
ಆರಂಭದಲ್ಲಿ ಏನೋ ವಿಭಿನ್ನವಾಗಿ ತೋರಿಸುವ ಸೀರಿಯಲ್ಗಳು ಬರಬರುತ್ತಾ ಹಳ್ಳ ಹಿಡಿಯುತ್ತವೆ ಎಂದು ಸೀರಿಯಲ್ ಪ್ರೇಮಿಗಳು ಆಗಾಗ್ಗೆ ಬೇಸರ ವ್ಯಕ್ತಪಡಿಸುವುದು ನಡೆದೇ ಇದೆ. ಅದೇ ಅಕ್ರಮ ಸಂಬಂಧ, ಅತ್ತೆ-ಸೊಸೆ ಜಗಳ, ವಿಲನ್ಗಳಾಗಿರೋ ಅತ್ತಿಗೆ, ನಾದಿನಿ, ಚಿಕ್ಕಮ್ಮ... ಹೀಗೆ ಬಹುತೇಕ ಎಲ್ಲಾ ಸೀರಿಯಲ್ಗಳಿಗೂ ಅದೇ ಕಥೆ, ಅದೇ ಸಿದ್ಧ ಸೂತ್ರ ಎನಿಸಿಕೊಂಡು ಬಂದಿವೆ. ಅದರಲ್ಲಿಯೇ ಚೂರು ಪಾರು ವಿಭಿನ್ನ ಕಥೆಗಳನ್ನು ಹುಡುಕಿ ಅಂಥ ಸೀರಿಯಲ್ಗಳನ್ನು ಇಷ್ಟಪಡುವವರೂ ಇದ್ದಾರೆ. ಅಂಥ ಸೀರಿಯಲ್ಗಳಲ್ಲಿ ಒಂದೆನಿಸಿರುವುದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್.
ಒಂದು ಮಗುವಿನ ತಾಯಿ ಸೀತಾಳನ್ನು ದೊಡ್ಡ ಬಿಜಿನೆಸ್ಮೆನ್ ರಾಮ್ ಪ್ರೀತಿ ಮಾಡಿರುವ ವಿಭಿನ್ನ ಕಥೆಯನ್ನು ಈ ಸೀರಿಯಲ್ ಹೊಂದಿದೆ. ಮಾಮೂಲಿಯಂತೆ ಇಲ್ಲೊಬ್ಬ ವಿಲನ್ ಚಿಕ್ಕಮ್ಮ ಇದ್ದಾಳೆ. ಅವಳು ಶತ ಪ್ರಯತ್ನ ಪಟ್ಟರೂ ಸೀತಾ ಮತ್ತು ರಾಮ್ ಅವರ ಮದುವೆಯನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಇದಾಗಲೇ ಒಮ್ಮೆ ರಾಮ್ಗೆ ಆ್ಯಕ್ಸಿಡೆಂಟ್ ಮಾಡಿಸಿ ಅವನನ್ನು ಆಸ್ಪತ್ರೆಗೆ ಸೇರಿಸಿದ್ದಳು. ಈಗ ಮತ್ತೊಮ್ಮೆ ಆ್ಯಕ್ಸಿಡೆಂಟ್ ಆದಂತಿದೆ. ಸೀತಾ ಮತ್ತು ರಾಮ್ ಮದುವೆ ಆಗುವುದನ್ನು ತಪ್ಪಿಸಲು ರಾಮ್ನ ಕೊಲೆ ಸಂಚು ಹೂಡಿದ್ದಾಳೆ ಭಾರ್ಗವಿ. ಅವನನ್ನು ವಿದೇಶಕ್ಕೆ ಕಳುಹಿಸಿದ್ದಾಳೆ. ಇದೀಗ ಅಪಘಾತ ಆಗಿರೋ ಸುದ್ದಿ ಬಂದಿದ್ದು, ಅದು ರಾಮ್ಗೇನಾ ಎಂದು ತಿಳಿಯಬೇಕಿದೆ.
ಅಮ್ಮನ ದಿನಕ್ಕೆ ಸಿಹಿ-ಸೀತಾ ಭರ್ಜರಿ ಆಫರ್: ತಾಯಿಗೆ ಪ್ರಶ್ನೆ ಕೇಳಿ- ಟ್ಯಾಗ್ ಮಾಡಿ- ಏನಿದು ವಿಶೇಷ?
