ಬೆತ್ತಲೆ ಬೆನ್ನು ತೋರಿಸಿದ ಚಂದ್ರಮುಖಿ ಪ್ರಾಣಸಖಿ ಭಾವನಾ, ಎಲ್ಲ ಜಾಲಿ ಜಾಲಿ ಅಂತಿರೋ ನೆಟ್ಟಿಗರು

Published : Mar 11, 2025, 09:15 PM ISTUpdated : Mar 12, 2025, 10:02 AM IST
 ಬೆತ್ತಲೆ ಬೆನ್ನು ತೋರಿಸಿದ ಚಂದ್ರಮುಖಿ ಪ್ರಾಣಸಖಿ ಭಾವನಾ, ಎಲ್ಲ ಜಾಲಿ ಜಾಲಿ ಅಂತಿರೋ ನೆಟ್ಟಿಗರು

ಸಾರಾಂಶ

ನಟಿ ಭಾವನಾ ಅವರ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಿಯಾಲಿಟಿ ಶೋ ಒಂದರಲ್ಲಿ ಬೆತ್ತಲೆ ಬೆನ್ನು ಪ್ರದರ್ಶನ ಮಾಡಿದ್ದೇ ಇದಕ್ಕೆ ಕಾರಣ.

ಒಂದಲ್ಲ ಎರಡಲ್ಲ ಬರೋಬ್ಬರಿ ಐವತ್ತು ಲಕ್ಷ ವೀಕ್ಷಣೆ ಕಂಡಿರೋ ನಟಿ ಭಾವನಾ ವೀಡಿಯೋವೊಂದು ಸೋಷಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೆನ್ಸೇಶನ್ ಕ್ರಿಯೇಟ್‌ ಮಾಡಿದೆ. ಖ್ಯಾತ ಎಂಟರ್‌ಟೇನ್‌ಮೆಂಟ್ ಚಾನೆಲ್‌ನ ಸಂಗೀತ ರಿಯಾಲಿಟಿ ಶೋದಲ್ಲಿ ಭಾವನಾ ಭಾಗಿಯಾಗಿದ್ದು ಅದರ ವೀಡಿಯೋ ಇದು. ಅಷ್ಟಕ್ಕೂ ಈ ವೀಡಿಯೋದಲ್ಲಿ ಭಾವನಾ ತನ್ನ ಬೆತ್ತಲೆ ಬೆನ್ನು ಪ್ರದರ್ಶನ ಮಾಡಿದ್ದೇ ಈ ಮಟ್ಟಿನ ಪಬ್ಲಿಸಿಟಿಗೆ ಕಾರಣವಾಗಿದೆ. ಅಷ್ಟಕ್ಕೂ ಭಾವನಾ ರಾಮಣ್ಣ ಎಷ್ಟೋ ಜನರಿಗೆ ಇವತ್ತಿಗೂ 'ಚಂದ್ರಮುಖಿ ಪ್ರಾಣಸಖಿ ಭಾವನಾ' ಅಂತಲೇ ಮನಸ್ಸಿಗೆ ಹತ್ತಿರವಾದವರು. ಈ ಸಿನಿಮಾದಲ್ಲಿ ಅವರು ಮಾಡಿರೋ ಪಾತ್ರ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು.

ಇಪ್ಪತ್ತಾರು ವರ್ಷಗಳ ಹಿಂದೆ ಬಂದಿರೋ ಈ ಸಿನಿಮಾದಲ್ಲಿ ರಮೇಶ್ ನಾಯಕನಾಗಿ ನಟಿಸಿದರೆ ಪ್ರೇಮಾ ನಾಯಕಿಯಾಗಿದ್ದರು. ಎರಡನೇ ನಾಯಕಿಯಾಗಿ ಮಿಂಚಿದ್ದೇ ಈ ಭಾವನಾ. ಈ ಸಿನಿಮಾದಲ್ಲೂ ಇವರ ಪಾತ್ರದ ಹೆಸರು ಭಾವನಾ. ಈ ಸಿನಿಮಾ ಎರಡು ದಶಕಗಳ ಹಿಂದೆ ಎಷ್ಟು ಜನಪ್ರಿಯವಾಯ್ತೋ ಭಾವನಾ ಪಾತ್ರವೂ ಅಷ್ಟೇ ಸಕ್ಸಸ್‌ಫುಲ್ ಆಯ್ತು.

