ಆ್ಯಕ್ಟರ್ಸ್​ ಹಣೆಬರಹ ನೋಡಿ... ಬಚ್ಚಲು ಮನೆಯ ಪೊರಕೆಯಲ್ಲಿ ಹೂವು ಗುಡಿಸಿ ತಲೆ ಮೇಲೆ ಸುರೀತಾರೆ...

By Suchethana D  |  First Published Jun 28, 2024, 12:06 PM IST

ಶ್ರೇಷ್ಠಾ ಮತ್ತು ತಾಂಡವ್​ ಪ್ರೀ ವೆಡ್ಡಿಂಗ್​ ಶೂಟಿಂಗ್​ನಲ್ಲಿ ರಾಶಿ ರಾಶಿ ಹಾಕಿರುವ ಹೂವುಗಳ ಎಸಳುಗಳನ್ನು ಗುಡಿಸಿ ಮತ್ತೆ ಅದನ್ನೇ ತಲೆ ಮೇಲೆ ಸುರಿಯುವ ಬಗ್ಗೆ ಭಾಗ್ಯ ಹೇಳಿದ್ದೇನು?
 


ಶ್ರೇಷ್ಠಾ ಮತ್ತು ತಾಂಡವ್​ ಪ್ರೀ ವೆಡ್ಡಿಂಗ್​ ಶೂಟಿಂಗ್​ಗೆ ರಿಯಲ್ ಫೋಟೋಶೂಟ್​ ರೀತಿಯಲ್ಲಿಯೇ ಭರ್ಜರಿ ತಯಾರಿ ನಡೆದಿದ್ದನ್ನು ಭಾಗ್ಯಲಕ್ಷ್ಮಿ ಸೀರಿಯಲ್​ ವೀಕ್ಷಕರು ನೋಡೇ ಇರುತ್ತೀರಿ. ಅದ್ಧೂರಿಯಾಗಿ ಸೆಟ್​ ರೆಡಿ ಮಾಡಲಾಗಿತ್ತು. ಕೆ.ಜಿಗಟ್ಟಲೆ ಹೂವಿನ ರಾಶಿ ಹಾಕಲಾಗಿತ್ತು. ಭಾವಿ ಪತಿ-ಪತ್ನಿಯರ ಮೈಮೇಲೆ ಶೂಟಿಂಗ್​ ಸಮಯದಲ್ಲಿ ಮೇಲಿನಿಂದ ಹೂವು ಬೀಳಿಸುವುದಕ್ಕಾಗಿ ಖುದ್ದು ಭಾಗ್ಯಳೇ ಹೂವಿನ ಪಕಳೆಗಳನ್ನು ಬಿಡಿಸಿದ್ದಳು. ಇದಕ್ಕೆ ಇದಾಗಲೇ ಭಾಗ್ಯ ಪಾತ್ರಧಾರಿ ಸುಷ್ಮಾ ರಾವ್​ ಅವರು ಸೋಷಿಯಲ್​ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು. ಗಂಡನ ಜೊತೆ ಮದ್ವೆಯಾಗಲು ಹೊರಟಿರೋ ಸವತಿಗಾಗಿ ಇಷ್ಟೊಂದು ರೆಡಿ ಮಾಡ್ತಿದ್ದೀಯಾ ಎಂದು ನೆಟ್ಟಿಗರು ನಟಿಯ ಕಾಲೆಳೆದಿದ್ದರು. ಇದೀಗ ಇನ್ನೊಂದು ಇಂಥದ್ದೇ ಕುತೂಹಲದ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ ಸುಷ್ಮಾ ರಾವ್​.

