ಹಿಂದು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರ ಇದೀಗ ಬಿಗ್ ಬಾಸ್ ಸೀಸನ್ 11ರ ಫಯರ್ ಬ್ರ್ಯಾಂಡ್ ಸ್ಪರ್ಧಿಯಾಗಿ ಮಿಂಚುತ್ತಿದ್ದಾರೆ.
Image credits: Chaithra Kundapura instagram
ಡ್ರಾಮಾ ಕ್ವೀನ್
ಚೈತ್ರಾ ಕುಂದಾಪುರ ಡ್ರಾಮಾವನ್ನು ಆರಂಭದಿಂದ ನೋಡಿಕೊಂಡು ಬರುತ್ತಿರುವ ವೀಕ್ಷಕರಿಗೆ ಅವರ ನಿಜವಾದ ಜೀವನದ ಬಗ್ಗೆ ಸಖತ್ ಕ್ಯೂರಿಯಾಸಿಟಿ ಇದೆ.
Image credits: Chaithra Kundapura instagram
ವಯಸ್ಸು ಎಷ್ಟು?
ಗೂಗಲ್‌ನಲ್ಲಿ ಚೈತ್ರಾ ಕುಂದಾಪುರ ಅಂತ ಸರ್ಚ್ ಕೊಟ್ಟಾಗ ಮೊದಲು ಬರುವ ಆಯ್ಕೆನೇ 'ಚೈತ್ರಾ ಕುಂದಾಪುರ ವಯಸ್ಸು', ಚೈತ್ರಾ ಕುಂದಾಪುರ ನಿಜವಾದ ವಯಸ್ಸು'
Image credits: Chaithra Kundapura instagram
ವಯಸ್ಸು ಲೀಕ್
ಹಾಗಾದ್ರೆ ಚೈತ್ರಾ ನಿಜವಾದ ವಯಸ್ಸು ಎಷ್ಟು ಎಂದು ನೆಟ್ಟಿಗರು ಹುಡುಕಲು ಶುರು ಮಾಡಿದ್ದಾರೆ. ಅವರಿಗೆ ಸಿಕ್ಕ ಉತ್ತರ 28 ವರ್ಷ ಎಂದು.
Image credits: Chaithra Kundapura instagram
ಮದುವೆ ಆಗಿಲ್ಲ
ಅಯ್ಯೋ ಇಷ್ಟು ಚಿಕ್ಕ ವಯಸ್ಸಿಗೆ ಇಷ್ಟೋಂದು ಸೈಂಡ್ ಮಾಡ್ತಿದ್ದಾರಾ ಅನ್ನೋದು ಕೆಲವರ ಪ್ರಶ್ನೆ ಆದ್ರೆ ಯಾಕೆ ಇನ್ನು ಮದುವೆ ಆಗಿಲ್ಲ ಎಂದು ಕೆಲವರ ಪ್ರಶ್ನೆ.
Image credits: Chaithra Kundapura instagram
ಚೈತ್ರಾ ಬಯೋ
ಕುಂದಾಪುರದ ಈ ಚೆಲುವೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಜರ್ನಲಿಸಂ ಮತ್ತು ಮಾಸ್ ಕಮ್ಯೂನಿಕೇಷನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
Image credits: Chaithra Kundapura instagram
ಚೈತ್ರಾ ಹಿಂದಿನ ಕೆಲಸ
ವೃತ್ತಿಯಲ್ಲಿ ಪತ್ರಕರ್ತೆ ಆಗಿದ್ದ ಚೈತ್ರಾ ಈ ಹಿಂದೆ ಆಂಕರ್ ಆಗಿ ಕೆಲಸ ಮಾಡಿದ್ದಾರೆ. ಒಂದೆರಡು ಸುದ್ದಿ ಮನೆಯಲ್ಲಿ ಕೆಲಸ ಕೂಡ ಮಾಡಿದ್ದಾರೆ.
Image credits: Chaithra Kundapura instagram
ನೆಟ್ಟಿಗರ ಅಭಿಪ್ರಾಯ
ಅನಾರೋಗ್ಯದ ಕಾರಣ ಚೈತ್ರಾ ಒಮ್ಮೆ ಬಿಗ್ ಬಾಸ್ ಮನೆಯಿಂದ ಹೊರ ಹೋಗಿ ಬಂದಿದ್ದಾರೆ. ಆ ಸಮಯದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸ್ಪರ್ಧಿಗಳಲ್ಲಿ ಹಾಗೂ ವೀಕ್ಷಕರಲ್ಲಿ ಕೆಟ್ಟಿ ಹೆಸರು ಪಡೆದರು.