ಪ್ರತಾಪ್​ ಹೀರೋ ಆದ್ರೆ ಫ್ರೀಯಾಗಿ ವಿಲನ್​ ಆಗುವೆ! ಡ್ರೋನ್​ ಆ್ಯಕ್ಟಿಂಗ್​ ಬಗ್ಗೆ ವಿನಯ್​ ಗೌಡ ಹೇಳಿದ್ದೇನು?

Published : Jan 31, 2024, 03:22 PM IST
ಪ್ರತಾಪ್​ ಹೀರೋ ಆದ್ರೆ ಫ್ರೀಯಾಗಿ ವಿಲನ್​ ಆಗುವೆ! ಡ್ರೋನ್​ ಆ್ಯಕ್ಟಿಂಗ್​ ಬಗ್ಗೆ ವಿನಯ್​ ಗೌಡ ಹೇಳಿದ್ದೇನು?

ಸಾರಾಂಶ

ಡ್ರೋನ್​ ಪ್ರತಾಪ್​ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಎನ್ನುತ್ತಲೇ ವಿನಯ್​ ಗೌಡ್​ ತಾವು ಅವರಿಗಾಗಿ ವಿಲನ್​ ಆಗಲು ಸಿದ್ಧ ಎಂದಿದ್ದಾರೆ. ನಟ ಹೇಳಿದ್ದೇನು?   

ಬಿಗ್​ಬಾಸ್​ನಲ್ಲಿ ಜಗಳದ ಮೂಲಕ ಅತಿ ಹೆಚ್ಚು ಸದ್ದು ಮಾಡಿದವರಲ್ಲಿ ವಿನಯ್​ ಒಬ್ಬರು. ವಿನಯ್​ ಮತ್ತು ಡ್ರೋನ್​ ಪ್ರತಾಪ್​ ನಡುವಿನ ಕಾಳಗ, ಜಟಾಪಟಿ ಬಿಗ್​ಬಾಸ್​ ವೀಕ್ಷಕರಿಗೆ ತಿಳಿದದ್ದೇ. ಕೆಲವರು ವಿನಯ್​ ಪರವಾಗಿ ನಿಂತಿದ್ದರೆ, ಇನ್ನು ಕೆಲವರು ಡ್ರೋನ್​ ಪ್ರತಾಪ್​ ಮಾಡುತ್ತಿರುವುದು ಸರಿಯೆನ್ನುತ್ತಿದ್ದರು. ವೀಕ್ಷಕರಲ್ಲಿ ಕೂಡ ಇವರಿಬ್ಬರ ಜಗಳದ ಕುರಿತು ಭಿನ್ನ ಅಭಿಪ್ರಾಯಗಳೇ ವ್ಯಕ್ತವಾಗುತ್ತಿದ್ದವು. ಕೆಲವರು ವಿನಯ್​ ಸುಮ್ಮನೇ ಪ್ರವೋಕ್​ ಮಾಡ್ತಿದ್ದಾರೆ ಎಂದರೆ ಇನ್ನು ಕೆಲವರು ಡ್ರೋನ್​ ಪ್ರತಾಪ್​ ಪ್ರವೋಕ್​ ಮಾಡುವುದು ಎನ್ನುತ್ತಿದ್ದರು. ಒಟ್ಟಿನಲ್ಲಿ ಇವರಿಬ್ಬರ ಜಗಳ ಹಾಟ್​ ಟಾಪಿಕ್​ ಆಗಿತ್ತು.

