
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಭಾಗ್ಯಳ ತಂಗಿಯಾಗಿ ನಟಿಸ್ತಿರೋ ಪೂಜಾಳ ಆ್ಯಕ್ಟಿಂಗ್ಗೆ ಮನಸೋಲದವರೇ ಇಲ್ಲ. ಸದ್ಯ ಪೂಜಾ, ಭಾವನ ಮದುವೆಯನ್ನು ನಿಲ್ಲಿಸಲು ಪೂಜಾ ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾಳೆ. ಮುಂದೇನಾಗುತ್ತದೆ ಎನ್ನುವ ಕಾತರದಲ್ಲಿದ್ದಾರೆ ಸೀರಿಯಲ್ ಪ್ರೇಮಿಗಳು. ಇದರ ನಡುವೆಯೇ ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್ ಇನ್ನೇನು ಶುರುವಾಗಲಿದೆ. ಅದರಲ್ಲಿ ಪೂಜಾ ಮನಮೆಚ್ಚಿದ ಸಹೋದರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಕುರಿತು ಅವರು ಮಾಧ್ಯಮಗಳ ಜೊತೆ ಮಾತನಾಡುವ ಸಂದರ್ಭದಲ್ಲಿ ತಮ್ಮ ಕನಸಿನ ಹುಡುಗನ ವಿಷಯವನ್ನೂ ಹೇಳಿದ್ದಾರೆ.
ಅಂದಹಾಗೆ ಪೂಜಾ ಪಾತ್ರಧಾರಿಯ ಹೆಸರು, ಆಶಾ ಅಯ್ಯನರ್. ಇದಾಗಲೇ 'ಮೂರುಗಂಟು' ಹಾಗೂ 'ರಾಧಾರಮಣ' ಧಾರಾವಾಹಿಗಳಲ್ಲೂ ನಟಿಸಿ ಮನೆಮಾತಾಗಿರುವ ನಟಿ ಸದ್ಯ 'ಭಾಗ್ಯಲಕ್ಷ್ಮೀ' ಹಾಗೂ 'ಲಕ್ಷ್ಮೀಬಾರಮ್ಮ' ಸೀರಿಯಲ್ನಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಇವರು ದಾವಣಗೆರೆ ಮೂಲದವರು. ಸೇಂಟ್ ಜಾನ್ಸ್ ಹೈ ಸ್ಕೂಲ್‌ನಲ್ಲಿ ಕಲಿತಿರುವ ನಟಿ ಸದ್ಯ ಸೀರಿಯಲ್ಗಳಲ್ಲಿ ಫುಲ್ ಬಿಜಿ. ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟೀವ್ ಆಗಿರುತ್ತಾರೆ. ಈಚೆಗೆ ಯೂಟ್ಯೂಬ್ ಚಾನೆಲ್ ಕೂಡ ತೆರೆದಿದ್ದು, ಅದರಲ್ಲಿ ಭಿನ್ನ ರೀತಿಯ ವಿಡಿಯೋ ಶೇರ್ ಮಾಡುತ್ತಿರುತ್ತಾರೆ. ಫೋಟೋಶೂಟ್ ಕೂಡ ಮಾಡಿಸಿಕೊಳ್ಳುತ್ತಿದ್ದಾರೆ. ‘ಭರ್ಜರಿ ಬ್ಯಾಚುಲರ್ಸ್’ ತಂಡಕ್ಕೂ ಸೇರಿರುವ ನಟಿ, ರುದ್ರ ಮಾಸ್ಟರ್ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಕೈಯಲ್ಲಿ ಕತ್ತಿ ಹಿಡಿದು ಕಾಳಿಯವತಾರ ತಾಳಿದ ಕುಸುಮತ್ತೆ! ತಾಂಡವ್- ಶ್ರೇಷ್ಠಾ ಡಬಲ್ ಮರ್ಡರ್?
