
ಜೀ ಕನ್ನಡ ಮತ್ತು ಜೀ ಕನ್ನಡ ಎಚ್‌ಡಿ ವಾಹಿನಿಯಲ್ಲಿ ಆಗಸ್ಟ್ 9ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ‘ಹಿಟ್ಲರ್ ಕಲ್ಯಾಣ’ ಎಂಬ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ಹಿಟ್ಲರ್ ಎಂದೇ ಕರೆಯಿಸಿಕೊಳ್ಳುವ, ಶಿಸ್ತು ಬದ್ಧ ನಡು ವಯಸ್ಸಿನ ವ್ಯಕ್ತಿ ಮತ್ತು ಎಡವಟ್ಟಿನ ಹುಡುಗಿಯ ಕತೆ ಹೊಂದಿರುವ ಧಾರಾವಾಹಿ ಇದು.
ಜೀ ಕನ್ನಡ ವಾಹಿನಿಯಲ್ಲಿ ಒಂದಕ್ಕಿಂತ ಒಂದು ಧಾರಾವಾಹಿ ವಿಭಿನ್ನವಾಗಿರುತ್ತದೆ. ಈ ಸೀರಿಯಲ್‌ನಲ್ಲಿ ದಿಲೀಪ್ ರಾಜ್, ಮಲೈಕಾ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇವನು ಪರ್ಫೆಕ್ಟು, ಅವಳು ಎಡವಟ್ಟು, ಇಬ್ಬರದ್ದು ಡೆಡ್ಲಿ ಕಾಂಬಿನೇಷನ್. ಕಿಂಚಿತ್ತೂ ಅಶಿಸ್ತನ್ನು ಸಹಿಸದ ಎ ಜೆ ಅಲಿಯಾಸ್ ಅಭಿರಾಮ್ ಜೈಶಂಕರ್‌ಗೆ ಹುಡುಗಿ ಹುಡುಕುವ ಕಾರ್ಯಕ್ರಮ ಸೊಸೆಯಂದಿರುವ ಶುರು ಮಾಡಿದ್ದಾರೆ.
ಲೀಲಾ ಸರಳ ಹುಡುಗಿ. ಕಿರಿಯ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡು, ತಂದೆ ಪ್ರೀತಿ ಮಾತ್ರ ಪಡೆದಿರುತ್ತಾಳೆ. ಮಲತಾಯಿ ತೋರಿದ ಪ್ರೀತಿ ಅಷ್ಟಕ್ಕಷ್ಟೇ. ಎಜೆನ ಮದುವೆ ಆಗಿ, ಮೂರು ಸೊಸೆಯಂದಿರು ಹಾಗೂ ಇಡೀ ಮನೆ ಜವಾಬ್ದಾರಿ ನಿಭಾಯಿಸುತ್ತಾಳ ಲೀಲಾ ಅನ್ನೋದು ಈಗಿನ ಒನ್ ಲೈನ್ ಸ್ಟೋರಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.