ಬಿಬಿ ಮೂರನೇ ವಾರದ ಮಾತುಕತೆಯಲ್ಲಿ ಕಿಚ್ಚ ಸುದೀಪ್ ಕೊಂಚ ಗರಂ ಅಗಿದ್ದಾರೆ. ಸಾನ್ಯಾ ರೂಪೇಶ್ ಕ್ಯಾಪ್ಟನ್ ರೂಮ್‌ನಲ್ಲಿ ನಡೆದುಕೊಂಡ ರೀತಿ ಬಗ್ಗೆ ವೀಕ್ಷಕರ ಅಭಿಪ್ರಾಯವನ್ನ ಪ್ರಸ್ತಾಪಿಸಿದ್ದಾರೆ.
ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 9ರ ಸ್ಪರ್ಧಿಗಳು 3ನೇ ವಾರ ಪೂರ್ಣಗೊಳಿಸಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದಾರೆ. ವಾರದ ಮಾತುಕತೆಯಲ್ಲಿ ಕಿಚ್ಚ ಸುದೀಪ್ ಗರಂ ಆಗಿದ್ದಾರೆ. ಸಣ್ಣ ಪುಟ್ಟ ವಿಚಾರಗಳು ವೀಕ್ಷಕರಿಗೆ ತಪ್ಪಾಗಿ ತಲುಪುತ್ತಿರುವ ಕಾರಣ ಚರ್ಚಿಸಿ ಸರಿ ದಾರಿ ತರುವ ಪ್ರಯತ್ನ ಮಾಡಿದ್ದಾರೆ. ಮೂರನೇ ವಾರದ ಅತ್ಯುತ್ತಮ ಆಟಗಾರ ಮೆಡಲ್ ದೀಪಿಕಾ ದಾಸ್ ಮತ್ತು ಕಳಪೆ ಅರುಣ್ ಸಾಗರ್‌ಗೆ ಸೇರಿದೆ. ಆರೋಗ್ಯ ಸಮಸ್ಯೆಯಿಂದ ಅರುಣ್ ಬಳಲುತ್ತಿರುವ ಕಾರಣ ಜೈಲ್ ಸೇರಿಲ್ಲ. ನಾಲ್ಕನೇ ವಾರದ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ ಆಗಿದ್ದಾರೆ.
ಆರ್ಯವರ್ಧನ್ ಕ್ಯಾಪ್ಟನ್ ಟಾಸ್ಕ್ ಮುಗಿದ ಮೇಲೂ ಕ್ಯಾಪ್ಟನ್ ರೂಮ್‌ನಲ್ಲಿ ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಜೊತೆ ವಾರದ ಟಾಸ್ಕ್ ಬಗ್ಗೆ ಚರ್ಚೆ ಮಾಡುತ್ತಾರೆ. ಕ್ಯಾಪ್ಟನ್ ಅವಧಿ ಮುಗಿದ ಮೇಲೆ ಯಾರೂ ಆ ರೂಮಿನಲ್ಲಿ ಇರುವಂತಿಲ್ಲ. ಹಾಸಿಗೆ ಮೇಲೆ ಮೂರವರು ಫನ್ ಟಾಕ್ ಮಾಡುತ್ತಿದ್ದದು ತಪ್ಪು ಎಂದು ಸುದೀಪ್ ಹೇಳಿದ್ದಾರೆ. ಅಲ್ಲದೆ ಈ ಸಮಯದಲ್ಲಿ ಸಾನ್ಯಾ ಮತ್ತು ರೂಪೇಶ್‌ಗೆ ಸಣ್ಣ ವಾರ್ನಿಂಗ್ ಕೊಟ್ಟಿದ್ದಾರೆ.
