
ಇತ್ತೀಚೆಗೆ ಬಿಗ್ ಬಾಸ್ ಸೀಸನ್ 12ರ ಟ್ರೋಫಿ ಗೆದ್ದುಕೊಂಡು ಬಂದ ಗಿಲ್ಲಿ ನಟ ಅಲಿಯಾಸ್ ನಟರಾಜ್ ಸುಮಾರು 46 ಕೋಟಿ ಓಟುಗಳನ್ನು ಪಡೆದು ಭಾರೀ ಪ್ರಸಿದ್ಧಿ ಆಗಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಹಳ್ಳಿ ಹುಡುಗನಾಗಿ, ಒಬ್ಬ ಕಾಮಿಡಿ ಕಲಾವಿದನಾಗಿ ಮತ್ತು ಸಹಜ ವ್ಯಕ್ತಿತ್ವದ ಮೂಲಕ ನಾಡಿನ ಜನತೆಯ ಮನಸ್ಸು ಗೆದ್ದಿದ್ದ ಗಿಲ್ಲಿ ನಟನ ಟ್ಯಾಟೋವನ್ನು ಹಲವರು ಹಾಕಿಸಿಕೊಂಡಿದ್ದಾರೆ. ಆದರೆ, ಇಲ್ಲೊಬ್ಬ ಮಂಡ್ಯ ಮೂಲದ ಬೆಂಗಳೂರು ಅಭಿಮಾನಿ ಕುಮಾರ್ ಗಿಲ್ಲಿ ನಟನ ಟ್ಯಾಟೋ ಹಾಕಿಸಿಕೊಂಡಿದ್ದರು. ಆದರೆ, ಗಿಲ್ಲಿ ಗೆದ್ದ ನಂತರ ತನ್ನ ಭೇಟಿಗೆ ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಗಿಲ್ಲಿಗೆ ಅಹಂಕಾರ ಬಂದಿದೆ ಎಂಬ ಮಾತುಗಳನ್ನಾಡಿದ್ದರು. ಇದರಿಂದ ಬೇಸರ ಮಾಡಿಕೊಂಡಿರುವ ಗಿಲ್ಲಿ ಖಾಸಗಿ ವಾಹಿನಿಯೊಂದರ ಮುಂದೆ ಬಂದು ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಾರೆ.
ನಾನು ಎಲ್ಲ ಅಭಿಮಾನಿಗಳಿಗೂ ಸಿಕ್ತೇನೆ. ನನ್ ಕಡೆಯಿಂದ ಅಭಿಮಾನಿಗಳಿಗೆ ತಪ್ಪು ಆಗಿದ್ದರೆ ದಯವಿಟ್ಟು ಕ್ಷಮಿಸಿಬಿಡಿ. ನಾನು ಇನ್ನೂ ತುಂಬಾ ಅಭಿಮಾನಿಗಳಿಗೆ ಸಿಗೋದಕ್ಕೆ ಆಗಿಲ್ಲ. ಯಾಕೆಂದರೆ ನನ್ನ ಪರಿಸ್ಥಿತಿಯೂ ಈಗ ಎಲ್ಲರಿಗೂ ಸಿಗುವಂತಿಲ್ಲ. ಮುಮದಿನ ದಿನಗಳಲ್ಲಿ ಸಿಕ್ತೀನಿ, ಎಲ್ಲರನ್ನೂ ಮಾತನಾಡಿಸುತ್ತೇನೆ ಎಂದು ಬಿಗ್ ಬಾಸ್ 12ರ ವಿಜೇತ ಗಿಲ್ಲಿ ನಟ ಹೇಳಿದ್ದಾರೆ.
