
ಬಿಗ್ ಬಾಸ್ ಸೀಸನ್ 11ರ 13ನೇ ವಾರದ ಕ್ಯಾಪ್ಟನ್ ಆಗಿ ಭವ್ಯಾ ಗೌಡ ಇದೀಗ ಮೋಸ ಮಾಡಿ ಸಿಕ್ಕಿಬಿದ್ದಿದ್ದಾರೆ. 14ನೇ ವಾರದ ಕ್ಯಾಪ್ಟನ್ಸ್ ಟಾಸ್ಕ್‌ಗೆ ಆಯ್ಕೆ ಆಗಿರುವ ಭವ್ಯಾ ಗೌಡ ಈಗ ಮೋಸ ಮಾಡಿ ಮತ್ತೊಮ್ಮೆ ಕ್ಯಾಪ್ಟನ್ ಆಗಿದ್ದಾರೆ. ಲೆಕ್ಕಾಚಾರ ನೋಡಿದರೆ ಭವ್ಯಾ ಬಿಗ್ ಬಾಸ್ ಮನೆಯಲ್ಲಿ ಮೂರು ಸಲ ಕ್ಯಾಪ್ಟನ್ ಆಗಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ ಮುಗಿದ ಮೇಲೆ ಸ್ಪರ್ಧಿಗಳಲ್ಲಿ ಚರ್ಚೆ ಶುರುವಾಗುತ್ತದೆ..ಇಡೀ ಮನೆ ಗೊಂದಲದಲ್ಲಿ ಇರುವಾಗ ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಸಾಕ್ಷಿ ಸಮೇತ ಸ್ಪಷ್ಟನೆ ಕೊಡುತ್ತಾರೆ.
ಭವ್ಯಾ ತಂಡ ಈ ವಾರ ಕ್ಯಾಪ್ಟನ್ ಟಾಸ್ಕ್‌ಗೆ ಆಯ್ಕೆ ಆಗುತ್ತಾರೆ. ಬಿಗ್ ಬಾಸ್ ಹೇಳುವ ಗೊಂಚಲಿನಿಂದ ಬಾಲ್ ತೆಗೆದುಕೊಂಡು ಟಾಸ್ಕ್‌ನಿಂದ ಹೊರ ಇಡಲು ಇಷ್ಟ ಪಡುವ ಸ್ಪರ್ಧಿಯ ಡಬ್ಬಕ್ಕೆ ಬಾಲ್ ಹಾಕಬೇಕು. ಮತ್ತೊಮ್ಮೆ ಬಿಗ್ ಬಾಸ್ ಹೇಳುವ ಗೊಂಚಲಿನಿಂದ ಬಾಲ್ ತೆಗೆದು ಟಾಸ್ಕ್‌ನಲ್ಲಿ ಉಳಿದುಕೊಳ್ಳಬೇಕಿರುವ ಸ್ಪರ್ಧಿ ಡಬ್ಬಕ್ಕೆ ಬಾಲ್ ಹಾಕಬೇಕು. ಇಲ್ಲಿ ಪ್ರತಿಯೊಬ್ಬರು ಬಿಗ್ ಬಾಸ್ ಹೇಳುವ ಗೊಂಚಲಿನಿಂದ ಬಾಲ್ ತೆಗೆದುಕೊಳ್ಳುತ್ತಿದ್ದರೆ ಭವ್ಯಾ ಮಾತ್ರ ಮತ್ತೊಂದು ಗೊಂಚಲಿನಿಂದ ಬಿದ್ದಿರುವ ಬಾಲ್‌ನ ತೆಗೆದುಕೊಂಡು ತಮ್ಮ ಡಬ್ಬಕ್ಕೆ ಹಾಕಿ ಟಾಸ್ಕ್ ಗೆಲುತ್ತಾರೆ. ಬಾಲ್ ಎಲ್ಲಿಂದ ಬಂದು ಹೇಗೆ ಬಂತು ಎಂದು ಉಸ್ತುವಾರಿಗಳು ಪ್ರಶ್ನೆ ಮಾಡಿದ್ದರೂ ಭವ್ಯಾ ಬಳಿ ಉತ್ತರವಿರಲಿಲ್ಲ. ಮನೆ ಮಂದಿ ಚರ್ಚೆ ಮಾಡುವಾಗ 'ಈ ರೀತಿ ಮಾತನಾಡಬೇಡಿ ರಜತ್ ನಾನು ಗೆದ್ದಿರುವವರಳು ತಪ್ಪಾಗಿ ಕಾಣಿಸುತ್ತೀನಿ' ಎಂದು ಭವ್ಯಾ ಮನೆ ಮಂದಿ ಸುಮ್ಮನಿರಿಸಿದ್ದರು.
ಅಬ್ಬಬ್ಬಾ! ಸೀತಾ ಹಾಕಿರೋ ಡೀಪ್ ಬ್ಲೌಸ್ ಡಿಸೈನ್ ನೋಡಿ ಫ್ಯಾನ್ಸ್ ಶಾಕ್
ಈ ಟಾಸ್ಕ್‌ನ ದೃಶ್ಯವನ್ನು ಜೀಯೋ ಸಿನಿಮಾ ಆಪ್‌ನಲ್ಲಿ ವೀಕ್ಷಕರು ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಬಿಗ್ ಬಾಸ್ ಹೇಳಿರುವುದನ್ನು ಫಾಲೋ ಮಾಡದೆ ಭವ್ಯಾ ಗೌಡ ಕ್ಯಾಪ್ಟನ್ ಆಗಿದ್ದಾರೆ ಎಂದು. ಮೊದಲ ಸಲ ಭವ್ಯಾ ಕ್ಯಾಪ್ಟನ್ ಆದಾಗ ತ್ರಿವಿಕ್ರಮ್ ಸಹಾಯ ಮಾಡಿದ್ದರು, ಎರಡನೇ ಸಲ ಮೋಸ ಆಟವಾಡಿ ಇಡೀ ತಂಡವನ್ನು ಕ್ಯಾಪ್ಟನ್ ಟಾಸ್ಕ್‌ಗೆ ಕರೆದುಕೊಂಡು ಹೋಗಿ ಭವ್ಯಾ ಕ್ಯಾಪ್ಟನ್ ಆದರು. ಈಗ ಬಾಲ್‌ನಲ್ಲಿ ಮೋಸ ಮಾಡಿ ಮೂರನೇ ಸಲ ಕ್ಯಾಪ್ಟನ್ ಆಗಿದ್ದಾಳೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗುತ್ತಿದೆ. ಉಗ್ರಂ ಮಂಜು ಇಷ್ಟು ದಿನ ಕಂತ್ರಿ ಅಂದುಕೊಂಡಿದ್ವಿ ಆದರೆ ನಿವಜಾದ ಕುತಂತ್ರಿ ಭವ್ಯಾ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಇನ್‌ಸ್ಟಾಗ್ರಾಂ ಫೋಟೋದಿಂದ 'ನೂರು ಜನ್ಮಕ್ಕೂ' ಅವಕಾಶ ಗಿಟ್ಟಿಸಿಕೊಂಡ ಶಿಲ್ಪಾ ಕಾಮತ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.