ಮತ್ತೆ ಪತ್ತೆದಾರಿಕೆ ಶುರು ಮಾಡಿದ ಭೂಮಿ... ಲೇಡಿ ಜೇಮ್ಸ್ ಬಾಂಡ್ ಬ್ಯಾಕ್... ಇನ್ನು ಶಕುಂತಲಾಗೆ ಉಳಿಗಾಲವಿಲ್ಲ!

Published : Mar 19, 2025, 01:36 PM ISTUpdated : Mar 19, 2025, 03:11 PM IST
ಮತ್ತೆ ಪತ್ತೆದಾರಿಕೆ ಶುರು ಮಾಡಿದ ಭೂಮಿ... ಲೇಡಿ ಜೇಮ್ಸ್ ಬಾಂಡ್ ಬ್ಯಾಕ್... ಇನ್ನು ಶಕುಂತಲಾಗೆ ಉಳಿಗಾಲವಿಲ್ಲ!

ಸಾರಾಂಶ

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಪಾತ್ರದ ಬಗ್ಗೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದರು. ಆದರೆ ಹೊಸ ಪ್ರೋಮೋದಲ್ಲಿ ಭೂಮಿಕಾ ಮತ್ತೆ ದಿಟ್ಟತನದಿಂದ ಕಾಣಿಸಿಕೊಂಡಿದ್ದಾಳೆ. ಶಕುಂತಲಾ ನೀಡಿದ ಚಿನ್ನದ ಹಾರದಲ್ಲಿ ಮೈಕ್ರೋಫೋನ್ ಪತ್ತೆಯಾದ್ದರಿಂದ ಆಕೆಗೆ ಅನುಮಾನ ಶುರುವಾಗಿದೆ. ಅತ್ತೆಯ ಕುತಂತ್ರಗಳನ್ನು ಬಯಲು ಮಾಡಲು ಭೂಮಿಕಾ ಮುಂದಾಗಿದ್ದು, ವೀಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.  

ಅಮೃತಧಾರೆ ಧಾರಾವಾಹಿಯಲ್ಲಿ (Amruthadhaare Serial) ಇಲ್ಲಿವರೆಗೆ ಸಖತ್ ಟ್ವಿಸ್ಟ್, ಟರ್ನ್ ಗಳಿಂದ ಭರ್ಜರಿ ಮನರಂಜನೆ ನೀಡಿತ್ತು, ಆದರೆ ಭೂಮಿಕಾ ಪಾತ್ರ ಮಾತ್ರ ಜನರಿಗೆ ಸಿಕ್ಕಾಪಟ್ಟೆ ಬೇಸರ ತಂದಿತ್ತು. ಆದರೆ ಈವಾಗ ಬಿಡುಗಡೆಯಾಗಿರುವ ಪ್ರೊಮೋ ನೋಡಿದ್ರೆ, ಕಥೆಯಲ್ಲಿ ಮತ್ತೆ ಹೈ ವೋಲ್ಟೇಜ್ ಬರಲಿದೆ ಅನ್ನುವಂತೆ ಕಾಣಿಸ್ತಿದೆ. ಭೂಮಿಕಾ ಮತ್ತೆ ತನ್ನ ಹಳೆಯ ರೂಪಕ್ಕೆ ಎಂಟ್ರಿ ಕೊಟ್ಟಿದ್ದಾಳೆ. 

'ಅಮೃತಧಾರೆ' ಶೂಟಿಂಗ್​ ವೇಳೆ ಭೂಮಿಕಾ ಸೀರೆಗೆ ಬೆಂಕಿ! ಸೆಟ್​ನಲ್ಲಿ ಆಗಿದ್ದೇನು? ತೆರೆಮರೆ ಕಥೆ ಏನು?

