ಏನೋ ಹೇಳಲು ಈತ ತಿರುಗಿದ, ಆ ಕಡೆ ಅವಳೂ ತಿರುಗಿದಳು... ಅಷ್ಟೇ... ಕೊನೆಗೂ ಈಡೇರಿತು ಫ್ಯಾನ್ಸ್​ ಕನಸು...

By Suvarna News  |  First Published Mar 25, 2024, 1:31 PM IST

ಭೂಮಿಕಾ ಮತ್ತು ಗೌತಮ್​ ಲವ್​ಸ್ಟೋರಿ ಇನ್ನೊಂದು ಹಂತ ಮುಂದಕ್ಕೆ ಹೋಗಿದೆ. ಕಿಸ್​ ಮಾಡುವ ಚಾಲೆಂಜ್​ ನೀಡಿದ್ದ ಗೆಳೆಯ ಆನಂದ್​ನ ಚಾಲೆಂಜೂ ಪೂರ್ತಿಯಾಗಿದೆ, ಅಭಿಮಾನಿಗಳೂ ಫುಲ್​ ಖುಷ್​ ಆಗಿದ್ದಾರೆ. ಏನಿದು ವಿಷಯ?


ಪ್ರೀತಿ-ಗೀತಿ ಅನ್ನೋದೇ ಗೊತ್ತಿಲ್ಲದ ಗೌತಮ್​ಗೆ ಈಗ ಪತ್ನಿ ಭೂಮಿ ಮೇಲೆ ಲವ್​ ಶುರುವಾಗಿದೆ. ಅತ್ತ ಭೂಮಿಕಾ ಅಂತೂ ತನ್ನ ಪ್ರೀತಿಯನ್ನು ಪತಿಗೆ ಹೇಗೆ ತಿಳಿಸಬೇಕು ಎನ್ನುವುದನ್ನು ತಿಳಿಯದೇ ಕಸಿವಿಸಿಯಲ್ಲಿಯೇ ಇದ್ದಾಳೆ. ಅವಳು ಪ್ರೀತಿಯನ್ನು ತಿಳಿಸಲು ಎಷ್ಟೇ ಪ್ರಯತ್ನ ಮಾಡಿದರೂ ಅದು ಪೆದ್ದು ಗೌತಮ್​ಗೆ ಗೊತ್ತೇ ಆಗುತ್ತಿಲ್ಲ. ಸ್ನೇಹಿತ ಆನಂದ್​, ಗೌತಮ್​ಗೆ ಚಾಲೆಂಜ್​ ಕೊಟ್ಟಿದ್ದ. ಪತ್ನಿಗೆ ಕಿಸ್​ ಮಾಡ್ಲೇಬೇಕು ಎನ್ನುವ ಚಾಲೆಂಜ್​ ಇದಾಗಿತ್ತು. ಇಲ್ಲದಿದ್ದರೆ ಪಾರ್ಟಿಯಲ್ಲಿ ಕುಡಿದ ವಿಷಯವನ್ನು ಅಜ್ಜಿಗೆ ತಿಳಿಸುವುದಾಗಿ ಹೇಳಿದ್ದ. ಗೌತಮ್​ಗೆ ಬೇರೆ ದಾರಿಯೇ ಇರಲಿಲ್ಲ. ಪತ್ನಿಗೆ ಕಿಸ್​ ಕೊಡಲೇಬೇಕು ಎಂದು ಹೋಗಿದ್ದ. ಅಷ್ಟರಲ್ಲಿಯೇ ಭೂಮಿಕಾ ಸಮೀಪ ಹಲ್ಲಿ ಬಂದು ಇನ್ನೇನು ಇಬ್ಬರೂ ಒಂದಾಗುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ.  ಆದರೆ ಅಭಿಮಾನಿಗಳ ಆಸೆ ಕೊನೆಗೂ ಈಡೇರಿಬಿಟ್ಟಿದೆ. 

ಗೆಳೆಯ ಕೊಟ್ಟ ಚಾಲೆಂಜ್​ ಹೇಗೆ ಈಡೇರಿಸುವುದು ಎಂದು ಗೌತಮ್​ ಕಸಿವಿಸಿಯಲ್ಲಿ ಇದ್ದಾನೆ. ನಾನು ನಿಮಗೆ  ಏನೋ ಹೇಳ್ಬೇಕು ಎಂದು ಹೇಳುತ್ತಿದ್ದಾನೆ. ಎಷ್ಟೆಷ್ಟೋ ಕ್ಲಿಷ್ಟವಾಗಿರೋ ಬಿಜಿನೆಸ್​ಗಳನ್ನು ಕ್ಷಣ ಮಾತ್ರದಲ್ಲಿ ಡೀಲ್​ ಮಾಡ್ತೇನೆ. ಒಂದು ಕಿಸ್​ಗೆ ಇಷ್ಟೊಂದು ಕಷ್ಟನಾ ಅನ್ನುತ್ತಿದ್ದಾನೆ. ಆದರೂ ಕಸಿವಿಸಿ. ಇದು ಭೂಮಿಕಾಗೆ ಗೊತ್ತಾಗಿದೆ. ಮನಸ್ಸಿನಲ್ಲಿ ಇರುವುದನ್ನು ಹೇಳಬೇಕು ಅನ್ನಿಸ್ತಾ ಇರೋದು ಭೂಮಿಕಾಗೆ ತಿಳಿದಿದೆ. ಅವಳೂ ನಾಚಿ ನೀರಾಗಿದ್ದಾಳೆ. ಡೈರಿಯಲ್ಲಿ ತನ್ನ ಪ್ರೀತಿಯ ವಿಷಯವನ್ನೆಲ್ಲಾ ಅವಳು ಬರೆದು ಇಟ್ಟಿದ್ದಾಳೆ. ಅದನ್ನು ಗೌತಮ್​ಗೆ ತೋರಿಸಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸೋಣ ಎಂದುಕೊಂಡು ಡೈರಿ ತಂದು ತಿರುಗಿದ್ದಾಳೆ, ಅಷ್ಟರಲ್ಲಿ ಏನಾದರೂ ಮಾಡಿ ಭೂಮಿಕಾಗೆ ಪ್ರೀತಿಯ ವಿಷ್ಯ ಹೇಳಿಯೇ  ಬಿಡೋಣ ಎಂದು ಇತ್ತ ಗೌತಮ್​ ಕೂಡ ತಿರುಗಿದ್ದಾನೆ. ಇಬ್ಬರೂ ಡ್ಯಾಷ್​ ಹೊಡೆದಿದ್ದಾರೆ.

