ಬಿಗ್ಬಾಸ್ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್: ದೊಡ್ಮನೆಯಲ್ಲಿ ಉಳಿದುಕೊಳ್ಳಲು ಫ್ಯಾನ್ಸ್ಗೂ ಅವಕಾಶ ಸಿಗುವ ಸಾಧ್ಯತೆ ಇದೆ. ಇದರ ಡಿಟೇಲ್ಸ್ ಇಲ್ಲಿದೆ..
ಬಿಗ್ಬಾಸ್ ಭಾಷೆ ಯಾವುದೇ ಇದ್ದರೂ, ಅದಕ್ಕೆ ಅದರದ್ದೇ ಆದ ಅಭಿಮಾನಿಗಳು ಇದ್ದಾರೆ. ಬಹುತೇಕ ಎಲ್ಲಾ ಭಾಷೆಯ ಬಿಗ್ಬಾಸ್ಗಳು ಟಿಆರ್ಪಿಯಲ್ಲಿ ನಂಬರ್ 1ನೇ ಸ್ಥಾನದಲ್ಲಿಯೇ ಇರುವುದು ಇದರ ಅಭಿಮಾನಿಗಳ ಕುರಿತು ತಿಳಿಯುತ್ತದೆ. ಬಿಗ್ಬಾಸ್ ಮನೆಯಲ್ಲಿ ಪ್ರೀತಿ-ಪ್ರೇಮ ಒಂದಿಷ್ಟು ಅಶ್ಲೀಲ ಎಲ್ಲವೂ ಕಾಮನ್ ಆಗಿವೆ. ಇನ್ನು ಕಾದಾಟ, ಜಗಳಾ, ಹೊಡೆದಾಟ, ಕಿರುಚಾಟಕ್ಕಂತೂ ಕಮ್ಮಿಯೇನಿಲ್ಲ. ಈ ದೊಡ್ಮನೆಯಲ್ಲಿ ನಡೆಯುವ ಹಲವು ಘಟನೆಗಳು ಸ್ಕ್ರಿಪ್ಟೆಡ್ ಎಂದೂ ಬಿಗ್ಬಾಸ್ ಮನೆಯಿಂದ ಹೊರಕ್ಕೆ ಬಂದವರು ಹೇಳುವುದು ಇದೆ. ಪ್ರೀತಿ ಪ್ರೇಮ ಎಲ್ಲಾ ಇಲ್ಲದೇ ಹೋದರೆ ಬಿಗ್ಬಾಸ್ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಸಹಜ ಎನ್ನುವ ಕಾರಣಕ್ಕೆ ಲವ್, ಜಗಳ, ಒಂದಿಷ್ಟು ವಿವಾದ, ಮನೆಯವರನ್ನು ನೆನೆದು ಕಣ್ಣೀರು ಹಾಕುವುದು... ಎಲ್ಲವನ್ನೂ ಮೊದಲೇ ಸ್ಕ್ರಿಪ್ಟ್ ಮಾಡಿ ಕೊಡಲಾಗುತ್ತದೆ ಎಂದೂ ಹೇಳಲಾಗುತ್ತದೆ. ಆರೋಪಗಳು ಏನೇ ಇರಲಿ, ಒಟ್ಟಿನಲ್ಲಿ ಬೈದುಕೊಳ್ಳುತ್ತಲೇ ಇವುಗಳನ್ನು ಎಂಜಾಯ್ ಮಾಡುವ ದೊಡ್ಡ ವರ್ಗವೇ ಇದೆ. ಸಾಮಾಜಿಕ ಜಾಲತಾಣದಲ್ಲಿ ಈ ರಿಯಾಲಿಟಿ ಷೋ ಬಗ್ಗೆ ಅಸಹ್ಯ ಎಂದು ಕಮೆಂಟ್ ಮಾಡುವವರಿಗೇನೂ ಕಮ್ಮಿ ಇಲ್ಲ. ಇದರ ವಿರುದ್ಧ ದಿನವೂ ಸಾಕಷ್ಟು ಪೋಸ್ಟ್ಗಳು ಶೇರ್ ಆಗುತ್ತಲೇ ಇರುತ್ತವೆ. ಇದೊಂದು ಅತ್ಯಂತ ಕಳಪೆ ಷೋ ಎಂದು ಬೈಯುವ ದೊಡ್ಡ ವರ್ಗವೇ ಇದೆ. ಆದರೆ ಅಸಲಿಯತ್ತು ಏನೆಂದರೆ ಹೀಗೆ ಬೈದುಕೊಳ್ಳಲಾದರೂ ಇವರಿಗೆ ಈ ಷೋ ನೋಡಬೇಕು!
ಇಂಥ ಕಾಂಟ್ರವರ್ಸಿಗಳಲ್ಲಿ ಅತಿಹೆಚ್ಚು ಕಾಂಟ್ರವರ್ಸಿಯಾಗುವುದು ಬಿಗ್ಬಾಸ್ ಹಿಂದಿಯಲ್ಲಿ. ಇದೀಗ 17ನೇ ಸೀಸನ್ ನಡೆಯುತ್ತಿದ್ದು, ಇದನ್ನು ಎಂದಿನಂತೆ ನಟ ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದಾರೆ. ಬಿಗ್ಬಾಸ್ ಸೀನ್ 17 ಶುರುವಾಗಿ ಹಲವು ವಾರಗಳೇ ಕಳೆದಿದ್ದು, ಇನ್ನೇನು ಫಿನಾಲೆ ಹತ್ತಿರವಾಗಿದೆ. ಅಂತಿಮ ಕ್ಷಣಗಳು ಹತ್ತಿರವಾಗುತ್ತಿದ್ದಂತೆಯೇ ಒಳಗಡೆ ಇರುವ ಸ್ಪರ್ಧಿಗಳ ಟಾಸ್ಕ್ ಭರಾಟೆ, ತಾವೇ ಗೆಲ್ಲಬೇಕು ಎನ್ನುವ ಛಲ ಹೆಚ್ಚುತ್ತಲೇ ಸಾಗಿದೆ. ಈ ಸಲದ ಬಿಗ್ ಬಾಸ್ ಉಳಿದ ಸೀಸನ್ಗಿಂತ ವಿಭಿನ್ನವಾಗಿದ್ದು, ಇತರ ಸ್ಪರ್ಧಿಗಳ ಜೊತೆಗೆ ಗಂಡ ಹೆಂಡತಿ ಕೂಡ ಸ್ಪರ್ಧಿಗಳಾಗಿ ಮನೆಗೆ ಕಾಲಿರಿಸಿದ್ದಾರೆ.