ಸಹೋದರಿಯರ ಜೊತೆ ಭವ್ಯಾ ಗೌಡ ಫೋಟೋಶೂಟ್; ಕ್ಯಾಮೆರಾಮ್ಯಾನ್ ಕೂಡ ಏನ್ ಡವ್ ಮಾಡ್ತಿದ್ದಾರೆ ಅನ್ನೋದಾ?

ಭಾವನಾ ಇತ್ತೀಚೆಗೆ ತನ್ನ ಹೇಳಿಕೆಯೊಂದರ ಮೂಲಕವೂ ಸುದ್ದಿಯಾಗಿದ್ದರು. ಅದು ಕಾಸ್ಟಿಂಗ್ ಕೌಚ್‌ಗೆ ಸಂಬಂಧಿಸಿದ ಹೇಳಿಕೆ. ಮಲಯಾಳಂನಲ್ಲಿ ಹೇಮಾ ಸಮಿತಿ ಅಲ್ಲಿನ ಚಿತ್ರರಂಗದಲ್ಲಿನ ಕಾಸ್ಟಿಂಗ್ ಕೌಚ್‌ನ ವಿರಾಟ್ ರೂಪವನ್ನು ಬಯಲಿಗೆಳೆದಿತ್ತು. ಈ ಮೂಲಕ ಜಗತ್ತಿನಾದ್ಯಂತ ಸುದ್ದಿ ಮಾಡಿತು. ಅನೇಕ ಜನಪ್ರಿಯ ನಟಿಯರು ಧೈರ್ಯದಿಂದ ತಮಗಾದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದರು. ಪರಿಣಾಮ ಅನ್ಯಾಯ ಮಾಡಿದ ಸ್ಟಾರ್‌ ನಟರೂ ಜೈಲು ಕಂಬಿ ಎಣಿಸುವಂಥಾಯ್ತು. ಈ ವೇಳೆ ಇಂಥದ್ದೇ ಸಮಿತಿ ಕನ್ನಡದಲ್ಲೂ ಬರಬೇಕು ಅನ್ನೋ ಮಾತು ಬಹಳ ತೀವ್ರವಾಗಿ ಕೇಳಿಬಂತು. ಅನೇಕ ಜನಪ್ರಿಯ ತಾರೆಯರು ಇದಕ್ಕೆ ಪರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ನಟಿ ಭಾವನಾ ಅವರೂ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿ ಅವರು ಟ್ರೋಲಿಗೊಳಗಾಗುವಂತೆ ಮಾಡಿತು. 'ಹೆಣ್ಣು ಅಂದಮೇಲೆ ಕೆಲವು ಸಮಸ್ಯೆಗಳು ಇದ್ದೆ ಇರುತ್ತವೆ.

ಈಗೆಲ್ಲ ನೂರು ಮದುವೆಗಳಲ್ಲಿ ಹತ್ತು ಮದುವೆ ಉಳಿದರೆ ಅದೇ ದೊಡ್ಡದು. ಒಂದು ವೇಳೆ ಚಿತ್ರರಂಗದಲ್ಲಿ ಅಂಥಾ ಕೆಟ್ಟ ಚಾಳಿ ಇದ್ದರೆ ಅದನ್ನು ಬೆಂಬಲಿಸಬೇಡಿ. ಕಾಸ್ಟಿಂಗ್ ಕೌಚ್‌ ಕೂಗು ನಮ್ಮ ಇಂಡಸ್ಟ್ರಿಯಲ್ಲಿ ಇಲ್ಲ' ಎಂದುಬಿಟ್ಟಿದ್ದರು. ಅದನ್ನು ಬಹಳ ಮಂದಿ ವ್ಯಂಗ್ಯ ಮಾಡಿದ್ದರು. ಆಮೇಲೆ ಇದೆಲ್ಲ ಹಿನ್ನೆಲೆಗೆ ಸರಿಯಿತು.