ಅದರಲ್ಲಿ ಶೂಟಿಂಗ್​ ರೀ ಟೇಕ್​ ಮಾಡಬೇಕಿದ್ದರೆ ಮತ್ತಷ್ಟೇ ಹೂವುಗಳನ್ನು ತರುವುದು ಅಸಾಧ್ಯ. ಅದೇ ಕಾರಣಕ್ಕೆ ಮೊದಲೇ ರಾಶಿ ಬೀಳಿಸಲಾಗಿರುವ ಹೂವುಗಳನ್ನು ಗುಡಿಸಿ ಅದನ್ನು ಬುಟ್ಟಿಯಲ್ಲಿ ತುಂಬಿ ಮತ್ತೆ ಶೂಟಿಂಗ್​ ಸಮಯದಲ್ಲಿ ಬಳಸಲಾಗುತ್ತದೆ. ಇದರ ವಿಡಿಯೋ ಮಾಡಿರುವ ಸುಷ್ಮಾ ಅವರು, ನೋಡಿ ನಮ್​ ಹಣೆಬರಹ ಇಲ್ಲಿ ರಾಶಿ ಹಾಕಿರುವ ಹೂವುಗಳನ್ನೇ ಗುಡಿಸಿ ಮತ್ತೆ ತಲೆ ಮೇಲೆ ಸುರೀತಾರೆ ಎಂದು ತಮಾಷೆ ಮಾಡಿದ್ದಾರೆ. ಪೊರಕೆಯಲ್ಲಿ ಹೂವುಗಳನ್ನು ಗುಡಿಸುವ ವಿಡಿಯೋ ಮಾಡಿರುವ ಅವರು, ಅಲ್ರೋ ಬಚ್ಚಲು ಮನೆ ಗುಡಿಸೋ ಪೊರಕೆ ಇದ್ದಂಗೆ ಇದೆಯಲ್ರೋ ಎಂದೂ ತಮಾಷೆ ಮಾಡಿದ್ದಾರೆ. ಪೊರಕೆಗಳಿಂದ ಹೂವುಗಳನ್ನು ಆರಿಸಿ ಮತ್ತೊಂದು ಟೇಕ್​ನಲ್ಲಿ ಅದನ್ನೇ ತಲೆ ಮೇಲೆ ಸುರಿಯುವ ಕಾರಣ,ನಮ್​ ಹಣೆಬರಹ ನೋಡಿ ಎಂದು ಹೇಳಿದ್ದಾರೆ ನಟಿ.  ​

Tap to resize

Latest Videos

ಹುಟ್ಟುತ್ತಲೇ ಈಕೆ ಯುವತಿ! ಸೌಂದರ್ಯ ಸ್ಪರ್ಧೆಯಲ್ಲಿ ಟಾಪ್​-10ಗೆ ಏರಿರೋ ಭಾರತ ಸುಂದರಿಯ ರೋಚಕ ಸ್ಟೋರಿ

