
ನವದೆಹಲಿ (ನ. 29): ಪ್ರಸಕ್ತ ವರ್ಷ ವಿವಾದಗಳಿಂದಾಗಿಯೇ ಭರ್ಜರಿ ಯಶಸ್ಸು ಕಾಣುತ್ತಿರುವ ಹಿಂದಿ ಅವತರಣಿಕೆಯ ಬಿಗ್‌ಬಾಸ್ ಕಾರ್ಯಕ್ರಮವನ್ನು ಮತ್ತೆ 5 ವಾರ ವಿಸ್ತರಿಸಲಾಗಿದೆ.
ಪೂರ್ವ ನಿಯೋಜಿತ ಶೂಟಿಂಗ್ ಹಿನ್ನೆಲೆಯಲ್ಲಿ ಮೊದಲಿಗೆ ಕಾರ್ಯಕ್ರಮದಲ್ಲಿ ಮುಂದುವರೆಯಲು, ನಿರೂಪಕ ಸಲ್ಮಾನ್ ನಿರಾಕರಿಸಿದ್ದರೂ, ಅವರಿಗೆ ಭರ್ಜರಿ ವೇತನ ಏರಿಕೆ ಆಫರ್ ಮೂಲಕ ಮನವೊಲಿಸುವಲ್ಲಿ ಚಾನೆಲ್ ಯಶಸ್ವಿಯಾಗಿದೆ ಎನ್ನಲಾಗಿದೆ.
ನಾನೇಕೆ ಈಗ ಬೋಲ್ಡ್ ಡ್ರೆಸ್ ಹಾಕ್ತೇನೆ, ತಿರುಗಿ ಬಂದ ಕೊಟ್ಟೂರು ಕೊಟ್ಟ ವಿಚಿತ್ರ ಕಾರಣ!
ಈ ಮೊದಲಿನ ವರದಿಗಳ ಪ್ರಕಾರ ಪ್ರತಿ ವಾರಾಂತ್ಯದ ಎರಡು ದಿನಗಳ ಶೂಟಿಂಗ್‌ಗೆ ಸಲ್ಮಾನ್ 13 ಕೋಟಿ ರು. ಪಡೆಯುತ್ತಿದ್ದರು. ಅದನ್ನೀಗ 15 ಕೋಟಿಗೆ ಏರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗ್ರಾಂಡ್ ಫಿನಾಲೆ ಫೆಬ್ರವರಿಯಲ್ಲಿ ಪ್ರಸಾರವಾಗಲಿದೆ. ಈ ಮೊದಲು ಸಲ್ಮಾನ್ ಖಾನ್‌ಗೆ ಪ್ರತಿ ಎಪಿಸೋಡ್‌ಗೆ 6.5 ಕೋಟಿ ಪಡೆಯುತ್ತಿದ್ದರು. ಈಗ ಅದನ್ನು ಹೆಚ್ಚಿಸಿದ್ದು 8.5 ಕೋಟಿಗೆ ಹೆಚ್ಚಿಸಲಾಗಿದೆ.
ರೊಮ್ಯಾಂಟಿಕ್ ಸ್ಟೋರಿ, ಮಾಡರ್ನ್ ಲುಕ್ಕು ರಾಧಿಕಾ ನಾರಾಯಣ್!
ಪ್ರತಿಬಾರಿಯೂ ಬಿಗ್‌ಬಾಸ್‌ಗೆ ಬರಲು ಸಲ್ಮಾನ್ ಖಾನ್ ಒಪ್ಪುವುದಿಲ್ಲ. ಆಗ ವಾಹಿನಿ ಅನಿವಾರ್ಯವಾಗಿ ಸಂಭಾವನೆಯನ್ನು ಹೆಚ್ಚಿಸುತ್ತದೆ. ಬೇರೆ ಎಲ್ಲಾ ಭಾಷೆಗಳ ಬಿಗ್ ಬಾಸ್‌ಗೆ ಹೋಲಿಸಿದರೆ ಸಲ್ಮಾನ್ ಖಾನ್ ಅತೀ ಹೆಚ್ಚು ಸಂಭಾವನೆ ಪಡೆಯುತ್ತಾರೆ. ಅಮಿತಾಬಚ್ಚನ್, ಶಿಲ್ಪಾ ಶೆಟ್ಟಿ, ಸಂಜಯ್ ದತ್, ಫರಾ ಖಾನ್, ಅರ್ಶದ್ ವಾರ್ಸಿ ನಡೆಸಿಕೊಟ್ಟಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.