ಎಲ್ಲಿ ನೋಡಿದರೂ ಅವಳಿ ಮಕ್ಕಳ ತಾಯಿ, ಮಮ್ಮಿ ಬ್ಲಾಗರ್ ರಶ್ಮಿ ಗೌಡ ವಿಡಿಯೋ ಟ್ರೆಂಡ್!

By Vaishnavi ChandrashekarFirst Published Aug 5, 2021, 4:44 PM IST
Highlights

ಅವಳಿ ಮಕ್ಕಳ ಜೊತೆ ಡಿಫರೆಂಟ್ ಕಾನ್ಸೆಪ್ಟ್ ಕ್ರಿಯೇಟ್ ಮಾಡುತ್ತಾ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿರುವ ಸೂಪರ್ ಮಾಮ್ ರಶ್ಮಿ ಗೌಡ ಜೊತೆ ಮಾತುಕತೆ. 
 

ವೈಷ್ಣವಿ ಚಂದ್ರಶೇಖರ್

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರಶ್ಮಿ ಶಾಲಾ ಕಾಲೇಜು ದಿನಗಳಿಂದಲೂ ಶಿಕ್ಷೇತರ ಚಟುವಟಿಕೆಗಳಲ್ಲಿ  ಹೆಚ್ಚಿನ ಗಮನ ನೀಡುತ್ತಿದ್ದವರು. ಸುಮಾರು 60-70 ಟ್ರೋಫಿಗಳನ್ನೂ ಗೆದ್ದಿದ್ದಾರೆ. ನೃತ್ಯ, ಸಂಗೀತ, ಕ್ರೀಡೆ ಎಲ್ಲದರಲ್ಲೂ ಸೈ ಎನಿಸಿಕೊಂಡ ಶ್ಮಿಗೆ ಈಗ ಮಕ್ಕಳು ಸಾಥ್ ನೀಡುತ್ತಿದ್ದಾರೆ. ತೊದಲು ಮಾತುಗಳಿಂದ ನೆಟ್ಟಿಗರ ಗಮನ ಸೆಳೆಯುತ್ತಿರುವ ಅದಿತಾ ಹಾಗೂ ಆರ್ಯನ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಹೊಂದಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ ಯಾವ ಆ್ಯಪ್ ಒಪನ್ ಮಾಡಿದರೂ ನಿಮ್ಮದೇ ವಿಡಿಯೋ, ಏನಿದರ ಮಹಿಮೆ?
ತುಂಬಾ ಖುಷಿ ಆಗುತ್ತೆ. ಎಲ್ಲಿ ಹೋದರೂ ನನ್ನನ್ನು ಗುರುತಿಸುತ್ತಾರೆ. ನಾನು ಟಿಕ್‌ಟಾಕ್‌ನಿಂದ ಅರಂಭ ಮಾಡಿದ್ದು. ನಂತರ ಇನ್‌ಸ್ಟಾಗ್ರಾಂನಲ್ಲಿ ಮುಂದುವರಿಸಿದೆ. ನನ್ನ ಮೊದಲ ವಿಡಿಯೋ ವೈರಲ್ 'ಕನ್ನಡದ ಮಾತು ಚಂದ ಕನ್ನಡದ ನೆಲ ಚಂದ'. ಅದಾದ ನಂತರ ಜನರ ಸಂಪೂರ್ಣ ಸಪೋರ್ಟ್‌ ಸಿಕ್ಕಿದೆ.

