೇವರ ಕಥೆ ಹೇಳಲು ಶುರು ಮಾಡಿದಾಗ, ದೇವರನ್ನು ನಂಬುವುದಕ್ಕೆ ಶುರು ಮಾಡಿದೆ,' ಎಂದು ಮಾತನಾಡಿದ್ದಾರೆ.

'ನಾನು ಪ್ರತಿ ಶುಕ್ರವಾರ ನಿಂಬೆಹಣ್ಣು ಕಟ್ ಮಾಡಿ, ತುಪ್ಪ ಹಾಕಿ ದೇವರಿಗೆ ಒಪ್ಪಿಸುವ ಕೆಲವೇ ಕೆಲವು ಪುರುಷರಲ್ಲಿ ನಾನೂ ಒಬ್ಬ.  15 ವರ್ಷಗಳಿಂದ ನಾನು ಈ ಕ್ರಮ ಅನುಸರಿಸುತ್ತಿರುವೆ. ಬೆಂಗಳೂರು ಬನಶಂಕರಿ ದೇವಿಗೆ ಹೋಗಿ ಹೇಗೆ ಮಾಡುತ್ತಿದ್ದೆ. ನಾನು ಸಾಕಷ್ಟು ಅಪಾಯಗಳಿಂದ ಬಚಾವ್ ಆಗಿದ್ದೀನಿ, ಅಂದರೆ ಅದರು ದೇವಿಯಿಂದ. ನಾನು ಹೆಚ್ಚಾಗಿ ನಂಬುವುದು ಬಾದಾಮಿ ಬನಶಂಕರಿ ಹಾಗೂ ಶ್ರೀರಂಗಪಟ್ಟಣದ ಬಳಿ ಇರುವ ನಿಮಿಷಾಂಬ ದೇವಿ. ಈ ಹೋರಾಟದ ಜೀವನದಲ್ಲಿ ಸಾಕಷ್ಟು ಬಾರಿ ಬೆದರಿಕೆ ಕರೆಗಳು ಬಂದಿವೆ. ಪೊಲೀಸರು ಗನ್ ಮ್ಯಾನ್ ಬಳಸಿ ಎಂದು ಹೇಳಿದಾಗ ನನ್ನ ತಾಯಿ ದೇವಿ ಕಾಪಾಡುತ್ತಾಳೆ ಎಂದು ಹೇಳುತ್ತಿದ್ದರು. ಪ್ರತಿ ಸಲ ಬಿಗ್ ಬಾಸ್‌ ನಾಮಿನೇಟ್‌ ಆದಾಗಲೂ, ಇಲ್ಲಿರುವ ದೇವಿಗೆ ಪೂಜೆ ಸಲ್ಲಿಸಿ ದೇವರಲ್ಲಿ ಪ್ರಾರ್ಥಿಸಿಕೊಳ್ಳುವೆ. ಎರಡು ಬಾರಿ ಬಾಗಿಲಿನ ಬಳಿ ಹೋಗಿ ಹಿಂದಿರುಗಿ ಬಂದಿರುವೆ. ಇಷ್ಟು ದಿನ ನಾನು ಇಲ್ಲಿ ಇರುವುದಕ್ಕೂ ಆ ದೇವಿಯೇ ಕಾರಣ,' ಎಂದು ಹೇಳಿದ್ದಾರೆ.

click me!