
ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ (Bigg Boss Kannada season 11 contestant) ಹಾಗೂ ಡೈನಾಮಿಕ್ ಭಾಷಣಕಾರ್ತಿ ಚೈತ್ರಾ ಕುಂದಪುರ (Dynamic Speaker Chaitra Kundapur) ಈಗ ಮಾಡೆಲ್. ಸೀರೆಯುಟ್ಟು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಮನಸ್ಸು ಗೆದ್ದಿದ್ದ ಚೈತ್ರಾ ಕುಂದಾಪುರ ಅವರಿಗೆ ಬ್ಯೂಟಿ ಪಾರ್ಲರ್ ಗಳಿಂದ ಆಫರ್ ಬರ್ತಿದೆ. ಒಂದಾದ್ಮೇಲೆ ಒಂದು ಬ್ಯೂಟಿ ಪಾರ್ಲರ್, ಸೀರೆ ಅಂಗಡಿಗೆ ಹೋಗುವ ಚೈತ್ರಾ, ವಿಡಿಯೋ ಮಾಡಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿದ್ದಾರೆ. ಸೀರೆಯಲ್ಲಿ ಹುಡುಗಿಯರು ಕಾಣಿಸಿಕೊಳ್ಳೋದೆ ಅಪರೂಪ ಎನ್ನುವ ಕಾಲ ಇದು. ಮಾಡರ್ನ್ ಡ್ರೆಸ್ ಧರಿಸೋರಿಗೆ ಬೇಡಿಕೆ ಜಾಸ್ತಿ ಅಂದ್ಕೊಂಡರ ಕಲ್ಪನೆಯನ್ನು ಚೈತ್ರಾ ಬದಲಿಸ್ತಿದ್ದಾರೆ. ಬರೀ ಮಾಡರ್ನ್ ಡ್ರೆಸ್ ಹಾಕಿದ್ರೆ ಮಾತ್ರವಲ್ಲ ಸೀರೆಯುಟ್ಟು ಕೆಲಸ ಗಿಟ್ಟಿಸಿಕೊಳ್ಳಬಹುದು ಎಂಬುದನ್ನು ತೋರಿಸ್ತಿದ್ದಾರೆ.
ಈಗ ಚೈತ್ರಾ ಅವರ ಇನ್ನೊಂದು ವಿಡಿಯೋ ಸಾಕಷ್ಟು ಗಮನ ಸೆಳೆದಿದೆ. ರಾಯಲ್ ಬ್ಲೂ ಪ್ರೀಮಿಯಂ ಸೆಮಿ ಮೈಸೂರು ಕ್ರೇಪ್ ಸೀರೆಯಲ್ಲಿ ಚೈತ್ರಾ ಮಿಂಚಿದ್ದಾರೆ. six_yards_by_designer_trend ಹೆಸರಿನ ಇನ್ಸ್ಟಾ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ರಾಯಲ್ ಬ್ಲೂ ಪ್ರೀಮಿಯಂ ಸೆಮಿ ಮೈಸೂರು ಕ್ರೇಪ್ ಸೀರೆ: ಎ ಟೈಮ್‌ಲೆಸ್ ಕ್ಲಾಸಿಕ್. ರಾಯಲ್ ಬ್ಲೂ ಬಣ್ಣವು ಸೊಬಗು ಮತ್ತು ಅತ್ಯಾಧುನಿಕತೆಯನ್ನು ಹೊರಹಾಕುವ ಬಣ್ಣವಾಗಿದೆ ಎಂದು ಶೀರ್ಷಿಕೆ ನೀಡಲಾಗಿದೆ. ಸೀರೆಯುಟ್ಟು, ಸಿಂಪಲ್ ಮೇಕಪ್ ಮಾಡ್ಕೊಂಡಿರುವ ಚೈತ್ರಾ ಕುಂದಾಪುರ, ಕ್ಯಾಟ್ ವಾಕ್ ಮಾಡ್ತಾರೆ. ಚೈತ್ರಾ ಈ ಸೀರೆ ವಿಡಿಯೋವನ್ನು ಜನರು ಮೆಚ್ಚಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದ ಚೈತ್ರಾ ನೀವೇನಾ ಅಂತ ಪ್ರಶ್ನೆ ಮಾಡಿದ್ದಾರೆ. ಮಾತು ಹೆಚ್ಚಿದ್ರೂ ಸಂಸ್ಕೃತಿ ಮರೆತಿಲ್ಲ ಚೈತ್ರಾ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಹರಿದ ಬಟ್ಟೆಗಳೇ ಫ್ಯಾಷನ್ ಅಂದುಕೊಂಡವರಿಗೆ ನೀವೇ ಸೂಪರ್ ಉದಾಹರಣೆ ಎಂದು ಇನ್ನೊಬ್ಬರು ಕಮೆಂಟ್ ಹಾಕಿದ್ದಾರೆ.