ವಿಡಿಯೋ ಮಾಡಲು ಮಕ್ಕಳು ಎಷ್ಟು ಸಾಥ್ ನೀಡುತ್ತಾರೆ? ಮಕ್ಕಳ ಜೊತೆ ಕಾನ್ಸೆಪ್ಟ್ ಹೇಗೆ ಕ್ರಿಯೇಟ್ ಮಾಡುತ್ತೀರಾ? 
ನನಗೆ ಅವಳಿ ಮಕ್ಕಳು, ಆದಿತಾ ಹಾಗೂ ಆರ್ಯನ್. ಅವರಿಗೆ ನಾಲ್ಕು ವರ್ಷ. ಮಗಳ ಜೊತೆ ಸುಲಭವಾಗಿ ವಿಡಿಯೋ ಮಾಡಬಹುದು. ಆದರೆ ಮಗ ಎರಡು-ಮೂರು ಟೇಕ್ ಅಷ್ಟೆ. ಹಟ ಮಾಡುತ್ತಾನೆ. ಏನಾದರೂ ಕೊಡಿಸುವೆ, ಅಂತ ಹೇಳಿ ವಿಡಿಯೋ ಮಾಡಿಸೋದು. ಹಾಗೆ ಸುಮ್ಮನೆ ಕೂತ್ಕೊಂಡು ಥಿಂಕ್ ಮಾಡುವಾಗ ಯಾವುದಾದರೂ ಕಾನ್ಸೆಪ್ಟ್ ಬಂದ್ರೆ ಹಾಗೆ ವಿಡಿಯೋ ಮಾಡುವೆ. ಹೆಚ್ಚಾಗಿ ಹೆಣ್ಣು ಮಕ್ಕಳ ಮನಸ್ಸಿಗೆ ಹತ್ತಿರವಾಗುವುದನ್ನು ಮಾಡುವೆ. 

ಮಕ್ಕಳ ವಿದ್ಯಾಭ್ಯಾಸ, ನಿಮ್ಮ ಕೆಲಸ ಮತ್ತು ಫ್ಯಾಮಿಲಿ ಹೇಗೆ ಮ್ಯಾನೇಜ್ ಮಾಡುತ್ತೀರಾ?
ಮಕ್ಕಳನ್ನು ಶಾಲೆಗೆ ಸೇರಿಸಬೇಕು. ಅವರಿಗೀಗ ಆನ್‌ಲೈನ್ ಕ್ಲಾಸ್ ನಡಿಯುತ್ತೆ. ಮೊದಲು ನಾನು ನನ್ನ ಗಂಡ ಸಂತೋಷ್‌ಗೆ ಥ್ಯಾಂಕ್ಸ್ ಹೇಳಬೇಕು. ಅವರು ನೀಡುತ್ತಿರುವ ಸಪೋರ್ಟ್‌ನಿಂದ ನಾನು ಮ್ಯಾನೇಜ್ ಮಾಡುತ್ತಿರುವುದು. ಕೊಲಾಬರೇಷನ್ ಆದ ಮೇಲೆ ಕೆಲಸ ಅಂತ ಮನೆಯಿಂದ ಹೊರಗಡೆ ಹೋದರೆ, ತಂದೆ ಮನೆಯಲ್ಲಿ ಮಕ್ಕಳನ್ನು ಬಿಡುವೆ. ನಾನು ಹೋಮ್ ಮೇಕರ್. 

ವಿಡಿಯೋ ಮಾಡಲು ಸ್ಪೂರ್ತಿ ಯಾರು?
ನಾನು ಎಲ್ಲೇ ಹೋದರೂ ಟಿಕ್‌ಟಾಕ್‌ ರಶ್ಮಿ ಅಂತಲೇ ಕರೆಯುತ್ತಾರೆ. ಟಿವಿ ಹಾಗೂ ಸಿನಿಮಾದಿಂದ ಮಾತ್ರ ಪಾಪ್ಯಲಾರಿಟಿ ಪಡೆಯುವುದಲ್ಲ. ಕೈಯಲ್ಲಿರುವ ಮೊಬೈಲ್‌ ಮೂಲಕ ಟ್ಯಾಲೆಂಟ್ ಶೋಕೇಸ್ ಮಾಡಬಹುದು. ಎಲ್ಲರಂತೆ ಮಾಡುವುದಕ್ಕೆ ನನಗೆ ಇಷ್ಟ ಇಲ್ಲ, ಡಿಫರೆಂಟ್ ಮಾಡಬೇಕು ಅಂತ ಆಸೆ ಇದೆ. ಬೇರೆ ಅವರ ಧ್ವನಿಗೆ ಲಿಪ್‌ ಸಿಂಕ್ ಮಾಡುವುದು ಬೇಡ ಅಂತ ನಾನೇ ಕ್ರಿಯೇಟ್ ಮಾಡುತ್ತೇನೆ. 

