ಬೆಂಕಿ ಜೊತೆ ನಿವೇದಿತಾ ಗೌಡ ಸರಸ: ಪಕ್ಕದ ಯುವಕನ ಮೇಲೆ ನೆಟ್ಟಿಗರ ಕಣ್ಣು! ಯಾರೀತ?

By Suchethana D  |  First Published Jan 6, 2025, 4:14 PM IST

ಬೆಂಕಿಯ ಜೊತೆ ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಆಟ ಆಡುತ್ತಿರುವ ವಿಡಿಯೋ ಶೇರ್​ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ಏನು ಹೇಳ್ತಿದ್ದಾರೆ ನೋಡಿ!
 


ಬಾರ್ಬಿ ಡಾಲ್​ ಎಂದೇ ಫೇಮಸ್​ ಆಗಿರೋ ನಿವೇದಿತಾ ಗೌಡ ಹೊಸ ವರ್ಷದಲ್ಲಿ ಸಕತ್​ ಬಿಜಿಯಾಗಿದ್ದಾರೆ. ಇದಾಗಲೇ ವಿದೇಶಗಳಲ್ಲಿ ಹೊಸ ವರ್ಷದ ಪಾರ್ಟಿ ಎಂಜಾಯ್​ ಮಾಡಿರುವ ಬಿಗ್​ಬಾಸ್​ ಖ್ಯಾತಿಯ ನಟಿ, ದಿನಕ್ಕೊಂದರಂತೆ ಹೊಸ ಹೊಸ ವಿಡಿಯೋ ಶೇರ್​ ಮಾಡುತ್ತಲೇ ಇದ್ದಾರೆ.  ಇದಾಗಲೇ ಕ್ರಿಸ್​ಮಸ್​ ಸಂದರ್ಭದಲ್ಲಿ ನ್ಯೂಯಾರ್ಕ್​, ಲಂಡನ್​ ಎಂದೆಲ್ಲಾ ನಟಿ ಎಂಜಾಯ್  ಮಾಡಿದ್ದಾರೆ. ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ನಿವೇದಿತಾ, ಬೆಂಕಿಯ ಜೊತೆ ಸರಸವಾಡಿದ್ದಾರೆ. ಅಷ್ಟಕ್ಕೂ ಅವರೇನೂ ಬೆಂಕಿಯನ್ನು ಹಿಡಿದುಕೊಳ್ಳಲಿಲ್ಲ. ಆದರೆ ಬೆಂಕಿಯ ಚೆಂಡಿನಿಂದ ಆಟವಾಡುವ ಯುವಕನ ಜೊತೆ ರೀಲ್ಸ್​ ಮಾಡಿದ್ದಾರೆ ನಟಿ. 

ವಿದೇಶದಲ್ಲಿ ಇರುವಾಗಲೇ ಈ ವಿಡಿಯೋ ತೆಗೆದಿರಬಹುದು ಎಂದು ನೆಟ್ಟಿಗರು ಊಹಿಸಿದ್ದಾರೆ. ಇದರಲ್ಲಿ ನಟಿ ನೇರವಾಗಿ ಬೆಂಕಿಯಿಂದ ಆಟವಾಡದಿದ್ದರೂ, ಹೀಗೆ ನಿಲ್ಲಲು ಸಕತ್​ ಧೈರ್ಯ ಅಂತೂ ಬೇಕೇ ಬೇಕು. ಎಷ್ಟೇ ಎಕ್ಸ್​ಪರ್ಟ್​ ಆದರೂ ಗ್ರಹಚಾರ ತಪ್ಪಿದರೆ ಬೆಂಕಿ ಸ್ವಲ್ಪ ಅತ್ತಿತ್ತ ಆದರೂ ಎಡವಟ್ಟಾಗುವುದು ಗ್ಯಾರೆಂಟಿ. ಆದ್ದರಿಂದ ಅಂಥ ವ್ಯಕ್ತಿಯ ಮೇಲೆ ನಂಬಿಕೆಯೂ ಅಷ್ಟೇ ಮುಖ್ಯ. ಇದೇ ಕಾರಣಕ್ಕೆ ಪಕ್ಕದಲ್ಲಿರುವ ಆ ಯುವಕ ಯಾರು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ಆತ ಒಬ್ಬ ಬೆಂಕಿಯ ಕಲಾವಿದ ಅಷ್ಟೇ. ಆದರೆ ನೆಟ್ಟಿಗರು ಸುಮ್ಮನೇ ಇರಬೇಕಲ್ಲ. ಇದಾಗಲೇ ನ್ಯೂಯಾರ್ಕ್​ನಲ್ಲಿ ಯುವಕನೊಬ್ಬನ ಜೊತೆ ಇದ್ದ ನಿವೇದಿತಾ ಬಗ್ಗೆ ಇನ್ನಿಲ್ಲದಂತೆ ಕಮೆಂಟ್ಸ್​ ಬಂದಿದ್ದವು. ಆ ಯುವಕ ಯಾರು ಎಂಬ ಬಗ್ಗೆ ಫ್ಯಾನ್ಸ್​ ತಲೆನೂ ಕೆಡಿಸಿಕೊಂಡಿದ್ದರು. ಇದೀಗ ಈ ಯುವಕನನ್ನೂ ನೆಟ್ಟಿಗರು ಬಿಡುತ್ತಿಲ್ಲ. ಒಟ್ಟಿನಲ್ಲಿ ನಿವೇದಿತಾ ಅವರನ್ನು ಗೋಳು ಹೊಯ್ದುಕೊಳ್ಳುವುದು ಎಂದರೆ ಎಲ್ಲಿಲ್ಲದ ಪ್ರೀತಿ.

