ಪಬ್ಲಿಕ್‌ನಲ್ಲೇ ಅಪ್ಪಿಗೆ ಕಿಸ್‌ ಕೊಟ್ಟ ಪಾರ್ಥ! ಲವ್‌ ಸ್ಟೋರಿ ನೋಡಿ ಭೂಮಿ ಶಾಕ್‌: ಮದ್ವೆಯಾದ್ರೆ ಗತಿಯೇನು?

Published : Mar 05, 2024, 01:42 PM IST
ಪಬ್ಲಿಕ್‌ನಲ್ಲೇ ಅಪ್ಪಿಗೆ ಕಿಸ್‌ ಕೊಟ್ಟ ಪಾರ್ಥ! ಲವ್‌ ಸ್ಟೋರಿ ನೋಡಿ ಭೂಮಿ ಶಾಕ್‌: ಮದ್ವೆಯಾದ್ರೆ ಗತಿಯೇನು?

ಸಾರಾಂಶ

ಅಪ್ಪಿ ಮತ್ತು ಪಾರ್ಥನ ಲವ್‌ ಸ್ಟೋರಿ ಭೂಮಿಕಾಗೆ ತಿಳಿಯಿತು. ಆದರೆ ಅಪ್ಪಿ ಮದುವೆಯಾಗಿ ಬಂದರೆ ರಾಕ್ಷಸ ಜೈದೇವನ ಕೈಯಿಂದ ಬಚಾವ್‌ ಮಾಡಲು ಸಾಧ್ಯನಾ?   

ಭೂಮಿಕಾ ತಂಗಿ ಅಪ್ಪಿ ಮತ್ತು ಮೈದುನ ಪಾರ್ಥನ ಲವ್‌ಸ್ಟೋರಿ ಭೂಮಿಕಾಗೆ ತಿಳಿದಿದೆ. ಗೌತಮ್‌ ತಮ್ಮನ ಜೊತೆ ಮದ್ವೆ ಎಂದಾಗ ಪಾರ್ಥ ಎಂದೇ ತಿಳಿದುಕೊಂಡಿದ್ದ ಅಪ್ಪಿ, ಮದುವೆಗೆ ಓಕೆ ಅಂದುಬಿಟ್ಟಿದ್ದಳು. ನಂತರ ಸತ್ಯ ಗೊತ್ತಾದಾಗ ತುಂಬಾ ತಡವಾಗಿ ಹೋಗಿತ್ತು. ಅನಿವಾರ್ಯವಾಗಿ ಜೈದೇವನ ಜೊತೆ ಮದ್ವೆಗೆ ಒಪ್ಪಿಕೊಂಡಿದ್ದಳು. ಆದರೆ ಕುತಂತ್ರಿ ಜೈದೇವ ಇದಾಗಲೇ ಕೆಲಸದಾಕೆ ಮಲ್ಲಿಯನ್ನು ಗರ್ಭಿಣಿ ಮಾಡಿರುವ ವಿಷಯ ತಿಳಿಯುತ್ತಲೇ ಭೂಮಿಕಾ ಅವರಿಬ್ಬರ ಮದ್ವೆ ಮಾಡಿಸುವಲ್ಲಿ ಶಕ್ಯಳಾಗಿದ್ದಳು. ಇದೀಗ ಕುತಂತ್ರಿಯಾಗಿರುವ ಜೈದೇವ ಹಾಗೂ ವಿಲನ್‌ ಆಗಿರುವ ಅತ್ತೆ ಶಕುಂತಲಾದೇವಿಯ ವೈರತ್ವ ಕಟ್ಟಿಕೊಂಡಿದ್ದಾಳೆ. ಇದರ ನಡುವೆಯೇ ಈಗ ತಂಗಿ ಮತ್ತು ಪಾರ್ಥನ ಲವ್‌ ಸ್ಟೋರಿ ವಿಷಯ ತಿಳಿದಿದೆ.

