ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಇದಾಗಲೇ ಸಹನಾ ತವರು ಸೇರಿದ್ದರೆ, ಸ್ನೇಹಾಳನ್ನು ತವರಿಗೆ ಕಳಿಸುತ್ತಿದ್ದಾರೆ. ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಏನಾಗ್ತಿದೆ?
ಪುಟ್ಟಕ್ಕನ ಮಕ್ಕಳು ಸೀರಿಯಲ್ ಪುಟ್ಟಕ್ಕ ಎಂದರೆ ಸಾಕು, ಎಷ್ಟೋ ಮಂದಿ ಮಹಿಳೆಯರು ಹೆಮ್ಮೆ ಪಡುವುದು ಇದೆ. ಸೀರಿಯಲ್ ಪುಟ್ಟಕ್ಕನನ್ನೇ ನಿಜಜೀವನದ ಪುಟ್ಟಕ್ಕ ಎಂದುಕೊಂಡಿರುವ ಮಹಿಳೆಯರು ಸಾಕಷ್ಟು ಮಂದಿ ಇದ್ದಾರೆ. ಈ ಪುಟ್ಟಕ್ಕ ತನ್ನ ಹೆಣ್ಣುಮಕ್ಕಳನ್ನು ಸಾಕಲು ಏಕಾಂಗಿಯಾಗಿ ಹೋರಾಟ ಮಾಡಿದ್ದನ್ನು ನೆನಪಿಸಿಕೊಂಡು, ತಮ್ಮ ಜೀವನಗಾಥೆಯನ್ನು ಹೇಳಿಕೊಂಡು ಕಣ್ಣೀರು ಹಾಕಿದ ಮಹಿಳೆಯರು ಅದೆಷ್ಟೋ ಮಂದಿ. ಪುಟ್ಟಕ್ಕನ ಮಕ್ಕಳು ಸೀರಿಯಲ್ ಸಂತೆ ನಡೆದಾಗ, ವೇದಿಕೆ ಮೇಲೆ ನೀವೇ ನಮಗೆ ಮಾದರಿ, ನಮ್ಮದೂ ಇದೇ ಕಥೆ ಎಂದು ಪುಟ್ಟಕ್ಕನ ಪಾತ್ರಧಾರಿ ಉಮಾಶ್ರೀ ಎದುರು ಕಣ್ಣೀರಾಗಿದ್ದಾರೆ ಹಲವರು. ಇದು ಕೇವಲ ಧಾರಾವಾಹಿಯಲ್ಲ, ನಮ್ಮ ಬದುಕಿನ ಚಿತ್ರಣ, ನಿಜ ಜೀವನಕ್ಕೆ ತೀರಾ ಹತ್ತಿರವಾಗಿರುವ ಕಥೆ ಎಂದು ಕೆಲವು ಹೇಳಿದ್ದರೆ, ತಮ್ಮ ಗಂಡ ಕೈಕೊಟ್ಟು ಹೋದಾಗ, ಅಕಾಲದಲ್ಲಿ ಸಾವನ್ನಪ್ಪಿದಾಗ ತಮ್ಮ ಮಕ್ಕಳನ್ನು ಕಷ್ಟಪಟ್ಟು ಸಾಕಿದ ಬಗೆಯನ್ನು ಹೇಳಿಕೊಂಡಿದ್ದಾರೆ. ಆದ್ದರಿಂದ ಈ ಪುಟ್ಟಕ್ಕ ಅದೆಷ್ಟೋ ಮಂದಿಗೆ ದಾರಿದೀವಿಗೆಯಾದವಳು, ಮನೆಮನೆ ಮಾತಾದವಳು.
ಆದರೆ ಇದೀಗ ಯಾಕೋ ಎಲ್ಲವೂ ಏರುಪೇರು ಆಗುತ್ತದೆ. ಆಗ ಸಹನಾ, ಈಗ ಸ್ನೇಹಾ. ಇಬ್ಬರೂ ಮಕ್ಕಳ ಜೀವನ ಅಲ್ಲೋಲ ಕಲ್ಲೋಲ ಆಗ್ತಿದೆ. ಆದರೆ ಸಹನಾ ದೌರ್ಜನ್ಯದ ವಿರುದ್ಧ ದನಿ ಎತ್ತಿ ತವರು ಸೇರಿದ್ದರೆ, ಸ್ನೇಹಾ ಬೇರೆಯವರಿಗೆ ನ್ಯಾಯ ಒದಗಿಸಲು ಹೋಗಿ ಹಿಂದೆ ಮುಂದೆ ಯೋಚಿಸದೇ ಅತಿಬುದ್ಧಿ ಉಪಯೋಗಿಸಿ ತವರು ಸೇರಿದ್ದಾಳೆ. ಸಹನಾ ಬಗ್ಗೆ ಜನರು ಭೇಷ್ ಭೇಷ್ ಎನ್ನುತ್ತಿದ್ದರೆ, ಸ್ನೇಹಾಳನ್ನು ಬೈಯುತ್ತಿದ್ದಾರೆ. ಈಕೆ ಓದಿದ್ದು ಅತಿಯಾಯ್ತು, ತಲೆ ಉಪಯೋಗ ಮಾಡದೇ ಏನೇನೋ ಮಾಡುತ್ತಿದ್ದಾಳೆ. ಇವಳಿಗೆ ತಕ್ಕ ಶಾಸ್ತಿಯಾಗಿದೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಹೆಣ್ಣು ದೌರ್ಜನ್ಯದ ವಿರುದ್ಧ ತಲೆ ಎತ್ತಿದರೂ ಕಷ್ಟ, ಬೇರೆಯವರಿಗೆ ನ್ಯಾಯ ಒದಗಿಸಲು ಹಿಂದೆ ಮುಂದೆ ಯೋಚಿಸದೇ ಮನೆಯವರನ್ನು ಎದುರು ಹಾಕಿಕೊಂಡರೂ ಕಷ್ಟ.
