ನನ್ನ ಮಗಳಿಗೆ ಹೆಸರಿಟ್ಟ ಚಂದನ್, ತಿಳಿಯದೆ ಮಾಡಿದ ತಪ್ಪಿಗೆ ಕ್ಷಮಿಸಿ: ಬಿಗ್ ಬಾಸ್ ದಿವಾಕರ್‌

Suvarna News   | Asianet News
Published : Sep 17, 2020, 12:41 PM ISTUpdated : Sep 17, 2020, 01:02 PM IST
ನನ್ನ ಮಗಳಿಗೆ ಹೆಸರಿಟ್ಟ ಚಂದನ್, ತಿಳಿಯದೆ ಮಾಡಿದ ತಪ್ಪಿಗೆ ಕ್ಷಮಿಸಿ: ಬಿಗ್ ಬಾಸ್ ದಿವಾಕರ್‌

ಸಾರಾಂಶ

ಖಾಸಗಿ ವೆಬ್‌ಸೈಟ್‌ನ ಲೈವ್‌ ಚಾಟ್‌ನಲ್ಲಿ ಮಾತನಾಡಿದ ದಿವಾಕರ್‌, ಚಂದನ್ ಶೆಟ್ಟಿ ಹಾಡುಗಳ ಬಗ್ಗೆ ಮಾತನಾಡಿದ್ದಾರೆ.   

ಬಿಗ್ ಬಾಸ್‌ ಸೀಸನ್‌ 5 ಸ್ಪರ್ಧಿ ದಿವಾಕರ್‌ ಹಲವು ದಿನಗಳ ನಂತರ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದಾರೆ. ಲೈವ್‌ ಚಾಟ್‌ ಮೂಲಕ ಅಭಿಮಾನಿಗಳ ಜೊತೆ ಮಾತನಾಡಿ ತಮ್ಮ ಆಪ್ತ ಗೆಳೆಯ ಚಂದನ್‌ ಶೆಟ್ಟಿ ಮಾಡಿಕೊಂಡ ಎಡವಟ್ಟಿನ ಬಗ್ಗೆ ಅಭಿಮಾನಿಗಳಿಗೆ ಉತ್ತರಿಸಿದ್ದಾರೆ. 

'ಗುಲಾಲ್‌.ಕಾಂನ'ಲ್ಲಿ ಬಿಗ್ ಬಾಸ್‌ ದಿವಾಕರ!

ಬಿಗ್ ಬಾಸ್‌ ಮನೆ ಒಳಗೂ ಹಾಗೂ ಹೊರಗೂ ದಿವಾಕರ್‌ಗೆ ಆಪ್ತವಾಗಿದ್ದವರೇ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ. ರಿಯಾಲಿಟಿ ಶೋ ಮುಗಿದ ನಂತರ ಸೇಲ್ಸ್‌  ಕೆಲಸದಲ್ಲಿ ತೊಡಗಿಸಿಕೊಂಡ ದಿವಾಕರ್‌ಗೆ ಅದೆಷ್ಟೋ ವಿಚಾರಗಳಲ್ಲಿ ಚಂದನ್ ಸಹಾಯ ಮಾಡಿದ್ದಾರಂತೆ. ಅಲ್ಲದೇ ತಮ್ಮ ಮಗಳಿಗೆ ಹೆಸರಿಟ್ಟಿದ್ದು, ಚಂದನಾ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. 

ಚಂದನ್ ಶೆಟ್ಟಿ ಕೋಲುಮಂಡೆ ಹಾಡನ್ನು ಮೆಚ್ಚಿಕೊಂಡ ದಿವಾಕರ್, ನೃತ್ಯ ಸಂಯೋಜನೆಯಲ್ಲಿ ಎಡವಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಹಲವು ವರ್ಷಗಳಿಂದ ಜೊತೆಗಿರುವ ದಿವಾಕರ್‌ ಚಂದನ್ ಉದ್ದೇಶ ಪೂರ್ವಕವಾಗಿ ಯಾವುದೇ ತಪ್ಪು ಕೆಲಸ ಮಾಡಿರುವುದಿಲ್ಲ ಎಂದಿದ್ದಾರೆ.

ಚಂದನ್‌ ಶೆಟ್ಟಿ ವಿರುದ್ಧ ಮತ್ತೊಂದು ದೂರು 

ಚಂದನ್ ಮಾಡಿರುವ ತಪ್ಪಿಗೆ ನಾನು ಕ್ಷಮೆ ಕೇಳುತ್ತೇನೆ ಹಾಗೂ ಇಂದು (ಸೆಪ್ಟೆಂಬರ್ 17) ಚಂದನ್ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆಯನ್ನು ಕೊಡಲು ರೆಡಿ ಮಾಡಿಕೊಂಡಿದ್ದಾರೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಲಕ್ಷಾಂತರ ಮಂದಿ ಹೃದಯ ಕದ್ದ ಸೀತಾರಾಮ 'ಸಿಹಿ' ಇವಳೇನಾ? ಫ್ಯಾನ್ಸ್​ ಗರಂ- ತಿರುಗಿಬಿದ್ದದ್ದು ಯಾಕೆ?
ಒಂದೇ ಪ್ರಶ್ನೆ, ಅಲ್ಲೇ ಡ್ರಾ ಅಲ್ಲೇ ಬಹುಮಾನ; Rakshita Shetty ಮುಖವಾಡ ಕಳಚೋಯ್ತು