ರಿಯಲ್​ ಲೈಫ್​ನಲ್ಲಿ ಅವಳು ಎಂಟ್ರಿಯಾದ್ರೆ ಇವನನ್ನ ಸಾಯಿಸ್ತೇನೆ ಎಂದ ಭಾಗ್ಯಲಕ್ಷ್ಮಿ ಶ್ರೇಷ್ಠಾ ಲವ್​ ಬಗ್ಗೆ ಹೇಳಿದ್ದೇನು?

By Suchethana D  |  First Published Sep 16, 2024, 7:08 PM IST

ನೀವು ಮದ್ವೆಯಾದ್ರೇನೆ ತಾಂಡವ್​ಗೆ ಬುದ್ಧಿ ಬರೋದು, ಅದಕ್ಕಾಗಿ ಆದ್ರೂ ನೀವು ಮದ್ವೆಯಾಗ್ಬೇಕು ಎಂದು ಜನರು ಹೇಳ್ತಿದ್ದಾರೆ ಎನ್ನುತ್ತಲೇ ಭಾಗ್ಯಲಕ್ಷ್ಮಿ ಶ್ರೇಷ್ಠಾ ರಿಯಲ್​ ಲೈಫ್​ ಬಗ್ಗೆ ಹೇಳಿದ್ದೇನು? 
 


ಶ್ರೇಷ್ಠಾ ಎಂದ್ರೆ ಸಾಕು, ಸೀರಿಯಲ್​ ಪ್ರೇಮಿಗಳಿಗೆ ಭಾಗ್ಯಲಕ್ಷ್ಮಿ ಸೀರಿಯಲ್​ ವಿಲನ್​ ಕಣ್ಣೆದುರು ಬರುತ್ತಾಳೆ. ಸದ್ಯ ಶ್ರೇಷ್ಠಾ ಮತ್ತು ತಾಂಡವ್​ ಮದುವೆ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಈ ಮದುವೆ ನಿಲ್ಲಿಸಬಾರದು ಎಂದು ಶತ ಪ್ರಯತ್ನ ಮಾಡಿದ್ದಾಳೆ ಶ್ರೇಷ್ಠಾ. ಆದರೆ, ಈ ಶ್ರೇಷ್ಠಾಳಿಗೆ ಬುದ್ಧಿ ಕಲಿಸಲು ಭಾಗ್ಯ ತಯಾರಾಗಿದ್ದರೂ, ಈಕೆ ಮದ್ವೆಯಾಗ್ತಿರೋದು ತನ್ನದೇ ಗಂಡನ ಜೊತೆ ಎನ್ನುವ ಸತ್ಯ ಅವಳಿಗೆ ಗೊತ್ತಿಲ್ಲ. ಇದೀಗ ಮದುವೆ ನಿಲ್ಲಿಸಲು ಕುಸುಮಾ ಮತ್ತು ಪೂಜಾ ಹೋಗಿದ್ದಾರೆ. ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿಯೇ ಟ್ರ್ಯಾಕ್ಟರ್​ನಲ್ಲಿ ಇವರಿಬ್ಬರ ಎಂಟ್ರಿ ಆಗಿದ್ದು, ಮದುವೆಯನ್ನು ನಿಲ್ಲಿಸಿದ್ದಾರೆ. ಇದೀಗ ಕಲರ್ಸ್​ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್​ ಸದ್ದು ಜೋರಾಗಿದೆ. ಇದರಲ್ಲಿ ಶ್ರೇಷ್ಠಾ, ಜನ ಮೆಚ್ಚಿದ ಮಂಥರೆ ಅವಾರ್ಡ್​ಗೆ ನಾಮಿನೇಟ್​ ಆಗಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಕೆಲವೊಂದು ವಿಷಯಗಳನ್ನು ಶ್ರೇಷ್ಠಾ ಹಂಚಿಕೊಂಡಿದ್ದಾರೆ. ಅಂದಹಾಗೆ ಶ್ರೇಷ್ಠಾ ಪಾತ್ರಧಾರಿಯ ಹೆಸರು ಕಾವ್ಯಾ ಗೌಡ.  ಇವರು ಐದು ವರ್ಷ ತೆಲುಗು ಧಾರಾವಾಹಿಯಲ್ಲಿ ನಾಯಕಿ  ಪಾತ್ರದಲ್ಲಿ ನಟಿಸಿದ್ದಾರೆ.ಬೆಂಗಳೂರು ಮೂಲದ ಕಾವ್ಯಾ,  ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ವಿಲನ್​ ರೋಲ್​ ಮೂಲಕ ಮನೆ ಮಾತಾಗಿದ್ದಾರೆ.   3 ವರ್ಷಗಳ ಹಿಂದೆ ಉದಯ ಟಿವಿಯಲ್ಲಿ ಮೂಡಿ ಬಂದ ದೇವಯಾನಿ ಧಾರಾವಾಹಿಯಲ್ಲಿ ನಟಿಸಿದ್ದರು. ವಿಜಯ್ ರಾಘವೇಂದ್ರ ನಟನೆಯ ರಿಂಗ ರಿಂಗ ರೋಸ್ ಎಂಬ ಸಿನಿಮಾಗೂ ಇವರು ನಟಿಸಿದ್ದಾರೆ.  ಇದಕ್ಕೂ ಮುನ್ನ ಜೀ ಕನ್ನಡ ವಾಹಿನಿಯ 'ಮಿಸ್ಟರ್ & ಮಿಸ್‌ಸ್ ರಂಗೇಗೌಡ' ಧಾರಾವಾಹಿಯಲ್ಲಿ ಲೀಡ್ ಆಗಿ 100 ಎಪಿಸೋಡ್‌ಲ್ಲಿ ನಟಿಸಿದ್ದರು. ಆಮೇಲೆ ಸೀರಿಯಲ್​ ಬಿಟ್ಟಿದ್ದರು. ಆದರೆ ಈಗ ಭಾಗ್ಯಲಕ್ಷ್ಮಿ ಸೀರಿಯಲ್ ಯಾವ ರೀತಿ ಟರ್ನ್​ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. 

