ಭವ್ಯಾಗಿಂತ ಅಕ್ಕ ದಿವ್ಯಾನೇ ಸೂಪರ್; ಬೇಕೆಂದು ಹೆಚ್ಚೊತ್ತು ಉಳಿಸಿಕೊಂಡ್ರಾ ಬಿಗ್ ಬಾಸ್?

By Vaishnavi Chandrashekar  |  First Published Jan 1, 2025, 2:45 PM IST

ಫ್ಯಾಮಿಲಿ ರೌಂಡ್‌ನಲ್ಲಿ ಭವ್ಯಾ ಗೌಡ ಫ್ಯಾಮಿಲಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ರಾ? ಬೇಕು ಅಂತ ಉಳಿಸಿಕೊಳ್ಳುತ್ತಿರುವುದು ಯಾಕೆ ಎಂದ ನೆಟ್ಟಿಗರು..... 


ಬಿಗ್ ಬಾಸ್ ಸೀಸನ್ 11ರಲ್ಲಿ ಫ್ಯಾಮಿಲಿ ರೌಂಡ್ ಆರಂಭವಾಗಿದೆ. 14ನೇ ವಾರದ ಕ್ಯಾಪ್ಟನ್ ಆಗಿರುವ ಭವ್ಯಾ ಗೌಡ ಫ್ಯಾಮಿಲಿ ಹಾಗೂ ತ್ರಿವಿಕ್ರಮ್ ಫ್ಯಾಮಿಲಿ ಮೊದಲು ಆಗಮಿಸುತ್ತದೆ. ಹೊಸ ವರ್ಷದ ಪ್ರಯುಕ್ತ ಫ್ಯಾಮಿಲಿಯನ್ನು ನೋಡಲು ಹಂಬಲಿಸುತ್ತಿದ್ದ ಸ್ಪರ್ಧಿಗಳಿಗೆ ಬಿಗ್ ಬಾಸ್ ಬಂಪರ್ ಅವಕಾಶ ಕೊಟ್ಟರು ಅಲ್ಲದೆ ಮನೆಯಿಂದ ಮಾಡಿಕೊಂಡು ಬಂದಿರುವ ಆಹಾರವನ್ನು ಪ್ರತಿಯೊಬ್ಬರಿಗೆ ನೀಡಿದ್ದರು. ಆದರೆ ವೀಕ್ಷಕರಿಗೆ ಬೇಸರ ಆಗಿರುವುದು ಭವ್ಯಾ ಗೌಡ ಫ್ಯಾಮಿಲಿ ಮೇಲೆ.

ಹೌದು! ಬಿಗ್ ಬಾಸ್ ಕನ್ಫೆಷನ್‌ ರೂಮಿನಲ್ಲಿ ಡಾಕ್ಟರ್ ವಸ್ತ್ರದಲ್ಲಿ ಸಹೋದರಿ ದಿವ್ಯಾ ಗೌಡ ಕುಳಿತಿರುತ್ತಾರೆ. ಭವ್ಯಾ ಗೌಡ ಆಗಮಿಸಿದ ಆರಂಭದಲ್ಲಿ ಗೊತ್ತಾಗದೆ ಮಾತನಾಡಿದ್ದರು ಆನಂತರ ಅಕ್ಕನನ್ನು ಗುರುತಿಸಿ ಮಾತನಾಡಿದೆ ಮನೆಯೊಳಗೆ ಕರೆದುಕೊಂಡು ಬರುತ್ತಾರೆ. ಗಂಟೆಗಳ ನಂತರ ಭವ್ಯಾ ಹಿರಿ ಅಕ್ಕನ ಮಗಳು ಸ್ಟೋರ್‌ ರೂಮ್‌ನಿಂದ ಬರುತ್ತಾರೆ. ಆಗಲೂ ಭವ್ಯಾ ಫುಲ್ ಖುಷ್. ಅದಾದ ಮೇಲೆ ಮುಖ್ಯ ದ್ವಾರದಿಂದ ಅಮ್ಮ ಮಂಜುಳ ಆಗಮಿಸುತ್ತಾರೆ. ಭವ್ಯಾ ಗೌಡ ಮನೆಯಿಂದ ಆಗಮಿಸಿರುವ ಮೂವರು ಬಿಗ್ ಬಾಸ್ ಮನೆಯಲ್ಲಿ ಸುಮಾರು 6 ಗಂಟೆಗಳ ಕಾಲ ಇರುತ್ತಾರೆ. ಒಂದು ಸೀನ್‌ನಲ್ಲಿ ಆಕಲಿಸುತ್ತಾ ನಿದ್ರೆ ಬರುತ್ತಿದೆ ಎಂದು ಮಂಜುಳ ಮತ್ತು ದಿವ್ಯಾ ಹೇಳಿರುವುದು ತೋರಿಸಿದ್ದಾರೆ. ಅಕ್ಕ ಮಗಳು ಪುಟ್ಟ ಹುಡುಗಿ ಆಗಿರುವ ಕಾರಣ ಮಂಜುಳ ಆಕೆಯನ್ನು ಕರೆದುಕೊಂಡು ಹೊರ ಬರಬೇಕು ಎನ್ನುತ್ತಾರೆ. ಆದರೆ ದಿವ್ಯಾ ಗೌಡ ಅಲ್ಲೇ ಉಳಿದುಕೊಳ್ಳುತ್ತಾರೆ. 

