ಬಿಗ್‌ಬಾಸ್‌ ಅಭ್ಯರ್ಥಿಯನ್ನು ಗೆಲ್ಲಿಸಿದ ಧರ್ಮಸ್ಥಳ ಮಂಜುನಾಥನ ಮಹಿಮೆ!

By Suvarna News  |  First Published Aug 9, 2021, 7:06 PM IST

ಬಿಗ್‌ಬಾಸ್‌ನಲ್ಲಿ ಗೆದ್ದ ಮಂಜು ಪಾವಗಡ ಗೆಲುವಿನ ಹಿಂದೆ ಧರ್ಮಸ್ಥಳ ಶ್ರೀ ಮಂಜುನಾಥನ ಪ್ರಭಾವ ಇದೆಯೇ? ಇದು ಕಟ್ಟುಕತೆಯಲ್ಲ. ಕಾರಣಗಳು ಇಲ್ಲಿವೆ.


ಬಿಗ್‌ಬಾಸ್‌ ಸೀಸನ್‌ ೮ನಲ್ಲಿ ಮಂಜು ಪಾವಗಡ ವಿನ್ ಆಗಿದ್ದಾರೆ. ಈ ವಿನ್ನರ್‌ಗೂ ಮಂಜುಗೂ ಧರ್ಮಸ್ಥಳ ಮಂಜುನಾಥನಿಗೂ ಇರುವ ಸಂಬಂಧ ಹೊರಬಿದ್ದಿದೆ. ತಾನು ವಿನ್ ಆಗಿರುವುದೇ ಧರ್ಮಸ್ಥಳ ಮಂಜುನಾಥನ ಕೃಪೆಯಿಂದ ಎಂಬುದು ಪಾವಗಡ ಮಂಜು ಅವರ ಅಭಿಪ್ರಾಯ. ಶನಿವಾರದ ಎಪಿಸೋಡ್‌ನಲ್ಲೇ ಬಿಗ್‌ಬಾಸ್‌ ಮನೆಯಲ್ಲಿದ್ದ ಪ್ರಶಾಂತ್ ಸಂಬರಗಿ ಮತ್ತು ವೈಷ್ಣವಿ ಹೊರಬಿದ್ದಿದ್ದರು. ಆಗ ಉಳಿದುಕೊಂಡವರು ಮಂಜು ಪಾವಗಡ ಮತ್ತು ಅರವಿಂದ ಇಬ್ಬರೇ. ಇಬ್ಬರ ನಡುವೆಯೂ ಟಫ್‌ ಪೈಪೋಟಿ ನಡೆದಿತ್ತು. ಇಬ್ಬರೂ ವೀಕ್ಷಕರನ್ನು ಸಾಕಷ್ಟು ರಂಜಿಸಿದ್ದರು. ಇಬ್ಬರಿಗೂ ಜನರ ಓಟು ಸಾಕಷ್ಟು ಬಿದ್ದಿತ್ತು. ಹೀಗೆ ಜಿದ್ದಾಜಿದ್ದಿ ಪೈಪೋಟಿಯ ನಡುವೆಯೇ, ಭಾನುವಾರ ಎಪಿಸೋಡ್‌ನಲ್ಲಿ ನಟ ಸುದೀಪ್‌ ಅವರು ಮಂಜು ಅವರ ಕೈ ಹಿಡಿದು ಮೇಲೆತ್ತಿ ವಿನ್ನರ್‌ ಎಂದು ಘೋಷಿಸಿದರು. ಬಹು ದಿನಗಳಿಂದ ಈ ಗಳಿಗೆಗಾಗಿ ಕಾದಿದ್ದ ಮಂಜು ಅವರ ಕಣ್ಣುಗಳಿಂದ ಆನಂದಾಶ್ರು ಉದುರಿದವು.

ಮಂಜು ಪಾವಗಡ ಬಿಗ್ ಬಾಸ್.. ಅರವಿಂದ್ ರನ್ನರ್.. ಬಿದ್ದಿದ್ದು ಹತ್ತಿಪ್ಪತ್ತು ಲಕ್ಷ ಮತಗಳಲ್ಲ!

