ಭವ್ಯಾ ಹನುಮಂತುನ ಹೊಡೆದಿದ್ದು ಹೈಲೈಟ್ ಮಾಡಿದ ಸುದೀಪ್‌ಗೆ ಮಂಜು ಹೊಡೆದಿದ್ದು ಕಾಣಿಸಿಲ್ವಾ?; ವೀಕ್ಷಕರು ಗರಂ

By Vaishnavi Chandrashekar  |  First Published Jan 13, 2025, 12:53 PM IST

ಯಾಕೆ ಉಗ್ರಂ ಮಂಜು ಮಾಡಿದ್ದ ತಪ್ಪನ್ನು ಮುಚ್ಚುಹಾಕಿದ ಬಿಗ್ ಬಾಸ್ ಈಗ ದಿವ್ಯಾ ಮಾಡಿದ ತಪ್ಪನ್ನು ಹೈಲೈಟ್ ಮಾಡುತ್ತಿದ್ದಾರೆ? 


ಬಿಗ್ ಬಾಸ್ ಸೀಸನ್ 11ರಲ್ಲಿ ಕಳಪೆ ಪಡೆಯದ ಸದಸ್ಯರಲ್ಲಿ ಭವ್ಯಾ ಕೂಡ ಒಬ್ಬರಾಗಿದ್ದರು. 15ನೇ ವಾರದಲ್ಲಿ ಬಿಗ್ ಬಾಸ್ ಟಿಕೆಟ್ ಟು ಫಿನಾಲೆ ವಾರವನ್ನು ಆಯೋಜಿಸುತ್ತಾರೆ. ಎಲ್ಲಾ ಟಾಸ್ಕ್‌ಗಳನ್ನು ಸಖತ್ ಕೂಲ್ ಆಗಿ ಆಟವಾಡಿ ಹನುಮಂತು ವಾರದ ಕ್ಯಾಪ್ಟನ್ ಜೊತೆಗೆ ಟಿಕೆಟು ಫಿನಾಲೆ ಪಡೆಯುತ್ತಾನೆ. ಸಾಮಾನ್ಯವಾಗಿ ಅರ್ಧದಲ್ಲಿ ಎಂಟ್ರಿ ಕೊಡುವ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಫಿನಾಲೆ ವಾರಕ್ಕೂ ಮುನ್ನವೇ ಎಲಿಮಿನೇಟ್ ಆಗಿಬಿಡುತ್ತಾರೆ ಆದರೆ ಹನುಮಂತು ಗೆದ್ದಿರುವುದು ನಿಜಕ್ಕೂ ಆಶ್ಚರ್ಯ. ಅಲ್ಲದೆ ರಜತ್ ಎಂಟ್ರಿ ಕೊಟ್ಟ ಮೇಲೆ ಮನೆ ಮೊದಲಿಂದ ಆಟವಾಡುತ್ತಿದ್ದ ಸ್ಪರ್ಧಿಗಳು ಎಲಿಮಿನೇಟ್ ಆದರೂ ಹೊರತು ಇವರು ಆಗಲಿಲ್ಲ. ಹೀಗಾಗಿ ಈ ವರ್ಷ ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಫೇವರಿಸಮ್ ಮಾಡುತ್ತಿದ್ದಾರೆ ಅನ್ನೋ ಮಾತುಗಳು ಇದೆ. 

ಹನುಮಂತು ಮೇಲೆ ಹಲ್ಲೆ:

Tap to resize

Latest Videos

ಈ ವಾರದ ಟಾಸ್ಕ್‌ ಒಂದರಲ್ಲಿ ಭವ್ಯಾ ಗೌಡ ತಮ್ಮ ಬುಟ್ಟಿಯಲ್ಲಿ ಇರುವ ಬಾಲ್‌ಗಳನ್ನು ಕಾಪಾಡಿಕೊಳ್ಳುತ್ತಿರುತ್ತಾರೆ. ಆಗ ಅದನ್ನು ಕೆಳಗೆ ಬೀಳಿಸಲು ಹನುಮಂತು ಮುಂದಾಗುತ್ತಾನೆ. ಭವ್ಯಾ ಬುಟ್ಟಿಯಲ್ಲಿ ಇರುವ ಪ್ರತಿಯೊಂದು ಬಾಲನ್ನು ಹನುಮಂತು ಬೀಳಿಸುತ್ತಾನೆ. ಆಗ ಕೋಪಗೊಂಡ ಭವ್ಯಾ ಹೇ!!...ಎಂದು ಕೈ ಎತ್ತಿ ಹೊಡೆಯುತ್ತಾರೆ. ಭವ್ಯಾ ಗೌಡ ಹೊಡೆದಳು ಎಂದು ಹನುಮಂತು ಹೇಳಿದ್ದರೂ ಯಾರು ಚರ್ಚೆ ಮಾಡಲಿಲ್ಲ ವಾದ ಮಾಡದೆ ಮುಚ್ಚುಬಿಟ್ಟರು. ಇದನ್ನು ಈ ವಾರ ಸುದೀಪ್‌ ಹೈಲೈಟ್ ಮಾಡಿ ತೋರಿಸಿದ್ದರು. ಇದನ್ನು ನೋಡಿ ಭವ್ಯಾ ಕ್ಷಮೆ ಕೇಳಿದರೂ ಸಹ ಶಿಕ್ಷೆ ಆಗಬೇಕು ಎಂದು ಕಳಪೆ ವಸ್ತ್ರ ಕಳುಹಿಸಿ ಒಂದು ರಾತ್ರಿ ಜೈಲು ಶಿಕ್ಷೆ ನೀಡಿದ್ದಾರೆ. 

