ಕರಾವಳಿ ಮೂಲದ ನಟ ಪೃಥ್ವಿರಾಜ್ ಶೆಟ್ಟಿ ಬಿಗ್ ಬಾಸ್ ತೆಲುಗು ಸೀಸನ್ 8 ರಲ್ಲಿ ಸ್ಪರ್ಧಿಯಾಗಿದ್ದಾರೆ. ಕನ್ನಡದಲ್ಲಿ ಅರ್ಧಾಂಗಿ ಮತ್ತು ಪ್ರೀತಿಯ ಅರಸಿ ಧಾರಾವಾಹಿಗಳಲ್ಲಿ ನಟಿಸಿರುವ ಅವರು, ತೆಲುಗು ಧಾರಾವಾಹಿ ನಾಗಪಂಚಮಿ ಮೂಲಕ ಜನಪ್ರಿಯತೆ ಗಳಿಸಿದ್ದಾರೆ.
ಸ್ಟಾರ್ ಮಾ ದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಬಿಗ್‌ಬಾಸ್ ತೆಲುಗು ಸೀಸನ್ 8ರಲ್ಲಿ ಒಟ್ಟು 14 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದು, ಇದರಲ್ಲಿ ನಾಲ್ವರು ಕನ್ನಡಿಗರು. ಇಬ್ಬರು ಹುಡುಗರು ಮತ್ತು ಇಬ್ಬರು ಹುಡುಗಿಯರು. ಇದರಲ್ಲಿ ಓರ್ವ ಮಂಗಳೂರಿನ ಪ್ರತಿಭೆ. ಆತನೇ ಪೃಥ್ವಿರಾಜ್ ಶೆಟ್ಟಿ.
ಪಕ್ಕಾ ಕರಾವಳಿ ಹುಡುಗ ಪೃಥ್ವಿರಾಜ್ ಶೆಟ್ಟಿ ತನ್ನ ಪ್ರಾಥಮಿಕ ಶಿಕ್ಷಣ ಮತ್ತು ಕಾಲೇಜು ಶಿಕ್ಷಣವನ್ನು ಮಂಗಳೂರು, ಕಾಸರಗೋಡು ಮತ್ತು ಉಡುಪಿ ಜಿಲ್ಲೆಯಲ್ಲಿ ಪೂರೈಸಿದ್ದಾರೆ. ಶಿಕ್ಷಣದ ನಂತರ ಪೃಥ್ವಿ ಫ್ಯಾಷನ್ ಕ್ಷೇತ್ರಕ್ಕೆ ಕಾಲಿಟ್ಟರು. ಕಾಲೇಜು ದಿನಗಳಲ್ಲಿ ಫ್ಯಾಶನ್ ಶೋಗಳಲ್ಲಿ ಭಾಗವಹಿಸಿದ್ದ ಪೃಥ್ವಿ ಶೆಟ್ಟಿಗೆ ನಂತರ ನಟನೆಯತ್ತ ಆಸಕ್ತಿ ಬಂತು. ಹೀಗಾಗಿ ಸಿನಿಮಾ ಮತ್ತು ಟಿವಿ ಶೋಗಳಲ್ಲಿ ನಟಿಸುವ ಆಸೆಯಿಂದ ಬೆಂಗಳೂರು ಕಡೆ ಪ್ರಯಾಣ ಬೆಳೆಸಿದ್ದರು.
ಗಿಚ್ಚಿಗಿಲಿಗಿಲಿ ಸೀಸನ್ 3 ವಿನ್ನರ್ ಆದ ಹುಲಿ ಕಾರ್ತಿಕ್, ರನ್ನರ್ ತುಕಾಲಿ ಮಾನಸ, ಗೆದ್ದ ಹಣವೆಷ್ಟು?