ತಾಂಡವ್‌ನ ದೊಡ್ಡ ರಹಸ್ಯ ಬಯಲಾಗಿ ಹೋಯ್ತು! ಇಂಥ ಗಂಡ ಬೇಕಾ ನಿಂಗೆ ಕೇಳ್ತಿದ್ದಾರೆ ನೆಟ್ಟಿಗರು...
ಇಂದು ಸಹನಾ ಬದಲಾಗಿದ್ದಾಳೆ. ತಾಳ್ಮೆಯ ಪ್ರತಿರೂಪವಾಗಿದ್ದ ಸಹನಾ, ಕಾಳಿಯ ಅವತಾರ ಎತ್ತಿದ್ದಾಳೆ. ಕೆಟ್ಟದ್ದನ್ನು, ದೌರ್ಜನ್ಯವನ್ನು ಸಹಿಸಿಕೊಳ್ಳಬಾರದು ಎನ್ನುವುದನ್ನು ಕಲಿತಿದ್ದಾಳೆ. ಏನೇ ಆದರೂ ಗಂಡನೇ ಸರ್ವಸ್ವ, ಗಂಡನ ಮನೆಯವರೇ ಶ್ರೇಷ್ಠ, ಸತ್ತರೂ, ಇದ್ದರೂ ಗಂಡನ ಮನೆಯಲ್ಲಿಯೇ ಬದುಕಬೇಕು ಎಂದೆಲ್ಲಾ ಹಿಂದೊಮ್ಮೆ ಅಂದುಕೊಂಡಿದ್ದ ಸಹನಾ ಈಗ ಹಾಗಿಲ್ಲ. ತಪ್ಪಾಗಿದ್ದ ಕಂಡರೆ ಸಿಡಿದೇಳುವ ತನ್ನ ತಂಗಿ ಸ್ನೇಹಳ ಹಾದಿ ಹಿಡಿದಿದ್ದಾಳೆ ಸಹನಾ. ಇದೆ ಕಾರಣಕ್ಕೆ ತವರು ಸೇರಿದ್ದಾಳೆ.
ಆದರೆ ಗಟ್ಟಿಗಿತ್ತಿ ಎಂದು ಎಲ್ಲರನ್ನೂ ಎದುರು ಹಾಕಿಕೊಳ್ಳುತ್ತಿದ್ದಾಳೆ ಸ್ನೇಹಾ. ಅತ್ತೆ ಬಂಗಾರಮ್ಮನ ವಸೂಲಿ ವಿಷಯ ಈಕೆಗೆ ಇಷ್ಟವಿಲ್ಲವಾದರೂ, ಎಲ್ಲದ್ದಕ್ಕೂ ಅವಳೇ ತಪ್ಪು ಎಂದು ಏಕಾಏಕಿ ತೀರ್ಮಾನಕ್ಕೆ ಬಂದು ಅತ್ತೆಯನ್ನೇ ಜೈಲಿಗೆ ಕಳುಹಿಸಿದಳು. ಈ ಹಿಂದೆ ಕೂಡ ಅತಿಬುದ್ಧಿವಂತಿಕೆ ಉಪಯೋಗಿಸಿದ್ದರಿಂದ ಮನೆಯವರಿಗೆ ತೊಂದರೆ ಮಾಡಿದ್ದಳು. ಇದೀಗ ಬಂಗಾರಮ್ಮನ ಕೋಪ ಮಿತಿಮೀರಿದೆ. ಅದೇ ಇನ್ನೊಂದೆಡೆ ಕಂಠಿ ವಿಚ್ಛೇದನ ಪತ್ರ ಕೊಟ್ಟಿರುವುದಾಗಿ ಅವಳಿಗೆ ಹೇಳಲಾಗಿದೆ. ಇದರಿಂದ ಸಿಡಿದೆದ್ದ ಸ್ನೇಹಾ ತವರಿಗೆ ವಾಪಸಾಗುತ್ತಿದ್ದಾಳೆ. ಒಟ್ಟಿನಲ್ಲಿ ಪುಟ್ಟಕ್ಕನ ಗೋಳು ಕೇಳುವವರೇ ಇಲ್ಲವಾಗಿದೆ!
ಅಮೃತಧಾರೆ ಗೌತಮ್‌ಗೆ ಹುಟ್ಟುಹಬ್ಬವಿಂದು: ನಟನ ರಿಯಲ್ ಜೀವನದ ಇಂಟರೆಸ್ಟಿಂಗ್ ವಿಷ್ಯದ ಜೊತೆ ವಿಡಿಯೋ ರಿಲೀಸ್