ಆಷಾಢ ನೆಪದಲ್ಲಿ ತವರು ಸೇರಿ ಇವ್ರ ಜೊತೆ ರೊಮಾನ್ಸಾ? ಅಮೃತಧಾರೆ ಭೂಮಿಕಾ ಕಾಲೆಳೆದ ನೆಟ್ಟಿಗರು!

By Suchethana D  |  First Published Jul 11, 2024, 10:30 AM IST

ಅಮೃತಧಾರೆಯಲ್ಲಿ ಭೂಮಿಕಾ-ಗೌತಮ್​ ದೂರದೂರವಾಗಿ ವಿರಹವೇದನೆ ಅನುಭವಿಸುತ್ತಿದ್ದರೆ, ತವರು ಸೇರಿದ ಭೂಮಿಕಾ ಹೀಗೆ ಮಾಡೋದಾ? ಕಾಲೆಳೆಯುತ್ತಿರುವ ನೆಟ್ಟಿಗರು.
 


ಸದ್ಯ ಭೂಮಿಕಾ ಮತ್ತು ಗೌತಮ್​ ವಿರಹ ವೇದನೆ ಅನುಭವಿಸುತ್ತಿದ್ದಾರೆ. ಆಷಾಢ ಎನ್ನುವ ಕಾರಣಕ್ಕೆ ಭೂಮಿಕಾ ಮನೆಯವರು ಮಗಳನ್ನು ತವರಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಇವಳು ಇಲ್ಲದೇ ಅವನು, ಅವನು ಇಲ್ಲದೇ ಇವಳು ಇರಲು ಆಗ್ತಿಲ್ಲ. ಕರೆಂಟ್​ ಹೋದಾಗ ಅತ್ತ ಗೌತಮ್​ಗೆ ಭೂಮಿಕಾ ನೆನಪಾದ್ರೆ, ಡುಮ್ಮ ಸರ್​ ಗೊರಕೆ ಸದ್ದು ಇಲ್ಲದೇ ಭೂಮಿಗೆ ನಿದ್ದೆ ಬರ್ತಿಲ್ಲ. ಅಂತೂ ಆನಂದ್​ಗೆ ಹೇಳಿ ಗೌತಮ್​ನ ಗೊರಕೆ ಶಬ್ದವನ್ನು ರೆಕಾರ್ಡ್​ ಮಾಡಿಕೊಂಡು ಭೂಮಿಕಾಗೆ ಕಳಿಸಿ ಆಗಿದೆ. ಒಟ್ಟಿನಲ್ಲಿ ಇಬ್ಬರದ್ದೂ ಒಂದು ರೀತಿಯ ನರಕಯಾತನೆ. ಈ ಆಷಾಢ ಯಾಕೆ ಬಂತೋ ಎಂದು ನವ ದಂಪತಿ ಮನಸ್ಸಿನಲ್ಲಿಯೇ ಬೈದುಕೊಳ್ಳುವ ಹಾಗೆ ಇಲ್ಲಿಯೂ ಈ ಜೋಡಿ ಶಪಿಸುತ್ತಲೇ ಇದೆ.

ಅದೇ ಇನ್ನೊಂದೆಡೆ, ಭೂಮಿಕಾ ಈಗ ಕೃಷ್ಣ ಅವರ ಜೊತೆ ರೊಮಾಂಟಿಕ್​ ಮೂಡ್​ನಲ್ಲಿ ಇದ್ದಾರೆ. ಅಂದಹಾಗೆ, ಭೂಮಿಕಾ ಅವರ ರಿಯಲ್​ ಹೆಸರು  ಅರ್ಥಾತ್​ ಛಾಯಾ ಸಿಂಗ್​ ಹಾಗೂ ಅವರ  ರಿಯಲ್​ ಪತಿಯ ಹೆಸರು ಕೃಷ್ಣ.  ಈ ಜೋಡಿ ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಇದ್ದು, ಆಗಾಗ್ಗೆ ಫೋಟೋ, ವಿಡಿಯೋ, ರೀಲ್ಸ್​ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಕಡಲತೀರದಲ್ಲಿ ಜೋಡಿ ರೀಲ್ಸ್​ ಮಾಡಿದ್ದು, ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಅಲ್ಲಿ ಡುಮ್ಮಾ ಸರ್​ ವಿರಹವೇದನೆಯಿಂದ ಬಳಲುತ್ತಿದ್ದರೆ, ಇಲ್ಲಿ ಇನ್ನೊಬ್ಬರ ಜೊತೆ ರೊಮಾನ್ಸ್​ ಮಾಡ್ತಿದ್ದೀರಾ ಎಂದು ಕೆಲವರು ಪ್ರಶ್ನಿಸಿದರೆ, ಆಷಾಢದ ನೆಪದಲ್ಲಿ ತವರು ಮನೆ ಸೇರಿದ್ದು ಇದಕ್ಕೇನಾ ಎಂದು ಮತ್ತೆ ಕೆಲವರು ರೇಗಿಸುತ್ತಿದ್ದಾರೆ. ಮಾಮೂಲಿನಂತೆ ಒಂದಿಷ್ಟು ಮಂದಿ, ಭೂಮಿಕಾ ಆಗಿ ಛಾಯಾ ಸಿಂಗ್​ ಅವರ ನಟನೆಯನ್ನು ಹಾಡಿ ಕೊಂಡಾಡುತ್ತಿದ್ದಾರೆ.

