
ಲಕ್ಷ್ಮೀ ನಿವಾಸ ಧಾರಾವಾಹಿ ಹಲವು ಕಥೆಗಳನ್ನೊಳಗೊಂಡ ಕಥಾ ಸಂಗಮ. ಧಾರಾವಾಹಿಯ ಪ್ರತಿಯೊಂದು ಪಾತ್ರದ ಕಥೆಯಲ್ಲಿಯೂ ರೋಚಕ ತಿರುವುಗಳು ಎದುರಾಗಿವೆ. ಅದರಲ್ಲಿ ಜಾಹ್ನವಿ ಮತ್ತು ಜಯಂತ್ ಕಥೆಯಲ್ಲಿ ಬಿಗ್ ಟ್ವಿಸ್ಟ್ ಬಂದಿದೆ. ಜಾಹ್ನವಿ ಬದುಕಿನಿಂದ ದೂರವಾಗಿದ್ದ ಆಪ್ತ ಗೆಳೆಯ ವಿಶ್ವನ ಎಂಟ್ರಿಯಾಗಿದೆ. ಔಷಧಿ ತೆಗೆದುಕೊಂಡು ಹೋಗಲು ಜಯಂತ್ ವಾರ್ಡ್‌ನಿಂದ ಹೊರಗೆ ಹೋದ ಸಂದರ್ಭದಲ್ಲಿ ಜಾಹ್ನವಿ ಬಳಿ ವಿಶ್ವ ಬಂದಿದ್ದಾನೆ. ತನ್ನ ಬೆಸ್ಟ್ ಫ್ರೆಂಡ್‌ನ್ನು ನೋಡಿದ ಕೂಡಲೇ ಜಾಹ್ನವಿ ಗಳಗಳನೇ ಕಣ್ಣೀರು ಹಾಕಿದ್ದಾಳೆ. ಅಜ್ಜಿ ಮನೆಯಲ್ಲಿ ಕೋಮಾ ಸ್ಥಿತಿಯಲ್ಲಿದ್ದು, ತಾನು ಮಗು ಕಳೆದುಕೊಂಡಿರುವ ವಿಷಯವನ್ನು ವಿಶ್ವನ ಮುಂದೆ ಜಾಹ್ನವಿ ಹೇಳಿದ್ದಾಳೆ.
ಸೈಕೋ ಗಂಡ ಜಯಂತ್‌ನ ಅಸಲಿ ಮುಖ ಜಾಹ್ನವಿಗೆ ಗೊತ್ತಾಗಿದೆ. ಗಂಡನ ಅಸಲಿಯತ್ತು ತಿಳಿದು ಆಘಾತಕ್ಕೊಳಗಾಗಿದ್ದ ಜಾಹ್ನವಿಗೆ ಗರ್ಭಪಾತವಾಗಿದೆ. ಇಷ್ಟಾದ್ರೂ ಜಾಹ್ನವಿ ಪೋಷಕರಿಗೆ ಜಯಂತ್ ಯಾವುದೇ ವಿಷಯವನ್ನು ತಿಳಿಸಿಲ್ಲ. ಜಾಹ್ನವಿ ತಂದೆ ಶ್ರೀನಿವಾಸ್, ತಾಯಿ ಲಕ್ಷ್ಮೀ, ಸೋದರ ವೆಂಕಿ ಮತ್ತು ಅತ್ತಿಗೆ ಚೆಲುವಿ ಬಂದರೂ ಜಯಂತ್ ಸುಳ್ಳು ಹೇಳಿದ್ದಾನೆ. ನಾರ್ಮಲ್ ಚೆಕಪ್‌ಗಾಗಿ ಜಾಹ್ನವಿ ಆಸ್ಪತ್ರೆಯಲ್ಲಿದ್ದಾಳೆ. ನೀವು ಬಂದಿದ್ದೀರಿ ಅಲ್ಲವಾ? ಹೋಗಿ ಕರೆದುಕೊಂಡು ಬರುವೆ ಎಂದು ಹೇಳಿರುವ ಜಯಂತ್ ಮನೆಯಿಂದ ಹೊರಗೆ ಬಂದಿದ್ದಾನೆ.
