'ಹುಲಿ'ಯ ಬಾಯಿಗೆ ಸಿಕ್ಕ ಪುಟಾಣಿ ಸಿಹಿ! ಸೀತಾಳ ಹೊಸಜೀವನದ ಹೊಸ್ತಿಲಲ್ಲಿ ಇದೆಂಥ ಪರೀಕ್ಷೆ?

Published : Jul 11, 2024, 12:08 PM ISTUpdated : Jul 11, 2024, 12:13 PM IST
'ಹುಲಿ'ಯ ಬಾಯಿಗೆ ಸಿಕ್ಕ ಪುಟಾಣಿ ಸಿಹಿ! ಸೀತಾಳ ಹೊಸಜೀವನದ ಹೊಸ್ತಿಲಲ್ಲಿ ಇದೆಂಥ ಪರೀಕ್ಷೆ?

ಸಾರಾಂಶ

ಸೀತಾ ಮತ್ತು ರಾಮರ ಮದುವೆ ನಡೆಯುತ್ತಿರುವ ಸಂದರ್ಭದಲ್ಲಿ ಸಿಹಿ ಭಾರ್ಗವಿ ಎಂಬ ಹುಲಿಯ ಬಾಯಲ್ಲಿ ಸಿಲುಕಿದ್ದಾಳೆ. ಇಲ್ಲೇನಾಗುತ್ತಿದೆ?  

ಸೀತಾರಾಮ ಕಲ್ಯಾಣ ಅದ್ಧೂರಿಯಾಗಿ ನಡೆಯುತ್ತಿದೆ. ಹಲವು ಅಡೆತಡೆಗಳನ್ನು ಮೀರಿ ಮದುವೆ ನಡೆಯುತ್ತಿದೆ.    ಮದುವೆಯ ಶಾಸ್ತ್ರಗಳೂ ಮುಗಿದು ಸಪ್ತಪದಿಯನ್ನೂ ತುಳಿದಾಗಿದೆ ಜೋಡಿ.  ಇವರಿಬ್ಬರ ಮದುವೆಗೆ ಯಾವ ಆತಂಕಗಳೂ ಬರದಿರಲಪ್ಪ ಎಂದುಕೊಂಡವರು ಒಂದು ಹಂತದಲ್ಲಿ ನಿರುಮ್ಮಳಾಗಿದ್ದಾಳೆ.   ಮದುವೆ ಮುಗಿಯುವವರೆಗೆ ಇದ್ದ ಆತಂಕವೂ ದೂರವಾಗಿದೆ.  ಇಲ್ಲಿಯವರೆಗೂ ಈ ಮದುವೆ ಆಗದಂತೆ ಚಿಕ್ಕಿ ಭಾರ್ಗವಿ ಶತ ಪ್ರಯತ್ನ ಮಾಡುತ್ತಲೇ ಬಂದಿದ್ದಾಳೆ. ಆದರೆ ಎಲ್ಲವೂ ಠುಸ್​ ಆಗುತ್ತಲೇ ಇದೆ. ಇದೀಗ ನಿರ್ವಿಘ್ನವಾಗಿ ಮದುವೆ ಮುಗಿಯುತ್ತಿದೆ. ಕೊನೆಯ ಘಳಿಗೆಯಲ್ಲಿ ಸೀತಾಳ ಹೈಡ್ರಾಮಾದಿಂದಾಗಿ ಮದುವೆಯ ಬಗ್ಗೆ ಅನುಮಾನ ಕಾಡಿತ್ತು. ದೇಸಾಯಿಯವರು ಒಂದು ವರ್ಷದಲ್ಲಿ  ಮಗುವನ್ನು ಹೆತ್ತು ಕೊಡುತ್ತಾಳೆ ಎಂದು ಸಂಬಂಧಿಕರ ಎದುರು ಹೇಳಿದಾಗ, ಸಿಹಿ ಬಿಟ್ಟು ಬೇರೆ ಮಗು ನನ್ನ ಜೀವನದಲ್ಲಿ ಬರಬಾರದು ಎಂದುಕೊಂಡಿರೋ ಸೀತಾಳಿಗೆ ಆಘಾತವಾಗಿ ಮದುವೆಯೇ ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದಳು. ಈಗ ಎಲ್ಲವೂ ಬಗೆಹರಿದು ಮದುವೆಯಾಗುತ್ತಿದೆ.

