ಆ ಭಾಗ್ಯ ಸತ್ತೋದ್ಲು ಕಣ್ರೀ... ಪತ್ನಿಯನ್ನು ಕಟ್ಟುಹಾಕಿದಂತೆ, ತಾಯಿಯನ್ನು ಕಟ್ಟಿಹಾಕಲು ಆಗಲ್ಲ!

By Suvarna News  |  First Published Apr 19, 2024, 2:37 PM IST

ಭಾಗ್ಯಲಕ್ಷ್ಮಿ ಬದಲಾಗಿದ್ದಾಳೆ. ಪತಿ ತಾಂಡವ್‌ ಸುಸ್ತು ಹೊಡೆಯುವ ರೀತಿಯಲ್ಲಿ ಆತನಿಗೆ ಬುದ್ಧಿ ಹೇಳಿದ್ದಾಳೆ. ಪತ್ನಿಯ ಬದಲಾವಣೆ ಕಂಡು ತಾಂಡವ್‌ ಶಾಕ್‌ ಆಗಿದ್ದಾನೆ. 
 


ಭಾಗ್ಯಲಕ್ಷ್ಮಿ ಬದಲಾಗಿದ್ದಾಳೆ. ಅಳುಮುಂಜಿಯಲ್ಲ ಈಕೆ. ತನಗೆ ಮತ್ತು ಮಗಳಿಗೆ ಪರೀಕ್ಷೆ ಬರೆಯಲು ಕೊಡದ ಕನ್ನಿಕಾ ಮಿಸ್​ ವಿರುದ್ಧವೇ ತಿರುಗಿ ಬಿದ್ದು ಪರೀಕ್ಷೆ ಬರೆದಿದ್ದಾಳೆ. ಕನ್ನಿಕಾ ಮಿಸ್​ ಎದುರು ಕಾಳಿ ಅವತಾರ ತಾಳಿದ್ದನ್ನು ನೋಡಿದ್ದ ಭಾಗ್ಯಲಕ್ಷ್ಮಿ ಅಭಿಮಾನಿಗಳು, ಇದೇ ರೂಪವನ್ನು ಗಂಡ ತಾಂಡವ್​ ಎದುರಿಗೂ ತೋರಿಸಮ್ಮಾ ಎನ್ನುತ್ತಿದ್ದರು. ಕೆಲ ದಿನಗಳ ಹಿಂದೆ ಗಂಡನ ವಿರುದ್ಧವೂ ತಿರುಗಿ ಬಿದ್ದಿದ್ದಳು. ಆದರೆ ಮತ್ತೆ ಡಿವೋರ್ಸ್‌ ವಿಷಯ ಕೇಳಿ ಮತ್ತೆ ಅಳುಮುಂಜಿಯಾಗಿದ್ದಳು. ಇಂಥ ಅಳುಮುಂಜಿ ಇದ್ದರೆ ಆಗಲ್ಲ ಎನ್ನುವ ಸತ್ಯವನ್ನು ಮತ್ತೊಮ್ಮೆ ಅರಿತಿದ್ದಾಳೆ. ಆ ಟೈಮೂ ಬಂದುಬಿಟ್ಟಿದೆ. ಭಾಗ್ಯಲಕ್ಷ್ಮಿ ಕೊನೆಗೂ ಗಂಡ ತಾಂಡವ್​ ಎದುರು ನಿಂತು ಮಾತನಾಡುವಷ್ಟು ಗಟ್ಟಿಗಿತ್ತಿಯಾಗಿದ್ದಾಳೆ. ಗಂಡನೇ ಸರ್ವಸ್ವ,  ಆತ ಏನು ಮಾಡಿದರೂ ತಾಳ್ಮೆಯಿಂದ ಇರಬೇಕು, ಪತಿಯೇ ಪರದೈವ ಎಂದೆಲ್ಲಾ ಎಂದುಕೊಂಡು ಇಲ್ಲಿಯವರೆಗೆ ಸಹನಾಮೂರ್ತಿಯಂತಿದ್ದ ಭಾಗ್ಯ ಪತಿಗೇ ದುರುಗುಟ್ಟು ನೋಡಿ ನೋಡುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾಳೆ. ಮನೆ ನನ್ನದು, ಮನೆಬಿಟ್ಟು ಹೋಗು, ಡಿವೋರ್ಸ್​ ಕೊಡುವೆ ಎಂದೆಲ್ಲಾ ಹೇಳಿ ಪೌರುಷ ಮೆರೆಯುತ್ತಿದ್ದ ತಾಂಡವ್​, ಪತ್ನಿಯ ಈ ರೂಪಕ್ಕೆ ಸುಸ್ತು ಹೊಡೆದಿದ್ದಾನೆ.