ಹಿಂದೆ ಏನೇನು ಆಗಿತ್ತು? 
ಭೂಮಿಕಾ ಅಂದ್ರೆ ಕೇವಲ ಟೀಚರ್ ಮಾತ್ರ ಅಲ್ಲ, ಅನ್ಯಾಯದ ವಿರುದ್ಧ ಯಾವಾಗಲೂ ಧನಿ ಎತ್ತುವ ದಿಟ್ಟ ಮಹಿಳೆ ಕೂಡ ಹೌದು. ಮದುವೆಯಾದ ಆರಂಭದಲ್ಲಿ ಅತ್ತೆ ಶಕುಂತಲಾ ಮುಖವಾಡವನ್ನು ಕಳಚಿ, ತನಗೆ ಎಲ್ಲೂ ಕೂಡ ಸೋಲು ಆಗದಂತೆ ನೋಡಿಕೊಂಡಿದ್ದರು. ಅತ್ತೆಗೆ ಸರಿಯಾದ ತಿರುಗೇಟನ್ನು ಕೊಟ್ಟಿದ್ದಳು. ಆದರೆ ಬರ್ತಾ ಬರ್ತಾ, ಭೂಮಿಕಾ ಕ್ಯಾರೆಕ್ಟರ್ ಎಷ್ಟೊಂದು ಶಾಂತವಾಗಿ ಮಾಡಿದ್ರೂ, ಅಂದ್ರೆ, ಭೂಮಿ ಹಿಂದೆ ಶಕುಂತಲಾ ಅಷ್ಟೆಲ್ಲಾ ಆಟ ಆಡಿದ್ರೂ ಸಹ, ಭೂಮಿಕಾಗೆ ಯಾವುದೇ ವಿಷ್ಯದಲ್ಲೂ ಒಂದು ಸಣ್ಣ ಸಂದೇಹ ಕೂಡ ಬರಲೇ ಇಲ್ಲ. ತಂಗಿ ಅಪೇಕ್ಷಾ ಇದ್ದಕ್ಕಿದ್ದಂತೆ ತನ್ನ ವಿರುದ್ಧ ಇಷ್ಟೊಂದು ತಿರುಗಿ ಬೀಳೋಕೆ ಕಾರಣ ಏನು ಅಂತಾನೂ ಭೂಮಿಗೆ ಗೊತ್ತಾಗಲಿಲ್ಲ. ಅಷ್ಟೇ ಯಾಕೆ ಕೊನೆಗೆ ಮಗುವಿನ ವಿಷ್ಯ ಇಟ್ಟುಕೊಂಡು ಸಹ ಶಕುಂತಲಾ ಚೆನ್ನಾಗಿಯೇ ಭೂಮಿಕಾ ತಲೆ ಕೆಡಿಸಿದ್ದರು. ಮಗು ಇಲ್ಲದೇ ಇದ್ದರೆ, ಇಡೀ ಕುಟುಂಬಕ್ಕೆ ದೋಷ ಇದೆ ಎನ್ನುತ್ತಾ, ಭೂಮಿಕಾಳೆ ಗೌತಮ್ ಗೆ ಬೇರೆ ಹುಡುಗಿಯನ್ನು ಹುಡುಗಿ ಮದುವೆ ಮಾಡಿಸುವಂತೆ ಕೂಡ ಮಾಡಿದ್ದರು. ಇನ್ನೇನು ತಾನು ಗೆದ್ದೆ ಅಂದುಕೊಳ್ಳುವಾಗ, ಗೌತಮ್ ಭೂಮಿಕಾ ಕುತ್ತಿಗೆ ಮತ್ತೆ ತಾಳಿ ಕಟ್ಟುವ ಮೂಲಕ, ತನ್ನ ಜೀವನದಲ್ಲಿ ಭೂಮಿಕಾ ಅಲ್ಲದೇ ಬೇರೆ ಯಾರಿಗೂ ಜಾಗ ಇಲ್ಲ ಅನ್ನೋದನ್ನು ಹೇಳಿದನು. ಅಷ್ಟೇ ಯಾಕೆ ಈಗ ಭೂಮಿ ತಾಯಿಯಾಗುವ ಸಂತಸದಲ್ಲೂ ಇದ್ದಾಳೆ. 

‘ಕರ್ಣ’ನ ಎಂಟ್ರಿಗಾಗಿ ಶೀಘ್ರದಲ್ಲೇ ಅಂತ್ಯ ಕಾಣಲಿದೆಯೇ ಝೀ ವಾಹಿನಿಯ ಈ ಜನಪ್ರಿಯ ಧಾರಾವಾಹಿ?

ಭೂಮಿಕಾ ಪಾತ್ರದ ವಿರುದ್ಧ ವೀಕ್ಷಕರ ಬೇಸರ
ಅತ್ತೆ ಏನೇ ಮಾಡಿದರೂ ಭೂಮಿಕಾಗೆ ಗೊತ್ತಾಗದೇ, ತನ್ನ ಕಣ್ಣೆದುರೆ ಎಲ್ಲಾ ನಡೆಯುತ್ತಿದ್ದರೂ, ಸೈಲೆಂಟ್ ಆಗಿದ್ದ ಭೂಮಿಕಾ ಪಾತ್ರದ ವಿರುದ್ಧ ವೀಕ್ಷಕರು ಕಿಡಿ ಕಾರಿದ್ದರು. ಭೂಮಿಕಾ ಪಾತ್ರವನ್ನು ಮತ್ತೆ ಸ್ಟ್ರಾಂಗ್ ಮಾಡೋದಕ್ಕೆ, ಅತ್ತೆಯ ಎಲ್ಲಾ ಕುತಂತ್ರಗಳನ್ನು ಭೂಮಿಕಾ ಬಯಲು ಮಾಡಬೇಕು ಎಂದು  ವೀಕ್ಷಕರು ಹೇಳುತ್ತಿದ್ದರು. ಇದೀಗ ಆ ಕಾಲ ಬಂದಾಗಿದೆ. 