ಸುದೀಪ್: ಸಂಜೆ ಕ್ಯಾಪ್ಟನ್ ಟಾಸ್ಕ್ ಮುಗಿದ ಮೇಲೆ ಆರ್ಯವರ್ಧನ್ - ರೂಪೇಶ್ ಶೆಟ್ಟಿ ಮತ್ತು ಸ್ಯಾನ್ಯಾ ಸಂಜೆ 5 ಗಂಟೆಯಲ್ಲಿ ಮಾತನಾಡಿಕೊಂಡು ಕುಳಿತಿರುತ್ತೀರಿ. ಕ್ಯಾಪ್ಟನ್ ಟಾಸ್ಕ್ ಬಗ್ಗೆ ತುಂಬಾನೇ ಮಾತನಾಡುತ್ತೀರಿ. ಆರ್ಯವರ್ಧನ್ ವಿಚಾರವನ್ನು ನಾನು ಪಕ್ಕಕ್ಕೆ ಇಡುತ್ತೀನಿ ನೀವು ಆ ಸ್ಥಾನಕ್ಕೆ ಕಷ್ಟ ಪಟ್ಟಿದ್ದೀರಿ. ರೂಪೇಶ್ ಮತ್ತು ಸಾನ್ಯಾ ಆ ರೂಮ್‌ಗೆ ಒಂದು ಗೌರವವಿದೆ. ಪಿನಿಕ್ ಸ್ಪಾಟ್ ಅಲ್ಲ ಅದು. ಇಷ್ಟು ಸೀಸನ್‌ನಲ್ಲಿ ತುಂಬಾ ಜನ ಒಳಗೆ ಬಂದಿದ್ದಾರೆ..ಇಲ್ಲಿ ಸಂಬಂಧ ಬೆಳೆಸಿಕೊಂಡು ಹೊರಗಡೆ ಕಾಪಾಡಿಕೊಳ್ಳುತ್ತಿರುವುದನ್ನು ನೋಡಿದ್ದೀವಿ, ಹೊರಗಡೆ ಬಂದು ಮದುವೆ ಆದವರು ಇದ್ದಾರೆ ಆದರೆ ನಾವು ಎಲ್ಲಿ ಇದ್ದೀವಿ ಹೇಗೆ ಕಾಣಿಸುತ್ತಿದ್ದೀವಿ ಅದು ಮುಖ್ಯ. ಇಲ್ಲಿ ತಬ್ಬಿಕೊಳ್ಳುವುದು ತಪ್ಪಲ್ಲ ಸರ್ ನಮ್ಮ ನಡುವಳಿಕೆ ತಪ್ಪು. ಇಷ್ಟು ದಿನ ರಾತ್ರಿ ಎಲ್ಲರು ಮಲಗಿಕೊಂಡ ಮೇಲೆ ನೀವು ತಬ್ಬಿಕೊಳ್ಳುವುದು ಮಾತನಾಡುವುದು ಏನೇ ಇದ್ದರೂ ನಾವು ಅದನ್ನು ಚರ್ಚೆ ಮಾಡಿಲ್ಲ ಆದರೆ ಕ್ಯಾಪ್ಟನ್ ರೂಮ್‌ನಲ್ಲಿ ನಡೆದ ಘಟನೆ ನಾನು ಒಪ್ಪಿಕೊಳ್ಳುವುದಿಲ್ಲ. ಒಂದು ಸಲ ಓಕೆ ಎರಡು ಸಲ ಓಕೆ ಆದರೆ ಪದೇ ಪದೇ ಅಲ್ಲ... ಇದರಿಂದ ನಮ್ಮ ಬಿಗ್ ಬಾಸ್‌ಗೆ ಕಂಟೆನ್ಟ್ ಸಿಗುತ್ತದೆ ಅಂದುಕೊಂಡರೆ ಈ ಶೋ ಅದಕ್ಕಲ್ಲ ಈ ಮನೆ ಅದಕ್ಕಲ್ಲ. ತಮಷೆಯಲ್ಲಿ ಹೇಳುತ್ತೀವಿ...ಇಷ್ಟು ಸೀಸನ್‌ನಲ್ಲಿ ನಾನು ತುಂಬಾ ಜನರು ಬಂದಿರುವುದನ್ನು ನೋಡಿದ್ದೀವಿ. ಅವರ ಸಂಬಂಧಕ್ಕೆ ಒಂದು ಘನತೆ ಇತ್ತು ಗೌರವ ಇತ್ತು...