ಬಿಗ್ಬಾಸ್ನಲ್ಲಿ ಪತಿಗೆ ಚಪ್ಪಲಿ ಎಸೆದು, ಈಗ ಮುದ್ದಾಡ್ತಿರೋ ಅಂಕಿತಾ: ಥೂ ನಿನ್ ಜನ್ಮಕ್ಕೆ ಅಂತಿದ್ದಾರೆ ನೆಟ್ಟಿಗರು!
ದಹಾಗೆ ಬಿಗ್ಬಾಸ್ನಲ್ಲಿ ವೈಲ್ಡ್ಕಾರ್ಡ್ ಎಂಟ್ರಿ ಎಂದು ಒಂದಿಷ್ಟು ಅತಿಥಿಗಳು ಆಗಮಿಸುವುದು ಎಲ್ಲರಿಗೂ ತಿಳಿದೇ ಇದೆ. ಇಂಥ ಒಂದು ಅವಕಾಶ ತಮಗೂ ಸಿಕ್ಕರೆ ಹೇಗಿರುತ್ತದೆ ಎಂದು ಕನಸು ಕಾಣುತ್ತಿದ್ದಾರೆ. ಹಲವು ಅಭಿಮಾನಿಗಳಂತೂ ತಮ್ಮ ನೆಚ್ಚಿನ ಸ್ಪರ್ಧಿಯನ್ನು ನೋಡಲು ತುದಿಗಾಲಿನಲ್ಲಿ ನಿಲ್ಲುವುದು ಇದೆ. ಒಮ್ಮೆ ತಮಗೂ ಬಿಗ್ಬಾಸ್ ಮನೆಗೆ ಹೋಗಲು ಅವಕಾಶ ಸಿಕ್ಕರೆ ಹೇಗೆ ಎಂದು ಕಾತರರಾಗಿರುವವರೇ ಹೆಚ್ಚು. ಅಂಥವರಿಗಾಗಿ ಹಿಂದಿಯ ಬಿಗ್ಬಾಸ್ ಬಹುದೊಡ್ಡ ಸರ್ಪ್ರೈಸ್ ನೀಡಿದೆ.
ಇದೇ ಮೊದಲ ಬಾರಿಗೆ ಅಭಿಮಾನಿಗಳನ್ನು ಬಿಗ್ಬಾಸ್ ಮನೆಗೆ ಬಿಡಲು ಸಲ್ಮಾನ್ ಖಾನ್ ನಿರ್ಧರಿಸಿದ್ದಾರೆ. ಈ ಬಗ್ಗೆ ಬಿಗ್ಬಾಸ್ ಜೊತೆ ಮಾತನಾಡುವುದಾಗಿ ಅವರು ತಿಳಿಸಿದ್ದಾರೆ. ಫಿನಾಲೆಯ ಬಳಿಕ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಳ್ಳಲು ಅಭಿಮಾನಿಗಳಿಗೆ ಅವಕಾಶ ನೀಡುವಂತೆ ಅವರು ಕೋರಿಕೊಂಡಿದ್ದಾರೆ. ಯಾವಾಗ ಏನು ಎಂಬ ಬಗ್ಗೆ ಇನ್ನೂ ಬಹಿರಂಗಗೊಳ್ಳಲಿಲ್ಲ. ಎಷ್ಟು ಮಂದಿಗೆ ಈ ಅವಕಾಶ ಸಿಗಲಿದೆ ಎನ್ನುವುದು ಇನ್ನೂ ಹೇಳಲಿಲ್ಲ. ಒಟ್ಟಿನಲ್ಲಿ ಬಿಗ್ಬಾಸ್ ಮನೆಯನ್ನು ನೋಡಲು, ಸ್ಪರ್ಧಿಗಳನ್ನು ಮೀಟ್ ಆಗಲು ಬಯಸುತ್ತಿರುವ ಅಭಿಮಾನಿಗಳ ಪೈಕಿ ಕೆಲವರಿಗೆ ಈ ಅವಕಾಶ ಸಿಗಲಿದೆ. ಸಲ್ಮಾನ್ ಖಾನ್ ಅವರ ಕೋರಿಕೆಯನ್ನು ಬಿಗ್ಬಾಸ್ ಈಡೇರಿಸುವುದೇ ನೋಡಬೇಕಿದೆ.
ಅಭಿಷೇಕ್ ಕಬಡ್ಡಿ ಪಂದ್ಯದಲ್ಲಿ ಬಚ್ಚನ್ ಕುಟುಂಬ: ನಿಜ ಹೇಳ್ರೋ... ತಲೆ ಕೆರೆದುಕೊಳ್ತಿರೋ ಅಭಿಮಾನಿಗಳು!
Sallu Bhai Ne Baat Sunli Apni 👌👌 https://t.co/b1r6HDr81h
— Elvish Yadav (@ElvishYadav)