ನಿಮ್ಮ ವಿಡಿಯೋದಲ್ಲಿ ನೆಟ್ಟಿಗರ ಕೇಂದ್ರ ಬಿಂದು ನಿಮ್ಮ ಕೂದಲು?
ಹೌದು! ನಾನು ಸ್ಪಾ ಅಂತೆಲ್ಲಾ ಏನು ಮಾಡಿಸುವುದಿಲ್ಲ. ನನ್ನ ತಾಯಿಗೆ ಈ ರೀತಿ ಕೂದಲು ಇತ್ತು ಎಂದು ಹೇಳುತ್ತಾರೆ. ಅವರ ಗಿಫ್ಟ್ ಹಾಗೇ ನನ್ನ ಕೂದಲು ಚೆನ್ನಾಗಿದೆ.

 

ಮಮ್ಮಿ ಆದರೂ ಇಷ್ಟೊಂದು ಫಿಟ್ ಹೇಗೆ? 
ನಾನು ಎಕ್ಸಸೈಸ್  ಮಾಡ್ತೀನಿ. ಸಂಜೆ ವರ್ಕೌಟ್, ಫುಡ್ ಕಂಟ್ರೋಲ್, ತರಕಾರಿ, ಹಣ್ಣಿನ ಜ್ಯೂಸ್ ಹಾಗೂ ಜಾಸ್ತಿ ನೀರು ತೆಗೆದುಕೊಳ್ಳುವೆ. ತಣ್ಣೀರು ನೀರು ಸೇವಿಸುವುದಿಲ್ಲ. ಅನ್ನ ಬದಲು ರಾಗಿ ಮುದ್ದೆ ತಿನ್ನುವುದು. ವರ್ಕೌಟ್ ಮಾಡಲು ಮನಸ್ಸಿಲ್ಲ ಅಂದ್ರೆ ಹಾಡು ಹಾಕಿಕೊಂಡು ಮಕ್ಕಳ ಜೊತೆ ಡ್ಯಾನ್ಸ್ ಮಾಡುವೆ. 

ನಿಮ್ಮ ವಿಡಿಯೋಗೆ ಫ್ಯಾಮಿಲಿ ಸಪೋರ್ಟ್ ಹೇಗಿದೆ?
ನಮ್ಮ ಫ್ಯಾಮಿಲಿನಲ್ಲಿ ಎಲ್ಲರಿಗೂ ಆ್ಯಕ್ಟಿಂಗ್ ತುಂಬಾ ಇಷ್ಟ. ಎಲ್ಲರೂ ವಿಡಿಯೋ ಮಾಡುತ್ತಾರೆ. ಅದರಲ್ಲೂ ನನ್ನ ತಂದೆಗೆ ಇವರು ರಶ್ಮಿ ತಂದೆ ಅಂತ ಹೇಳಿದ್ರೆ ತುಂಬಾ ಖುಷಿ  ಆಗುತ್ತಾರೆ.

'ತುಂಬಾ ಜನ ನನಗೆ ಮೆಸೇಜ್‌ ಮಾಡಿ ಈ ರೀತಿ ವಿಡಿಯೋ ಮಾಡಿ ಅಂತ ಹೇಳುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳು ನನಗೆ ಮನೆಯಲ್ಲಿ ಸಪೋರ್ಟ್‌ ಇಲ್ಲ, ನೀವು ಮಾಡುತ್ತೀದ್ದೀರಿ ಈ ರೀತಿ ಮಾಡಿ ಅಂತ ಕೇಳುತ್ತಾರೆ. ನೀವೂ ನಮಗೆ Inspire ಮಾಡ್ತೀರಿ ಅಂತ ಹೇಳುತ್ತಾರೆ. ತುಂಬಾ ಸಂತೋಷ ಆಗುತ್ತೆ' 

