ಮಂಚದ ಮೇಲೇರಿದ ನಿವೇದಿತಾ ಇದೇನಿದು ಅವತಾರ? ಎದುರಿಗಿರೋ ವ್ಯಕ್ತಿ ಮೇಲೆ ನೆಟ್ಟಿಗರ ಕಣ್ಣು!

By Suvarna News  |  First Published Jan 12, 2025, 7:11 PM IST

ದಿನ ದಿನವೂ ಹಾಟ್​ ಫೋಟೋಶೂಟ್​ ಮಾಡಿಸಿಕೊಳ್ತಿರೋ ನಿವೇದಿತಾ ಗೌಡ ಈಗ ಮಂಚದ ಮೇಲೇರಿದ್ದಾರೆ. ಫ್ಯಾನ್ಸ್​ ಹೇಳ್ತಿರೋದೇನು ನೋಡಿ! 
 


ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ, ಈಗ ಎಲ್ಲಾ ಹಂತವನ್ನೂ ಮೀರಿ ಹೋಗಿದ್ದಾರೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಗೊಂಬೆಯಂತೆ ಮುದ್ದುಮುದ್ದಾಗಿ, ಡಿಸೆಂಟ್​ ಆಗಿದ್ದ ನಿವ್ವಿ ಇದ್ಯಾಕೆ ಬಿಕಿನಿ ಮಟ್ಟಿಗೆ ಇಳಿದಳು ಎಂದು ಕೇಳುವವರೇ ಎಲ್ಲಾ. ಕೆಲ ದಿನಗಳಿಂದ ಬಿಕಿನಿಯಲ್ಲಿ ಹಾಟ್​ ಫೋಟೋಶೂಟ್​ ಮಾಡಿಸಿಕೊಳ್ತಿರೋ ನಿವೇದಿತಾ, ಇದೀಗ ಮಂಚದ ಮೇಲೇರಿ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ! ಇದನ್ನು ನೋಡಿದ ನೆಟ್ಟಿಗರು, ಫೋಟೋಶೂಟ್​ ಮಾಡಿದ ಪುಣ್ಯಾತ್ಮ ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರೆ! ಹೋದಲ್ಲಿ, ಬಂದಲ್ಲಿ ಬಿಕಿನಿ ಫೋಟೋಶೂಟ್​ ಮಾಡಿಸಿಕೊಳ್ಳಲು ಯಾವ ಫೋಟೋಗ್ರಾಫರ್​ ಅನ್ನು ಅಪಾಯಿಂಟ್​ ಮಾಡಿಕೊಂಡಿದ್ದಿ ಎಂದು ಕೇಳ್ತಿರೋ ನೆಟ್ಟಿಗರು, ಈಗ ಮಂಚದ ಫೋಟೋಶೂಟ್​ಗೆ ಅವನೇ ಬಂದನಾ ಎಂದು ಪ್ರಶ್ನಿಸುತ್ತಿದ್ದಾರೆ!