ಪತ್ನಿಯನ್ನು ನೀವು ಕಟ್ಟಿಹಾಕ್ಬೋದು, ಆದರೆ ತಾಯಿಯನ್ನು ಕಟ್ಟಿ ಹಾಕೋಕೆ ಆಗಲ್ಲ ಎಂದು ಡೈಲಾಗ್‌ ಮೇಲೆ ಡೈಲಾಗ್‌ ಹೊಡೆದಿದ್ದಾಳೆ ಭಾಗ್ಯ. ಕೊನೆಯ ಪಕ್ಷ ಮಕ್ಕಳ ಎದುರಾದರೂ ಒಳ್ಳೆಯ ತಂದೆ ಎನ್ನಿಸಿಕೊಳ್ಳಿ. ನಾಳೆ ನಿಮ್ಮನ್ನೇ ಅವರು ಫಾಲೋ ಮಾಡಿ, ಕೆಟ್ಟ ನಡತೆ ಕಲಿತರೆ ಅದಕ್ಕೆ ಯಾರೂ ಜವಾಬ್ದಾರರಲ್ಲ, ನಾನು ಸುಮ್ಮನೇ ಇರೋಳಲ್ಲ ಎಂದು ಗಂಡನಿಗೆ ಧಮ್ಕಿ ಹಾಕಿದ್ದಾಳೆ. ಇದನ್ನು ಕೇಳಿ ತಾಂಡವ್‌ಗೆ ಶಾಕ್‌ ಆಗಿದೆ. ಭಾಗ್ಯಲಕ್ಷ್ಮಿ ಸೀರಿಯಲ್​ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಇಷ್ಟು ದಿನ ನಿನ್ನ ಅಳುಮುಂಜಿ ಮುಖ ನೋಡಿ ಸಾಕಾಗಿತ್ತು, ನಿನ್ನಂಥ ಹೆಣ್ಣಿದ್ದರೆ ಎಲ್ಲವೂ ಸಾಧ್ಯ. ನೀನು ನಿನ್ನಂಥ ಮನಸ್ಥಿತಿ ಇರುವ ಎಲ್ಲಾ ಮಹಿಳೆಯರಿಗೆ ಸ್ಫೂರ್ತಿ, ಪತಿ ದೌರ್ಜನ್ಯ ಎಸಗಿದಾಗ, ಸಹಿಸಿಕೊಳ್ಳದೇ ಎದುರು ಮಾತನಾಡುವ ಶಕ್ತಿ ಪ್ರತಿ ಹೆಣ್ಣಿಗೂ ಬರಬೇಕು ಎನ್ನುತ್ತಿದ್ದಾರೆ ಅಭಿಮಾನಿಗಳು. ಇದೇ ವೇಳೆ ಇದು ಸಾಧ್ಯವಾಗುವುದು ಕುಸುಮಾನಂಥ ಅತ್ತೆಯಿದ್ದರೆ ಮಾತ್ರ ಎಂದೂ ಸೇರಿಸುತ್ತಿದ್ದಾರೆ.

Tap to resize

Latest Videos

ಟೈಗರ್​ ಶ್ರಾಫ್​ ಜೊತೆ ಒಂದು ಗಂಟೆ ಲಿಫ್ಟ್​ನಲ್ಲಿ ಸಿಕ್ಕಿಬಿದ್ದ ನಟಿ ನೇಹಾ: ರೋಚಕ ಕ್ಷಣದ ಕುರಿತು ಹೇಳಿದ್ದೇನು?

ಅಷ್ಟಕ್ಕೂ ಆಗಿದ್ದೇನೆಂದರೆ,  ಮಕ್ಕಳೆದುರೇ ತಾಂಡವ್​ ಭಾಗ್ಯಳಿಗೆ ಡಿವೋರ್ಸ್​ ಕೊಡುವ ವಿಷಯ ಹೇಳಿದ್ದಾನೆ. ಇನ್ನು ಮುಚ್ಚಿಟ್ಟು ಪ್ರಯೋಜನವಿಲ್ಲ. ಇದಾಗಲೇ ಅವಳಿಗೆ ಡಿವೋರ್ಸ್​ ನೋಟಿಸ್​ ಕೊಟ್ಟಿದ್ದೆ. ಮಕ್ಕಳಿಗಾಗಿ ಸುಮ್ಮನೇ ಇದ್ದೆ. ಆದರೆ ಇದೀಗ ಮಕ್ಕಳೇ ಅಮ್ಮನ ಪರವಾಗಿ ನಿಂತಿದ್ದಾರೆ. ಹಾಗಿದ್ದ ಮೇಲೆ ಸತ್ಯ ಹೇಳದೇ ವಿಧಿಯಿಲ್ಲ ಎಂದಿರುವ ತಾಂಡವ್​, ಭಾಗ್ಯಳಿಗೆ ಡಿವೋರ್ಸ್​ ಕೊಡುತ್ತಿದ್ದೇನೆ ಎಂದಿದ್ದಾನೆ. ಇಷ್ಟೇ ಅಲ್ಲದೇ ಈ ಕೂಡಲೇ ಭಾಗ್ಯ ಮನೆ ಬಿಟ್ಟು ಹೋಗಬೇಕು, ಮಕ್ಕಳು ನನ್ನ ಜೊತೆ ಇರುತ್ತಾರೆ ಎಂದು ಹೇಳಿದ್ದಾನೆ. ಭಾಗ್ಯಳ ಬ್ಯಾಗ್​ ತೆಗೆದು ಹೊರಕ್ಕೆ ಎಸೆದಿದ್ದಾನೆ. ಇದೀಗ ಮೌನ ಮುರಿದಿರುವ ಭಾಗ್ಯ, ಡಿವೋರ್ಸ್​ ಪೇಪರ್​ಗೆ ಸಹಿ ಹಾಕಲ್ಲ ಅಂದ್ರೆ ಏನು ಮಾಡ್ತೀರಿ ಕೇಳಿದ್ದಾಳೆ. ಕೋರ್ಟ್​ಗೆ ಹೋಗ್ತೇನೆ ಎಂದಿದ್ದಾನೆ ತಾಂಡವ್​. ನಾನೂ ಕೋರ್ಟ್​ಗೆ ಹೋಗ್ತೇನೆ. ಏನು ಹೇಳಬೇಕೋ ಹೇಳ್ತೇನೆ. ಜಪ್ಪಯ್ಯ ಎಂದ್ರೂ ಈ ಮನೆ ಬಿಟ್ಟು ಹೋಗಲ್ಲ ಎಂದಿದ್ದಾಳೆ. 