ಮಂಜು ಬಿಗ್‌ಬಾಸ್ ಮನೆಯಲ್ಲಿ ಚೆನ್ನಾಗಿಯೇ ಆಟವಾಡಿದ್ದಲ್ಲದೆ, ವೀಕ್ಷಕರನ್ನು ರಂಜಿಸಿದ್ದರು. ಕಳೆದೆರಡು ತಿಂಗಳ ಹಿಂದೆ ಕೊರೊನಾ ಸೋಂಕಿನ ಎರಡನೇ ಅಲೆ ಹೆಚ್ಚಾಗಿ, ಎಲ್ಲೆಡೆ ಹಾಹಾಕಾರ ಸೃಷ್ಟಿಯಾದಾಗ, ಬಿಗ್‌ಬಾಸ್‌ ಚಿತ್ರೀಕರಣವನ್ನೂ ನಿಲ್ಲಿಸಲಾಗಿತ್ತು. ಮನೆಯಲ್ಲಿದ್ದ ಸ್ಪರ್ಧಿಗಳನ್ನು ಮರಳಿ ತಮ್ಮ ತಮ್ಮ ಮನೆಗೆ ಕಳಿಸಲಾಗಿತ್ತು. ಸ್ಪರ್ಧಿಗಳ ಹಾಗೂ ಸಿಬ್ಬಂದಿಗಳ ದೃಷ್ಟಿಯಿಂದ ಈ ನಿರ್ಧಾರ ಎನ್ನಲಾಗಿತ್ತು. ಹೀಗಾಗಿ ಮಂಜು ಮುಂತಾದವರು ಅರ್ಧದಲ್ಲೇ ಮನೆಗೆ ಮರಳುವ ಅನ್ನಿವೇಶ ಬಂದಿತ್ತು. ಮಜಾಭಾರತ ಖ್ಯಾತಿಯ ಮಂಜು, ಕಾಮಿಡಿ ಮೂಲಕವೇ ತಮ್ಮ ಅನ್ನ ಗಿಟ್ಟಿಸಿಕೊಂಡವರು. ಬಿಗ್‌ಬಾಸ್‌ ಮನೆಯಿಂದ ತಮ್ಮ ಅದೃಷ್ಟದ ಬಾಗಿಲು ತೆರೆಯಬಹುದು, ತನ್ನ ಅದೃಷ್ಟ ಖುಲಾಯಿಸಬಹುದು ಎಂದು ಅವರು ನಂಬಿಕೊಂಡಿದ್ದರು. ಆದರೆ ಆಟ ಅರ್ಧದಲ್ಲೇ ನಿಂತು ಹೋದಾಗ, ತುಂಬಾ ಬೇಜಾರುಪಟ್ಟುಕೊಂಡಿದ್ದರಂತೆ. ಇದೇನು, ತಾನು ಭಕ್ತಿಯಿಂದ ಆರಾಧಿಸಿದ ಧರ್ಮಸ್ಥಳದ ಮಂಜುನಾಥ ತನಗೆ ಹೀಗೆ ಮಾಡಿದನಲ್ಲಾ ಎಂದು ಅವರು ಕಣ್ಣೀರು ಸುರಿಸಿದ್ದರಂತೆ.
 

Tap to resize

Latest Videos

undefined


ಮಂಜು ಪಾವಗಡ, ಧರ್ಮಸ್ಥಳ ಶ್ರೀ ಮಂಜುನಾಥನನ್ನು ಸಿಕ್ಕಾಪಟ್ಟೆ ನಂಬುತ್ತಾರೆ. ತಾನು ಬದುಕಿನಲ್ಲಿ ಸಂದಿಗ್ದದಲ್ಲಿದ್ದ ಸಮಯದಲ್ಲೆಲ್ಲಾ ಮಂಜುನಾಥ ತನಗೆ ದಾರಿ ತೋರಿಸಿದ್ದಾನೆ, ಪಾರು ಮಾಡಿದ್ದಾನೆ ಎಂದು ಅವರು ಹೇಳುತ್ತಾರೆ. ಬಿಗ್‌ಬಾಸ್‌ನ ಕೊನೆಯ ಎಪಿಸೋಡ್‌ ಶೂಟ್ ಮಾಡುವ ಸಂದರ್ಭದಲ್ಲಿಯೂ, ನನ್ನನ್ನು ಮಂಜುನಾಥ ಕೈ ಬಿಡುವುದಿಲ್ಲ ಎಂದುಕೊಂಡಿದ್ದರಂತೆ. ಹಾಗೆಯೇ ಆಯಿತು. ಹಿಂದೆ ಒಮ್ಮೆ ಅವರು ಉಸಿರುಗಟ್ಟಿ ಕೋಮಾದಲ್ಲಿದ್ದಾಗ, ಅವರನ್ನು ಕುಟುಂಬದವರು ಶ್ರೀ ಮಂಜುನಾಥನ ತೀರ್ಥ ಪ್ರಸಾದ ನೀಡಿ ಬದುಕಿಸಿಕೊಂಡಿದ್ದರಂತೆ. ಮಜಾಭಾರತ ಸೇರುವ ಮುನ್ನವೂ, ಇತರ ಅವಕಾಶಗಳು ಬರುವ ಮುನ್ನವೂ ಅವರು ಶ್ರೀ ಮಂಜುನಾಥನಲ್ಲಿ ಬೇಡಿಕೊಂಡಿದ್ದಾರೆ. ಬೇಡಿದ್ದು ನಿಜವಾಗಿದೆ ಎನ್ನುತ್ತಾರೆ. ಅವರಿಗೆ ಹೆಸರಿಡುವಾಗಲೂ ಕುಟುಂಬದವರು ತುಂಬಾ ಯೋಚಿಸಿ, ಧರ್ಮಸ್ಥಳದ ಅಧಿದೈವದ ಕೃಪೆಯಿಂದ ಹುಟ್ಟಿದ ಎಂಬ ಕಾರಣದಿಂದ ಈ ಹೆಸರನ್ನು ಇಟ್ಟಿದ್ದಂತೆ. 