BBK9; ಬಿಗ್ ಮನೆಯಲ್ಲಿ ಮಕ್ಕಳದ್ದೇ ದರ್ಬಾರು, ಮಗುವನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ಮಯೂರಿ
ಸಾನ್ಯಾ: Too much of comfort zone exposed without conciousness. ಆ ರೂಮ್‌ಗೆ ಇರುವ ಗೌರವವನ್ನು ನಾವು ನಡೆದುಕೊಂಡಿರುವ ರೀತಿ ಇಂದ ಕಡಿಮೆ ಮಾಡಿರಬಹುದು ಇನ್ನು ಮುಂದೆ ನಾನು ಇದನ್ನು ಗಮನಿಸಿ ಸರಿಯಾಗಿ ಇರ್ತೀನಿ ಅಂತ ಮಾತು ಕೊಡುತ್ತೀನಿ.
ರೂಪೇಶ್: ಶುದ್ಧ ಪ್ರೀತಿ ಬಗ್ಗೆ ನಾನು ಮಾತನಾಡುವವನು ...ನನಗೆ ಯಾವುದೇ ಕೆಟ್ಟ ಉದ್ದೇಶ ಇರುವುದಿಲ್ಲ.
ಸುದೀಪ್: ನಾವು ಇಲ್ಲಿ ಉದೇಶದ ಬಗ್ಗೆ ಮಾತನಾಡುತ್ತಿಲ್ಲ. ನಮಗೆ ಉದೇಶ ಏನೆಂದು ಗೊತ್ತಿರುವ ಕಾರಣಕ್ಕೆ ಈ ವಿಚಾರಗಳನ್ನು ಮಾತನಾಡಲು ಇಷ್ಟು ದಿನ ತೆಗೆದುಕೊಂಡಿರುವುದು. ಅವತ್ತು ಆ ಕ್ಷಣ ಸರಿಯಾಗಿರಲಿಲ್ಲ. ಇದು ನನ್ನ ಬಾಯಿಂದ ಬಂದಿರುವ ಮಾತಲ್ಲ ಕೋಟಿ ವೀಕ್ಷಕರು ನೋಡುತ್ತಿದ್ದಾರೆ ಅವರ ಮಾತುಗಳು ಸಲಹೆಗಳನ್ನು ನಿಮ್ಮ ಮುಂದೆ ಇಡುವುದು ನನ್ನ ಇದ್ದೇಶ.
ರೂಪೇಶ್: ಆ ಕ್ಷಣ ನಾವು ತಬ್ಬಿಕೊಂಡಿದ್ದು ಸತ್ಯ ರೂಮ್‌ನ ಸೀರಿಯಸ್‌ನೆಸ್ ಅರ್ಥ ಮಾಡಿಕೊಂಡಿರಲಿಲ್ಲ ಅಲ್ಲಿ ಬಾತ್‌ರೂಮ್‌ಗೆ ಕ್ಯೂ ಇತ್ತು ಹಾಗಾಗಿ ಅಲ್ಲಿ ಮಾತನಾಡುತ್ತಾ ಕುಳಿತುಕೊಂಡಿದ್ದು. ನನಗೆ ಯಾವತ್ತೂ ಈ ರೀತಿ ಕ್ಯಾರೆಕ್ಟರ್ ಬಿಲ್ಡ್ ಮಾಡುವುದಕ್ಕೆ ಇಷ್ಟವಿಲ್ಲ. ನಮ್ಮ ನಡುವೆ ಇರುವ ಸ್ನೇಹ ನಮ್ಮ ನಡುವೆ ಇರುವ ಕಂಫರ್ಟ್ ಝೋನ್‌ನಲ್ಲಿ ಮಾತನಾಡುವಾಗ ಹತ್ತಿರ ಬಂದಿರುತ್ತೀವಿ.