ಅಂದಹಾಗೆ ಸೀತಾರಾಮ ಸೀರಿಯಲ್​ನಲ್ಲಿ ಇಲ್ಲಿಯವರೆಗೆ ಸೀತೆಯನ್ನು ಪುಣ್ಯಕೋಟಿಗೇ ಹೋಲಿಸಲಾಗಿದೆ. ಮಗಳ ಬಗ್ಗೆ ಇರುವ ಆಕೆಯ ಕಾಳಜಿ ಹಾಗೂ ಆಕೆಯ ಸ್ವಭಾವದಿಂದಾಗಿ ಪುಣ್ಯಕೋಟಿಗೆ ಹೋಲಿಕೆ ಮಾಡಲಾಗಿದೆ. ಆದರೆ ಮದುವೆಯ ಸಂಭ್ರಮದಲ್ಲಿಯೇ ಸಿಹಿ ಮಾತ್ರ ಹುಲಿಯ ಬಾಯಲ್ಲಿ ಸಿಲುಕಿ ವಿಲವಿಲ ಒದ್ದಾಡುತ್ತಿದ್ದಾಳೆ. ಹೌದು. ಸದ್ಯ ಇಲ್ಲಿ ಭಾರ್ಗವಿಯೇ ಹುಲಿ. ಮೊದಲಿನಿಂದಲೂ ಸೀತಾರಾಮರ ಕಲ್ಯಾಣಕ್ಕೆ ಅಡ್ಡಗಾಲು ಹಾಕುತ್ತಲೇ ಬಂದಿರೋ ಭಾರ್ಗವಿಗೆ ಅದನ್ನು ಮಾಡಲು ಸಾಧ್ಯವಾಗಿರಲಿಲ್ಲ. ಈಗ ಸಿಹಿಯನ್ನು ಮುಂದಿಟ್ಟುಕೊಂಡು ಸೀತಾ ಮತ್ತು ರಾಮರಿಗೆ ಕಷ್ಟ ಕೊಡಲು ಒಂದಲ್ಲೊಂದು ಪ್ಲ್ಯಾನ್​ ಮಾಡುತ್ತಿದ್ದಾಳೆ.

ಹಾರ್ಟ್​ ಬ್ಲಾಕೇಜ್​ ತೆಗೆಯುವ ಅದ್ಭುತ ಔಷಧ ಈ ಕಷಾಯ: ಹೃದಯ ಸಮಸ್ಯೆಗಳಿಗೆ ರಾಮಬಾಣ- ಡಾ.ಗೌರಿ ಮಾಹಿತಿ

ಸೀತಾ-ರಾಮರ ಮದುವೆ ನಡೆಯುತ್ತಿರುವ ಸಂದರ್ಭದಲ್ಲಿ ಖುಷಿಯಿಂದ ಸಿಹಿ ಓಡಾಡಿಕೊಂಡಿದ್ದರೆ, ಭಾರ್ಗವಿ ಬಂದು ನೀನು ಅವರ ಮಧ್ಯೆ ಹೋಗಬಾರದು. ಅದು ಸರಿಯಲ್ಲ. ಅವರು ಖುಷಿಯಾಗಿ ಇದ್ದಾರೆ. ನೀನು ಹೋಗಬಾರದು ಎಂದಿದ್ದಾಳೆ. ಈ ಹಿಂದೆ ಕೂಡ ಸಿಹಿಯನ್ನು ದೂರ ಮಾಡಲು ಹಲವು ರೀತಿಯಲ್ಲಿ ಪ್ಲ್ಯಾನ್​ ಮಾಡಿದ್ದಳು. ಆದರೆ ಅದ್ಯಾವುದೂ ಹೆಚ್ಚಿನ ರೀತಿಯಲ್ಲಿ ಸಕ್ಸಸ್​ ಆಗಿರಲಿಲ್ಲ. ಆದರೆ ಇದೀಗ ಭಾರ್ಗವಿ ಚಿಕ್ಕಿಯ ಮಾತಿನಿಂದ ಸಿಹಿ ನೊಂದುಕೊಂಡಿದ್ದಾಳೆ. ಅತ್ತ ಸೀತಾ ಸಿಹಿ ಎಲ್ಲಿ ಎಂದು ಹುಡುಕಾಟ ನಡೆಸುತ್ತಿದ್ದರೆ, ಇತ್ತ ಸಿಹಿ ಯಾರಿಗೂ ಕಾಣದಂತೆ ದೂರ ಹೋಗಿದ್ದಾಳೆ.