ಒಟ್ಟಿನಲ್ಲಿ, ನಿವೇದಿತಾ ಗೌಡ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿ ಇದ್ದಾರೆ. ಪ್ರತಿದಿನವೂ ಒಂದಿಲ್ಲೊಂದು ಹಾಟ್​ ಡ್ರೆಸ್​ನಲ್ಲಿ ನಟಿ ಮಿಂಚುತ್ತಲೇ ಇದ್ದಾರೆ. ಕನ್ನಡದ ಉರ್ಫಿ ಜಾವೇದ್​ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಸನ್ನಿ ಲಿಯೋನ್​, ರಾಖಿ ಸಾವಂತ್​ ಇತ್ಯಾದಿಯಾಗಿಯೂ ಕಮೆಂಟ್​ ಮಾಡುವಷ್ಟರ  ಮಟ್ಟಿಗೆ ನಟಿಯ ಡ್ರೆಸ್​ ದಿನದಿಂದ ದಿನಕ್ಕೆ ಬದಲಾಗುತ್ತಲೇ ಇದೆ. ಸಿನಿಮಾಗಳಲ್ಲಿ ನಟಿಸದಿದ್ದರೂ, ಧಾರಾಳ ದೇಹ ಪ್ರದರ್ಶನ ಮಾಡಿಕೊಂಡಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಹರಿಬಿಡುತ್ತಲೇ ಫೇಮಸ್​ ಆಗ್ತಿರೋ ನಟಿಯರು ಒಂದಿಷ್ಟು ಮಂದಿ ಇದ್ದಾರೆ.  ಅಂಗಾಂಗಗಳ ಪ್ರದರ್ಶನ ಹೆಚ್ಚಾದಷ್ಟೂ ಅವರಿಗೆ ಡಿಮಾಂಡ್​ ಜಾಸ್ತಿಯಾಗ್ತಿರೋದು ಈಗಿನ ಟ್ರೆಂಡ್​.  ಟ್ರೋಲ್​ ಮಾಡುವುದಕ್ಕಾಗಿಯೇ ಒಂದಿಷ್ಟು ಜನ ಇಂಥ ನಟಿಯರ ವಿಡಿಯೋ ಕಾಯುತ್ತಲೇ ಇರುತ್ತಾರೆ. ಅವರು ಟ್ರೋಲ್​  ಮಾಡಿ ಖುಷಿ ಪಟ್ಟುಕೊಂಡರೆ, ದೇಹ ಪ್ರದರ್ಶನ ಧಾರಾಳವಾಗಿ ಮಾಡುವ ನಟಿಯರೂ ಫುಲ್​ ಖುಷ್​. ಒಟ್ಟಿನಲ್ಲಿ ಪ್ರಚಾರ ಬೇಕು ಅಷ್ಟೇ, ಪಾಸಿಟಿವ್​, ನೆಗೆಟಿವ್​ ಅದೆಲ್ಲಾ ಯಾರಿಗೆ ಬೇಕು ಎನ್ನುವ ಜಾಯಮಾನ ಇವರದ್ದು.

Tap to resize

Latest Videos

ಪಾರದರ್ಶಕ ಡ್ರೆಸ್​ ತೊಟ್ಟು ಸೂರ್ಯನ ಬೆಳಕಲ್ಲಿ ನಿವೇದಿತಾ ರೀಲ್ಸ್​: ನೆಟ್ಟಿಗರು ಸುಮ್ನೆ ಇರ್ತಾರಾ?

ಇದ್ಯಾಕೋ ಇದೇ ಸಾಲಿನಲ್ಲಿ ಕಳೆದ ಕೆಲವು ತಿಂಗಳಿನಿಂದ ನಿವೇದಿತಾ ಸೇರಿದ್ದಾರೆ ಎನ್ನುವುದು ಅಭಿಮಾನಿಗಳಿಗೆ ಬೇಸರ ಕೂಡ ಇದೆ. ಗಾಯಕ ಚಂದನ್ ಶೆಟ್ಟಿ ಜೊತೆಗಿನ ದಾಂಪತ್ಯ ಜೀವನಕ್ಕೆ ಬ್ರೇಕ್​ ಹಾಕಿದ ಬಳಿಕ ನಿವೇದಿತಾ ಹಿಗೆ ಏಕೆ ಆದ್ರು ಎಂದು ಅನೇಕ ಮಂದಿ ಬೇಸರಪಟ್ಟುಕೊಂಡಿದ್ದರೆ, ಮತ್ತಿಷ್ಟು ಮಂದಿ ಇನ್ನಿಲ್ಲದಂತೆ ಕಮೆಂಟ್​ ಹಾಕುತ್ತಾರೆ.  ಇದೀಗ ನಟಿ ಪಾರದರ್ಶಕ ಬಟ್ಟೆಯನ್ನು ತೊಟ್ಟು ಒಳ ಉಡುಪು ಕಾಣಿಸುವಂಥ ವಿಡಿಯೋ ಶೇರ್​ ಮಾಡಿದ್ದಾರೆ. ಸೂರ್ಯನಿಗೆ ಮುತ್ತಿಕ್ಕುವುದು (Sun Kiss) ಎಂದು ಶೀರ್ಷಿಕೆ ಕೊಟ್ಟು ಈ ವಿಡಿಯೋ ಶೇರ್​ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ಸೂರ್ಯನ ಬೆಳಕಿನಲ್ಲಿ ಪಾರದರ್ಶಕ ಉಡುಪು ತೊಟ್ಟು ಒಳ ಉಡುಪು ಕಾಣಿಸುವಂತೆ ಪೋಸ್​ ಕೊಟ್ಟಿದ್ದಾರೆ ಎಂದೇ ಕಮೆಂಟಿಗರು ಹೇಳುತ್ತಿದ್ದಾರೆ. ಇದಕ್ಕಾಗಿ ಮಾಮೂಲಿನಂತೆ ನಟಿ ಇನ್ನಿಲ್ಲದಂತೆ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. 