ಇದೀಗ ನಟಿ ತಮ್ಮ ಕನಸಿನ ಹುಡುಗ ಹೇಗಿರಬೇಕು ಎಂದು ಹೇಳಿದ್ದಾರೆ. ಅದರಲ್ಲಿ ಅವರು, ನನಗೆ ಮದುವೆ ಈಗಲೇ ಇಷ್ಟವಿಲ್ಲ. ಪ್ರೊಫೆಷನ್ ಕಡೆ ಗಮನ ಕೊಡುತ್ತಿದ್ದೇನೆ ಎಂದಿದ್ದಾರೆ. ಆದರೆ ತಮಗೆ ಲವ್ ಮ್ಯಾರೇಜ್ ಎಂದ್ರೆ ಇಷ್ಟ ಎಂದಿದ್ದಾರೆ. ಪ್ರೀತಿಸಿ ಮದುವೆಯಾದರೆ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುವುದು ಅವರ ಅನಿಸಿಕೆ. ನಾನು ಡ್ರೀಮಿ ಗರ್ಲ್. ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುವ ಹುಡುಗ ಬೇಕು ಎಂದಿದ್ದಾರೆ. ತಮ್ಮದು ತುಂಬಾ ದೊಡ್ಡ ಫ್ಯಾಮಿಲಿ ಅಂದಿರುವ ಆಶಾ, ತಮ್ಮನ್ನು ಮಾತ್ರವಲ್ಲದೇ ಸಂಪೂರ್ಣ ಫ್ಯಾಮಿಲಿಯನ್ನು ಚೆನ್ನಾಗಿ ನೋಡಿಕೊಳ್ಳುವವ ಬೇಕು ಎಂದಿದ್ದಾರೆ. ನನಗೆ ಸಂಪೂರ್ಣ ಕುಟುಂಬದಿಂದ ತುಂಬಾ ಸಪೋರ್ಟ್ ಸಿಗುತ್ತಿದೆ. ನನಗೆ ನಟನೆ ಎಂದ್ರೆ ಇಷ್ಟ. ಯಾವುದೇ ಕಾರಣಕ್ಕೂ ನಟನೆ ಬಿಟ್ಟುಕೊಡುವುದಿಲ್ಲ. ಆದ್ದರಿಂದ ನನ್ನ ಆ್ಯಕ್ಟಿಂಗ್ ಇಷ್ಟಪಟ್ಟು ಅದೇ ಫೀಲ್ಡ್ನಲ್ಲಿ ಮುಂದುವರೆಯಲು ಅವಕಾಶ ಕೊಡುವವ ಮಾತ್ರ ತಮಗೆ ಇಷ್ಟ ಎಂದಿದ್ದಾರೆ.
ಇದೇ ಕಾರಣಕ್ಕೆ ತಮಗೆ ಯಾರ ಜೊತೆಯೂ ಕಮಿಟ್ ಆಗೋಕೆ ಭಯ ಎಂದಿರುವ ಆಶಾ, ನನ್ನ ಕರಿಯರ್ ನನಗೆ ಮುಖ್ಯ. ಅದನ್ನು ಯಾರೂ ಡಿಸ್ಟರ್ಬ್ ಮಾಡಬಾರದು. ಅಂಥ ಹುಡುಗ ಸಿಕ್ಕರೆ ಓಕೆ ಎಂದಿದ್ದಾರೆ. ಇನ್ನು ಭಾಗ್ಯಲಕ್ಷ್ಮಿ ಸೀರಿಯಲ್ ವಿಷಯಕ್ಕೆ ಬರುವುದಾದರೆ, ಸದ್ಯ ಭಾವ ತಾಂಡವ್ ಮತ್ತು ಆತನ ಗರ್ಲ್ಫ್ರೆಂಡ್ ಶ್ರೇಷ್ಠಾಳ ಮದುವೆ ನಿಲ್ಲಿಸಲು ಅತ್ತೆ ಕುಸುಮಾ ಜೊತೆ ಹೋಗಿದ್ದಾಳೆ. ಇವರಿಬ್ಬರ ಸಂಬಂಧ ಪೂಜಾಳಿಗೆ ಮಾತ್ರ ಗೊತ್ತಿತ್ತು. ಆದರೆ ಇದುವರೆಗೂ ಆ ಬಗ್ಗೆ ಯಾರ ಬಳಿಯೂ ಹೇಳದೇ ಇರುವುದಕ್ಕೆ ಕಮೆಂಟಿಗರು ಪೂಜಾಳನ್ನು ಬೈಯುತ್ತಲೇ ಇರುತ್ತಾರೆ. ಆದರೆ ಈಗ ಅತ್ತೆ ಕುಸುಮಾಗೂ ವಿಷಯ ಗೊತ್ತಾಗಿದೆ. ಅತ್ತೆಗೆ ಸಪೋರ್ಟ್ ಮಾಡಿರೋ ಪೂಜಾ ಟ್ರ್ಯಾಕ್ಟರ್ನಲ್ಲಿ ಮದುವೆ ನಿಲ್ಲಿಸಲು ಹೋಗಿದ್ದಾಳೆ. ಮುಂದೇನಾಗುತ್ತದೆಯೋ ನೋಡಬೇಕಿದೆ.
ಲಕ್ಷ್ಮಿ ನಿವಾಸ ಜಯಂತ್‌ಗೂ, ಲಕ್ಷ್ಮೀ ಬಾರಮ್ಮ ಕಾವೇರಿಗೂ ಇಲ್ಲ ವ್ಯತ್ಯಾಸ: ನಿಮ್ಮೊಳಗೂ ಇರಬಹುದಾ ಈ ಕಾವೇರಿ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.