ಡ್ರಗ್ಸ್ ಪೆಡ್ಲರ್‌ ಜೊತೆ 'ರಾಧಾ ರಮಣ' ಶ್ವೇತಾ ಪಾರ್ಟಿ; ಕಷ್ಟಪಟ್ಟು ಸಂಪಾದಿಸಿದ ಹೆಸರಿನ ಬಗ್ಗೆ ಸ್ಪಷ್ಟನೆ

Suvarna News   | Asianet News
Published : Sep 15, 2020, 01:44 PM IST
ಡ್ರಗ್ಸ್ ಪೆಡ್ಲರ್‌ ಜೊತೆ 'ರಾಧಾ ರಮಣ' ಶ್ವೇತಾ ಪಾರ್ಟಿ; ಕಷ್ಟಪಟ್ಟು ಸಂಪಾದಿಸಿದ ಹೆಸರಿನ ಬಗ್ಗೆ ಸ್ಪಷ್ಟನೆ

ಸಾರಾಂಶ

ಡ್ರಗ್ಸ್ ಮಾಫಿಯಾದಲ್ಲಿ ಹಿರಿತೆರೆ ಮಾತ್ರವಲ್ಲದೇ ಕಿರುತೆರೆ ನಟ-ನಟಿಯರ ಹೆಸರೂ ಕೇಳಿ ಬರುತ್ತಿವೆ. ಪೆಡ್ಲರ್‌  ಶೇಖ್ ಫಾಜಿಲ್‌ ಜೊತೆ ರಾಧಾ ರಮಣ ಖ್ಯಾತಿ ಶ್ವೇತಾ ಪ್ರಸಾದ್‌ ಕಾಣಿಸಿಕೊಂಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಚಾರದ ಬಗ್ಗೆ ಶ್ವೇತಾ ಇನ್‌ಸ್ಟಾಗ್ರಾಂನಲ್ಲಿ ಸ್ಟೋರೀಸ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.  

ಗಂಧದ ಗುಡಿಯಲ್ಲಿ ಗಾಂಜಾ ಘಾಟು ಹೆಚ್ಚಾಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಎಲ್ಲೋ ಕಳೆದುಹೋಗಿದ್ದ, ಫೋಟೋಗಳು ಹರಿದಾಡಲು ಪ್ರಾರಂಭಿಸಿವೆ. ಅಲ್ಲದೇ ಯಾವುದೇ ನಿಖರವಾಗ ಮಾಹಿತಿ ಕಲೆ ಹಾಕದ ವಿಚಾರಗಳನ್ನು ಉಲ್ಲೆಖ ಮಾಡುತ್ತಿರುವ  ಬಗ್ಗೆ ಕಿರುತೆರೆ ನಟಿ ಶ್ವೇತಾ ಪ್ರಸಾದ್ ಗರಂ ಆಗಿದ್ದಾರೆ. 

ರಾಧಾ ಮಿಸ್ - ಆರ್ ಜೆ ಪ್ರದೀಪ್ ಲವ್ ಸ್ಟೋರಿ ಹೇಳುತ್ತೆ ಫೋಟೋಸ್!

ಕೆಲವು ದಿನಗಳಿಂದ ಡ್ರಗ್ಸ್ ಪೆಡ್ಲರ್‌ ಶೇಖ್ ಫಾಜಿಲ್‌ ಜೊತೆ ಕಿರುತೆರೆ ನಟಿ-ನಟಿಯರ ಕಾಣಿಸಿಕೊಂಡಿರುವ ಫೋಟೊ ವೈರಲ್ ಆಗುತ್ತಿದೆ. ಮಾಧ್ಯಮಗಳಲ್ಲಿ ಆ ಫೋಟೋಗಳನ್ನು ಬಳಸಿಕೊಳ್ಳಲಾಗಿದೆ. ಆದರೆ ಯಾವುದೇ ಮಾಹಿತಿ ಇಲ್ಲದೇ ವಿಚಾರಗಳನ್ನು ತಪ್ಪಾಗಿ ತೋರಿಸಿರುವುದುರ ಬಗ್ಗೆ ರಾಧಾ ಮಿಸ್ ಅಲಿಯಾಸ್ ಶ್ವೇತಾ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಶ್ವೇತಾ ಹೇಳಿಕೆ:
'ಮಾಧ್ಯಮಗಳಲ್ಲಿ ನನ್ನ ಫೋಟೋ ಹರಿದಾಡುತ್ತಿದೆ ಎಂದು ತಿಳಿದಾಗ ನನಗೆ ನಗು ಬಂತು. ನನ್ನನ್ನು ತಪ್ಪಾಗಿ ತೋರಿಸಲಾಗಿತ್ತು. ಚೇಪ್‌ ಪದಗಳನ್ನು ಬಳಸಲಾಗಿತ್ತು. ಆದರೆ ನಾನು ಪ್ರತಿಕ್ರಿಯೆ ನೀಡದೇ ಸುಮ್ಮನಿರುವೆ. ಇಲ್ಲಿ ಯಾರೂ ಪರ್ಫೆಕ್ಟ್‌ ಅಲ್ಲ.  ಹೌದು ನಾನು ಪರ್ಫೆಕ್ಟ್‌ ಆಲ್ಲ. ಆದರೆ ಇಲ್ಲಿ ಪರ್ಫೆಕ್ಷನ್‌ ತಪ್ಪು. ನಾನು ನನ್ನ ಜೀವನದಲ್ಲಿ ಇದುವರೆಯೂ Illegal ಎನ್ನುವಂಥ ಯಾವುದೇ ಕೆಲಸವನ್ನೂ ಮಾಡಿಲ್ಲ. ಟ್ರಾಫಿಕ್ ಟೆಕೆಟನ್ನೂ ತಪ್ಪದೇ ಪೇ ಮಾಡಿದ್ದೇನೆ. ಶ್ರಮದಿಂದ ದುಡಿದ ಗೌರವವನ್ನು ಹಾಳು ಮಾಡಬೇಡಿ. ಸತ್ಯವನ್ನು ತಿಳಿದುಕೊಳ್ಳಿ. ಸೈಲೆಂಟ್ ಆಗಿರುವುದು ನಮ್ಮ ವೀಕ್‌ನೆಸ್‌ ಅಲ್ಲ. ಆದರೆ, ಬಿರುಗಾಳಿ ಬೀಸುವ ಮುನ್ನ ಇರೋ ನೀರವತೆ ಅದು. ಮೌನವೇ ಮತ್ತಷ್ಟು ನಮ್ಮನ್ನು ಸ್ಟ್ರಾಂಗ್ ಮಾಡುತ್ತದೆ. ನನ್ನ ಮೇಲೆ ನಂಬಿಕೆ ಇಟ್ಟಿರುವವರಿಗೆ ತುಂಬಾ ಥ್ಯಾಂಕ್ಸ್,' ಎಂದು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದಿದ್ದಾರೆ.