ಇನ್ನು ಸೀತಾರಾಮರ ಈ ರೀಲ್​ ಮದ್ವೆ ಕೂಡ ರಿಯಲ್​ ಮದುವೆಯಂತೆಯೇ ಭರ್ಜರಿಯಾಗಿ ನಡೆಯುತ್ತಿದೆ. ಅಷ್ಟಕ್ಕೂ,  ಇಂದು ಸೀರಿಯಲ್​ಗಳು ಎಂದರೆ ಅವು ಕೇವಲ ಸೀರಿಯಲ್​ಗಳಾಗಿರಲ್ಲ. ಬದಲಿಗೆ ಅದು ನಿಜ ಜೀವನದ ಕಥೆಯಂತೆ ಇಂದು ಮನೆಮನಗಳನ್ನು ತುಂಬಿಕೊಂಡಿವೆ. ಅದರಲ್ಲಿರುವ ಪಾತ್ರಧಾರಿಗಳೆಲ್ಲರೂ ತಮ್ಮ ಮನೆಯದ್ದೋ ಇಲ್ಲವೇ ನೆರೆಮನೆಯ ಸದಸ್ಯರಂತೆ ಕಾಣುವ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ ಸೀರಿಯಲ್​ಗಳು ಕೂಡ ವೀಕ್ಷಕರನ್ನು ಸೆರೆ ಹಿಡಿಯಲು ದೊಡ್ಡ ತಂತ್ರವನ್ನೇ ರೂಪಿಸುತ್ತಾರೆ. ಹಾಗೆಯೇ ಸೀತಾ ಮತ್ತು ರಾಮ್​ ಮದುವೆ ಸಂಭ್ರಮ ಜೋರಾಗಿ ನಡೆದಿದೆ.  ಸೀರಿಯಲ್​ಗಳ ಮದುವೆ ಎಂದರೆ ಅದು ಒಂದೆರಡು ದಿನಗಳ ಮದ್ವೆಯಲ್ಲ. ಇದೀಗ ನಿಜ ಜೀವನದಲ್ಲಿಯೂ ಸೆಲೆಬ್ರಿಟಿ ಮದ್ವೆಗಳು ತಿಂಗಳುಗಳ ಕಾಲ ನಡೆಯುವುದು ಇದೆ. ಇನ್ನು ಧಾರಾವಾಹಿಗಳು ಎಂದ ಮೇಲೆ ಕೇಳಬೇಕೆ. ಒಂದು ಮದುವೆಯ ಸೀನ್​ ವರ್ಷಗಟ್ಟಲೆ ಹೋದರೂ ಅಚ್ಚರಿಯಿಲ್ಲ.  ಆದರೂ ಕೆಲವೊಮ್ಮೆ ಅತಿಯಾಗಿ ಎಳೆಯುವುದು ಸರಿಯಲ್ಲ ಎನ್ನುವ ಮಾತು ಕೇಳಿಬರುತ್ತಲೇ ಇದೆ.

ಆಷಾಢ ನೆಪದಲ್ಲಿ ತವರು ಸೇರಿ ಇವ್ರ ಜೊತೆ ರೊಮಾನ್ಸಾ? ಅಮೃತಧಾರೆ ಭೂಮಿಕಾ ಕಾಲೆಳೆದ ನೆಟ್ಟಿಗರು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!