ಇದಕ್ಕೂ ಮುನ್ನ ಚೈತ್ರಾ ಇನ್ನೊಂದು ವಿಡಿಯೋ ಹಂಚಿಕೊಂಡಿದ್ದರು. ಅದ್ರಲ್ಲಿ ಚೈತ್ರಾ ಈ ಸೀರೆ ಖರೀದಿ ಮಾಡ್ತಿರೋದನ್ನು ನೀವು ಕಾಣ್ಬಹುದು. ಚೈತ್ರಾ ಧರಿಸಿರುವ ರಾಯಲ್ ಬ್ಲೂ ಪ್ರೀಮಿಯಂ ಸೆಮಿ ಮೈಸೂರು ಕ್ರೇಪ್ ಸೀರೆ ಬೆಲೆ ಡಿಸ್ಕೌಂಟ್ ಹೋಗಿ 2400 ರೂಪಾಯಿ. ಬ್ಲೌಸ್ ಬೆಲೆ 1000 ರೂಪಾಯಿ ಎಂಬ ಮಾಹಿತಿ ಅಲ್ಲಿದೆ. ಅಂದ್ರೆ ಚೈತ್ರಾ ಧರಿಸಿರುವ ಸೀರೆ ಬೆಲೆ 2400 ಅಂತಾಯ್ತು.
ಕೆಂಪು ಸೀರೆಯುಟ್ಟು Valentine's day ಗೆ ರೆಡಿಯಾಗೆ ಬಿಟ್ರು ವೈಷ್ಣವಿ ಗೌಡ
ಬಿಗ್ ಬಾಸ್ ಮನೆಯಲ್ಲಿ 15 ವಾರ ಇದ್ದ ಚೈತ್ರಾ ತಮ್ಮ ಮಾತಿನಿಂದಲೇ ಎಲ್ಲರನ್ನು ಆಕರ್ಷಿಸಿದ್ದರು. ಮೊದಲಿನಿಂದಲೂ ಉತ್ತಮ ಭಾಷಣಗಾರ್ತಿ ಎಂದೇ ಗುರುತಿಸಿಕೊಂಡಿರುವ ಚೈತ್ರಾ ಈಗ ಡಾನ್ಸ್ ಗೂ ಸೈ ಎಂಬುದನ್ನು ತೋರಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಡಾನ್ಸ್ ಸ್ಟೆಪ್ ಹಾಕಲು ಕಷ್ಟಪಡ್ತಿದ್ದ ಚೈತ್ರಾ ಕುಂದಾಪುರ, ಬಾಯ್ಸ್ ವರ್ಸಸ್ ಗರ್ಲ್ ಶೋನಲ್ಲಿ ರಜತ್ ಜೊತೆ ಡಾನ್ಸ್ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ಜಯಂತ್ ಜೊತೆ ಹೊಸ ಜೀವನಕ್ಕೆ ಕಾಲಿಟ್ಟ Seetha Raama Serial ನಟಿ ಮೇಘನಾ
ಬಿಗ್ ಬಾಸ್ ಶೋ ಮುಗಿಯುತ್ತಿದ್ದಂತೆ ಸರ್ಪ್ರೈಸ್ ಎನ್ನುವಂತೆ ಬಾಯ್ಸ್ ವರ್ಸಸ್ ಗರ್ಲ್ಸ್ ಶೋಗೆ ಚೈತ್ರಾ ಎಂಟ್ರಿ ಪಡೆದ್ರು. ಮೊದಲ ಎಪಿಸೋಡ್ ನಲ್ಲಿ ಒಂದೆರಡು ಸ್ಟೆಪ್ಸ್ ಹಾಕಿದ್ದ ಚೈತ್ರಾ ಎರಡನೇ ವಾರದಲ್ಲಿ ಭರ್ಜರಿ ಡಾನ್ಸ್ ಮಾಡಿದ್ದಾರೆ. ರಜತ್ ಗೆ ಟಕ್ಕರ್ ನೀಡಲು ಬಂದ ಚೈತ್ರಾ ಡಾನ್ಸ್ ವೀಕ್ಷಕರಿಗೆ ಇಷ್ಟವಾಗಿದೆ. ಸ್ಪರ್ಧಿಗಳು ಕೂಡ ಚೈತ್ರಾ ನೃತ್ಯವನ್ನು ಮೆಚ್ಚಿದ್ದಾರೆ. ರಜತ್ ಗಿಂತ ಕಡಿಮೆ ಅಂಕವನ್ನು ಪಡೆದ್ರೂ ಮೊದಲ ಬಾರಿ ಡಾನ್ಸ್ ಮಾಡಿ 70ಕ್ಕಿಂತ ಹೆಚ್ಚು ಅಂಕ ಪಡೆದ ಖುಷಿ ಚೈತ್ರಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.