ಪೂಜಾಳ ಕೈಗೆ ಸಿಕ್ಕಿಬಿದ್ದಿರೋ ಶ್ರೇಷ್ಠಾಳಿಗೆ ಅಡಕತ್ತರಿಯಲ್ಲಿ ಸಿಲುಕಿರೋ ಅನುಭವ. ಮದ್ವೆಯಾದವನ ಸಹವಾಸ ಬೇಕಿತ್ತಾ ಅಂತಿದ್ದಾರೆ ಫ್ಯಾನ್ಸ್...
ಶ್ರೇಷ್ಠಾಳ ಬಣ್ಣ ಪೂಜಾಳ ಮುಂದೆ ಬಯಲಾಗಿದೆ. ತನ್ನ ಭಾವನನ್ನು ಶ್ರೇಷ್ಠಾ ಬುಟ್ಟಿಗೆ ಹಾಕಿಕೊಂಡಿರುವ ವಿಷಯ ಪೂಜಾಳಿಗೆ ತಿಳಿದಿದೆ. ಭಾವನನ್ನು ಮದ್ವೆಯಾಗುವ ಹೊಂಚು ಹಾಕಲು ನಕಲಿ ಅಪ್ಪ-ಅಮ್ಮನನ್ನು ಸೃಷ್ಟಿ ಮಾಡಿರೋ ವಿಷಯವೂ ಗೊತ್ತಾಗಿದೆ. ಆದರೆ ಮುಗ್ಧೆ ಭಾಗ್ಯಳಿಗೆ ತನ್ನ ಗಂಡ ಯಾಕೆ ತನ್ನನ್ನು ಕಡೆಗಣಿಸ್ತಾ ಇದ್ದಾನೆ ಎನ್ನುವುದು ಮಾತ್ರ ಗೊತ್ತಾಗ್ತನೇ ಇಲ್ಲ. ಎದುರಿಗೇ ಶ್ರೇಷ್ಠಾ ಇದ್ದರೂ, ಗಂಡ ಆಕೆಯ ಜೊತೆ ಕ್ಲೋಸ್ ಇದ್ದರೂ ಗಂಡನ ಮೇಲೆ ಅನುಮಾನ ಪಡದ ಜಾಯಮಾನ ಆಕೆಯದ್ದು.
ತನಗೆ ತಿಳಿದಿರೋ ಸತ್ಯವನ್ನೇ ಬಂಡವಾಳ ಮಾಡಿಕೊಂಡು ಪೂಜಾ ಶ್ರೇಷ್ಠಾಳನ್ನು ಆಡಿಸಲು ಶುರುವಿಟ್ಟುಕೊಂಡಿದ್ದಾಳೆ. ತನ್ನ ಅಕ್ಕನಿಗೆ ಸುಂದರವಾಗಿ ರೆಡಿ ಮಾಡುವಂತೆ ಹೇಳಿದ್ದಾಳೆ. ಭಾಗ್ಯಳಿಗೆ ಇದೊಂದು ರೀತಿಯಲ್ಲಿ ವಿಚಿತ್ರವಾಗಿ ತೋರಿದೆ. ಇದೆಲ್ಲಾ ಯಾಕೆ ಅಂತಿದ್ದಾಳೆ. ಆದರೆ ಪೂಜಾ ಬಿಡಬೇಕಲ್ಲ, ನಿನಗೆ ಗೊತ್ತಾಗಲ್ಲ ಸುಮ್ಮನಿರು ಎನ್ನುತ್ತಲೇ ಶ್ರೇಷ್ಠಾ ಅವರೇ ಅಕ್ಕನಿಗೆ ಚೆನ್ನಾಗಿ ಮೇಕಪ್ ಮಾಡಿ ಎಂದಿದ್ದಾಳೆ. ಇಲ್ಲದಿದ್ದರೆ ನಿನ್ನ ಬಂಡವಾಳ ಅತ್ತೆ ಕುಸುಮಳ ಎದುರು ಬಯಲು ಮಾಡುವುದಾಗಿ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟಿದ್ದಾಳೆ.