ಆದರೆ ಅದೊಂದು ಕ್ಷಣದಲ್ಲಿ ವಿನಯ್​, ಪ್ರತಾಪ್​ ಅವರನ್ನು ಹೊಗಳಿದ್ದೂ ಇದೆ. ಅದ್ಯಾವಾಗ ಎಂದರೆ ಜನವರಿ 25ರಂದು ನಡೆದ ಎಪಿಸೋಡ್​ನಲ್ಲಿ. ಆ ಸಮಯದಲ್ಲಿ ನಡೆದ  ಮಿಡ್​ ವೀಕ್​ ಎಲಿಮಿನೇಷನ್​ ಸಂದರ್ಭದಲ್ಲಿ ಬಿಗ್​ಬಾಸ್​ ಅವರಿಂದ ಒಂದು ಘೋಷಣೆಯಾಗಿತ್ತು. ಅದೇನೆಂದರೆ, ಆಗ ಮನೆಯಲ್ಲಿ ಉಳಿದುಕೊಂಡಿದ್ದ ಆರು ಮಂದಿ ಸ್ಪರ್ಧಿಗಳ ಪೈಕಿ, ಈ ಎಲ್ಲರ ಅಭಿಪ್ರಾಯದ ಆಧಾರದಲ್ಲಿ ಒಬ್ಬರನ್ನು ಹೊರಗೆ ಕಳಿಸಲಾಗುತ್ತದೆ ಎಂಬುದು.  ಆಗ ಒಬ್ಬೊಬ್ಬ ಸ್ಪರ್ಧಿಗಳು ಒಂದೊಂದು ಹೆಸರು ಹೇಳಿದರೆ, ವಿನಯ್​ ಸಹಜವಾಗಿ  ಡ್ರೋನ್​ ಪ್ರತಾಪ್​ ಹೆಸರು ಹೇಳಿದ್ದರು. ಆ ಸಂದರ್ಭದಲ್ಲಿ  ‘ನನ್ನ ವೋಟ್​ ಪ್ರತಾಪ್​ಗೆ.  ಅವನು ಒಬ್ಬ ಒಳ್ಳೆಯ ಹುಡುಗನೇ, ಆದರೆ  ಬಿಗ್​ ಬಾಸ್​ಗೆ ಬೇಕಾದ ಗೇಮ್​ ಅವನಲ್ಲಿ ಇಲ್ಲ. ನನ್ನ ಕಣ್ಣಿಗೆ ಅವನ ಆಟ ಕಾಣಿಸಿಲ್ಲ. ಆಗಾಗ ಕಳೆದುಹೋಗುತ್ತಿದ್ದ’ ಎಂದಿದ್ದರು.  

ಡ್ರೋನ್​ ಪ್ರತಾಪ್​ಗೆ ಹುಷಾರು ತಪ್ಪಿದ್ದೇಕೆ? ಬಿಗ್​ಬಾಸ್​ ಮನೆಯಲ್ಲಿ ಹೇಳಿದ್ದೇನು, ಈಗ ಹೇಳ್ತಿರೋದೇನು?

ಕೊನೆಗೆ ನಡೆದದ್ದೆಲ್ಲವೂ ಗೊತ್ತೇ ಇದೆ. ವಿನಯ್​ ಮೊದಲೇ ಎಲಿಮಿನೇಟ್​ ಆದರು. ಡ್ರೋನ್​ ಪ್ರತಾಪ್​ ಮೊದಲ ರನ್ನರ್​ ಅಪ್​ ಎನಿಸಿಕೊಂಡರು. ಬಿಗ್​ಬಾಸ್​ ಮುಗಿಯುತ್ತಲೇ ಈ ಎಲ್ಲಾ ಸ್ಪರ್ಧಿಗಳು ಮಾಧ್ಯಮಗಳ ಎದುರು ತಮ್ಮ ಅನಿಸಿಕೆಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಇದೀಗ ವಿನಯ್​ ಗೌಡ ಅವರಿಗೆ ಡ್ರೋನ್​ ಪ್ರತಾಪ್​ ಬಗ್ಗೆ ಕೇಳಿದಾಗ, ವಿನಯ್​ ಅವರು ಡ್ರೋನ್​ ಪ್ರತಾಪ್​ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿ, ಒಂದು ಒಳ್ಳೆಯ ಆಫರ್​ ಕೊಟ್ಟಿದ್ದಾರೆ. ಅಷ್ಟಕ್ಕೂ ತಮ್ಮ ಮತ್ತು ಡ್ರೋನ್​ ನಡುವೆ ನಡೆಯುತ್ತಿರುವ ಜಟಾಪಟಿ ಕುರಿತು ಹೇಳಿರುವ ವಿನಯ್​, ಆಟದಲ್ಲಿ ಎಲ್ಲವೂ ಸಹಜ. ಆಟ ಗೆಲ್ಲಬೇಕು ಎಂದರೆ ಒಂದಷ್ಟು ಹೀಗೆ ಮಾಡಬೇಕಾಗುತ್ತದೆ. ನಾನು ನನ್ನ ಇಷ್ಟು ವರ್ಷದ ಜರ್ನಿಯಲ್ಲಿ ಕೆಲವೊಂದು ಎಥಿಕ್ಸ್​ ಫಾಲೋ ಮಾಡಿಕೊಂಡು ಬಂದಿದ್ದೇನೆ. ಕೆಲವು ಕೆಟ್ಟ ಪದಗಳು ನನಗೆ ಆಗಿ ಬರುವುದಿಲ್ಲ. ಅದನ್ನು ನಾನು ಚೇಂಜ್​ ಮಾಡಿಕೊಳ್ಳಲು ಆಗುವುದಿಲ್ಲ. ಆದರೆ ಅದೇ ಪದಗಳನ್ನು ನನ್ನ ಮೇಲೆ ಬಳಕೆ ಮಾಡುತ್ತಿದ್ದ ಕಾರಣ, ಸಹಜವಾಗಿ ಕೋಪ ಬರುತ್ತಿತ್ತು ಎಂದಿದ್ದಾರೆ.  ಇಬ್ಬರಲ್ಲಿ ತಪ್ಪು ಯಾರದ್ದು ಎನ್ನುವುದು ಆ ಕ್ಷಣದಲ್ಲಿ ನನಗೆ ತಿಳಿಯಲಿಲ್ಲ. ಆದರೆ  ನನ್ನಿಂದ ಡ್ರೋನ್​ ಅವರಿಗೆ ತೊಂದರೆ ಆಗಿದೆ ಎಂದು ಈಗ ಕೇಳ್ಪಟ್ಟಿದ್ದೇನೆ ಎಂದರು.

