Latest Videos

ಸೀರಿಯಲ್​ನಿಂದ ಮನೆಹಾಳು ಬುದ್ಧಿನೂ ಬರುತ್ತಲ್ಲಾ ಅತ್ತೆ... ಭೂಮಿ ಬೀಸಿದ ಚಾಟಿಗೆ ಶಕುಂತಲಾ ತತ್ತರ...

By Suchethana DFirst Published Jun 15, 2024, 4:30 PM IST
Highlights

ಸೀರಿಯಲ್​ನಿಂದ ಮನೆಹಾಳು ಬುದ್ಧಿನೂ ಬರುತ್ತೆ ಎಂದು ಇದೀಗ ಖುದ್ದು ಸೀರಿಯಲ್​ನಲ್ಲಿಯೇ ಭೂಮಿಕಾ ಹೇಳಿದ್ದು, ನೆಟ್ಟಿಗರು ಇದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. 
 

ಸೀರಿಯಲ್​ ನೋಡಿದ್ರೆ ಮನೆಹಾಳು ಬುದ್ಧಿ ಬರುತ್ತೆ ಎನ್ನೋದು ಮಾಮೂಲಾಗಿ ಹೇಳುವುದು ಉಂಟು. ಅದರಲ್ಲಿಯೂ ಹೆಂಗಸರು ಇದಕ್ಕೆ ಅಡಿಕ್ಟ್​ ಆಗಿರೋದು ಜಾಸ್ತಿ. ಯಾವುದೇ ವಿಷಯದಲ್ಲಿ ಒಳ್ಳೆಯದ್ದಕ್ಕಿಂತಲೂ ಕೆಟ್ಟದ್ದೇ ಜನರಿಗೆ ಅಟ್ರಾಕ್ಷನ್​ ಆಗುವುದು ಪ್ರಕೃತಿ ಸಹಜ ಗುಣವೂ ಹೌದು. ಹಲವು ಸೀರಿಯಲ್​ಗಳಲ್ಲಿ ಅತ್ತೆ-ಸೊಸೆ ಜಗಳ ಇಲ್ಲವೇ ಮನೆಹಾಳು ದೃಶ್ಯಗಳು ಹೇರಳವಾಗಿ ಕಾಣಸಿಗುತ್ತದೆ. ವಿವಿಧ ರೀತಿಯ ಕಂತ್ರಿ ಬುದ್ಧಿಗಳು, ಯಾರಿಗೆ ಹೇಗೆ ಮೋಸ ಮಾಡಬಹುದು ಎನ್ನುವ ಪ್ಲ್ಯಾನ್​ ಎಲ್ಲವೂ ಸೀರಿಯಲ್​ಗಳಲ್ಲಿ ಧಾರಾಳವಾಗಿ ಕಾಣಬಹುದು. ಯಾವುದೇ ವಿಷಯವನ್ನು ಪದೇ ಪದೇ ನೋಡಿದಾಗ ಅದು ನಮ್ಮ ಅರಿವಿಲ್ಲದೇ ನಮ್ಮೊಳಗೆ ಆಹ್ವಾನವಾಗಿ ಬಿಡುತ್ತದೆ ಎನ್ನುತ್ತದೆ ಸಂಶೋಧನೆಗಳು. ಇದೇ ರೀತಿ ಸೀರಿಯಲ್​ಗಳು ಕೂಡ ಹೆಚ್ಚಿನವರನ್ನು ಅವರಿಗೆ ಅರಿವಿಗೆ ಬಾರದಂತೆ ಆವರಿಸಿಕೊಂಡು ಬಿಡುತ್ತವೆ. ಇದೀಗ ಕುತೂಹಲದ ವಿಷಯವೆಂದರೆ ಖುದ್ದು ಸೀರಿಯಲ್​ನಲ್ಲಿಯೇ ಈ ವಿಷಯವನ್ನು ಹೇಳಿರುವುದು!