ಬಾಡಿ, ಬಣ್ಣ, ಸಂಬಂಧದ ಬಗ್ಗೆ ಟ್ರೋಲ್ ಮಾಡುತ್ತಾರೆ, ಕಷ್ಟವಾಗುತ್ತದೆ: ರಶ್ಮಿಕಾ ಮಂದಣ್ಣ

ಪಾವಗಡ ಮಂಜು ಒಂಥರಾ ಹಳ್ಳಿ ಹಕ್ಕಿ. ಅವರ ನಡೆ ನುಡಿ ಒಂಥರಾ ಕಚ್ಚಾ. ಆದರೆ ಹೃದಯವಂತ. ಇದು, ಅವರಿಗೆ ಬಂದ ವೀಕ್ಷಕರ ಮತಗಳಿಂದಲೇ ಪ್ರೂವ್ ಆಗಿದೆ. ಅವರು ಬಿಗ್‌ಬಾಸ್‌ನಲ್ಲಿ ಅತೀ ಹೆಚ್ಚು ವೋಟಿಂಗ್‌ ಪಡೆದಿದ್ದಾರೆ. ಸುಮಾರು 45 ಲಕ್ಷ ಮತ ಪಡೆದಿದ್ದಾರೆ ಅವರು. ಬಿಗ್‌ಬಾಸ್‌ ಪ್ರಥಮ ಸ್ಥಾನಿ ಪಡೆಯುವ ಸುಮಾರು 53 ಲಕ್ಷ ರೂಪಾಯಿಗಳನ್ನು ತಮ್ಮ ಪಾಲಾಗಿಸಿಕೊಂಡಿದ್ದಾರೆ. 
ಧರ್ಮಸ್ಥಳ ಶ್ರೀ ಮಂಜುನಾಥನ ಮಹಿಮೆಯನ್ನು ಸಾಬೀತು ಮಾಡುವ ಇಂಥ ಸಂಗತಿಗಳು ನಡೆಯುತ್ತಲೇ ಇರುತ್ತವೆ. ಕೆಲವರು ಅದನ್ನು ಹೇಳಿಕೊಳ್ಳುತ್ತಾರೆ, ಕೆಲವರು ಸೈಲೆಂಟ್ ಆಗಿ ತಮ್ಮ ಸಂಭ್ರಮವನ್ನು ಬಚ್ಚಿಟ್ಟುಕೊಳ್ಳುತ್ತಾರೆ. ಮಂಜುನಾಥನನ್ನು ಭಕ್ತಿಯಿಂದ ಧ್ಯಾನಿಸಿದವರಿಗೆ ಆತ ಕನಸಿನಲ್ಲಿ ಬರುವುದು, ಒಂದಲ್ಲ ಒಂದು ಮಾರ್ಗ ತೋರುವುದು ಇದ್ದೇ ಇದೆ. ಹಾಗೇ ಧರ್ಮಸ್ಥಳದ ಗುಡ್ಡದ ಮೇಲಿನ ಅಣ್ಣಪ್ಪ ದೈವ ಕೂಡ ನಂಬಿ ಬಂದವರನ್ನು ಕಾಪಾಡುವ ಮಹಿಮಾನ್ವಿತ ದೈವ. ಮಂಜುನಾಥ ಕೈಲಾಸವಾಸಿ ಶಿವನಾದರೆ, ಅಣ್ಣಪ್ಪ ಆತನ ನೆಚ್ಚಿನ ಬಂಟ. ಬದುಕಿನಲ್ಲಿ ಯಶಸ್ಸಿನ ಮಾರ್ಗ ತುಳಿಯಲು ಬಯಸುವವರು ಧರ್ಮಸ್ಥಳ ಶ್ರೀ ಮಂಜುನಾಥನ ಮೊರೆ ಹೋದರೆ ಯಶಸ್ಸು ಗ್ಯಾರಂಟಿ ಎಂಬುದಕ್ಕೆ ಇದು ಉದಾಹರಣೆ.

ಧರ್ಮಸ್ಥಳದ ಅಣ್ಣಪ್ಪ ದೇವನ ಇಂಟರೆಸ್ಟಿಂಗ್ ವಿಚಾರಗಳು
 

 

click me!