Tap to resize

Latest Videos

ಅಮ್ಮನ ಮದುವೆಗೆ ಸಿಹಿ ಕ್ಯೂಟ್​ ವಿಡಿಯೋಶೂಟ್​: ದಯವಿಟ್ಟು ಬಾಲಕಿಯ ಭವಿಷ್ಯ ಹಾಳುಮಾಡ್ಬೇಡಿ ಅಂತಿರೋ ಫ್ಯಾನ್ಸ್​

ಇನ್ನು ಈ ರಿಯಲ್​ ಜೋಡಿಯ ಕುರಿತು ಹೇಳುವುದಾದರೆ, ದಂಪತಿಯ ಮದುವೆಯಾಗಿ 11 ವರ್ಷಗಳೇ ಕಳೆದಿವೆ. ಬೆಂಗಳೂರಿನ ಬೆಡಗಿ  ಛಾಯಾ ಸಿಂಗ್ ನಿಜ ಜೀವನದಲ್ಲಿ ತುಂಬಾ ಸಾಫ್ಟ್​ ಅಂತೆ. ಅವರಿಗೆ  ಕೃಷ್ಣ ಅವರ ಪರಿಚಯವಾದದ್ದು, ತಮಿಳು ಚಿತ್ರದಲ್ಲಿ  ನಟಿಸುವ ಸಮಯದಲ್ಲಿ.  ಕೃಷ್ಣ ಅವರೂ  ಸಿನಿಮಾರಂಗದಲ್ಲೇ ಇದ್ದು, ತಮಿಳು ಕಿರುತೆರೆಯ ಜನಪ್ರಿಯ ನಟ. 2010ರಲ್ಲಿ ತಮಿಳು ನಟ ಕೃಷ್ಣರನ್ನು ಮೊದಲು ಭೇಟಿಯಾಗಿದ್ದರು. 

'ಆನಂದಪುರತು ವೀಡ್' (Anandhapurathu Veedu) ಎಂಬ ಸಿನಿಮಾದ ವೇಳೆ ಭೇಟಿಯಾದ ಇವರು ಪರಸ್ಪರ ಇಷ್ಟಪಟ್ಟು ನಂತರ ಹಿರಿಯರ ಒಪ್ಪಿಸಿ, ಅವರ ಆಶೀರ್ವಾದ ಪಡೆದು 2012ರಲ್ಲಿ ಮದುವೆಯಾಗಿದ್ದಾರೆ. 2010ರಲ್ಲಿ ತೆರೆ ಕಂಡ ಈ ಚಿತ್ರ  ಸೂಪರ್‌ನ್ಯಾಚುರಲ್ ಮಿಸ್ಟರಿ ಸಿನಿಮಾವಾಗಿದ್ದು, ಇವರಿಬ್ಬರೂ  ನಟಿಸಿದ್ದಾರೆ.  ನಿರ್ದೇಶಕ ಶಂಕರ್ ನಿರ್ಮಾಣದ ಈ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ಹೆಚ್ಚು ಸಿಕ್ಕಿತ್ತು. ಈ ಸಿನಿಮಾದಲ್ಲಿ ಛಾಯಾ ಅವರು ನಾಯಕಿ ಪಾತ್ರ ಮಾಡಿದ್ದರೆ ಕೃಷ್ಣ (Krishna) ಅವರು ನೆಗೆಟಿವ್ ಪಾತ್ರ ಮಾಡಿದ್ದರು. ಇನ್ನು ರನ್ ಎನ್ನುವ ಧಾರಾವಾಹಿಯಲ್ಲಿ ಕೃಷ್ಣ, ಛಾಯಾ ಸಿಂಗ್ ಒಟ್ಟಿಗೆ ನಟಿಸಿದ್ದರು. 2019ರಲ್ಲಿ ಈ ಧಾರಾವಾಹಿ ಪ್ರಸಾರ ಆಗಿ 197 ಎಪಿಸೋಡ್ ಪ್ರಸಾರ ಆಗಿತ್ತು. ಟಿಆರ್‌ಪಿ ಕಾರಣದಿಂದವೋ ಅಥವಾ ಇನ್ಯಾವುದೋ ಕಾರಣಕ್ಕೋ ಏನೋ ಈ ಸೀರಿಯಲ್ ಬಹುಬೇಗ ಅಂತ್ಯ ಆಗಿತ್ತು.

ನನ್ನೊಂದಿಗೆ ಸದಾ ಜೊತೆಯಾಗಿರು... ಐ ಲವ್​ ಯು ಎಂದ ನಿವೇದಿತಾ! ಯಾರೀ ಹೊಸ ಎಂಟ್ರಿ? ತಲೆ ಕೆಡಿಸಿಕೊಂಡ ಫ್ಯಾನ್ಸ್​

 

click me!