Tap to resize

Latest Videos

ಲವ್​ ಮ್ಯಾರೇಜ್​ ಇಷ್ಟ ಎಂದ ಭಾಗ್ಯಲಕ್ಷ್ಮಿ ಪೂಜಾಗೆ ಕನಸಿನ ಹುಡುಗ ಹೀಗಿರ್ಬೇಕಂತೆ ನೋಡಿ...

ರಿಯಲ್​ ಲೈಫ್​ನಲ್ಲಿ ಒಂದು ವೇಳೆ ಭಾಗ್ಯಲಕ್ಷ್ಮಿ ಸೀರಿಯಲ್​ ರೀತಿ ಆಗಿ ಭಾಗ್ಯಳ ಜಾಗದಲ್ಲಿ ನಿಮ್ಮ ಹುಡುಗನನ್ನು ಯಾರಾದ್ರೂ ಹೀಗೆ ಮಾಡಿದ್ರೆ ಏನು ಮಾಡ್ತಿರಾ ಎನ್ನುವ ಪ್ರಶ್ನೆಗೆ ಕಾವ್ಯಾ ಅವರು, ಆಗ ನಾನು ಭಾಗ್ಯಳ ರೀತಿನೇ ಆಗ್ತೇನೆ. ಆದರೆ ಭಾಗ್ಯ ಅವನನ್ನು ಕೊಲೆ ಮಾಡಲಿಲ್ಲ. ನಾನು ಮಾಡ್ತೇನೆ ಅಷ್ಟೇ ಎಂದಿದ್ದಾರೆ! ಕೊನೆಗೆ ರಿಯಲ್​ ಲೈಫ್​ನಲ್ಲಿ ಯಾರೂ ಶ್ರೇಷ್ಠಾಳ ರೀತಿ ಆಗಬೇಡಿ ಎಂದೂ ಕಿವಿಮಾತು ಹೇಳಿದ್ದಾರೆ. ತಮ್ಮ ಈ ಕ್ಯಾರೆಕ್ಟರ್​ ಕುರಿತು ಹೇಳಿರುವ ಕಾವ್ಯಾ, ನನಗೆ ತುಂಬಾ ಜನ ಈ ಕ್ಯಾರೆಕ್ಟರ್​ ನೋಡಿ ಬೈತಾರೆ. ಹೊರಗೆ ಹೋದ್ರೂ ಬೈತಾರೆ, ಸೋಷಿಯಲ್​ ಮೀಡಿಯಾದ ಅಕೌಂಟ್​ನಲ್ಲಿ ಬಂದೂ ಬೈತಾರೆ. ಆದರೆ ಒಬ್ಬ ಹುಡುಗನಿಗಾಗಿ ಯಾವ ಮಟ್ಟಕ್ಕೂ ಹೋಗುವಷ್ಟು ಲವ್​ ಮಾಡ್ತಾಳಲ್ಲ ಎಂದು ಖುಷಿ ಪಡುವವರೂ ಇದ್ದಾರೆ ಎಂದಿದ್ದಾರೆ ಕಾವ್ಯ.  