ಹೆಣ್ಣು ಮಕ್ಕಳಿಗೆ ಎಷ್ಟು ಪ್ರೋತ್ಸಾಹ ಸಿಗುತ್ತೆ ಅಷ್ಟೆ ಟ್ರೋಲ್, ಅವಮಾನ ಫೇಸ್ ಮಾಡಬೇಕು. ಅವನ್ನೆಲ್ಲಾ ಹೇಗೆ ನಿಭಾಯಿಸುತ್ತೀರಾ? 
ನಾನು ಟ್ರೋಲ್‌ ನೋಡಿ, ಕೆಲವೊಮ್ಮೆ ಅತ್ತಿದ್ದೂ ಇದೆ. ಲೈವ್‌ನಲ್ಲಿ ಬಂದು ಮಾತನಾಡಿದ್ದೀನಿ. ನನಗೆ 90% ಜನರ ಸಪೋರ್ಟ್‌ ಇದೆ 10% ನೆಗೆಟಿವ್ ಕಾಮೆಂಟ್ ಮಾಡುತ್ತಾರೆ. ನನ್ನ ಮಗಳ ಜೊತೆ ವಿಡಿಯೋ ಮಾಡಿದರೂ ತಪ್ಪು ಅರ್ಥ ನೀಡಿ ಟ್ರೋಲ್ ಮಾಡುತ್ತಾರೆ. ನನ್ನ ಪತಿ ಗಾಯಕ, ಅವರು ನನಗೆ ಸಂಪೂರ್ಣ ಸಪೋರ್ಟ್ ಮಾಡುತ್ತಾರೆ. ಅದಿಕ್ಕೆ ನಾನು ಇದಕ್ಕೆಲ್ಲಾ ಕೇರ್ ಮಾಡುವುದಿಲ್ಲ. ಒಳ್ಳೆ ರೀತಿಯಲ್ಲಿ ಹೇಳ್ತೀನಿ ರಿಮೂವ್ ಮಾಡುವುದಕ್ಕೆ ಆದರೂ ಕೇಳುವುದಿಲ್ಲ, ಒಂದು ಪೇಜ್‌ ವಿರುದ್ಧ ದೂರು ದಾಖಲು ಮಾಡಿದ್ದೀನಿ. 

ಸೋಷಿಯಲ್ ಮೀಡಿಯಾದಲ್ಲಿ ಹೆಣ್ಣನ್ನು ನೋವಿಸಬೇಡಿ, ಪ್ರತಿಭೆ ಗೌರವಿಸಿ: ಮಂದಾರ ಗೌಡ

'ಕೆಲವೊಬ್ರು ತಿಳ್ಕೊಂಡಿದ್ದಾರೆ ನಾವು ಟೈಂ ಪಾಸ್‌ಗೆ ವಿಡಿಯೋ ಮಾಡೋದು, 24/7 ವಿಡಿಯೋ ಮಾಡೋದು ಅಂತ. ನಾವು ವಿಡಿಯೋ ಮಾಡೋದ್ರಿಂದ ನಮಗೆ ಪೇ ಮಾಡುತ್ತಾರೆ. ಎರಡು ಮೂರು ಆ್ಯಪ್‌ಗಳಿವೆ. ಅದರಿಂದ ನಮಗೆ ತಿಂಗಳು ಸಂಭಾವನೆ ನೀಡುತ್ತಾರೆ. ನಾವು ದುಡ್ಡಿಗಾಗಿ ವಿಡಿಯೋ ಮಾಡುವುದು, ಸುಮ್ಮನೆ ಟೈಂ ಪಾಸ್ ಮಾಡುವುದಕ್ಕೆ ಅಂತ. ನಾವು ಈ ರೀತಿ self employed'