ಪೃಥ್ವಿ ಪ್ರಿನ್ಸ್ ಶೆಟ್ಟಿ ಅವರ ನಟನಾ ವೃತ್ತಿಜೀವನವು 2022 ರಲ್ಲಿ ತೆಲುಗು ಚಲನಚಿತ್ರ "ಮಹಿಷಾ" ನಲ್ಲಿ ಪ್ರಾರಂಭವಾಯಿತು. ಈ ಚಿತ್ರವು ಪೃಥ್ವಿಗೆ ಅವರ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯಾಯ್ತು. ಅದೇ ವರ್ಷ ಸ್ಟಾರ್ ಸುವರ್ಣದಲ್ಲಿ ಅರ್ಧಾಂಗಿ ಧಾರವಾಹಿಯಲ್ಲಿ ಪೃಥ್ವಿ ಶೆಟ್ಟಿ ನಾಯಕನಾಗಿ ದಿಗಂತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
2023ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಪ್ರೀತಿಯ ಅರಸಿ' ಧಾರಾವಾಹಿಯಲ್ಲಿ ರಾಕಿ ಪಾತ್ರದಲ್ಲಿ ನಾಯಕನ ಪಾತ್ರ ನಿಭಾಯಿದ್ದರು. ಒಂದೆರಡು ಸೀರಿಯಲ್ ನಲ್ಲಿ ನಟಿಸಿದ ಬಳಿಕ ಉತ್ತಮ ಅವಕಾಶ ಸಿಗಲಿಲ್ಲ. ಬಳಿಕ 2023 ರಲ್ಲಿ ತೆಲುಗಿನಲ್ಲಿ ನಾಗಪಂಚಮಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಇದು ಪೃಥ್ವಿ ಶೆಟ್ಟಿ ಬಣ್ಣದ ಬದುಕಿಗೆ ಬ್ರೇಕ್ ಕೊಟ್ಟಿತು. ಒಂದೆರಡು ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಈ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ.
ವರ್ಷಾ ಕಾವೇರಿ ಜೊತೆಗಿನ ಬ್ರೇಕಪ್‌ಗೆ ಕಾರಣ ಬಿಚ್ಚಿಟ್ಟ ವರುಣ್ ಆರಾಧ್ಯ!
ಪೃಥ್ವರಾಜ್ ಶೆಟ್ಟಿ ತೆಲುಗಿನಲ್ಲಿ ನಾಗಪಂಚಮಿ ಧಾರವಾಹಿ ಮತ್ತು ನೀತೋನೆ ಡ್ಯಾನ್ಸ್ ಶೋ ಮೂಲಕ ಜನಪ್ರಿಯರಾಗಿದ್ದಾರೆ. ಇದನ್ನು ಗುರುತಿಸಿ ಬಿಗ್ ಬಾಸ್ 8ನೇ ಆವೃತ್ತಿಗೆ ಆಯ್ಕೆಯಾಗಿದ್ದಾರೆ. ಉತ್ತಮ ಪ್ರದರ್ಶನ ಕೂಡ ನೀಡುತ್ತಿದ್ದು, ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ.
ಬಿಗ್‌ಬಾಸ್ ಮನೆಗೆ ಹೋಗುವುದಕ್ಕೂ ಮುನ್ನ ಮಾಡಿದ ವಿಡಿಯೋ ಈಗ ಅವರ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ತುಳು, ಕನ್ನಡ, ತೆಲುಗು ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಿದ್ದಾರೆ. ನಾನು ನಿಮ್ಮ ಮನೆ ಮಗ ಅರ್ಧಾಂಗಿ ಹಾಗೂ ಪ್ರೀತಿಯ ಅರಸಿ ಧಾರಾವಾಹಿಯ ನಾಯಕ ನಟ,ತೆಲುಗು ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಯಾಗಿ ಆಯ್ಕೆಯಾಗಿದ್ದು ನಿಮ್ಮ ಆಶೀರ್ವಾದ ಪ್ರೀತಿ ನನ್ನ ಮೇಲೆ ಇರಲಿ. ನಾನು ,ನಾನಾಗಿ, ನಿಮ್ಮವನಾಗಿ ನನ್ನಲ್ಲಿರುವ ಪ್ರತಿಭೆಯನ್ನು ಅಚ್ಚುಕಟ್ಟಾಗಿ ಯಾವುದೇ ತಪ್ಪಿಲ್ಲದಂತೆ ನಿಮ್ಮ ಮುಂದೆ ನನ್ನ ಶಕ್ತಿ ಮೀರಿ ಒಬ್ಬ ನಿಷ್ಠಾವಂತ ಸ್ಪರ್ಧಿಯಾಗಿ ನಿಮ್ಮ ಮುಂದೆ ಬರಲಿದ್ದೇನೆ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನಟ ಬರೆದುಕೊಂಡಿದ್ದಾರೆ. ಇನ್ನು ಕನ್ನಡಿಗ ನಟ ಪೃಥ್ವಿರಾಜ್ ಶೆಟ್ಟಿಗೆ ವಾರಕ್ಕೆ ರೂ.1.5 ಲಕ್ಷ ರೂ ಸಂಭಾವನೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ.