
ಹಿತಾಳಿಗೆ ಏಳು ವರ್ಷ ಆಗಿರೋ ಹಿನ್ನೆಲೆಯಲ್ಲಿ ಆಕೆಯ ಬ*ಲಿಗೆ ಮಾಳವಿಕಾ ಸಿದ್ಧತೆ ನಡೆಸಿದ್ದಾಳೆ. ಆಕೆಯನ್ನು ಸಾಯಿಸಿದರೆ ತನಗೆ ಅಪಾರ ಶಕ್ತಿ ಬರುತ್ತದೆ ಎನ್ನುವ ಕಾರಣಕ್ಕೆ ಹಾಗೆ ಮಾಡಿದ್ದಾಳೆ. ಇದೇ ಕಾರಣಕ್ಕೆ ಮಾಂತ್ರಿಕ ಹಿತಾಳ ಜೀವವನ್ನು ಬ*ಲಿ ಪಡೆಯುವುದಕ್ಕಾಗಿ ರಕ್ಕಸ ಹದ್ದೊಂದನ್ನು ಕಳುಹಿಸಿದ್ದಾನೆ. ಹುಟ್ಟುಹಬ್ಬದಂದು ದುರ್ಗಾ ಜೊತೆ ಹಿತಾ ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹಿತಾಳನ್ನು ಬಲಿ ಪಡೆಯುವುದಕ್ಕಾಗಿ ಹದ್ದು ಹಾರಿ ಬಂದು ಹಿತಾಳನ್ನು ಮೇಲಕ್ಕೆ ಕರೆದುಕೊಂಡು ಹೋಗಿದೆ. ಆ ಸಂದರ್ಭದಲ್ಲಿ, ಅಂಬಿಕಾ ಮಗಳನ್ನು ಕಾಪಾಡುವುದಕ್ಕೆ ಮುಂದಾದಾಗ ಮಾಂತ್ರಿಕ ತನ್ನ ಶಕ್ತಿಯಿಂದ ಆಕೆಯನ್ನು ಕಟ್ಟಿಹಾಕಿದ್ದಾನೆ. ಅಲ್ಲಿಯೇ ಇದ್ದ ದುರ್ಗಾ ಮಗುವನ್ನು ಕಾಪಾಡಲು ನೋಡಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಆ ಹದ್ದುವಿನಿಂದ ಕಾಪಾಡಲು ಹೋದಾಗ, ದುರ್ಗಾ ಮತ್ತು ಹಿತಾ ಇಬ್ಬರನ್ನೂ ಮಗು ಬೀಳಿಸುತ್ತದೆ.
ಅಲ್ಲಿ ಬಿದ್ದ ಹಿತಾಗೆ ಇನ್ನೂ ಎಚ್ಚರವಾಗಿಲ್ಲ. ಯಾವುದೇ ಸಮಸ್ಯೆ ಇಲ್ಲದಿದ್ದರೂ ಏಕೆ ಎಚ್ಚರವಾಗುತ್ತಿಲ್ಲ ಎಂದು ವೈದ್ಯೆ ಕೂಡ ಕೈಚೆಲ್ಲಿ ಕೂತಿದ್ದಾರೆ. ಇತ್ತ ಮಾಳವಿಕಾ ಹಿತಾಳ ಬ*ಲಿ ಪಡೆಯಲು ಸಕಲ ಸಿದ್ಧತೆ ನಡೆಸುತ್ತಿದ್ದಾಳೆ. ತನ್ನ ಮಾಂತ್ರಿಕ ಶಕ್ತಿಯನ್ನು ಬಳಸುತ್ತಿದ್ದಾಳೆ. ಅದೇ ಇನ್ನೊಂದೆಡೆ ಶರತ್ ಮಗುವನ್ನು ಕಾಪಾಡಲು ಏನು ಮಾಡಬೇಕು ಎಂದು ದಿಕ್ಕು ತೋಚದೇ ಕುಸಿದು ಕುಳಿತಿದ್ದಾನೆ. ಅದೇ ವೇಳೆ ಮನೆಯವರು ದೇವಿಯ ಮೊರೆ ಹೋಗಿದ್ದಾರೆ.
ಅಲ್ಲಿ ದೇವಿ ರೂಪದ ಅಜ್ಜಿ ದುರ್ಗಾಳಿಗೆ ಎದುರಾಗುತ್ತಾಳೆ. ಆಗ ಆಕೆ ದುರ್ಗಾಪುರದ ಕಥೆ ಹೇಳುತ್ತಾಳೆ. ಸಾವಿರಾರು ವರ್ಷಗಳ ಹಿಂದಿನ ಕಥೆ ಅದು. ರಾಕ್ಷಸಿ ದುರ್ಗಾಪುರದ ಮೇಲೆ ದಾಳಿ ಮಾಡಿದ್ದಳು. ಆ ರಾಕ್ಷಸಿಗೆ ಬೇಕಾದ ವಸ್ತುಗಳನ್ನು ಪಡೆದುಕೊಳ್ಳಲು ಪ್ರಯತ್ನ ಪಡುತ್ತಿದ್ದಳು. ದುರ್ಗಾಪುರ ನಾಶ ಮಾಡುವ ಉದ್ದೇಶ ಹೊಂದಿದ್ದಳು. ದೇವಿ ರಕ್ಷಕರೂ ಇದ್ದರು. ಅವರು ಇಲ್ಲಿಯ ರಾಜ ಮತ್ತು ಇಬ್ಬರು ಹೆಣ್ಣುಮಕ್ಕಳು. ಅವರ ದುರ್ಗಾಪುರದ ರಕ್ಷಣೆ ಮಾಡುತ್ತಾ ಜೀವ ಬಿಟ್ಟರು. ದೇವಿಯ ಮೂರ್ತಿಯನ್ನು ರಾಕ್ಷಸಿ ಕೊಂಡೊಯ್ದಳು ಎನ್ನುತ್ತ ಆ ಘಟನೆಯನ್ನುಹೇಳಿದ್ದಾಳೆ ಅಜ್ಜಿ.
ಕೊನೆಗೆ, ಆ ರಾಕ್ಷಸಿ ದೇವಿಯ ಮೂರ್ತಿ ಯಾರಿಗೂ ಸಿಗಬಾರದು ಎನ್ನುವ ಕಾರಣಕ್ಕೆ ಅದನ್ನು ಅಲ್ಲಿಯೇ ಇಟ್ಟಳು. ಆದರೆ ದೇವಿಯ ಬಳೆ ಮತ್ತು ಗೆಜ್ಜೆ ಎಲ್ಲಿದೆ ಎಂದು ತಿಳಿದಿಲ್ಲ. ದೇವಾಲಯದ ಪಕ್ಕದಲ್ಲಿ ಇರುವ ಗುಹೆಯಲ್ಲಿ ದೇವಿಯ ಮೂರ್ತಿ ಇದೆ. ಆದರೆ ಆ ಕಾಣೆಯಾದ ಬಳೆ ಮತ್ತು ಗೆಜ್ಜೆಯನ್ನು ತಂದರೆ ಮಾತ್ರ ಆ ಬಾಗಿಲು ತೆರೆಯುತ್ತದೆ. ಅವುಗಳನ್ನು ದೇವಿಯ ಹತ್ತಿರ ಇಟ್ಟರೆ, ಹಿತಾಳಿಗೆ ಎಚ್ಚರ ಆಗುತ್ತದೆ ಎಂದಿದ್ದಾಳೆ. ಅದಕ್ಕೂ ಇದಕ್ಕೂ ಏನು ಸಂಬಂಧ ಎನ್ನುವ ಗೊಂದಲ ದುರ್ಗಾಳಿಗೆ ಇದ್ದರೂ, ಹಿತಾಳ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಡಲು ರೆಡಿಯಾಗಿದ್ದಾಳೆ. ಮುಂದೇನಾಗುತ್ತದೆ ಎನ್ನುವುದೇ ಈಗಿರುವ ಕುತೂಹಲ.
ಇದನ್ನೂ ಓದಿ: ನಾನೇನೆಂದು ತೋರಿಸ್ತೇನೆ, ಈ ಡ್ರೆಸ್ ಅಷ್ಟೇ ನೋಡ್ಬೇಡಿ ಎನ್ನುತ್ತಲೇ ಲೈವ್ಗೆ ಬಂದ Bigg Boss ಜಾಹ್ನವಿ ಹೇಳಿದ್ದೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.