ಹೌದು, ಬಿಗ್ ಬಾಸ್ ಸೀಸನ್ 12ರ ವಿಜೇತ ಗಿಲ್ಲಿ ನಟ ಅವರ ಮೊದಲ ಟ್ಯಾಟೋವನ್ನು ಹಾಕಿಸಿಕೊಂಡ ಕುಮಾರ್ ಎನ್ನುವವರು ಗಿಲ್ಲಿಯ ಮೇಲೆ ಬೇಸರ ಮತ್ತು ಕೋಪ ವ್ಯಕ್ತಪಡಿಸಿದ್ದಾರೆ. ನಾನು ಗಿಲ್ಲಿಯ ಮೇಲಿನ ಅಭಿಮಾನದಿಂದ ಟ್ಯಾಟೋ ಹಾಕಿಸಿಕೊಂಡಿದ್ದನ್ನು ನೋಡಿದ ಬಿಗ್ ಬಾಸ್ ತಂಡದವರು ನನ್ನನ್ನು ಕರೆಸಿ ಬಿಗ್ ಬಾಸ್ ಶೋನ ಫ್ಯಾನ್ಸ್ ಶೋ ಕಾರಯಕ್ರಮಕ್ಕೆ ಕಳಿಸಿದರು. ಅಲ್ಲಿ ಗಿಲ್ಲಿನಟ ಅವರು ನನ್ನನ್ನು ಮಾತನಾಡಿಸಿ, ಹೊರಗೆ ಬಂದ ನಂತರ ಭೇಟಿ ಮಾಡುತ್ತೇನೆ ಎಂದರು. ಇದಾದ ನಂತರ ಕೆಲವು ದಿನಗಳಲ್ಲಿ ಗಿಲ್ಲಿ ನಟ ಟ್ರೋಫಿ ವಿಜೇತರಾಗಿ 50 ಲಕ್ಷ ರೂ. ಹಣ ಗೆದ್ದು, 20 ಲಕ್ಷ ರೂ. ಮೌಲ್ಯದ ಒಂದು ಕಾರನ್ನು ಗೆದ್ದುಕೊಂಡು ಪುನಃ ವೈಯಕ್ತಿಕವಾಗಿ ಕಿಚ್ಚ ಸುದೀಪ್ ಅವರು 10 ಲಕ್ಷ ರೂ. ಕೊಟ್ಟಿರುವುದು ಸೇರಿ ಒಟ್ಟು 80 ಲಕ್ಷ ರೂ. ಒಡೆಯನಾಗಿದ್ದಾರೆ. ಇದೀಗ ಅವರು ಹಣ ಕೊಡುವ ಕಾರ್ಯಕ್ರಮಗಳಿಗೆ ಹೋಗುತ್ತಿದ್ದಾರೆ ಹೊರತು ಅಭಿಮಾನಿಗಳನ್ನು ಭೇಟಿ ಮಾಡುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.
ಈ ಬಗ್ಗೆ ಖಾಸಗಿ ಚಾನೆಲ್ ಒಂದರಲ್ಲಿ ಮಾತನಾಡಿದ ಗಿಲ್ಲಿ ನಟನ ಮೊದಲ ಟ್ಯಾಟೋ ಹಾಕಿಸಿಕೊಂಡ ಅಭಿಮಾನಿ ಕುಮಾರ್ ಅವರು, ನಾನು ಎಲ್ಲಿಯೂ ಓಡಾಡುವುದಕ್ಕೆ ಆಗುತ್ತಿಲ್ಲ. ಯಾರಿಗೂ ಮುಖ ತೋರಿಸಲಾಗುತ್ತಿಲ್ಲ. ಸ್ವತಃ ನನ್ನ ಹೆಂಡತಿ ಮಕ್ಕಳೇ ನನಗೆ ಮರ್ಯಾದೆ ಕೊಡದೇ ಟೀಕೆ ಮಾಡುತ್ತಿದ್ದಾರೆ. ಗಿಲ್ಲಿ ಟ್ಯಾಟೋ ಹಾಕಿಸಿಕೊಂಡರೂ ನಿಮ್ಮನ್ನ ಇಲ್ಲಿವರೆಗೂ ಭೇಟಿ ಮಾಡಿಲ್ಲ. ಶಾಪಿಂಗ್ ಮಾಲ್, ಸಿನಿಮಾ ಸುತ್ತಾಡುವ ಗಿಲ್ಲಿಗೆ , ಸ್ವತಃ ಬಿಗ್ ಬಾಸ್ ತಂಡದವರೇ ಟ್ಯಾಟೋ ಹಾಕಿಸಿಕೊಂಡ ಅಭಿಮಾನಿಯನ್ನು ಭೇಟಿ ಮಾಡುವಂತೆ ತಿಳಿಸಿದರೂ ಭೇಟಿ ಮಾಡುತ್ತಿಲ್ಲ. ಇದರಿಂದ ನನಗೆ ಭಾರೀ ಬೇಸರವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ನಾನು ಎಲ್ಲಿಗೇ ಹೋದರೂ ಬಿಗ್ ಬಾಸ್ ಕಾರ್ಯಕ್ರಮ ಮುಗಿದು ಎಷ್ಟು ದಿನವಾಯ್ತು, ನಿಮ್ಮನ್ನು ನೋಡುವುದಕ್ಕೆ ಗಿಲ್ಲಿನಟ ಬಂದಿದ್ದರಾ ಎಂದು ಕೇಳಿ ನಮ್ಮನ್ನು ರೇಗಿಸುತ್ತಾರೆ. ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಷ್ ಸೇರಿ ಅನೇಕ ದೊಡ್ಡ ಕಲಾವಿದರು ಅಭಿಮಾನಿಗಳಿಗೆ ಭಾರೀ ಗೌರವ ಕೊಡುತ್ತಾರೆ. ಹೀಗಾಗಿಯೇ ಅವರು ದೊಡ್ಡ ಮಟ್ಟದ ಎತ್ತರಕ್ಕೆ ಬೆಳೆದಿದ್ದಾರೆ. ಇನ್ನೂ ಅವರನ್ನು ಅಭಿಮಾನಿಗಳು ಆರಾಧಿಸುತ್ತಾರೆ. ಆದರೆ, ಗಿಲ್ಲಿನಟ ಅಭಿಮಾನಿಗಳಿಂದಲೇ ಬಿಗ್ ಬಾಸ್ ವಿನ್ನರ್ ಆಗಿದ್ದರೂ ಒಬ್ಬರೇ ಒಬ್ಬ ಅಭಿಮಾನಿಗಳನ್ನು ಭೇಟಿ ಮಾಡುತ್ತಿಲ್ಲ. ಬೇಕು ಬೇಕಾದವರನ್ನು ಮೀಟ್ ಮಾಡುತ್ತಾ, ಎಲ್ಲರಿಗೂ ಇಂಟರ್‌ವ್ಯೂವ್ ಕೊಡ್ತಿದ್ದಾರೆ. ಆದರೆ, ಅಭಿಮಾನಿಗಳನ್ನು ಭೇಟಿ ಮಾಡಿಲ್ಲ. ಯಲಹಂಕ ಗುರು, ಆರ್‌ಎಂಸಿ ಮಧು, ಕರ್ನಾಟಕ ರಕ್ಷಣಾ ವೇದಿಕೆ, ಪೊಲೀಸ್ ಅಭಿಮಾನಿಗಳು, ಆಟೋ ಚಾಲಕರು, ವಕೀಲರು ಸಂಘದವರು, ಕ್ಯಾಬ್ ಡ್ರೈವರ್‌ಗಳು ಪೋಸ್ಟರ್ ಹಾಕಿ, ವಿಡಿಯೋ ಮಾಡಿ ಪ್ರಚಾರ ಮಾಡಿದ್ದಾರೆ. ಅವರು ಯಾರನ್ನೂ ಭೇಟಿ ಮಾಡಿಲ್ಲ ಎಂದು ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಮಹದೇಶ್ವರ ಬೆಟ್ಟದಲ್ಲಿ ಹೋಗಿ ಗಿಲ್ಲಿ ನಟನ ಹೆಸರಲ್ಲಿ ಚಿನ್ನದ ತೇರು ಎಳೆಸುತ್ತೇವೆ. ಇದೇ ವೇಳೆ ಗಿಲ್ಲಿ ನಟ ಅವರು ಕರೆ ಮಾಡಿ ನಿಮ್ಮನ್ನು ಭೇಟಿ ಮಾಡಬೇಕು ಎಂದು ಕೇಳುತ್ತಾರೆ. ಆಗ ನಾನು ದೇವಸ್ಥಾನಕ್ಕೆ ಬಂದಿರುವುದಾಗಿ ತಿಳಿಸಿ, ನಂತರ ಇದೇ ನಂಬರಿಗೆ ಬಂದು ಭೇಟಿ ಮಾಡುತ್ತೇನೆ ಎಂದು ಹೇಳಿದೆ. ನಾನು ಮಂಡ್ಯಕ್ಕೆ ಬಂದು, ಬೆಂಗಳೂರಿಗೆ ಬಂದು ಕರೆ ಮಾಡಿದರೂ ನಮ್ಮನ್ನು ಭೇಟಿ ಮಾಡಲಿಲ್ಲ. ಅವರ ಅಣ್ಣ ಗಿಲ್ಲಿನಟ ಶೂಟಿಂಗ್‌ನಲ್ಲಿ ಬ್ಯೂಸಿ ಆಗಿದ್ದಾರೆ, ಆಮೇಲೆ ಕರೆ ಮಾಡಿಸುತ್ತೇನೆ ಎಂದು ಹೇಳುತ್ತಾರೆ. ಈವರೆಗೂ ನನ್ನನ್ನು ಭೇಟಿ ಮಾಡಿಲ್ಲ. ಈವರೆಗೆ ಗಿಲ್ಲಿನಟ ದುಡ್ಡು ಇರುವವರನ್ನು ಭೇಟಿ ಮಾಡುತ್ತಾರೆ. ಆದರೆ, 10 ಜನರು ಟ್ಯಾಟೋ ಹಾಕಿಸಿಕೊಂಡಿದ್ದು, ಯಾರನ್ನೂ ಭೇಟಿ ಮಾಡಿಲ್ಲ ಎಂದು ಆರೋಪ ಮಾಡಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.