Tap to resize

Latest Videos

ಈ ಕಾರಣದಿಂದ ನಮ್ರತಾ ಗೌಡ ಜೊತೆ ಒಂದು ವರ್ಷ ಮಾತುಕತೆ ಇರಲಿಲ್ಲ; ಕೊನೆಗೂ ಗುಟ್ಟು ರಟ್ಟು ಮಾಡಿದ ಐಶ್ವರ್ಯಾ

ರಜತ್ ಗೌಡ ಫ್ಯಾಮಿಲಿ ಆಗಮಿಸಿದ್ದರೂ ದಿವ್ಯಾ ಅಲ್ಲೇ ಇದ್ದರು. ಹೀಗಾಗಿ ವೀಕ್ಷಕರು ಬೇಸರ ಮಾಡಿಕೊಂಡಿದ್ದಾರೆ. ದಿವ್ಯಾ ಗೌಡರನ್ನು ಹೆಚ್ಚಿನ ಸಮಯ ಉಳಿಸಿಕೊಳ್ಳಲು ಕಾರಣ ಏನು? ಇಷ್ಟು ಸೀಸನ್‌ಗಳ ಕಾಲ ಮನೆ ಮಂದಿ ಬಂದು ಒಂದೆರಡು ಗಂಟೆ ಸಮಯ ಕಳೆದು ಹೋಗುತ್ತಿದ್ದರು ಆದರೆ ನೀವು ಮಾತ್ರ ಇಡೀ ದಿನ ಇರಿಸಿಕೊಂಡಿದ್ದೀರಿ. ಭವ್ಯಾಗಿಂತ ದಿವ್ಯಾನೇ ಸೂಪರ್ ಎನ್ನುತ್ತಿದ್ದರು ತ್ರಿವಿಕ್ರಮ್ ಮತ್ತು ರಜತ್ ಕಿಶನ್ ಹೀಗಾಗಿ ಟಿಆರ್‌ಪಿಗೋಸ್ಕರ ಏನಾದರೂ ತಡ ಮಾಡುತ್ತಿದ್ದೀರಾ? ಉಳಿದ ಸ್ಪರ್ಧಿಗಳ ಮನೆಯವರು ಬಂದಾಗ ಹೀಗೆ ಹೆಚ್ಚಿನ ಸಮಯ ಅವಕಾಶ ಕೊಡುತ್ತಾರಾ? ಹೀಗೆ ಸಾಕಷ್ಟು ಪ್ರಶ್ನೆಗಳ್ನು ಬಿಗ್ ಬಾಸ್ ಮುಂದೆ ಇಟ್ಟಿದ್ದಾರೆ.

ಮೂಗೂತಿ ಸುಂದರಿ ಅನ್ನೋಕೆ ಮೂಗೇ ಇಲ್ಲ; ಭವ್ಯಾ ಗೌಡ ಕಾಲೆಳೆದ ನೆಟ್ಟಿಗರು

click me!