ಪ್ರಜ್ವಲ್​- ಅಕ್ಷತಾ ಅತ್ಯುತ್ತಮ ನಟ, ನಟಿ: ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ- ಪಡೆದ ಹಣವೆಷ್ಟು ? ​ ಡಿಟೇಲ್ಸ್​ ಇಲ್ಲಿದೆ...

ಈ ನಡುವೆ ಈ ನಟಿ ಜನಪ್ರಿಯ ಚಾನೆಲ್‌ ಒಂದರ ಪ್ರಸಿದ್ಧ ಸಂಗೀತ ರಿಯಾಲಿಟಿ ಶೋಗೆ ಗೆಸ್ಟ್ ಆಗಿ ಹೋಗಿದ್ದಾರೆ. ಹೋಗೋದೇನೋ ಹೋಗಿದ್ದಾರೆ. ಆದರೆ ಬೆತ್ತಲೆ ಬೆನ್ನು ಪ್ರದರ್ಶಿಸುವಂತೆ ಸೀರೆ ಉಟ್ಟು ಹೋಗಿದ್ದಾರೆ. ಇದರಲ್ಲೇ ರಾಜೇಶ್‌ ಕೃಷ್ಣನ್‌ ಅವರೊಂದಿಗೆ ಡ್ಯಾನ್ಸ್‌ ಮಾಡಿ ಕ್ಯಾಮರ ಎದುರಿಗೂ ತನ್ನ ಬೆತ್ತಲೆ ಬೆನ್ನಿನ ಪ್ರದರ್ಶನ ಮಾಡಿದ್ದಾರೆ. ಇದನ್ನು ಆ ಚಾನೆಲ್‌ ತನ್ನ ಪ್ರೋಮೋದಲ್ಲಿ ಪ್ರಸಾರ ಮಾಡಿದೆ. ಇದಕ್ಕೆ ಐವತ್ತು ಲಕ್ಷಕ್ಕೂ ಅಧಿಕ ವೀಕ್ಷಣೆ ಆಗಿದೆ. ಇನ್ನೇನು ಒಂದು ದಿನ ಕಳೆದರೆ ಅದು ಅರವತ್ತು ಲಕ್ಷಕ್ಕೆ ಏರಿಕೆ ಆಗಬಹುದು. ಇದು ಕೇವಲ ಇನ್‌ಸ್ಟಾ ಒಂದರಲ್ಲೇ ಆಗಿರುವ ವೀಕ್ಷಣೆ. ಇನ್ನು ಫೇಸ್‌ಬುಕ್, ಯೂಟ್ಯೂಬ್‌, ಜೀ ಫೈವ್‌ ಎಲ್ಲ ಸೇರಿಸರೆ ಈ ವೀಕ್ಷಣೆ ಹತ್ತಿರರತ್ತಿರ ಕೋಟಿ ಸಮೀಪಿಸಬಹುದು. ಇದಕ್ಕೆ ಜನ ಬಾಯಿಗೆ ಬಂದಂಗೆ ಕಾಮೆಂಟ್ ಮಾಡಿದ್ದಾರೆ. 'ಎಲ್ಲ ಜಾಲಿ ಜಾಲಿ' ಎಂದು ಒಬ್ಬರು ಕಾಮೆಂಟ್ ಮಾಡಿದರೆ, ನೂರಾರು ಮಂದಿ, 'ಬ್ಲೌಸ್ ಹಾಕ್ಕೊಂಡು ಬನ್ರೀ...' ಎಂದು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ತೀರಾ ಅಶ್ಲೀಲ ಕಾಮೆಂಟ್‌ಗಳೂ ಬಂದಿವೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!