'ಪಾರು'ಗೆ ಕಾಟ ಕೊಡುವ ಈ ವಿಲನ್‌ ಹಿಂದೆ ಇದೆ ಒಳ್ಳೆಯ ಮುಖ!

By Web DeskFirst Published Nov 28, 2019, 10:18 AM IST
Highlights

ಸೀರಿಯಲ್ ನೋಡುಗರಿಗೆಲ್ಲಾ ಹೊಟ್ಟೆ ಉರಿಸೊ ವಿಲನ್ ಆಗಿ ಕಾಣಿಸಿಕೊಳ್ಳುವ ಈಕೆ ನಿಜ ಜೀವನದಲ್ಲಿ ಪಾಪಚ್ಚಿ ಹುಡುಗಿ. ಎಸ್‌ ಇವರೇ ಪಾರು ಧಾರಾವಾಹಿಯ ಅನುಷ್ಕಾ ಅಲಿಯಾಸ್ ಮಾನ್ಸಿ ಜೋಶಿ.

'ಪಾರು' ಧಾರಾವಾಹಿಯಲ್ಲಿ ಅನುಷ್ಕಾ ಪಾತ್ರವನ್ನು ನಿಭಾಯಿಸುತ್ತಿರುವ ಇವರು ನಿಜ ಜೀವನದಲ್ಲಿ ತುಂಬಾ ಸಾದು ಸ್ವಭಾವಿ. ಮೂಲತಃ ಬೆಂಗಳೂರಿನ ಚೆಲುವೆ. ಬಾಲ್ಯದಿಂದಲೂ ಮ್ಯೂಸಿಕ್ ಕೇಳಿದರೆ ಸಾಕು ನಿಂತಲ್ಲೇ ಕುಣಿತವನ್ನು ಪ್ರಾರಂಭಿಸುತ್ತಿದ್ದರು ಎಂದರೆ ನೀವು ನಂಬಲೇಬೇಕು.

ಅರಸನಕೋಟೆ ಅಖಿಲಾಂಡೇಶ್ವರಿ ಬಗ್ಗೆ ತಿಳಿದಿರದ ವಿಚಾರಗಳಿವು!

ಭರತನಾಟ್ಯ ಕಲಾವಿದೆ:

ಹೌದು, ಮಾನ್ಸಿ ಮೂಲತಃ ಭರತನಾಟ್ಯ ಕಲಾವಿದೆ. ಭರತನಾಟ್ಯಂನಲ್ಲಿ ಸೀನಿಯರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಇವರು,ಜೊತೆಗೆ ಮಾಧುರಿ ಉಪಾಧ್ಯಾಯ ಅವರ ಬಳಿ ಕಂಟೆಪರರಿ ಡ್ಯಾನ್ಸ್‌ ಅನ್ನು ಕಲಿತಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಸ್ಟೇಜ್ ಶೋಗಳನ್ನು ನೀಡಿದ್ದಾರೆ.ನಟನೆಗೆ ಇವರು ಎಂಟ್ರಿಯಾಗಲು ಡ್ಯಾನ್ಸ್‌ ಒಂದು ಮೂಲ ಕಾರಣ. ಸತ್ಯಜಿತ್‌ ಅವರ ಆಶ್ರಯದಲ್ಲಿ ನಡೆಸಿದ್ದ ವೆಬ್ ಸೀರೀಸ್‌ ಯೂಟ್ಯೂಬ್ ನಲ್ಲಿ ಹಿಟ್‌ ಆಗಿತ್ತು. ಇವರ ನಟನೆಯನ್ನು, ಮುಖದ ಹಾವ ಭಾವಗಳನ್ನು ಗಮನಿಸಿ  ನಟನೆಯಲ್ಲಿ ಮುಂದುವರೆಯುವಂತೆ ಸೂಚಿಸಿದ್ದರು. ಹಾಗಾಗಿ ಉಷಾ ಭಂಡಾರಿಯವರ ಗರಡಿಯಲ್ಲಿ ನಟನೆಯ ಸಾರವನ್ನುಅರಿತರು. ಈ ಮೂಲಕ ಕಿರುತೆರೆಯಲ್ಲಿ ಭಾಗವಹಿಸುವ ಅವಕಾಶಗಳನ್ನು ಪಡೆದುಕೊಂಡರು.

