ಈ ಕಾರಣಕ್ಕೆ ಪದೇ ಪದೇ ಕೊರಗಜ್ಜನ ಮೊರೆ ಹೋಗುತ್ತಿದ್ರು ಚೈತ್ರಾ ಕುಂದಾಪುರ; ಸತ್ಯ ಲೀಕ್‌ ಆಗೇಬಿಡ್ತು

Published : Jan 20, 2025, 03:45 PM IST
ಈ ಕಾರಣಕ್ಕೆ ಪದೇ ಪದೇ ಕೊರಗಜ್ಜನ ಮೊರೆ ಹೋಗುತ್ತಿದ್ರು ಚೈತ್ರಾ ಕುಂದಾಪುರ; ಸತ್ಯ ಲೀಕ್‌ ಆಗೇಬಿಡ್ತು

ಸಾರಾಂಶ

ಬಿಗ್‌ಬಾಸ್‌ನಲ್ಲಿ ಚೈತ್ರಾ ಕುಂದಾಪುರ ತಮ್ಮ ದುಬಾರಿ ಉಂಗುರ ಕಳೆದುಕೊಂಡು ಕೊರಗಜ್ಜನನ್ನು ಪ್ರಾರ್ಥಿಸಿದ ಬಳಿಕ ಕೆಲವೇ ಗಂಟೆಗಳಲ್ಲಿ ಅದು ಪತ್ತೆಯಾಯಿತು. ದೈವಶಕ್ತಿಯನ್ನು ನಂಬುವ ಚೈತ್ರಾ, ಕರಾವಳಿಗರಿಗೆ ಕೊರಗಜ್ಜ ಜೀವನದ ಭಾಗ ಎಂದರು. ಕುಲದೈವ, ಕೊರಗಜ್ಜನಲ್ಲಿ ನಂಬಿಕೆ ಇದೆ ಎಂದು ಖಾಸಗಿ ವಾಹಿನಿಯಲ್ಲಿ ತಿಳಿಸಿದರು.

ಬಿಗ್ ಬಾಸ್ ಸೀಸನ್‌ 11ರಲ್ಲಿ ಚೈತ್ರಾ ಕುಂದಾಪುರ ಮಣ್ಣಿನ ಟಾಸ್ಕ್‌ ಆಡುವ ವೇಳೆ ತಮ್ಮ ಕೈಯಲ್ಲಿ ಇದ್ದ ದುಬಾರಿ ಉಂಗುರವನ್ನು ಕಳೆದುಕೊಳ್ಳುತ್ತಾರೆ. ಆಗ ಒಂದು ನಿಮಷಕ್ಕೆ ಗಾಬರಿಯಾಗಿ ಕಣ್ಣೀರಿಟ್ಟರೂ ಕೂಡ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಕೊರಗಜ್ಜನ ಮೊರೆ ಹೋಗುತ್ತಾರೆ. ಒಂದೆರಡು ಗಂಟೆಗಳ ನಂತರ ಉಂಗುರ ಸಿಗುತ್ತದೆ. ಆಗ ಸ್ವಾಮಿ ಕೊರಗಜ್ಜ ಎಂದು ಜೋರಾಗಿ ಕೂಗುತ್ತಾರೆ. ಈ ಘಟನೆ ಬಗ್ಗೆ ಚೈತ್ರಾ ಕುಂದಾಪುರ ಹೊರಗಡೆ ಬಂದಾಗ ಮಾತನಾಡಿದ್ದಾರೆ.