ಹೌದು. ಎಲ್ಲಾ ಸೀರಿಯಲ್​ಗಳಿಗಿಂತಲೂ ಸ್ವಲ್ಪ ಭಿನ್ನ ಎನಿಸಿರುವ ಸೀರಿಯಲ್​ ಅಮೃತಧಾರೆ. ಅಮೃತಧಾರೆ ಈ ಹೆಸರು ಕೇಳಿದರೆ ಸೀರಿಯಲ್​ ವೀಕ್ಷಕರಿಗೆ ಅದೇನೋ ಒಂಥರಾ ರೋಮಾಂಚನ ಆಗುವುದು ಇದೆ. ಕಾರಣ, ಮಧ್ಯ ವಯಸ್ಕರಾಗಿರುವ ಇಬ್ಬರ ನಡುವಿನ ಅಪರೂಪದ ಪ್ರೇಮ ಕಥೆ ಇದು. ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಈ ಸೀರಿಯಲ್​ ಹಲವು ಸೀರಿಯಲ್​ಗಳಿಗಿಂತಲೂ ಭಿನ್ನವಾಗಿರುವ ಕಾರಣ, ಇದನ್ನು ಪ್ರೇಕ್ಷಕರಿಗೆ ಅಚ್ಚುಮೆಚ್ಚಿನ ಸೀರಿಯಲ್​ ಆಗಿದೆ. ಸದ್ಯ ಸೀರಿಯಲ್​ ಪ್ರೇಮಿಗಳ ಮನಸ್ಸನ್ನು ಗೆಲ್ಲುತ್ತಿರುವ ಸೀರಿಯಲ್​ಗಳ ಪೈಕಿ ಜೀ ಕನ್ನಡದ ಅಮೃತಧಾರೆ ಅಗ್ರಸ್ಥಾನ ಪಡೆದಿದೆ. 

ಅಮೃತಧಾರೆಗೆ 300: ಭೂಮಿಕಾ-ಗೌತಮ್​ ರೀಲ್​ ಜೋಡಿಯ ಪ್ರೇಮ ಪಯಣದ ವಿಶೇಷ ವಿಡಿಯೋ ರಿಲೀಸ್​

ಬಹುತೇಕ ಎಲ್ಲಾ ಸೀರಿಯಲ್​ಗಳಲ್ಲಿಯೂ ಅಳುಮುಂಜಿ ಮಹಿಳೆಯರು, ವಿಲನ್​ಗಳೇ ಭರ್ಜರಿ ಗೆಲುವು ಸಾಧಿಸುತ್ತಿರುವುದನ್ನು ನೋಡಿ ನೋಡಿ ಬೇಸತ್ತ ವೀಕ್ಷಕರಿಗೆ ಅಮೃತಧಾರೆ ನಿಜಕ್ಕೂ ಅಮೃತವನ್ನೇ ಉಣಬಡಿಸುತ್ತಿದೆ. ಇದಕ್ಕೆ ಕಾರಣ, ಎಲ್ಲಾ ಸೀರಿಯಲ್​ಗಳಂತೆ ಇಲ್ಲಿ ಲೇಡಿ ವಿಲನ್​ ಇದ್ದರೂ ಸದಾ ಇಲ್ಲಿ ವಿಲನ್​ ಸೋಲುತ್ತಿದ್ದಾಳೆ. ವಿಲನ್​ ಆಗಿರೋ ಶಕುಂತಲಾ ದೇವಿ ಇನ್ನೇನು ಕೆಟ್ಟದ್ದು ಮಾಡುತ್ತಾಳೋ ಎನ್ನುವಷ್ಟರಲ್ಲಿಯೇ ನಾಯಕಿ ಭೂಮಿಕಾ ಅವಳ ಎಲ್ಲಾ ಪ್ಲ್ಯಾನ್​ಗಳನ್ನು ಠುಸ್ ಮಾಡುವ ಕಾರಣ, ವೀಕ್ಷಕರಿಗೆ ಈ ಸೀರಿಯಲ್​ ವಿಭಿನ್ನವಾಗಿ ಕಾಣಿಸುತ್ತಿದೆ. ಅದರ ಜೊತೆ ಮಧ್ಯ ವಯಸ್ಸಿನಲ್ಲಿ ಮದುವೆಯಾದ ಜೋಡಿಯ ನವೀರಾದ ಪ್ರೇಮ ಕಥೆಯೂ ಇಷ್ಟವಾಗುತ್ತಿದೆ. 