ಶ್ವೇತಾ ಜೊತೆ 'ಗಟ್ಟಿಮೇಳ' ನಟ ರಕ್ಷಕ್‌ ಹಾಗೂ 'ಅಗ್ನಸಾಕ್ಷಿ' ನಟ ವಿಜಯ್ ಸೂರ್ಯ ಸಹ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.

ರಾಗಿಣಿ 14 ದಿನಗಳ ಕಾಲ ಜೈಲಿಗೆ:
ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ ಸೇರಿದಂತೆ ಡ್ರಗ್ಸ್‌ ಮಾರಾಟ ಪ್ರಕರಣದ ಐದು ಮಂದಿ ಆರೋಪಿಗಳನ್ನು ನಗರದ ಒಂದನೇ ಎಸಿಎಂಎಂ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ನೀಡಿದೆ. ತನ್ಮೂಲಕ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ನಟಿಯೊಬ್ಬಳು ಡ್ರಗ್‌ ಮಾರಾಟ ಜಾಲದ ಆರೋಪ ಹೊತ್ತು ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹ ಸೇರಿದಂತಾಗಿದೆ.

ರಾತ್ರಿ ಜೈಲೂಟ, ನಿದ್ದೆಯಿಲ್ಲ; ಸೆಂಟ್ರಲ್‌ ಜೈಲಿನಲ್ಲಿ ಮೌನಕ್ಕೆ ಜಾರಿದ ಕೈದಿ ನಂ. 6604

ಜೈಲು ಸೇರಿದ ಬೆನ್ನಲ್ಲೇ ರಾಗಿಣಿಗೆ ‘ವಿಚಾರಣಾಧೀನ ಕೈದಿ ಸಂಖ್ಯೆ-8912’ ನೀಡಲಾಗಿದೆ. ಇದೇ ವೇಳೆ, ರಾಗಿಣಿ ಅವರೊಂದಿಗೆ ಇತರ ಆರೋಪಿಗಳಾದ ನಿಯಾಜ್‌, ಪ್ರಶಾಂತ್‌ ರಂಕ, ಲೂಮ್‌ ಪೆಪ್ಪರ್‌ ಮತ್ತು ರಾಹುಲ್‌ ತೋನ್ಸೆ ಅವರನ್ನು ಸಹ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಏತನ್ಮಧ್ಯೆ ಮತ್ತೊಬ್ಬ ನಟಿ ಸಂಜನಾ ಗಲ್ರಾನಿಯನ್ನು ಹೆಚ್ಚಿನ ವಿಚಾರಣೆಗೆ ಮುಂದಿನ ಮೂರು ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿ ಇದೇ ನ್ಯಾಯಾಲಯ ಅದೇಶಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅನೇಕರ ಆಸೆ, ಹಾರೈಕೆ ಈಡೇರಿತು; Anchor Anushree-Roshan ಜೋಡಿಗೆ ಯಾರೂ ದೃಷ್ಟಿ ಹಾಕ್ಬೇಡಿ..ಪ್ಲೀಸ್
Bigg Boss 19 Winner ಘೋಷಣೆ; ಮೊದಲೇ ಪ್ರೀ ಪ್ಲ್ಯಾನ್‌ ಮಾಡಿದ್ದಕ್ಕೆ ತಿರುಗಿಬಿದ್ದ ಸಹಸ್ಪರ್ಧಿಗಳು!