ಇದೇ ವೇಳೆ ಒಂದೊಳ್ಳೆ ಆಫರ್​ ವಿನಯ್​, ಡ್ರೋನ್​ಗೆ ಕೊಟ್ಟಿದ್ದಾರೆ. ಡ್ರೋನ್​ ಪ್ರತಾಪ್​ ಬಹುದೊಡ್ಡ ನಟ. ಅವರು ಆ್ಯಕ್ಟಿಂಗ್​ ತುಂಬಾ ಚೆನ್ನಾಗಿ ಮಾಡ್ತಾರೆ. ಬಿಗ್​ಬಾಸ್​  ಮನೆಯಲ್ಲಿ ಸ್ಕ್ರಿಪ್ಟ್​ ಎಲ್ಲಾ ಇದ್ದಾಗ ನಟನೆ ಚೆನ್ನಾಗಿ ಮಾಡಿದ್ದನ್ನು ನೋಡಿದ್ದೇನೆ.  ಅದಕ್ಕಾಗಿಯೇ ಅವರು ಸಿನಿಮಾಗೆ ಬರಬೇಕು. ಅವರು ಹೀರೋ ಆದರೆ ಈ ಚಿತ್ರದಲ್ಲಿ ನಾನು ಪುಕ್ಕಟೆಯಾಗಿ ವಿಲನ್​ ಪಾತ್ರ ಮಾಡಲು ರೆಡಿ. ಇದು ನನ್ನ ಪ್ರಾಮಿಸ್​. ಡ್ರೋನ್​ ಸಿನಿಮಾ ಇಂಡಸ್ಟ್ರಿಯಲ್ಲಿ ಹೀರೋ ಆಗಲೇಬೇಕು ಎಂದಿದ್ದಾರೆ. ಅಂದಹಾಗೆ ವಿನಯ್ ಗೌಡ ಕನ್ನಡ ಕಿರುತೆರೆಯ 'ಶಿವ' ಅಂತಲೇ ಖ್ಯಾತಿ ಪಡೆದಿದ್ದಾರೆ.  2010ರಲ್ಲಿ 'ಚಿಟ್ಟೆ ಹೆಜ್ಜೆ' ಎಂಬ ಧಾರವಾಹಿ ಮೂಲಕ  ಕಿರುತೆರೆ ಪ್ರವೇಶಿಸಿದ ಇವರು,  ಸಿಐಡಿ ಕರ್ನಾಟಕ, ಅಂಬಾರಿ, ಶುಭವಿವಾಹ, ಅಮ್ಮ, ಹರ ಹರ ಮಹಾದೇವ, ಯಡಿಯೂರು ಸಿದ್ದಲಿಂಗೇಶ್ವರ, ನಮ್ಮ ಲಚ್ಚಿ ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ.  ತೆಲುಗು ಸೀರಿಯಲ್‌ಗಳಲ್ಲಿಯೂ ಸೈ ಎನಿಸಿಕೊಂಡಿದ್ದಾರೆ.  ರಾಕೆಟ್, ಪೊಗರು, ಶಿವಾಜಿ ಸುರತ್ಕಲ್, ಅವನಲ್ಲಿ ಇವಳಿಲ್ಲಿ, ಕೈಮರ ಎಂಬ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. 

ಶ್ರೀರಾಮನ ಅವಹೇಳನ ಮಾಡಿದವ, ಕ್ರಿಮಿನಲ್‌ ಕೇಸ್‌ನಲ್ಲಿ ಜೈಲಿಗೆ ಹೋದವನಿಗೆ ಬಿಗ್‌ಬಾಸ್‌ ಟ್ರೋಫಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?