Tap to resize

Latest Videos

ಆ ವ್ಯಕ್ತಿಯನ್ನು ಓತಿಕ್ಯಾತಕ್ಕೆ ಹೋಲಿಸಿದ ನಿವೇದಿತಾ ಗೌಡ! ಅವ್ರಿಗಿಂತ ಮೈಮೇಲೆ ಬಿಟ್ಕೊಂಡ ಇದೇ ಲೇಸೆಂದು ಹೇಳೋದಾ ನಟಿ?

ಇನ್ನು ಮೊನ್ನೆಯಷ್ಟೇ, ನಟಿ  ಓತಿಕ್ಯಾತ ಪ್ರಭೇದಕ್ಕೆ ಸೇರಿದ ಪ್ರಾಣಿಯೊಂದನ್ನು ಮೈಮೇಲೆ ಬಿಟ್ಟುಕೊಂಡಿದ್ದರು. ಇದು ಅವರ ಮೈಮೇಲೆ ಓಡಾಡಿದೆ. ಆದರೆ ಎಲ್ಲರ ಗಮನ ಹೋಗಿದ್ದು ನಿವೇದಿತಾ ಕೊಟ್ಟಿರುವ ಶೀರ್ಷಿಕೆಗೆ! ಈ ಪ್ರಾಣಿ ನಾನು ಭೇಟಿಯಾಗಿರುವವರಿಗಿಂತಲೂ ಲೇಸು ಎಂದು ಟಾಂಟ್​ ಕೊಟ್ಟಿದ್ದರು. ತಮ್ಮ ಜೀವನದಲ್ಲಿ ಬಂದಿರುವ ಕೆಲವು ವ್ಯಕ್ತಿಗಳು ಎನ್ನುವ ಅರ್ಥದಲ್ಲಿ ನಿವೇದಿತಾ ಹೀಗೆ ಬರೆದಿದ್ದರೂ, ಇದು ಯಾರೋ ಒಬ್ಬ ವ್ಯಕ್ತಿಗೆ ಕೊಟ್ಟಿರೋ ಟಾಂಟ್​ ಎಂಬ ಚರ್ಚೆ ಶುರುವಾಗಿದೆ. ಇದು ಖಂಡಿತವಾಗಿಯೂ ಮಾಜಿ ಗಂಡ ಚಂದನ್​ ಶೆಟ್ಟಿಯವರಿಗೆ ಕೊಟ್ಟಿರೋ ಟಾಂಟ್​ ಆಗಿದೆ ಎನ್ನುತ್ತಿರುವವರೇ ಹೆಚ್ಚು. 

ಇನ್ನು ಕೆಲವರು ಈ ವಿಡಿಯೋಗೂ ಮಾಮೂಲಿನಂತೆ ಟ್ರೋಲ್​ ಮಾಡುತ್ತಿದ್ದಾರೆ. ಜೋಪಾನ ಕಣಮ್ಮಿ, ಎಲ್ಲೆಲ್ಲೋ ಬಿಟ್ಕೊಬೇಡ ಎಂದು ಹಲವರು ಅಸಹ್ಯ ಎನ್ನುವಂಥ ಕಮೆಂಟ್ಸ್​ಗಳನ್ನೂ ಮಾಡಿದ್ದಾರೆ. ಇನ್ನು ಈ ಶೀರ್ಷಿಕೆ ಕೊಟ್ಟಿದ್ದು ಯಾರಿಗೆ ಎನ್ನುವುದನ್ನು ಸ್ವಲ್ಪ ಬಿಡಿಸಿ ಹೇಳು ಎಂದಿದ್ದಾರೆ ಮತ್ತೆ ಕೆಲವರು.   ಇದಾಗಲೇ ನಿವೇದಿತಾ  ಕ್ರಿಸ್​ಮಸ್​ ಸಮಯದಲ್ಲಿ  ವೈನ್​ ಹೀರುವ ಫೋಟೋ ಒಂದನ್ನು ಇವರು ಈಗಾಗಲೇ ಅಪ್​ಲೋಡ್​ಮಾಡಿದ್ದರು. ಇದೀಗ ಕ್ರಿಸ್​ಮಸ್​ ಆಚರಿಸಲು ವಿದೇಶಕ್ಕೆ ಹೋಗಿರುವ ಕಾರಣದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ್ರಾ ಎಂದು ಪ್ರಶ್ನಿಸುತ್ತಿದ್ದಾರೆ. ಸಾಲದು ಎನ್ನುವುದಕ್ಕೆ ನಿನ್ನೆ ಹೊಸ ವರ್ಷದ ಸೆಲಬ್ರೇಷನ್​ ವೇಳೆ ಕಂಬವನ್ನು ಏರಿರುವ ವಿಡಿಯೋ ಶೇರ್​ ಮಾಡಿ ಸಕತ್​ ಟ್ರೋಲ್​ಗೂ ಒಳಗಾಗಿದ್ದರು. 

 

click me!