ಜಾಹ್ನವಿ ದಾಖಲಾಗಿರುವ ಆಸ್ಪತ್ರೆಗೆ ವಿಶ್ವನ ಅಜ್ಜನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ವಿಶ್ವನಿಗೆ ಜಾಹ್ಮವಿ ಕಾಣಿಸಿದ್ದಾಳೆ. ಗೆಳತಿಯನ್ನು ಭೇಟಿಯಾದಾಗ ಜಾಹ್ನವಿಯ ಕಷ್ಟ ಕೇಳಿ ವಿಶ್ವ ಮರುಗಿದ್ದಾನೆ. ದೇವರು ಒಳ್ಳೆಯದನ್ನು ಮಾಡ್ತಾನೆ ಅನ್ನೋ ನಂಬಿಕೆ ಹೊರಟು ಹೋಗಿದೆ. ನಾನು ಇಷ್ಟಪಟ್ಟವರು ನನ್ನಿಂದ ದೂರ ಆದ್ರು. ನನಗಿದ್ದ ಬೆಸ್ಟ್ ಫ್ರೆಂಡ್ ಅಂದ್ರೆ ನೀನು ಒಬ್ಬನೇ. ಮೆಸೇಜ್, ಕಾಲ್ ಇಲ್ಲ ನೀನು ಸಹ ಹೇಳದೇ ಕೇಳದೇ ನನ್ನಿಂದ ದೂರವಾದೆ. ಇವಾಗ ನನ್ನ ಮಗು ಸಹ ದೂರವಾಯ್ತು. ನಾನು ನಂಬಿದ ಜೀವನವೇ ನನ್ನನ್ನು ಈ ಸ್ಥಿತಿಗೆ ತಂದಿದೆ. ಯಾರ ಮುಂದೆಯೂ ಹೇಳದ ಸ್ಥಿತಿಯಲ್ಲಿದ್ದೇನೆ ಕಣ್ಣೀರು ಒರೆಸುವ ಕೈಗಳೇ ಇಲ್ಲ ಎಂದು ವಿಶ್ವನ ಮುಂದೆ ಜಾಹ್ನವಿ ಕಣ್ಣೀರು ಹಾಕಿದ್ದಾಳೆ.
ಇದನ್ನೂ ಓದಿ: ಗಂಡನ ಬಾಯಿ ಮುಚ್ಚಿಸೋದು ಅಂತ ಹೇಳಿಕೊಟ್ಟ ವೀಣಾ ಅತ್ತಿಗೆಗೆ ಸಿಕ್ತು ಹೊಸ ಬಿರುದು
ಎಲ್ಲದಕ್ಕೂ ಅಳೋದು ಒಂದೇ ಉತ್ತರ ಅಲ್ಲ. ಇವತ್ತು ಆ ದೇವರು ನಿನ್ನ ಮಗುವನ್ನು ಕಿತ್ತುಕೊಂಡಿರಬಹುದು. ಆದ್ರೆ ಯಾವತ್ತೋ ಒಂದು ದಿನ ಆ ದೇವರೇ ನಿನಗೆ ಒಳ್ಳೆದು ಮಾಡುತ್ತಾನೆ. ಆ ನಂಬಿಕೆ ನನಗಿದೆ. ಮಗುವನ್ನು ಕಳೆದುಕೊಂಡಿರುವ ನೋವಿನಲ್ಲಿ ಏನೇನೋ ಮಾತನಾಡಬೇಡ. ಎಲ್ಲವೂ ಸರಿ ಹೋಗುತ್ತೆ. ಸಮಾಧಾನ ಮಾಡಿಕೊ ಜಾಹ್ನವಿ. ಯಾಕೆ ಹೀಗೆ ಆಯ್ತು ಅಂತಾ ಗೊತ್ತಾಗುತ್ತಿಲ್ಲ. ಇದೆಲ್ಲಾ ಹೇಗಾಯ್ತು? ಎಷ್ಟು ಧೈರ್ಯವಾಗಿರೋ ಹುಡುಗಿ ನೀನು. ನಿನ್ನನ್ನು ನೋಡಲು ಆಗುತ್ತಿಲ್ಲ. ನಿನ್ನ ನೋವನ್ನು ಕಡಿಮೆ ಮಾಡುವ ಶಕ್ತಿ ನನಗಿಲ್ಲ. ಆದ್ರೆ ಅದನ್ನು ಕೇಳುವ ಅರ್ಹತೆ ನನಗಿದೆ. ಏನಾಯ್ತು ಹೇಳು ಜಾನು ಎಂದು ವಿಶ್ವ ಕೇಳುತ್ತಾನೆ. ಅಷ್ಟರಲ್ಲಿಯೇ ಜಯಂತ್ ಅಲ್ಲಿಗೆ ಬರುತ್ತಾನೆ. ನನ್ನ ಗಂಡ ಬಂದ, ಇಲ್ಲಿಂದ ಹೋಗು, ನಾನೇ ಫೋನ್ ಮಾಡುತ್ತೇನೆ ಎಂದು ಜಾಹ್ನವಿ ಸನ್ನೆ ಮಾಡಿ ಅಲ್ಲಿಂದ ವಿಶ್ವನನ್ನು ಕಳುಹಿಸಿದ್ದಾಳೆ.
ಜಾಹ್ನವಿ ಕಷ್ಟಕ್ಕೆ ಕಾರಣ ಏನು ಅಂತ ತಿಳಿದುಕೊಂಡ ಮೇಲೆ ವಿಶ್ವನ ಮುಂದಿನ ನಿರ್ಧಾರ ಏನು? ಸೈಕೋ ಜಯಂತ್‌ಗೆ ಕಾದಿದೆಯಾ ಮಾರಿಹಬ್ಬ ಅನ್ನೋದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ. ವಿಶ್ವನ ಆಗಮನ ಪ್ರೇಕ್ಷಕರಿಗೆ ಇಷ್ಟವಾಗಿದೆ.
ಇದನ್ನೂ ಓದಿ: ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಹೊರ ಬಂದ ಖ್ಯಾತ ನಟ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.