ಇದೀಗ ಪತಿಗಾಗಿ ಶುದ್ಧ ಸಸ್ಯಾಹಾರಿ ಪತ್ನಿ ಭೂಮಿಕಾ ಚಿಕನ್​ ಖಾದ್ಯ ಮಾಡುವುದನ್ನು ಕಲಿಯುತ್ತಿದ್ದಾಳೆ. ಇದನ್ನು ನೋಡಿ ಅತ್ತೆ ಹೌಹಾರಿ ಹೋಗುತ್ತಾಳೆ. ದಂಪತಿಯನ್ನು ಬೇರೆಬೇರೆ ಮಾಡುವ ಆಕೆಯ ಎಲ್ಲ ಪ್ಲ್ಯಾನ್​ಗಳೂ ವಿಫಲ ಆಗ್ತಿರೋ ಈ ಹೊತ್ತಿನಲ್ಲಿ ಇದನ್ನು ಅವಳಿಗೆ ಅರಗಿಸಿಕೊಳ್ಳಲು ಆಗ್ತಿಲ್ಲ. ಅವಳನ್ನು ಅಡುಗೆ ಮನೆಯಲ್ಲಿ ನೋಡಿದ ಭೂಮಿಕಾ, ನನ್ನ ಅಡುಗೆಯಲ್ಲಿ ಉಪ್ಪು, ಖಾರ, ಹುಳಿ ಏನಾದ್ರೂ ಎಕ್ಸ್​ಟ್ರಾ ಹಾಕಿ ಹೋಗಿಲ್ಲ ತಾನೆ ಎಂದು ಪ್ರಶ್ನಿಸುತ್ತಾಳೆ. ಕುತಂತ್ರಿ ಶಕುಂತಲಾಗೆ ಇದನ್ನು ಕೇಳಿ ಶಾಕ್​ ಆಗುತ್ತದೆ. ಇಲ್ಲ, ಯಾಕೆ ಹೀಗೆ ಹೇಳ್ತಾ ಇದ್ಯಾ ಕೇಳುತ್ತಾಳೆ. ಅದಕ್ಕೆ ಭೂಮಿಕಾ ಇತ್ತೀಚಿನ ದಿನಗಳಲ್ಲಿ ನೀವು ಟಿ.ವಿ.ಸೀರಿಯಲ್​  ನೋಡುವುದು ಜಾಸ್ತಿಯಾಗ್ತಿದೆಯಲ್ಲ. ಅದಕ್ಕೇ ಕೆಲವರು ಇನ್​ಸ್ಪೈರ್​ ಆಗುವ ಹಾಗೆ ನೀವೂ ಆಗಿ ಏನಾದ್ರೂ ಮಾಡಿದ್ರೋ ಎಂದುಕೊಂಡೆ ಎನ್ನುತ್ತಾಳೆ. ಇದನ್ನು ಕೇಳಿದ ವೀಕ್ಷಕರು ಅಬ್ಬಾ ಅಂತೂ ಸೀರಿಯಲ್​ನಲ್ಲಿಯೇ ಇಂಥ ಮಾತು ಬಂತಲ್ಲ ಎನ್ನುತ್ತಿದ್ದಾರೆ. 

ಆ್ಯಂಕರ್​ ಅನುಶ್ರೀಗೆ ಈ ಪರಿ ಮೋಸ ಮಾಡೋದಾ ತೀರ್ಪುಗಾರರು? ಒಬ್ಬಂಟಿಯಾದ ನಟಿ ಕಣ್ಣೀರು
 

click me!