 ಆದರೆ ಯಾರು ಏನೇ ಹೇಳಿದ್ರೂ  ನಿವೇದಿತಾ ತಲೆ ಕೆಡಿಸಿಕೊಂಡವರೇ ಅಲ್ಲ! ಕೆಲ ದಿನಗಳ ಹಿಮದೆ ಬೀಚ್​ನಲ್ಲಿ ನಿವೇದಿತಾ ಅವರು ಡೀಸೆಂಟ್​ ಆಗಿರುವ ವಿಡಿಯೋ ಒಂದನ್ನು ಶೇರ್​ ಮಾಡಿದ್ದರು. ಇಲ್ಲಿ ಅವರ ಬಟ್ಟೆ ಬೀಚ್​ನಲ್ಲಿ ಸಾಮಾನ್ಯವಾಗಿ ನಟಿಯರು ಬಿಕಿನಿಯಲ್ಲಿ ಕಾಣಿಸಿಕೊಳ್ಳುವಂತೇನೂ ಇಲ್ಲ. ತಮ್ಮ ಎಂದಿನ ದೇಹ ಪ್ರದರ್ಶನವನ್ನೂ ಮಾಡದೇ ಒಳ್ಳೆಯ ಉಡುಪಿನಲ್ಲಿಯೇ ಕಾಣಿಸಿಕೊಂಡಿದ್ದರು. ಇದಕ್ಕೆ ಹಲವರು ಹಾರ್ಟ್​ ಇಮೋಜಿಗಳಿಂದ ನಟಿಯ ಸೌಂದರ್ಯವನ್ನು ಹೊಗಳಿದರೆ, ಮತ್ತೆ ಕೆಲವರು ಪೂನಂ ಪಾಂಡೆಗೆ ಹೋಲಿಕೆ ಮಾಡುತ್ತಿದ್ದರು. ಒಳ್ಳೆಯ ಡ್ರೆಸ್​​ ಮಾಡಿದರೂ ತೆಗಳಿಕೆ ತಪ್ಪಿದ್ದಲ್ಲ ಎನ್ನುತ್ತಲೇ ಈಗ ಸಾಧ್ಯವಾದಷ್ಟು ಹಾಟ್​ ವಿಡಿಯೋ ಶೇರ್​ ಮಾಡುತ್ತಿದ್ದಾರೆ. 

ಬೆಂಕಿ ಜೊತೆ ನಿವೇದಿತಾ ಗೌಡ ಸರಸ: ಪಕ್ಕದ ಯುವಕನ ಮೇಲೆ ನೆಟ್ಟಿಗರ ಕಣ್ಣು! ಯಾರೀತ?

 

click me!