ಫಿನಾಲೆ ವಾರಕ್ಕೆ ಟಿಕೆಟ್ ಪಡೆದ 1st ವೈಲ್ಡ್‌ ಕಾರ್ಡ್ ಸ್ಪರ್ಧಿ ಹನುಮಂತು; ಹಳ್ಳಿ ಹೈದಾನೇ ವಿನ್ನರ್ ಅಂತಿದ್ದಾರೆ ವೀಕ್ಷಕರು

ಮಾನಸ ಮತ್ತು ಶಿಶಿರ್‌ ಮೇಲೆ ಹಲ್ಲೆ:

ಬಿಬಿ ಆರಂಭವಾದ 4 ಅಥವಾ 5ನೇ ವಾರ ಹತ್ತತ್ತಿರ ಟಾಸ್ಕ್‌ ಆಟವಾಡುವ ವೇಳೆ ಉಗ್ರಂ ಮಂಜು ತಮ್ಮ ರಕ್ಷಣೆ ಮಾಡಿಕೊಳ್ಳಲು ಮಾನಸ ಮೇಲೆ ಕೈ ಮಾಡುತ್ತಾರೆ. ಆಗ ಅಬ್ಬಾ ಹೊಟ್ಟೆ ನೋವು ಎಂದು ಮಾನಸ ನಾಟಕ ಮಾಡಿದ್ದರೂ ಸಹ ಕೈ ಮಾಡಿದ್ದು ನಿಜ. ಇದಾದ ಮೇಲೆ ಮಂಜು ಕ್ಯಾಪ್ಟನ್ ಆಗಿದ್ದಾಗ ಶಿಶಿರ್‌ ಮತ್ತು ಧನರಾಜ್‌ನ ಎತ್ತಿ ಬಿಸಾಡುತ್ತಾನೆ. ಇದನ್ನು ಶಿಶಿರ್ ವಿರೋಧಿಸಿದ್ದರು ಬಿಗ್ ಬಾಸ್ ಕೂಲ್ ಆಗಿದ್ದರು. ಈ ವಾರ ಕೂಡ ಮಂಜು ಭವ್ಯಾ ಗೌಡ ಕುತ್ತಿಗೆಯನ್ನು ಭಿಯಾಗಿ ಹಿಡಿದುಕೊಂಡಿದ್ದು ದೊಡ್ಡ ತಪ್ಪು. ಉಗ್ರಂ ಮಂಜು ಮೂರು ಸಲ ಈ ರೀತಿ ಮಾಡಿದಾಗಲೂ ಶಿಕ್ಷೆ ಕೊಡದ ಸುದೀಪ್ ಭವ್ಯಾ ಮಾಡಿದ್ದಕ್ಕೆ ಶಿಕ್ಷೆ ಕೊಟ್ಟಿದ್ದು ತಪ್ಪು ಎಂದು ವೀಕ್ಷಕರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಅಲ್ಲದೆ ಈಗಲೂ ಮಂಜುಗೆ ಶಿಕ್ಷೆ ನೀಡಬಹುದು ಹೀಗಾಗಿ ಈ ವಾರ ಶಿಕ್ಷೆ ನೀಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಹನುಮಂತುನ ವಿನ್ನ ಮಾಡುವ ದೃಷ್ಟಿಯಲ್ಲಿ ಸುದೀಪ್ ಸೇಫ್ ಮಾಡಿದ್ದು ಎಂಬ ಮಾತು ಕೂಡ ಕೇಳಿ ಬರುತ್ತಿದೆ.

ಬಿಗ್ ಬಾಸ್ ಭವ್ಯಾ ಗೌಡ ಹಳೆ ಫೋಟೋಗಳು ವೈರಲ್; ಹೇರ್‌ಸ್ಟೈಲ್‌ ಕರಾಬು ಎಂದು ಕಾಲೆಳೆದ ನೆಟ್ಟಿಗರು

click me!