ಕಾಮನೆಯ ಜೇನಿಗೆ, ಕವಣೆ ಬೀಸಿದ ರಮಣಿ ಭೂಮಿಕಾ, ಸೌಂದರ್ಯ ಸಮರಕ್ಕೆ ಹುಡುಗರು ಫಿದಾ!

By Sathish Kumar KH  |  First Published Jan 6, 2025, 7:50 PM IST

ಕನ್ನಡ ರೀಲ್ಸ್ ಸ್ಟಾರ್ ಭೂಮಿಕಾ ಬಸವರಾಜ್ ಅವರ ಮಾದಕ ನೃತ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿವೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಭೂಮಿಕಾ, ರೀಲ್ಸ್ ಮೂಲಕ ಗಣನೀಯ ಆದಾಯ ಗಳಿಸುತ್ತಿದ್ದಾರೆ.


ಕನ್ನಡ ರೀಲ್ಸ್ ಸ್ಟಾರ್‌ಗಳಲ್ಲಿ ಒಬ್ಬರಾದ ಭೂಮಿಕಾ ಬಸವರಾಜ್ ಅವರು ಕೂಡ ಒಬ್ಬರಾಗಿದ್ದಾರೆ. ಅವರ ಮಾದಕ ಡ್ಯಾನ್ಸ್‌ಗೆ ಮಾರು ಹೋಗದವರೇ ಇಲ್ಲ. ಇದೀಗ ಇನ್ನೊಂದು ಹಾಟ್ ಆಗಿರುವ ನಿರಿನ ಡ್ಯಾನ್ಸ್ ಮಾಡಿ ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಭೂಮಿನಾ ಅವರ ಸೌಂದರ್ಯ ನೋಡಿದ ಪಡ್ಡೆಗಳಿಗೆ ಮಾತ್ರ ಮತ್ತೊಮ್ಮೆ ವೀಡಿಯೋ ನೋಡಬೇಕು ಎಂದಿನಿಸದಿರಲು ಸಾಧ್ಯವೇ ಇಲ್ಲ ಎನ್ನಬಹುದು. ಇದಕ್ಕೆ ಕಾರಣ ಸೌಂದರ್ಯ ಸಮರ ಹಾಡಿಗೆ ಅವರು ಬಳುಕುತ್ತಾ ಮಾಡಿರುವ ನೃತ್ಯ. ಮಾದಕ ಡ್ಯಾನ್ಸ್‌ಗೆ ಕೇವಲ ಒಂದು ಗಂಟೆಯಲ್ಲಿ 16 ಸಾವಿರಕ್ಕೂ ಹೆಚ್ಚು ಲೈಕ್ಸ್‌ ಬಂದಿವೆ.

ಭೂಮಿಕಾ ಬಸವರಾಜ್ ಅವರು ಟಿಕ್ ಟಾಕ್‌ ರೀಲ್ಸ್‌ಗಳಿಂದ ಪ್ರಸಿದ್ಧಿಗೆ ಬಂದಿದ್ದಾರೆ. ಆದರೆ, ನಮ್ಮ ದೇಶದಲ್ಲಿ ಟಿಕ್‌ಟಾಕ್ ಬ್ಯಾನ್ ಮಾಡಿದ ಬಳಿಕ ಅಲ್ಲಿಂದ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ ಮೂಲಕ ಮತ್ತೆ ಮುನ್ನೆಲೆಗೆ ಬಂದರು. ಇದೀಗ ಭೂಮಿಕಾ ಅವರ ಇನ್‌ಸ್ಟಾಗ್ರಾಮ್‌ಗೆ ಬರೋಬ್ಬರಿ 2.3 ಮಿಲಿಯನ್ (23 ಲಕ್ಷ) ಫಾಲೋವರ್ಸ್‌ಗಳಿದ್ದಾರೆ. ಅವರ ಒಂದೊಂದು ವಿಡಿಯೋಗಳು ಕೆಲವೊಮ್ಮೆ 50 ಲಕ್ಷಕ್ಕೂ ವೀಕ್ಷಣೆಗಳನ್ನು ಪಡೆಯುತ್ತವೆ. ಆದರೆ, ಅವರು ಹುಚ್ಚುಚ್ಚಾಗಿ ವಿಡಿಯೋಗಳನ್ನು ಹರಿಬಿಡದೇ ತಮ್ಮದೇ ಸ್ವಂತ ವಿಡಿಯೋಗಳನ್ನು ಹಂಚಿಕೆ ಮಾಡಿಕೊಳ್ಳುತ್ತಾ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.