BBK9 ಅನುಪಮಾ ಗೌಡ ಸ್ವಿಮ್ ಸ್ಯೂಟ್ ಫೋಟೋ ವೈರಲ್; ಆಟ ಈಗ ಶುರು ಎಂದ ನೆಟ್ಟಿಗರು
ಸುದೀಪ್: ಒಬ್ಬರಿಗೆ ಹತ್ತಿರ ಬಂದಿರುವುದು ತಪ್ಪಲ್ಲ ಒಬ್ಬರನ್ನು ತಬ್ಬಿಕೊಳ್ಳುವುದು ತಪ್ಪಲ್ಲ. ತಬ್ಬಿಕೊಳ್ಳುವುದು ತಪ್ಪು ಅನ್ನೋದು ಆಗಿದ್ದರೆ ಅದನ್ನು ಹೇಳುವುದಕ್ಕೆ ನಮಗೆ ಇಷ್ಟು ಸೀಸನ್ ಬೇಕಿರಲಿಲ್ಲ. ಹೊರಗಿನ ಜನರಿಗೆ ದೃಷ್ಠಿಕೋಣ ಚೆನ್ನಾಗಿದೆ, ಚೆನ್ನಾಗಿ ಇರಲಿಲ್ಲ ಅಂದಿದ್ದರೆ ಈ ಪ್ರಸ್ತಾಪ ಬರುತ್ತಿರಲಿಲ್ಲ. ರಿಲೇಷಬ್‌ಶಿಪ್ ಅಂದ್ರೆನೇ ಬಿಗ್ ಬಾಸ್ ಇಲ್ಲಿ ವೈರತ್ವನೂ ಒಂದು ರಿಲೇಷನ್‌ಶಿಪ್ ಸ್ನೇಹನೂ ರಿಲೇಷನ್‌ಶಿಪ್. ರಿಲೇಷನ್‌ಶಿಪ್‌ನ ನಿಭಾಯಿಸಿದ್ದವರು ನಿಮ್ಮ ಪಕ್ಕದಲ್ಲಿ ಇದ್ದಾರೆ. ಅವತ್ತು ನಾವು ಯಾವತ್ತೂ ಇದರ ಬಗ್ಗೆ ಮಾತನಾಡಿರಲಿಲ್ಲ ನೀವು ಡಿಸ್ ಕಂಪೂರ್ಟ್‌ಗೆ ಹೋಗೇಬೇಕು ಅನ್ನೋದು ನಮ್ಮ ಇದ್ದೇಶ ಅಲ್ಲ.
ರೂಪೇಶ್: ಕಳೆದ ಸಲ ಒಂದು ಹುಡುಗಿ ಜೊತೆ ಬೆಡ್ ಮೇಲೆ ಮಲಗಬೇಕು ಅನ್ನೋ ವಿಚಾರ ಬಂದಾಗ ನಾನು ಒಪ್ಪಿಕೊಂಡಿರಲಿಲ್ಲ ಸರ್. ನನ್ನ ತಾಯಿಗಿಂತ ದೇವರು ಮತ್ತೊಬ್ಬರಿಲ್ಲ ನಾನು ತಪ್ಪಾಗಿ ಕಾಣಿಸಿಕೊಂಡಿದ್ದರೆ ನಾನು ಇವತ್ತೇ ಬಿಗ್ ಬಾಸ್ ಮನೆಯಿಂದ ಹೊರ ನಡೆಯಲು ನಾನು ಸಜ್ಜಾಗಿರುವೆ. ಏನೇ ಆದರೂ ಅದು ನನಗೆ ತಪ್ಪು. ಈ ರೀತಿ ಮಾತುಗಳನ್ನು ಕೇಳಿಸಿಕೊಂಡು ಇಲ್ಲಿ ನನಗೆ ಬದುಕಲು ಅಗುವುದಿಲ್ಲ.