ಕಠಿಣ ಪರಿಶ್ರಮ ಮುಖ್ಯ:

ಜೀವನದಲ್ಲಿ ದೇವರು ಒಂದಲ್ಲಾ ಒಂದು ಅವಕಾಶವನ್ನು ಕೊಟ್ಟೇ ಕೊಟ್ಟಿರುತ್ತಾರೆ. ಬಣ್ಣ ಹಚ್ಚಿದ ಕೂಡಲೇ ಎಲ್ಲರೂ ಕಲಾವಿದರಾಗಲೂ ಸಾಧ್ಯವಿಲ್ಲ. ಕಠಿಣ ಪರಿಶ್ರಮ ಮತ್ತು ಸಾಧಿಸುವ ಛಲವೊಂದಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ. ಬಣ್ಣದ ಲೋಕ ಅಂದ ಮೇಲೆ ಅಲ್ಲಿ ಪ್ರತಿಯೊಬ್ಬರಿಂದಲೂ ಕಲಿಯುವುದು ಸಾಕಷ್ಟಿರುತ್ತದೆ.  ಹಾಗಾಗಿ ಒಬ್ಬೊಬ್ಬರಿಂದ ಒಂದೊಂದನ್ನು ಅರಿಯುವುದು ಮುಖ್ಯ. ನಾವು ಎಷ್ಟೇ ಉತ್ತಮ ಹಂತಕ್ಕೆ ಹೋದರೂ, ನಮ್ಮತನವನ್ನು ನಾವು ಯಾವತ್ತೂ ಬಿಟ್ಟುಕೊಡಬಾರದು ಎಂಬುದನ್ನು ಹಿರಿಯಕಲಾವಿದರಿಂದ ಅರಿತಿದ್ದಾರಂತೆ.

ನೆಗೆಟಿವ್‌ ರೋಲ್‌ನಿಂದಲೇ ಕಿರುತೆರೆ ಎಂಟ್ರಿ:

ಮಾನ್ಸಿ ಮೊದಲು ಬಣ್ಣ ಹಚ್ಚಿದ್ದು 'ಬಿಳಿ ಹೆಂಡ್ತಿ' ಎಂಬ ಧಾರಾವಾಹಿಯ ರಮ್ಯಾ ಎಂಬ ಪಾತ್ರಕ್ಕಾಗಿ. ಅದೂ ವಿಲನ್ ರೋಲ್‌ಗಾಗಿ, ನಂತರ ರಾಧಾ ರಮಣ ಧಾರವಾಹಿಯಲ್ಲಿ ಅನ್ವಿತಾ ಪಾತ್ರವನ್ನು ನಿರ್ವಹಿಸಿದ ಇವರು ಸದ್ಯ ಪಾರು ಧಾರವಾಹಿಯಲ್ಲಿ ಅನುಷ್ಕ ಎಂಬ ವಿಲನ್ ರೋಲ್‌ಅನ್ನು ನಿರ್ವಹಿಸುತ್ತಿದ್ದಾರೆ. ತನ್ನ ಪಾತ್ರದ ಮೂಲಕವೇ ಮನೆಮಾತಾಗಿರುವ ಇವರಿಗೆ ಜನರಿಂದ ಸಾಕಷ್ಟು ಉತ್ತಮ ರೆಸ್ಪಾನ್ಸ್‌ಗಳು ಬರುತ್ತಿವೆಯಂತೆ. ಈಗಾಗಲೇ ಕನ್ನಡ ಸೇರಿದಂತೆ ಪರಭಾಷೆಗಳಿಂದಲೂ ಇವರಿಗೆ ಆಫರ್ಸ್‌ ಗಳು ಬರುತ್ತಿದೆ. ಯಶ್, ಗಣೇಶ್,ರಕ್ಷಿತ್ ಶೆಟ್ಟಿ ಜೊತೆಗೆ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳುವ ಆಸೆ ಇವರದು.

ಬಡ ವಿದ್ಯಾರ್ಥಿಗಳಿಗಾಗಿ ಡ್ಯಾನ್ಸ್‌ ಅಕಾಡೆಮಿ:

ತಾನು ಕಲಿತ ವಿದ್ಯೆಯನ್ನು ಇತರರಿಗೂ ಕಲಿಸಬೇಕೆಂಬ ಹಂಬಲ ಈಕೆಯದು. ಹಾಗಾಗಿ ಡ್ಯಾನ್ಸ್‌ ಕಲಿಯಲು ಆಸಕ್ತಿ ಇರುವ ಬಡ ವಿದ್ಯಾರ್ಥಿಗಳಿಗಾಗಿ ಡ್ಯಾನ್ಸ್ ಸ್ಕೂಲ್‌ಅನ್ನು ಪ್ರಾರಂಭಿಸಬೇಕೆಂಬ ಕನಸು ಇವರದು.

ಸುಷ್ಮಾ ಸದಾಶಿವ್

ವಿವೇಕಾನಂದಕಾಲೇಜು, ಪುತ್ತೂರು.
 

click me!