ಇದು ಒಂದೆಡೆಯಾದರೆ ಅತ್ತ ಅಮೃತಧಾರೆ ಸೀರಿಯಲ್ನಲ್ಲಿಯೂ ಚಿಕ್ಕಮ್ಮ ಶಕುಂತಲಾ ದೇವಿ ಮಗ ಗೌತಮ್ ಮತ್ತು ಸೊಸೆ ಭೂಮಿಕಾಳನ್ನು ಹನಿಮೂನ್ಗೆ ಕಳುಹಿಸಿದ್ದಾಳೆ. ಅಲ್ಲಿ ಕೊಲೆ ಸಂಚು ರೂಪಿಸಿದ್ದಾಳೆ. ಈ ಹಿಂದೆ ಈಕೆ ಕೂಡ ಆ್ಯಕ್ಸಿಡೆಂಟ್ ಮಾಡಿಸುವ ಪ್ಲ್ಯಾನ್ ಮಾಡಿ ಸೋತಿದ್ದಳು. ಎರಡೂ ಸೀರಿಯಲ್ಗಳಲ್ಲಿನ ಕಥೆ ವಿಭಿನ್ನ ಕಥಾಹಂದರ ಹೊಂದಿದೆ ಎನ್ನುವ ಕಾರಣಕ್ಕೆ ಅಭಿಮಾನಿಗಳು ಇಷ್ಟಪಟ್ಟು ನೋಡುತ್ತಿದ್ದರೂ, ಇದೀಗ ಅದೇ ಸಿದ್ಧ ವಸ್ತುವನ್ನು ಇಟ್ಟುಕೊಂಡು ಚಿಕ್ಕಮ್ಮಂದಿರನ್ನು ಅತ್ಯಂತ ಕೆಟ್ಟದಾಗಿ ಬಿಂಬಿಸಿರುವುದರ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಸೀರಿಯಲ್ ಫ್ಯಾನ್ಸ್ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಅದೇ ರೀತಿ ಶ್ರೀಮಸ್ತು, ಶುಭಮಸ್ತು ಸೀರಿಯಲ್ನಲ್ಲಿ ಕೂಡ ಚಿಕ್ಕಮ್ಮ ಶಾರ್ವರಿ ಕೊಲೆ ಪ್ರಯತ್ನ ಮಾಡಿ ಸೋತಿದ್ದಾಳೆ. ಆದರೂ ಕುಟುಂಬಸ್ಥರನ್ನು ಮುಗಿಸುವ ಸಂಚು ರೂಪಿಸುತ್ತಳೇ ಇದ್ದಾಳೆ.
ಇನ್ನು ಸೀತಾರಾಮ ಸೀರಿಯಲ್ ವಿಷಯಕ್ಕೆ ಬರುವುದಾದರೆ, ಸೀತಾ ಅಂತೂ ರಾಮ್ ಮನೆ ಸೇರಿದ್ದಾಳೆ. ಆಕೆಯನ್ನು ಎಲ್ಲರೂ ಒಪ್ಪಿಕೊಂಡು ಆಗಿದೆ. ಆದರೆ ಭಾರ್ಗವಿ ಮಾತ್ರ ಇದನ್ನು ಒಪ್ಪುತ್ತಿಲ್ಲ. ಹೇಗಾದರೂ ಮಾಡಿ ಈ ಮದುವೆ ತಪ್ಪಿಸಲು ತಂತ್ರ ರೂಪಿಸುತ್ತಲೇ ಇದ್ದಾಳೆ. ಮನೆಯಿಂದ ತಲೆತಲಾಂತರವಾಗಿ ಬಂದಿರುವ ಹಾರ ಸೀತಾಳಿಗೆ ಸೇರುವುದು ಅವಳಿಗೆ ಇಷ್ಟವಿರಲಿಲ್ಲ. ಆದರೂ ಅದು ಸೀತಾಳ ಕೊರಳನ್ನು ಸೇರಿದೆ. ಇದನ್ನು ನೋಡಿ ಹೊಟ್ಟೆ ಉರಿಸಿಕೊಂಡಿದ್ದಾಳೆ ಭಾರ್ಗವಿ. ಇದರ ನಡುವೆಯೇ ಸಿಹಿ ರಾಮ್ ಮನೆಗೆ ಬಂದಿದ್ದಾಳೆ. ತನ್ನಿಂದಲೇ ರಾಮ್ ಮತ್ತು ಸೀತಾಳ ಮದುವೆ ಆಗುತ್ತಿಲ್ಲ ಎನ್ನುವುದು ಅವಳ ಅನಿಸಿಕೆ. ಇನ್ನೇನು ಅವಳಿಗೂ ಸಮಾಧಾನ ಹೇಳುವಷ್ಟರಲ್ಲಿಯೇ ಅಪಘಾತದ ಸುದ್ದಿ ಮನೆಯವರಿಗೆ ಬರಸಿಡಿಲಿನಂತೆ ಬಡಿದಿದೆ.
ಹುಟ್ಟುಹಬ್ಬ ಸಂಭ್ರಮದಲ್ಲಿ ನಿವೇದಿತಾ ಗೌಡ: ಗಂಡ ಸರಿ ಇದ್ರೆ ಹೀಗಾಗ್ತಿರಲಿಲ್ಲಾ ಅನ್ನೋದಾ ಫ್ಯಾನ್ಸ್?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.