Tap to resize

Latest Videos

ರಗಡ್​ ಲುಕ್​ನಲ್ಲಿ ಸತ್ಯ ಸೀರಿಯಲ್ ಮಾಜಿ ಕೀರ್ತನಾ: ಪ್ಲೀಸ್​ ಸೀರಿಯಲ್​ಗೆ ವಾಪಸ್​ ಬನ್ನಿ ಅಂತಿದ್ದಾರೆ ಫ್ಯಾನ್ಸ್​

ಆನಂದ್​ ಗೌತಮ್​ಗೆ ಕೊಟ್ಟ ಕಿಸ್​ ಚಾಲೆಂಜ್​ ಪೂರ್ತಿಯಾಗಿದೆ. ಇಬ್ಬರಲ್ಲಿಯೂ ಅಮೃತಧಾರೆ ಸುರಿದಿದೆ. ಇಷ್ಟು ದಿನಗಳಿಂದ ಇಬ್ಬರ ಪ್ರೀತಿಯನ್ನು ನೋಡಲು ಬಯಸಿದ್ದ ಅಭಿಮಾನಿಗಳೂ ಫುಲ್​ ಖುಷ್​ ಆಗಿದ್ದು, ಕಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ. 

ಅಷ್ಟಕ್ಕೂ ಅಮೃತಧಾರೆಯ ಆನಂದ್​ ಮತ್ತು ಗೌತಮ್​ ಫ್ರೆಂಡ್​ಷಿಪ್​ ಎಲ್ಲರಿಗೂ ತಿಳಿದದ್ದೇ. ಇದ್ದರೆ ಇರಬೇಕು ಇಂಥ ಸ್ನೇಹಿತರು ಎನ್ನುವಂಥ ಸ್ನೇಹ ಅಮೃತಧಾರೆ ಸೀರಿಯಲ್​ ಗೌತಮ್​ ಮತ್ತು ಆನಂದ್​ ಅವರದ್ದು. ಇದು ಧಾರಾವಾಹಿಯಾದರೂ ನಿಜ ಜೀವನದಲ್ಲಿ ಇಂಥ ಸ್ನೇಹಿತರು ಸಿಕ್ಕರೆ ಅವರೆಷ್ಟು ಪುಣ್ಯವಂತರು ಎನ್ನುತ್ತಿದ್ದಾರೆ ಪ್ರೇಕ್ಷಕರು. ಯಾರೇ ಕೈಬಿಟ್ಟರೂ ಕೊನೆಯವರೆಗೆ ಇರುವವರು, ನೋವಿನ ಕಾಲಕ್ಕೆ ಆಗುವವರು ಸ್ನೇಹಿತರೇ ಎನ್ನುವ ಮಾತಿದೆ. ಆದರೆ ಇದು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಬಹುತೇಕ ಮಂದಿ ಬೆನ್ನಿಗೆ ಚೂರಿ ಹಾಕುವವರೇ ಇರುವ ಸಮಯದಲ್ಲಿ ಗೌತಮ್​ ಮತ್ತು ಆನಂದ್​ ಸ್ನೇಹ ಮಾತ್ರ ಸೀರಿಯಲ್​ ವೀಕ್ಷಕರಿಗೆ ಖುಷಿ ಕೊಡುವುದಂತೂ ಸುಳ್ಳಲ್ಲ. ರೊಮ್ಯಾನ್ಸ್​, ಪ್ರೀತಿ, ಪ್ರಣಯದ ಗಂಧ ಗಾಳಿಯೇ ಇಲ್ಲದ ಗೌತಮ್​ಗೆ ಇವೆಲ್ಲವನ್ನೂ ಹೇಳಿಕೊಡುವ ಆನಂದ್​ನ ಸ್ನೇಹದ ಪರಿಯೇ ಕುತೂಹಲವಾದದ್ದು. ತಮಾಷೆಯ ಧಾಟಿಯಲ್ಲಿ ಪತ್ನಿಯ ಮೇಲೆ ಮೋಹ ಹುಟ್ಟುವಂತೆ ಮಾಡುವಲ್ಲಿ ಆನಂದ್​ ಪಾಲು ಬಹುದೊಡ್ಡದಿದೆ.

ಬೆಳ್ಳುಳ್ಳಿ ಕಬಾಬ್​ ಸವಿರುಚಿ ತೋರಲು 'ರಾವುಲ್ಲಾ' ಮಾಲೀಕನ ಎಂಟ್ರಿ: ಒನ್​ ಮೋರ್..​ಒನ್​ ಮೋರ್​ ಅನ್ನಲು ರೆಡಿನಾ?
 

click me!