ಅದೇ ಇನ್ನೊಂದೆಡೆ, ಖುದ್ದು ಮಾವನೇ ತನ್ನ ಮಗನಿಂದ ದೂರವಾಗು ಎಂದು ಭಾಗ್ಯಳಿಗೆ ಹೇಳುತ್ತಿದ್ದಾನೆ. ಹೌದು. ತಾಂಡವ್​ಗೆ ಯಾವುದೇ ಕಾರಣಕ್ಕೂ ಭಾಗ್ಯ ಬೇಡ. ಅವನಿಗೆ ಬೇಕಿರುವುದು ಶ್ರೇಷ್ಠಾ. ಇದೇ ಕಾರಣಕ್ಕೆ 16 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಎಳೆಯಲು ಹೊರಟಿದ್ದಾನೆ. ಡಿವೋರ್ಸ್​ಗೆ ಸಜ್ಜಾಗಿದ್ದಾನೆ.  ಆದರೆ ಯಾವುದೇ ಕಾರಣಕ್ಕೂ ದಾಂಪತ್ಯ ಉಳಿಸಿಕೊಳ್ಳುವ ಪಣ ತೊಟ್ಟಿದ್ದಾಳೆ ಭಾಗ್ಯ. 16 ವರ್ಷಗಳ ಸಂಸಾರ... ಎರಡು ಬೆಳೆದು ನಿಂತಿರುವ ಮಕ್ಕಳು... ಈ ಹಂತದಲ್ಲಿ ಡಿವೋರ್ಸ್​ ಎಂದರೆ...? ಅದೂ ಭಾಗ್ಯಳಂಥ ಹೆಣ್ಣುಮಗಳಿಗೆ? ಸಾಧ್ಯವೇ ಇಲ್ಲ. ಮೇಲ್ನೋಟಕ್ಕೆ ಎಷ್ಟೇ ಗಟ್ಟಿಗಿತ್ತಿಯಾದರೂ ಸಂಸಾರ, ಮನೆ, ಮಕ್ಕಳು ಎನ್ನುವ ವಿಷಯ ಬಂದಾಗ ಬಹುತೇಕ ಹೆಣ್ಣುಮಕ್ಕಳು ಸೋಲಲೇಬೇಕಿರುವ ಸ್ಥಿತಿ ಇದೆ. ಇಂಥ ಸ್ಥಿತಿಯಲ್ಲಿ ತನ್ನ ಸಂಸಾರವನ್ನು ಹೇಗಾದರೂ ಉಳಿಸಿಕೊಂಡು, ಗಂಡನ ಮನಸ್ಸನ್ನು ಒಲಿಸಿಕೊಳ್ಳುವ ಅಂದುಕೊಳ್ಳುತ್ತಿರುವಾಗಲೇ ಮಾವನೇ ಖುದ್ದು ಮಗಳೇ ಗಂಡನನ್ನು ಬಿಟ್ಟುಬಿಡು ಎನ್ನುತ್ತಿದ್ದಾನೆ. ಆದರೆ ಇದೀಗ ಭಾಗ್ಯ ತಿರುಗಿ ಬಿದ್ದಿದ್ದಾಳೆ. ಹಿಂದಿನ ಭಾಗ್ಯ ಸತ್ತೋದ್ಲು ಎಂದಿದ್ದಾಳೆ. 

ಒಬ್ಬಳು ಸಿಡಿದೆದ್ದಳು, ಇನ್ನೊಬ್ಬಳು ಅತಿ ಬುದ್ಧಿ ಉಪಯೋಗಿಸಿದಳು! ತವರು ಸೇರಿದ ಮಕ್ಕಳು: ಏನಾಗ್ತಿದೆ ಇಲ್ಲಿ?


click me!