ಫ್ಯಾಮಿಲಿ ಜೊತೆಗಿನ ವಿಡಿಯೋ ವೈರಲ್ ಆಗುತ್ತೆ, ನಿಮ್ಮ ಲವ್‌ ಸ್ಟೋರಿ ಬಗ್ಗೆ ಜನರು ಪ್ರಶ್ನೆ ಮಾಡಿದ್ದಾರೆ ಅಲ್ವಾ?
ನನ್ನ ಪತಿ ಮೂಲತಃ ಮೈಸೂರಿನವರು. ನಾವು ಮಾತನಾಡಲು ಕಾರಣ ಫೇಸ್‌ಬುಕ್‌ ಮೆಸೇಂಜರ್. ಗುಡ್ ಮಾರ್ನಿಂಗ್ ಅಂತ ಮೆಸೇಜ್ ಆರಂಭ ಆಗಿದ್ದು. ಅವರು ನನ್ನ ನಂಬರ್ ಕೇಳಿದ್ರು, ಕೊಟ್ಟೆ. ಮೊದಲು ಮೆಸೇಜ್‌ನಲ್ಲಿ ಅವರು ನನಗೆ ಹಾಡು ಕಳುಹಿಸಿದ್ದರು. 'ಹೇ ನವಿಲೇ..' ಅಂತ. ಹಾಡು ಕೇಳಿ ನಾನು ಫುಲ್ ಫ್ಯಾನ್ ಆದೆ. ಆಮೇಲೆ ನಾವು ಮೊದಲು ಭೇಟಿ ಮಾಡಿದ್ದು ಬೆಂಗಳೂರಿನ ಮಂತ್ರಿ ಮಾಲ್‌ನಲ್ಲಿ. ಅವರು ನನ್ನ ನೋಡಿದ ತಕ್ಷಣ 'ಎಂಥಾ ಸೌಂದರ್ಯ ಕಂಡೆ..' ಅಂತ ಹಾಡು ಹೇಳಲು ಶುರು ಮಾಡಿದರು. ಅಕ್ಕಪಕ್ಕ ಜನರಿದ್ದ ಕಾರಣ ನಾನು ಕೂತುಕೊಳ್ಳಿ ಅಂತ ಹೇಳಿದೆ. ಆನಂತರ ನನ್ನ ಪಕ್ಕ ಕೂರಬಹುದಾ ಅಂತ ಕೇಳಿ ನನ್ನ ಕೈ ಹಿಡಿದುಕೊಂಡು, ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡ್ಕೊಳ್ಳತ್ತೀನಿ ಅಂದ್ರು. ನಾನು ಶಾಕ್ ಆದೆ ಫಸ್ಟ್ ಮೀಟ್‌ನಲ್ಲಿ ಹೇಗಪ್ಪಾ ಅಂತ. ಅರ್ಧ ಗಂಟೆಯಲ್ಲಿ ಪ್ರೀತಿ ಒಪ್ಪಿಕೊಂಡೆ. ಟೇಬಲ್‌ ಮೇಲಿದ್ದ ನೀರಿನ ಹನಿಯಲ್ಲಿ ನಾನು ಐ ಲವ್‌ ಯು ಬರೆದೆ. ನಾವು 2015ರಲ್ಲಿ ಮದುವೆ ಆಗಿದ್ದು, 2017ರಲ್ಲಿ ಟ್ವಿನ್ ಎಂಟ್ರಿ ಕೊಟ್ಟರು. ಈಗಲೇ ಮಕ್ಕಳು ಬೇಡ ಅಂತ ಅಂದುಕೊಂಡ್ವಿ ಆದರೆ ಗಾಡ್ ಗಿಫ್ಟ್‌ ಒಪ್ಪಿಕೊಂಡ್ವಿ. ನನ್ನ ಮಗಳಲ್ಲಿ ನನ್ನ ತಾಯಿಯನ್ನು ಕಾಣ್ತೀನಿ.

 

click me!