'ನಾವು ಕರಾವಳಿ ಅವರು ಆಗಿರುವುದರಿಂದ ಕೊರಗಜ್ಜ ನಮ್ಮ ಪಾರ್ಟ್‌ ಆಫ್‌ ಲೈಫ್ ಆಗಿರುತ್ತದೆ. ನಮಗೆ ಕುಲದೈವ ಕೂಡ ಇರುತ್ತದೆ ಬಾಲಚಿಕ್ಕುಅಮ್ಮ. ಏನಾದರೂ ಕಳೆದು ಹೋದರೆ ಯಾರಾದರೂ ದುಡ್ಡು ಕೊಟ್ಟಿದ್ದು ವಾಪಸ್ ಕೊಡದೇ ಹೋದರೆ ಚಕ್ಕುಲಿ ಇಡುತ್ತೀನಿ ಅಂದುಕೊಂಡರೆ ತಕ್ಷಣವೇ ಕೆಲಸ ಆಗುತ್ತದೆ ಅನ್ನೋ ನಂಬಿಕೆ ಇದೆ. ಆಗ ಉಂಗುರ ಕಳೆದುಕೊಂಡಾಗ ಬೀಡಾ ಇಡುತ್ತೀನಿ ಎಂದು ಪ್ರಾರ್ಥಣೆ ಮಾಡಿದ ಕೆಲವೇ ಗಂಟೆಗಳಲ್ಲಿ ನನ್ನ ಉಂಗುರ ಸಿಗುತ್ತದೆ. ಆ ರಾಶಿ ಬಣ್ಣಿನಲ್ಲಿ ಎಷ್ಟು ಹುಡುಕಿದರೂ ಸಿಗುವುದಿಲ್ಲ ಅಷ್ಟು ಕೆಸರು ಆದರೂ ಹುಡುಕಿಕೊಟ್ಟಿದ್ದಾರೆ ಅಂದ ಮೇಲೆ ನಿಜ ಮೆಚ್ಚುಗೆ ವ್ಯಕ್ತ ಪಡಿಸಬೇಕು. ಇಲ್ಲಿ ದೈವ ಶಕ್ತಿ ಕೂಡ ಇದೆ. ನಾವು ಏನೇ ಕಳೆದುಕೊಂಡರೂ ದೈವ ಬಳಿ ಹೇಳಿಕೊಳ್ಳುತ್ತೀವಿ ಏನೇ ನಿರ್ಧಾರ ತೆಗೆದುಕೊಳ್ಳುತ್ತಿದ್ದರೂ ದೈವ ಬಳಿ ಹೇಳಿಕೊಳ್ಳುತ್ತೀವಿ. ಈ ನಿಟ್ಟಿನಲ್ಲಿ ಪ್ರತಿ ಕ್ಷಣವೂ ನನ್ನ ಜೀವನದಲ್ಲಿ ಪವಾಡವೇ ನಡೆಯುತ್ತದೆ' ಎಂದು ಚೈತ್ರಾ ಕುಂದಾಪುರ ಖಾಸಗಿ ಟಿವಿ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. 

ಬಿಗ್ ಬಾಸ್‌ ಮನೆಗೆ ಪೊಲೀಸರು ಬಂದಿದ್ದು ನಿಜ; ಸತ್ಯ ಬಿಚ್ಚಿಟ್ಟ ಚೈತ್ರಾ ಕುಂದಾಪುರ

ಸ್ವಾಮಿ ಕೊರಗಜ್ಜ ಸನ್ನಿಧಿಯನ್ನು ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ತಪ್ಪದೆ ಭೇಟಿ ಮಾಡುತ್ತಾರೆ. ಅದರಲ್ಲೂ ನಟಿ ರಕ್ಷಿತಾ ಪ್ರೇಮ್ ಮತ್ತು ರಚಿತಾ ರಾಮ್ ಆಗಾಗ ಹೋಗುತ್ತಿರುವ ಫೋಟೋ ವೈರಲ್ ಆಗುತ್ತದೆ.  

ಡಾಕ್ಟರ್ ಮುಂದೆ ವಾಂತಿ ಮಾಡಿದ್ದೀನಿ, ನನಗೆ PCOD ಸಮಸ್ಯೆ ಇದೆ; ಆರೋಗ್ಯದ ಬಗ್ಗೆ ಚೈತ್ರಾ ಕುಂದಾಪುರ ಸ್ಪಷ್ಟನೆ

ರಾತ್ರಿ ಹೊತ್ತು ಬೆಳಕು ಹಾಕುವಂತಿಲ್ಲ! 