Tap to resize

Latest Videos

ಇನ್ನು ಭೂಮಿಕಾ ರೀಲ್ಸ್ ಮಾಡಿದ ವಿಡಿಯೋಗಳನ್ನು ಹಂಚಿಕೊಂಡರೆ ಕೆಲವೇ ನಿಮಿಷಗಳಲ್ಲಿ ಸಾವಿರಾರು ಲೈಕ್ಸ್‌ಗಳು ಕಾಮೆಂಟ್‌ಗಳು ಹರಿದುಬರುತ್ತವೆ. ಅಂಥದ್ದರಲ್ಲಿ ಮಾದಕ ಡ್ಯಾನ್ಸ್‌ನ ವಿಡಿಯೋ ಹಂಚಿಕೊಂಡರಂತೂ ಪಡ್ಡೆಗಳಿಗೆ ಹಬ್ಬವೆಂದೇ ಹೇಳಬಹುದು. ಅದರಲ್ಲಿ ಬಹುತೇಕರು ಭೂಮಿನಾ ಅವರ ಅಭಿಮಾನಿಗಳೇ ಆಗಿರುತ್ತಾರೆ. ಅವರಿಗೆ ರೀಲ್ಸ್‌ ಮೂಲಕ ಮನರಂಜನೆ ನೀಡಿ ಇವರು ಆದಾಯ ಗಳಿಸುತ್ತಾರೆ. ಇದೇ ದೊಡ್ಡ ಮತ್ತು ಸಣ್ಣ ಕ್ಯಾಮೆರಾಗಳಿಗೂ ಇರುವ ವ್ಯತ್ಯಾಸವಾಗಿದೆ. ಆದರೆ, ತಾವು ನೃತ್ಯ ಮಾಡಿದ ವಿಡಿಯೋಗಳನ್ನು ಲಕ್ಷಾಂತರ ಬೆಲೆ ಬಾಳುವ ದೊಡ್ಡ ಕ್ಯಾಮೆರಾಗಳಲ್ಲಿ ಸೆರೆ ಹಿಡಿದು, ಹಲವಾರು ಬಾರಿ ರೀಟೇಕ್ ಮಾಡಿ ಎಡಿಟಿಂಗ್‌ನೊಂದಿಗೆ ಅಂತಿಮವಾಗಿ ಒಂದು ಒಳ್ಳೆಯ ವಿಡಿಯೋ ತಯಾರಿಸಿ ಸಾಮಾಜಿಕ ಜಾಲತಾಣಕ್ಕೆ ಹಂಚಿಕೊಳ್ಳುತ್ತಾರೆ. ಅವರ ಶ್ರಮಕ್ಕೆ ಅಭಿಮಾನಿಗಳು ಕೂಡ ಉತ್ತಮ ಪ್ರತಿಕ್ರಿಯೆ ನೀಡುತ್ತಾರೆ. ಆದರೆ, ಈ ಪೈಕಿ ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡಿದರೂ ಇದಕ್ಕೆ ಅವರು ತಲೆ ಕೆಡಿಸಿಕೊಳ್ಳವುದಿಲ್ಲ.

ಇದನ್ನೂ ಓದಿ: 'ನಿಮ್ಮ ಹೊಲಸು ಬಾಯಿಗೆ ಬ್ರೇಕ್‌ ಹಾಕಿ..' ಭೂಮಿಕಾ ಬಸವರಾಜ್‌ ಹೀಗೆ ಜಾಡಿಸಿದ್ದು ಯಾರಿಗೆ?