ಇನ್ನು ಸಂಬಂಧಗಳ ಕುರಿತು ಮಾತನಾಡಿರುವ ಅವರು, ಪ್ರೇಮ ಸಂಬಂಧಗಳು ಹಾಳಾಗುವುದು ಒಬ್ಬರನ್ನೊಬ್ಬರ ಮಧ್ಯೆ ಅಂಡರ್​ಸ್ಟ್ಯಾಂಡಿಂಗ್​ ಇಲ್ಲದೇ ಇರುವ ಸಂದರ್ಭದಲ್ಲಿ. ಆದ್ದರಿಂದ ಅಡ್ಜಸ್ಟ್​ ಮಾಡಿಕೊಂಡು ಹೋಗುವ ಗುಣ ಇಬ್ಬರಲ್ಲಿಯೂ ಇರಬೇಕು ಎಂದ್ದಾರೆ. ಮದುವೆ ಎನ್ನುವುದು ಬ್ಯೂಟಿಫುಲ್​ ರಿಲೇಷನ್​, ಈ ಸಂಬಂಧಕ್ಕೆ ಒಪ್ಪಿಕೊಳ್ಳದಿದ್ದರೆ, ಇದಕ್ಕೆ ರೆಡಿಯಾಗದಿದ್ದರೆ ಮದ್ವೆಯಾಗಬೇಡಿ ಎಂದಿದ್ದಾರೆ ಕಾವ್ಯಾ. ನಮ್ಮದು ಬಿಜಿ ಷೆಡ್ಯೂಲ್​ ಇರುತ್ತದೆ. ಕೆಲವೊಂದು ಫ್ಯಾಮಿಲಿಗೆ ಟೈಮ್​ ಕೊಡಲು ಆಗಲ್ಲ. ಅಂಥ ಸಂದರ್ಭಗಳಲ್ಲಿ ಇಬ್ಬರೂ ಅಂಡರ್​ಸ್ಟ್ಯಾಂಡ್​ ಮಾಡಿಕೊಳ್ಳಬೇಕು, ಸ್ವಲ್ಪ ಮಟ್ಟಿಗೆ ಕಾಂಪ್ರಮೈಸೂ ಆಗಬೇಕು. ಆಗದೇ ಸಂಸಾರ ಸುಂದರವಾಗಿರೋದು ಎಂದಿದ್ದಾರೆ. ಅದೇ ವೇಳೆ ಸೀರಿಯಲ್​ನಲ್ಲಿ ತಾಂಡವ್​ ಜೊತೆ ಮದ್ವೆಯಾಗ್ತಿರೋದಕ್ಕೆ ಮಿಶ್ರ  ಪ್ರತಿಕ್ರಿಯೆ ಜನರಿಂದ ಬರ್ತಿದೆ ಎಂದಿದ್ದಾರೆ ಕಾವ್ಯಾ. ನೀವು ಮದ್ವೆಯಾದ್ರೇನೆ ತಾಂಡವ್​ಗೆ ಬುದ್ಧಿ ಬರೋದು, ಅದಕ್ಕಾಗಿ ಆದ್ರೂ ಆಗಿ ಅಂತಾರೆ ಎಂದು ನಕ್ಕಿದ್ದಾರೆ ನಟಿ. 
 

ಕೈಯಲ್ಲಿ ಕತ್ತಿ ಹಿಡಿದು ಕಾಳಿಯವತಾರ ತಾಳಿದ ಕುಸುಮತ್ತೆ! ತಾಂಡವ್​- ಶ್ರೇಷ್ಠಾ ಡಬಲ್​ ಮರ್ಡರ್​?

click me!