ಚಿನ್ನದ ಹಾರದಲ್ಲಿ ಮೈಕ್ರೋಫೋನ್ ನೋಡಿ ಶುರುವಾಯ್ತು ಭೂಮಿಕಾಗೆ ಸಂಶಯ
ಶಕುಂತಲಾ ಕೊಟ್ಟ ಚಿನ್ನದ ಹಾರದಲ್ಲಿ ಮೈಕ್ರೋಫೋನ್ ನೋಡಿದ ಭೂಮಿಕಾಗೆ ಸಂಶಯ ಮೂಡಿದೆ. ಈ ಮೈಕ್ರೋಫೋನ್ ಗೂ ಅತ್ತೆಗೂ ಏನೋ ಸಂಬಂಧ ಇದೆಯೇ ಎಂದು ಯೋಚನೆ ಮಾಡ್ತಾಳೆ ಭೂಮಿಕಾ. ಸರದ ಬಗ್ಗೆ ಗೌತಮ್ ಬಳಿ ಕೇಳಿದಾಗ, ಈ ಸರವನ್ನು ನನ್ನ ಹೆಂಡತಿಯಾಗಿ ಬರೋಳಿಗೆ ಕೊಡಬೇಕು ಎಂದು ನನ್ನ ಅಪ್ಪ ಯಾವುದೋ ಕಾಲದಲ್ಲಿ ಮಾಡಿಸಿಟ್ಟಿದ್ದು, ಈ ಸರ ಎಮ್ದು ಗೌತಮ್ ಹೇಳ್ತಾನೆ. ಬಳಿಕ ಭೂಮಿಕಾ ಚೈನ್ ತೆಗೆದುಕೊಂಡು, ನೇರವಾಗಿ ಶಕುಂತಾಲಾ ಮುಂದೆ ಕುಳಿತು, ಅತ್ತೆ ನಿಮಗೆ ಈ ಚೈನ್ ಎಲ್ಲಿಂದ ಬಂತು ಎಂದು ಕೇಳುತ್ತಾಳೆ. ಭೂಮಿ ಮಾತು ಕೇಳಿ, ಶಕುಂತಲಾ ಮುಖದಲ್ಲಿ ಭಯ ಕಾಣಿಸುತ್ತಿದೆ. ಮುಂದೆ ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕು. 

ಅಮೃತಧಾರೆ ಧಾರಾವಾಹಿ: ಭೂಮಿಕಾಗೆ ಮೋಸಗಾತಿ ಎಂದ ಗೌತಮ್;‌ ತ್ಯಾಗಮಯಿ ಪತ್ನಿಗೆ ಇಂಥ ಮಾತು ಹೇಳೋದಾ?

ವೀಕ್ಷಕರು ಹೇಳಿದ್ದೇನು? 
ಪ್ರೊಮೋ ನೋಡಿದ ವೀಕ್ಷಕರು ಖುಷಿಯಾಗಿದ್ದು, ಮತ್ತೆ ಭೂಮಿ ಟೀಚರ್ ಸ್ಪೈ ಕೆಲಸ ಶುರು ಮಾಡಿದ್ರು ಎಂದಿದ್ದಾರೆ, ಅಷ್ಟೇ ಅಲ್ಲ, ಇನ್ನು ಶಕುಂತಲಾಗೆ ಉಳಿಗಾಲವಿಲ್ಲ. ಲೇಡಿ ಜೇಮ್ಸ್ ಬಾಂಡ್ ಬ್ಯಾಕ್, ಸಿಐಡಿ ಭೂಮಿ ಗೆ ಬರ್ಲಿ ಚಪ್ಪಾಳೆ, ಶಕುಂತಲಾ ನಿನ್ನ ಕಥೆ ಫಿನಿಶ್, ಭೂಮಿಕಾ ಖಂಡಿತವಾಗಿಯೂ ಸತ್ಯವನ್ನು ಕಂಡುಕೊಳ್ಳುತ್ತಾನೆ, ಶಕುಂತಲಾ ನಿಮ್ಮ ಮುಖವಾಡ ಹೊರಬರುತ್ತದೆ ಮತ್ತು ನಿಮ್ಮ ಆಟವು ಭೂಮಿಕಾ ಮುಂದೆ ಕೆಲಸ ಮಾಡುವುದಿಲ್ಲ ಎಂದಿದ್ದಾರೆ ಜನ. 
 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!