ನಮ್ಮ ರಾಜ್ಯದಲ್ಲಿ ರೀಲ್ಸ್ ಮಾಡುತ್ತಾ ಪ್ರಸಿದ್ಧಿಯಾಗಿ ಟಿವಿಯ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡವರೂ ಇದ್ದಾರೆ. ಈವರೆಗೆ ಭೂಮಿಕಾ ಬಸವರಾಜ್ ಅವರು ಯಾವುದೇ ಕಿರುತೆರೆ ಅಥವಾ ಹಿರಿತೆರೆಯಲ್ಲಿ ದೊಡ್ಡದಾಗಿ ಕಾಣಿಸಿಕೊಂಡಿಲ್ಲ. ಇನ್ನು ಹೆಚ್ಚು ಗಾಸಿಪ್ ಕೂಡ ಮಾಡಿಕೊಂಡವರಲ್ಲ. ಕೆಲವರು ಕೆಟ್ಟಾದಾಗಿ ಮಾತನಾಡಿದರೂ ಅದಕ್ಕೆ ತಲೆ ಕೆಡಿಸಿಕೊಳ್ಳದೇ ತಮ್ಮ ನೃತ್ಯದ ಪ್ರತಿಭೆಯನ್ನು ಸಾಮಾಜಿಕ ಜಾಲತಾಣದ ಅಭಿಮಾನಿಗಳಿಗೆ ಪ್ರದರ್ಶನ ಮಾಡುತ್ತಿದ್ದಾರೆ. ಅದೇ, ರೀತಿ ಶ್ರಮಕ್ಕೆ ತಕ್ಕಂತೆ ಲಕ್ಷಾಂತರ ಆದಾಯವನ್ನೂ ಗಳಿಸುತ್ತಾರೆ.

 
 
 
 
 
 
 
 
 
 
 
 
 
 
 

A post shared by Bhumika (@bhumika_basavaraj)

ಟಿಕ್‌ಟಾಕ್‌ನಿಂದ ಹಿಡಿದು ಇನ್‌ಸ್ಟಾಗ್ರಾಮ್ ರೀಲ್ಸ್‌ವರೆಗೂ ತನ್ನ ಖ್ಯಾತಿಯನ್ನು ಕಳೆದುಕೊಳ್ಳದೇ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಕನ್ನಡತಿಯರೆಂದರೆ ನಿವೇದಿತಾ ಗೌಡ, ಸೋನು ಶ್ರೀನಿವಾಸ ಗೌಡ, ಬಿಂದು ಗೌಡ, ಭೂಮಿಕಾ ಬಸವರಾಜ್, ಧನುಶ್ರೀ ಸೇರಿದಂತೆ ಅನೇಕರಿದ್ದಾರೆ. ಇದರಲ್ಲಿ ಈಗಾಗಲೇ ನಿವೇದಿತಾ ಗೌಡ, ಸೋನು ಶ್ರೀನಿವಾಸ್ ಗೌಡ ಹಾಗೂ ಧನುಶ್ರೀ ಬಿಗ್ ಬಾಸ್ ಮನೆಗೆ ಬಂದು ಹೋಗಿದ್ದಾರೆ. ಇವರೆಲ್ಲರ ಪೈಕಿ ನಿವೇದಿತಾ ಗೌಡ ಬಿಗ್ ಬಾಸ್ ಮನೆಯ ಸಹಸ್ಪರ್ಧಿ ರ್ಯಾಪರ್ ಚಂದನ್ ಶೆಟ್ಟಿಯನ್ನು ಮದುವೆಯಾಗಿ ಡಿವೋರ್ಸ್‌ ಕೊಟ್ಟು ಮತ್ತೆ ಸ್ವತಂತ್ರ ಹಕ್ಕಿಯಾಗಿ ಮತ್ತೆ ರೀಲ್ಸ್ ಮಾಡಲು ಆರಂಭಿಸಿದ್ದಾರೆ. ಆದರೆ, ಈವರೆಗೆ ನಿವೇದಿತಾ ಗೌಡ ಬಿಟ್ಟು ಉಳಿದ ಎಲ್ಲರೂ ಸ್ಟಿಲ್ ಸಿಂಗಲ್ ಆಗಿದ್ದಾರೆ.

ಇದನ್ನೂ ಓದಿ: ರೀಲ್ಸ್‌ ರಾಣಿ ಭೂಮಿಕಾ ಬಸವರಾಜ್‌ ಗುಡ್ಡು ಇನ್ನಿಲ್ಲ; ಕಣ್ಣೀರಿಡುತ್ತಾ ಪೂಜೆ ಸಲ್ಲಿಸಿದ ಸುಂದರಿ!

click me!