ದೇವ್ರೆ ನನಗೆ ಜನ್ಮದಲ್ಲಿ ಮದ್ವೆನೇ ಬೇಡ ಅನ್ನಿಸ್ತಿದೆ ಅಂತಿದ್ದಾರೆ ಸೀರಿಯಲ್ ಫ್ಯಾನ್ಸ್!
ಎರಡು ಮಕ್ಕಳ ಅಪ್ಪನ ಹಿಂದೆ ಹೋದ ಶ್ರೇಷ್ಠಾಳಿಗೆ ಈಗ ಅಡಕತ್ತರಿಯಲ್ಲಿ ಸಿಲುಕಿದ ಅನುಭವ. ಪೂಜಾ ಭಾರಿ ಚಾಲಾಕಿ ಎನ್ನುವುದು ಆಕೆಗೆ ಗೊತ್ತು. ಭಾಗ್ಯಳನ್ನು ಚೆನ್ನಾಗಿ ಡ್ರೆಸ್ ಮಾಡದೇ ಹೋದರೆ ಪೂಜಾ ಏನಾದರೂ ಮಾಡಿ ತನ್ನ ಬಂಡವಾಳ ಬಯಲು ಮಾಡುವಳೋ ಎನ್ನುವ ಭಯ. ಇದೇ ಕಾರಣಕ್ಕೆ, ಭಾಗ್ಯಳನ್ನು ರೆಡಿ ಮಾಡಲು ಒಪ್ಪಿಕೊಂಡಿದ್ದು, ಇದರ ಪ್ರೊಮೋ ರಿಲೀಸ್ ಆಗಿದೆ. ಮುಂದೇನು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಭಾಗ್ಯಲಕ್ಷ್ಮಿ ಫ್ಯಾನ್ಸ್ ಸಕತ್ ಖುಷಿಯಿಂದ ಇದ್ದಾರೆ. ಪೂಜಾ ತಕ್ಕ ಶಾಸ್ತಿ ಮಾಡುತ್ತಿದ್ದಾಳೆ ಎನ್ನುತ್ತಿದ್ದಾರೆ. ಮದುವೆಯಾದವನ ಹಿಂದೆ ಹೋಗುವುದು ಬೇಕಿತ್ತಾ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನಾದರೂ ದಂಪತಿ ಒಟ್ಟಿಗೇ ಬಾಳುವಂತೆ ಮಾಡಿ ತಾಂಡವ್‌ನನ್ನು ಮರೆತುಬಿಡು ಎನ್ನುತ್ತಿದ್ದಾರೆ. ಅದು ಅಷ್ಟು ಸುಲಭನಾ? ನಿಜ ಜೀವನದಲ್ಲಿಯೇ ಸಾಧ್ಯವಾಗದ್ದು ಇನ್ನು ಸೀರಿಯಲ್‌ನಲ್ಲಿ ಆಗಿಬಿಡುತ್ತಾ ಎನ್ನುವುದು ಇನ್ನು ಹಲವರ ಪ್ರಶ್ನೆ. ಒಟ್ಟಿನಲ್ಲಿ ಈ ಸೀರಿಯಲ್ ಕುತೂಹಲ ಘಟ್ಟಕ್ಕೆ ತಲುಪಿದ್ದು, ಮುಂದೇನು ಮುಂದೇನು ಎಂದು ಕಾತರದಿಂದ ಕಾಯುತವಂತಾಗಿದೆ.
ಗರ್ಭಿಣಿ ಅಲ್ಲದಿದ್ರೂ ಸೀಮಂತಕ್ಕೆ ರೆಡಿ! ಮಗಳ ದುರಾಸೆಗೆ ಮುಗ್ಧ ಅಮ್ಮನಿಗೆ ಇದೆಂಥ ಶಿಕ್ಷೆ!