ಪಾರ್ಥ ಮತ್ತು ಅಪ್ಪಿ ಹೊರಗಡೆ ಐಸ್‌ಕ್ರೀಂ ತಿನ್ನುವ ಸಂದರ್ಭದಲ್ಲಿ ಸಾರ್ವಜನಿಕವಾಗಿಯೇ ಪಾರ್ಥ ಅಪ್ಪಿಗೆ ಕಿಸ್‌ ಮಾಡಿದ್ದಾನೆ. ಇದನ್ನು ಆಟೋದಲ್ಲಿದ್ದ ಭೂಮಿಕಾ ನೋಡಿದ್ದಾಳೆ. ಮುಂದೇನು ಆಗುತ್ತದೆ ಎನ್ನುವುದು ಕುತೂಹಲ. ಭೂಮಿಕಾ ನೋಡಿದ ಮೇಲೆ ತಂಗಿಯ ಮದ್ವೆ ಮಾಡಿಸಿಯೇ ತೀರುತ್ತಾಳೆ ಎನ್ನುತ್ತಾರೆ ಫ್ಯಾನ್ಸ್‌. ಆದರೆ ಅದು ಅಂದುಕೊಂಡಷ್ಟು ಸುಲಭವಲ್ಲ ಎನ್ನುವುದು ನಿಜ. ಒಂದು ವೇಳೆ ಮದ್ವೆಯಾದರೂ ಜೈದೇವನಿಂದ ಅಪ್ಪಿಯನ್ನು ಕಾಪಾಡುವುದು ಭೂಮಿಕಾಗೆ ಸವಾಲಾಗಿ ಹೋಗಬಹುದು. 

ಚಾಂದನಿ ಜೊತೆ ಸೀತಾ ಚೈಯಾ ಚೈಯಾ... ಅವ್ಳು ಒಳ್ಳೆಯವಳಲ್ಲ ಕಣೇ ಹುಷಾರ್ ಎಂದ ಫ್ಯಾನ್ಸ್​...

ಜೈದೇವ ಪತ್ನಿಯ ಮೇಲೆ ಕೈಮಾಡಿದ್ದಾಗಿ ಭೂಮಿಕಾ ಜೈದೇವನ ವಿರುದ್ಧ ತಿರುಗಿ ಬಿದ್ದಿದ್ದಳು. ಭೂಮಿಕಾ ಹೆಸರನ್ನು ಕೆಡಿಸಲು ಆಕೆಯ ಹೆಸರು ಹೇಳಿ ಖುದ್ದು ಜೈದೇವನೇ ತನ್ನ ಮೇಲೆ ಕೇಸು ದಾಖಲು ಮಾಡಿಕೊಂಡು ಭೂಮಿಕಾ ವಿರುದ್ಧ ಎಲ್ಲರ ದೃಷ್ಟಿಯಲ್ಲಿ ಆರೋಪಿ  ಮಾಡಿದ್ದಾನೆ.  ಇದು ಭೂಮಿಕಾಗೆ ತಿಳಿದಿದೆ. ಜೈದೇವನಿಗೆ ಚಾಲೆಂಜ್‌ ಹಾಕಿದ್ದಾಳೆ. ತನ್ನ ಮದುವೆ ಸಿಂಧುವೇ ಅಲ್ಲ ಎಂದಿದ್ದ ಜೈದೇವ. ಅಷ್ಟಕ್ಕೆ ಸುಮ್ಮನಾಗದ ಭೂಮಿಕಾ ಇಬ್ಬರ ಮದುವೆಯನ್ನು ನೋಂದಣಿ ಮಾಡಿಸಿಬಿಟ್ಟಿದ್ದಾಳೆ. ಇನ್ನು ತನ್ನ ಆಟ ಶುರು ಮಾಡಿಕೊಂಡಿದ್ದಾಳೆ. 

ಇದೀಗ ಭೂಮಿಕಾ ವಿರುದ್ಧ ಜೈದೇವ ಕೊತಕೊತ ಕುದಿಯುತ್ತಿದ್ದಾನೆ. ಇನ್ನು ಅಪ್ಪಿ ಮದುವೆಯಾಗಿ ಅದೇ ಮನೆಗೆ ಬಂದರೆ ಮುಗಿಯಿತು ಕಥೆ. ಜೈದೇವನ ವಿರುದ್ಧ ಯಾರೂ ಮಾತನ್ನು ಕೇಳಲು ಇಷ್ಟಪಡುವುದಿಲ್ಲ, ಒಂದೆಡೆ ಮಲ್ಲಿಯ ಜವಾಬ್ದಾರಿ ವಹಿಸಿಕೊಂಡಿರುವ ಭೂಮಿಕಾ, ಈಗ ಅಪ್ಪಿಯ ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕಾಗುತ್ತದೆ. ಇನ್ನು ಏನೇನು ಆಗುತ್ತದೆಯೋ ನೋಡಬೇಕು. 

ಗರ್ಭಿಣಿ ಅಲ್ಲದಿದ್ರೂ ಸೀಮಂತಕ್ಕೆ ರೆಡಿ! ಮಗಳ ದುರಾಸೆಗೆ ಮುಗ್ಧ ಅಮ್ಮನಿಗೆ ಇದೆಂಥ ಶಿಕ್ಷೆ!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?