ಅಷ್ಟಕ್ಕೂ ಪ್ರೀ ವೆಡ್ಡಿಂಗ್ ಶೂಟ್​ ನಡೆಯುತ್ತಿದ್ದಾಗ ಆಗಿರುವ ಆವಾಂತರ ಗೊತ್ತೇ ಇದೆ.  ಶ್ರೇಷ್ಠಾ ಮದ್ವೆಯಾಗ್ತಿರೋದು ತನ್ನ ಗಂಡನನ್ನೇ ಎನ್ನುವುದು ಭಾಗ್ಯಳಿಗೆ ಇನ್ನೂ ಗೊತ್ತಿಲ್ಲ. ಆದರೆ ಅದೇ ಇನ್ನೊಂದೆಡೆ, ತಾಂಡವ್‌ ಜೊತೆ ಪ್ರೀ ವೆಡ್ಡಿಂಗ್‌ ಶೂಟ್‌ನಲ್ಲಿ ಶ್ರೇಷ್ಠಾ ಬಿಜಿಯಾಗಿದ್ದಳು.  ಅಷ್ಟೊತ್ತಿಗಾಗಲೇ ಪೂಜಾಳಿಂದ ದುಡ್ಡಿನ ವಿಷಯ ಅರಿತ ಭಾಗ್ಯ ಶೂಟಿಂಗ್‌ ಮಾಡ್ತಿರೋ ಜಾಗಕ್ಕೆ ಬಂದು ಶ್ರೇಷ್ಠಾಳ ಕೆನ್ನೆಗೆ ರಪರಪ ಬಾರಿಸಿದ್ದಳು. ಒಂದು ಹೊಡೆದ ದುಡ್ಡು ಕದ್ದಿರೋದಕ್ಕೆ, ಇನ್ನೊಂದು ಕದ್ದ ದುಡ್ಡನ್ನು ನನಗೇ ಸಾಲ ಎಂದು ಕೊಟ್ಟಿರೋದಕ್ಕೆ, ಮತ್ತೊಂದು ಮನೆಯವರ ಎದುರು ದುಡ್ಡು ಕೊಡು ಎಂದ ಬೆದರಿಕೆ ಹಾಕಿದ್ದಕ್ಕೆ... ಎನ್ನುತ್ತಲೇ ರಪರಪ ಹೊಡೆದಿದ್ದಾಳೆ. ಈ ಏಟಿಗೆ ತತ್ತರಿಸಿರೋ ಶ್ರೇಷ್ಠಾ ಕೆಳಗೆ ಬಿದ್ದಿದ್ದಳು. 

ಅದೇ ಇನ್ನೊಂದೆಡೆ, ಭಾಗ್ಯಳ ಜೀವನ ಬದಲಾಗಿದೆ.  ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಒಂದು ಲಕ್ಷ ರೂಪಾಯಿ ಮುಂಗಡ ಹಣ ಅವಳ ಕೈಗೆ ಸಿಕ್ಕಿದೆ.  ಸಾಮಾನ್ಯವಾಗಿ ಸ್ಟಾರ್​ ಹೋಟೆಲ್​ಗಳ ಶೆಫ್​ಗಳಿಗೆ ನೀಡುವಂತೆ ಲಕ್ಷ ಸಂಬಳ ಪಡೆಯುತ್ತಾಳೆ ಇನ್ನುಮುಂದೆ ಭಾಗ್ಯ.  ಒತ್ತುಶ್ಯಾವಿಗೆಯ ಸ್ಪೆಷಲಿಸ್ಟ್​ ಆದ ಭಾಗ್ಯಳ ಕೈಗೆ ಒಂದು ಲಕ್ಷ ರೂಪಾಯಿ ಚೆಕ್​ ಬಂದಿದ್ದು, ಅದನ್ನು ಬ್ಯಾಂಕ್​ಗೆ ಹೋಗಿ ಹಣ ತಂದಿದ್ದಾಳೆ.  ಒಂದು ಪೈಸೆ ದುಡಿಯುವ ತಾಕತ್ತು ಇಲ್ಲ ಎಂದು ಪದೇ ಪದೇ ಹೀಯಾಳಿಸುತ್ತಿದ್ದ ಪತಿ ತಾಂಡವ್​. ಆದರೆ ಒಂದೇ ಸಲಕ್ಕೆ ಒಂದು ಲಕ್ಷ ರೂಪಾಯಿ ದುಡಿದಿದ್ದಾಳೆ.  ಗಂಡನ ಕೈಗೆ ಎರಡು ತಿಂಗಳ ಇಎಂಐ ಮೊತ್ತ ಇತ್ತು ಅವನನ್ನು ಇಂಗು ತಿಂದ ಮಂಗನಂತೆ ಮಾಡಿದ್ದಾಳೆ ಭಾಗ್ಯ. 

ರಾಜಾ ರಾಣಿ ಷೋ ಶೂಟಿಂಗ್​ ವೇಳೆ ಆ್ಯಂಕರ್​ ಅನುಪಮಾ ಬೆಳಿಗ್ಗೆಯಿಂದ ಏನೆಲ್ಲಾ ಮಾಡ್ತಾರೆ?

click me!