ಮಂಗಳೂರಿನ ಅಜ್ಜನ ಕಟ್ಟೆಯ ಬಳಿ ರಾತ್ರಿ ಹೊತ್ತಿನಲ್ಲಿ ವಾಹನ ಚಲಾಯಿಸುವಾಗ ವಾಹನದ ಹೆಡ್‌ಲೈಡ್ ಹಾಕುವಂತಿಲ್ಲ. ಇಲ್ಲಿ ಕೋಲ ನಡೆಯುವ ಸಂದರ್ಭದಲ್ಲಿ ಅಗರಬತ್ತಿಯ ಬೆಳಕು ಕೂಡ ಕಾಣಬಾರದು ಎಂಬ ನಿಯಮವಿದೆ. ಈ ಭಾಗದಲ್ಲಿ ರಾತ್ರಿ ಹೊತ್ತು ಸಂಚರಿಸುವ ವಾಹನಗಳು ಹೆಡ್‌ಲೈಟ್ ಒಮ್ಮೆ ಡಿಮ್ ಡಿಪ್ ಮಾಡಿ ಹೋಗುತ್ತಾರೆ. ಹಿಂದೆ ಒಂದಿಷ್ಟು ಜನ, ಸ್ಥಳೀಯರ ಮಾತನ್ನು ಅಲಕ್ಷಿಸಿ ಅಜ್ಜನ ಕಟ್ಟೆಯ ಬಳಿ ಗ್ಯಾಸ್‌ಲೈಟ್ ಹಿಡಿದು ಹೋದರು. ತಕ್ಷಣ ಗಾಸ್‌ಲೈಟ್‌ಗಳು ಪುಡಿಯಾದವು. ಕೊರಗಜ್ಜನಿಗೆ ಶರಣು ಹೋಗುವವರೆಗೆ ಅವರಿಗೆ ತಲುಪಬೇಕಾದ ದಾರಿಯೇ ಸಿಗಲಿಲ್ಲ ಎಂಬುದನ್ನು 75ರ ಹರೆಯದ ಹಿರಿಯರು ಹೇಳುತ್ತಾರೆ. ರಾತ್ರಿ ಮಹಿಳೆಯರಿಗೆ ಪ್ರವೇಶ ಇಲ್ಲ ಅಜ್ಜನಿಗೆ ಹರಕೆಯ ರೂಪದಲ್ಲಿ ನೀಡುವ ಅಗೇಲು ಸೇವೆಯಲ್ಲಿ ಹುರುಳಿ ಹಾಗೂ ಬಸಳೆಯ ಸಾಂಬಾರು, ಮೀನು, ಕೋಳಿ, ಚಕ್ಕುಲಿ, ಸೇಂದಿ ಇತ್ಯಾದಿಗಳನ್ನು ಸೇವೆ ರೂಪದಲ್ಲಿ ನೀಡುತ್ತಾರೆ. ಮಂಗಳೂರಿನ ಕುತ್ತಾರು ಕೊರಗಜ್ಜನ ಕಟ್ಟೆಗೆ ಸಂಜೆ 7 ಗಂಟೆಯ ನಂತರ ಮಹಿಳೆಯರಿಗೆ ಪ್ರವೇಶವಿಲ್ಲ. 

ತ್ರಿವಿಕ್ರಮ್ ಭವ್ಯಾಗೆ ಪ್ರಪೋಸ್ ಮಾಡಿದ್ದು ನಿಜನಾ? ಚೈತ್ರಾ ಕುಂದಾಪುರ ಮಾತುಕೇಳಿ ಕುಟುಂಬಸ್ಥರು ಶಾಕ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!